ಬೆಳಗಾವಿ
ಕನ್ನೇರಿಯ ಕಾಡಸಿದ್ದೇಶ್ವರ ಸ್ವಾಮಿಯ ಮೇಲೆ ಕ್ರಮ ತೆಗೆದುಕೊಳ್ಳಲು ಅಖಿಲ ಕರ್ನಾಟಕ ಚರ್ಮಕಾರ ಮಹಾಸಭಾ ಸರಕಾರಕ್ಕೆ ಮನವಿ ಮಾಡಿದೆ.
ಮಹಾಸಭಾದ ಸದಸ್ಯರು ಶುಕ್ರವಾರ ಬೆಳಗಾವಿಯ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ಮನವಿ ಪತ್ರದಲ್ಲಿ ಕನ್ನೇರಿ ಸ್ವಾಮಿ ಶಿವಶರಣ ಹರಳಯ್ಯನವರನ್ನು ‘ಮಾದರ ಹರಳಯ್ಯ’ ಎಂದು ಸಂಬೋಧಿಸಿರುವುದರಿಂದ 10 ಲಕ್ಷದಷ್ಟಿರುವ ಸಮಗಾರ/ಚಮ್ಮಾರ ಸಮುದಾಯದ ಜನರ ಭಾವನೆಗಳಗೆ ಭಾರೀ ಆಘಾತ ಮತ್ತು ನೋವು ಉಂಟು ಮಾಡಿದೆ ಎಂದು ಹೇಳಲಾಗಿದೆ.
ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸುವ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ಭೀಮರಾವ ಪವಾರ, ಸಂಜೀವ ಲೋಕಾಪುರ, ಹಿರಾಲಾಲ ಚವಾಣ, ಮಚ್ಚೆಂದ್ರ ಕಾಂಬಳೆ, ಸಂತೋಷ ಹೊಂಗಲ, ನಂದಕುಮಾರ ಸಿಂಗನಾಪೂರಕರ, ಸಂಜಯ ಚೌಗುಲೆ, ತುಕಾರಾಮ ಶಿಂಧೆ, ರಾಜು ಕಾಂಬಳೆ ಮತ್ತಿತರ ಅಖಿಲ ಕರ್ನಾಟಕ ಚರ್ಮಕಾರ ಮಹಾಸಭಾದ ಪದಾಧಿಕಾರಿಗಳು ಉಪಸ್ಥಿತರಿದ್ದರು.

