ಬೆಳಗಾವಿ
ಕನ್ನೇರಿ ಮಠದ ಕಾಡಸಿದ್ದೇಶ್ವರ ಸ್ವಾಮಿ ಲಿಂಗಾಯತ ಮಠಾಧೀಶರ ಮೇಲೆ ಬಳಸಿರುವ ಅಶ್ಲೀಲ ಭಾಷೆಯನ್ನು ಚಕ್ರವರ್ತಿ ಸೂಲಿಬೆಲೆ ತಂಡದವರು ಮಾಜಿ ಸಿಜೆ ಬಿ.ಆರ್. ಗವಾಯಿ ಅವರ ಮೇಲೆ ವಕೀಲರೊಬ್ಬರು ಶೂ ಎಸೆದ ಪ್ರಕರಣಕ್ಕೆ ಹೋಲಿಸಿದ್ದಾರೆ.
ಎರಡೂ ಘಟನೆಗಳು ಸನಾತನ ಹಿಂದೂ ಧರ್ಮಕ್ಕೆ ಅಪಮಾನ ಮಾಡಲು ನಡೆದ ಪ್ರಯತ್ನಗಳಿಗೆ ಬಂದ ತಕ್ಕ ಪ್ರತಿಕ್ರಿಯೆಯೆಂದು ಸಮರ್ಥಿಸಿಕೊಂಡಿದ್ದಾರೆ.
ಸುಪ್ರೀಂ ಕೋರ್ಟಿನಿಂದಲೂ ಛೀಮಾರಿ ಹಾಕಿಸಿಕೊಂಡಿರುವ ಕನ್ನೇರಿ ಸ್ವಾಮಿಯ ಬೆಂಬಲಕ್ಕೆ ಬಂದಿರುವ ಹಲವಾರು ಹಿಂದುತ್ವ ಹಾಗೂ ಬಿಜೆಪಿ ನಾಯಕರು ಬುಧವಾರ ಬೆಳಗಾವಿಯಲ್ಲಿ ಸಭೆ ನಡೆಸಿದರು.
ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಬಸವ ಸಂಸ್ಕೃತಿ ಅಭಿಯಾನದ ಪ್ರತಿಯಾಗಿ, ಲಿಂಗಾಯತ ಪೂಜ್ಯರ ವಿರುದ್ಧ ತಾಲೂಕು ಮಟ್ಟದಲ್ಲಿ ಬಸವಾದಿ ಶರಣರ ಹಿಂದೂ ಸಮಾವೇಶ ನಡೆಸುವುದಾಗಿ ಹೇಳಿದರು.
ಅದೇ ಸಂದರ್ಭದಲ್ಲಿ ಲಿಂಗಾಯತ ಪೂಜ್ಯರ ಮೇಲೆ ಕನ್ನೇರಿ ಸ್ವಾಮಿ ಬಳಸಿರುವ ಅಶ್ಲೀಲ ನಿಂದನೆ ಹಾಗೂ ಗವಾಯಿ ಅವರ ಮೇಲೆ ವಕೀಲರೊಬ್ಬರು ನಡೆದ ಶೂ ಎಸೆದ ಪ್ರಕರಣಗಳನ್ನು ಸಮರ್ಥಿಸಿಕೊಂಡರು.
ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರೊಬ್ಬರು ಲಿಂಗಾಯತ ಮಠಾಧೀಶರ ಬಗ್ಗೆ ಕನ್ನೇರಿ ಸ್ವಾಮಿ ಬಳಸಿರುವ ಅವಾಚ್ಯ ಪದಗಳ ಬಗ್ಗೆ ಯಾಕೆ ಮಾತನಾಡುತ್ತಿಲ್ಲ ಎಂದು ಯುವ ಬ್ರಿಗೇಡ್ ನಾಯಕ ಚಕ್ರವರ್ತಿ ಸೂಲಿಬೆಲೆಯನ್ನು ಕೇಳಿದರು.
ಅದಕ್ಕೆ ಸೂಲಿಬೆಲೆ ಲಿಂಗಾಯತ ಮಠಾಧೀಶರು ಹಿಂದೂ ದೇವರನ್ನು ನಿಂದಿಸಿದ್ದಾರೆ. ಅದಕ್ಕೆ ಕನ್ನೇರಿ ಸ್ವಾಮಿ ಸಹಜ ಸಾತ್ವಿಕ ಆಕ್ರೋಶ ತೋರಿಸಿದ್ದಾರೆ ಎಂದು ಹೇಳಿದರು. “ನನ್ನಲ್ಲೂ ಆ ಆಕ್ರೋಶವಿದೆ, ಆದರೆ ಲಿಂಗಾಯತ ಮಠಾಧೀಶರು ಕಾವಿಧಾರಿಗಳಾದ್ದರಿಂದ ನಾನು ಪ್ರತಿಕ್ರಿಯೆ ನೀಡಲಿಲ್ಲ,” ಎಂದು ಹೇಳಿದರು.
ಸೂಲಿಬೆಲೆ ಮಾತಿಗೆ ಅವರ ತಂಡದ ವಕೀಲ ಎಂ. ಬಿ. ಜಿರಲಿ ಧ್ವನಿಗೂಡಿಸಿದರು.
“ಅಭಿಯಾನದಲ್ಲಿ ಲಿಂಗಾಯತ ಮಠಾಧೀಶರು ಮಾಂಸ ತಿನ್ನಿ, ಸೆರೆ ಕುಡೀರಿ ಅಂತ ಹೇಳಿದ್ದಾರೆ. ಹಿಂದೂ ದೇವರುಗಳನ್ನು, ಆಚರಣೆಗಳನ್ನು ಅವಮಾನಿಸಿದ್ದಾರೆ. ಅದಕ್ಕೆ ಕನ್ನೇರಿ ಸ್ವಾಮಿ ಆಕ್ರೋಶದಿಂದ ಮಾತನಾಡಿದ್ದಾರೆ. ಇದೇ ರೀತಿ ಲಿಂಗಾಯತ ಮಠಾಧೀಶರು ಮುಂದೆಯೂ ಮಾತನಾಡಿದರೆ ಸಮಾಜವೇ ಉತ್ತರಿಸಲಿದೆ,” ಎಂದು ಎಚ್ಚರಿಸಿದರು.
(ಫ್ಯಾಕ್ಟ್ ಚೆಕ್ – ಅಭಿಯಾನದಲ್ಲಿ ಲಿಂಗಾಯತ ಪೂಜ್ಯರು ಈ ರೀತಿಯ ಹೇಳಿಕೆ ಕೊಟ್ಟಿದ್ದಾರೆ ಎನ್ನುವುದು ಸಂಘ ಪರಿವಾರ ಹುಟ್ಟು ಹಾಕುತ್ತಿರುವ ಸುಳ್ಳು.)
ಮುಂದುವರೆದು ಜಿರಲಿ ಕನ್ನೇರಿ ಸ್ವಾಮಿಯ ಅಶ್ಲೀಲ ನಿಂದನೆಯನ್ನು ಸುಪ್ರೀಂ ಕೋರ್ಟಿನ ಮಾಜಿ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ನಡೆದ ಶೂ ಎಸೆತದ ಪ್ರಕರಣಕ್ಕೆ ಹೋಲಿಸಿದರು.
ಭಗ್ನವಾಗಿದ್ದ ವಿಷ್ಣುವಿನ ವಿಗ್ರಹವೊಂದನ್ನು ಮರುಸ್ಥಾಪಿಸಲು ಆದೇಶ ನೀಡಲು ನಿರಾಕರಿಸಿದ ನ್ಯಾಯಮೂರ್ತಿ ಬಿ.ಆರ್.ಗವಾಯಿ “ನೀವು ವಿಷ್ಣುವಿನ ಮಹಾನ್ ಭಕ್ತ, ನ್ಯಾಯ ಬೇಕು ಎಂದರೆ ದೇವರನ್ನೇ ಪ್ರಾರ್ಥಿಸಿ,” ಎಂದಿದ್ದರು. ಇದರಿಂದ ರೊಚ್ಚಿಗೆದ್ದ ವಕೀಲರು ಸನಾತನ ಧರ್ಮಕ್ಕೆ ಅಪಮಾನವಾಗಿದೆ ಎಂದು ಶೂ ಎಸೆದಿದ್ದರು.
“ಶೂ ಎಸೆದ ವಕೀಲರ ಕೃತ್ಯವನ್ನು ಎಲ್ಲರೂ ಖಂಡಿಸಿದ್ದಾರೆ. ಆದರೆ ಅವರು ಆ ರೀತಿಯ ಪ್ರತಿಕ್ರಿಯೆ ನೀಡಲು ಕಾರಣವೇನು ಎನ್ನುವ ಚಿಂತನೆ ದೇಶದಲ್ಲಿ ಶುರುವಾಗಿದೆ,” ಎಂದು ಜಿರಲಿ ಹೇಳಿದರು.
ಪ್ರಚೋದನಾಕಾರಿಯಾದ ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಬಂದಿದೆ ಎಂಬ ಅವರ ಸೂಚನೆಗೆ ಸೂಲಿಬೆಲೆಯವರೂ ಸಮ್ಮತಿ ಸೂಚಿಸಿದರು.

ಒಟ್ಟಿನಲ್ಲಿ ಹೇಳುವುದಾದರೆ ದೇಶದ್ರೋಹಿಗಳು. ಕಾರಣ ಇವರಿಗೆ ದೇಶದ ಸಂವಿಧಾನ ಮತ್ತು ಕಾನೂನು ಮುಖ್ಯವಲ್ಲ. ಬದಲಾಗಿ ಧರ್ಮ, ದೇವರು, ಜಾತಿ, ಸಂಸ್ಕೃತಿಯ ಹೆಸರಿನಲ್ಲಿ ಇವರದ್ದೇ ಆದ ಸುಳ್ಳಿನ ಫ್ಯಾಕ್ಟರಿಯಲ್ಲಿ ತಯಾರಾಗುವ ಸುಳ್ಳುಗಳನ್ನು ಹೇಳಿಕೊಂಡು ದೇಶ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಬಸವ ಸಂಸ್ಕೃತಿ ಅಭಿಯಾನದಲ್ಲಿ ಯಾವ ಸ್ವಾಮೀಜಿ ಸೆರೆ ಕುಡಿಯಿರಿ ಮತ್ತು ಮಾಂಸ ತಿನ್ನಿರಿ ಎಂದು ಅವರಲ್ಲಿರುವ ಸಾಕ್ಷ್ಯಗಳನ್ನು ಒದಗಿಸಲಿ. ಅವರ ಅಸಂವಿಧಾನಿಕ ಕೆಲಸಗಳನ್ನು ಸಮರ್ಥಿಸಿಕೊಳ್ಳಲು ಸುಳ್ಳುಗಳನ್ನು ಹೇಳಿಕೊಂಡು ತಿರುಗುತ್ತಿದ್ದಾರೆ. ಹೋಗಲಿ ಬರೀ ತಾಲೂಕು ಮಟ್ಟಕ್ಕೆ ಏಕೆ ಪ್ರತಿ ಗ್ರಾಮ ಗ್ರಾಮಗಳಿಗೆ ಹೋಗಲಿ.
ಇದು ಅತ್ಶಂತ ಖಂಡನೀಯ ಮತ್ತು ದೇಶದಲ್ಲಿ ಕಾನೂನು ಸೇರಿದಂತೆ ಎಲ್ಲಾ ರಂಗಗಳಲ್ಲೂ ಕೋಮುವಾದಿ ಮನಸ್ಥಿತಿಯನ್ನು ತುಂಬಲು ತಯಾರಿ ನಡೆಸಿದ್ದಾರೆ. ಇದನ್ನು ಈಗಿನಿಂದಲೇ ತಡೆಯಲು ಮುಂದಾಗಬೇಕು ಇಲ್ಲದಿದ್ದರೆ ಇಂತಹ ದಾಳಿಗಳು ಹೆಚ್ಚಾಗಿ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳ ಮೇಲೆ ದಾಳಿಯಾದರೂ ಕೂಡ ಏನೂ ಮಾಡಿಕೊಳ್ಳಲು ಆಗಲ್ಲ ಎಂಬ ಸುದ್ದಿ ಹಬ್ಬಿಸುತ್ತಾರೆ.
ಯಾವುದೇ ಲಿಂಗಾಯತ ಸ್ವಾಮೀಜಿ ಜನರಿಗೆ -ನೀವು ಸೆರೆ ಕುಡಿಯಿರಿ ಮಾಂಸ ತಿನ್ನಿರಿ – ಎಂದು ಹೇಳಿಯೇ ಇಲ್ಲ ಎಂದು ಫ್ಯಾಕ್ಟ್ ಚೆಕ್ ನಲ್ಲಿ ಕಂಡು ಬಂದಿದೆ.
ಹಾಗಿರುವಾಗ ವಕೀಲ ಜಿರಳೆ ಮತ್ತು ಸೂಲಿಬೆಳೆ ಇವರು ಮಾಡಿರುವ ಆರೋಪ ಸುಳ್ಳು ಎನ್ನ ಬಹುದು.