ರಾಯಚೂರು
ಬಸವ ಭಕ್ತರನ್ನು ಬಸವ ತಾಲಿಬಾನಿಗಳೆಂದು ಕರೆದಿರುವ ಕನ್ನೇರಿ ಸ್ವಾಮಿಯ ವಿರುದ್ಧ ಶರಣ ಸಮಾಜದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ಇಂದು ಶರಣು ವಿಶ್ವವಚನ ಫೌಂಡೇಶನ್ನಿನ ರಾಯಚೂರು ಜಿಲ್ಲಾಧ್ಯಕ್ಷ ಬೆಟ್ಟಪ್ಪ ಕಸ್ತೂರಿ ಪ್ರತಿಕ್ರಿಯೆ ನೀಡಿದ್ದಾರೆ.
“ಬಸವಣ್ಣನವರ ನಂಬಿದವರು ಯಾರೂ ಕೆಟ್ಟಿಲ್ಲ, ಕೆಟ್ಟವರು ಯಾರೂ ಬಸವಣ್ಣನವರನ್ನು ನಂಬಲು ಸಾಧ್ಯವಿಲ್ಲ. ನೀವು ಇದೇ ರೀತಿ ಬಾಯಿ ಹರಿಬಿಟ್ಟರೆ ಬಸವ ಸಂಘಟನೆಗಳ ಉಗ್ರ ಪ್ರತಿಭಟನೆ ಎದುರಿಸಲು ಸಿದ್ದರಾಗಿ,” ಎಂದು ಎಚ್ಚರಿಕೆ ನೀಡಿದ್ದಾರೆ.

🙏🙏