ಕನ್ನೇರಿ ಸ್ವಾಮಿ ಧಾರವಾಡಕ್ಕೆ ಬಂದರೆ ಘೇರಾವ್: ಬಸವ ಸಂಘಟನೆಗಳ ಖಡಕ್ ಎಚ್ಚರಿಕೆ

ಬಸವ ಮೀಡಿಯಾ
ಬಸವ ಮೀಡಿಯಾ

ಅಣ್ಣಿಗೇರಿಯ ಹಳ್ಳಿಕೇರಿ ಗ್ರಾಮಕ್ಕೆ ನವೆಂಬರ್ 7 ಬರಲಿರುವ ಕನ್ನೇರಿ ಸ್ವಾಮಿ

ಧಾರವಾಡ

ಕನ್ನೇರಿ ಮಠದ ಕಾಡಸಿದ್ಧೇಶ್ವರ ಸ್ವಾಮಿ ಧಾರವಾಡ ಜಿಲ್ಲೆಯನ್ನು ಪ್ರವೇಶಿಸದಂತೆ ನಿರ್ಬಂಧಿಸಬೇಕೆಂದು ಜಿಲ್ಲಾಧಿಕಾರಿಗೆ ಬಸವಪರ ಸಂಘಟನೆಗಳು ಎರಡನೇ ಮನವಿಪತ್ರವನ್ನು ಗುರುವಾರ ಸಲ್ಲಿಸಿದವು.

ಅಕ್ಟೊಬರ್ 17 ನಗರದಲ್ಲಿ ಕನ್ನೇರಿ ಸ್ವಾಮಿಯ ವಿರುದ್ಧ ಬಸವ ಸಂಘಟನೆಗಳು ಭಾರಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದರು.

“ಈ ಮುಂಚೆ ಅಕ್ಟೊಬರ್ 17ರಂದು ಜಿಲ್ಲಾಧಿಕಾರಿಗೆ ಮೊದಲನೇ ಭಾರಿ ಮನವಿ ಪತ್ರ ಸಲ್ಲಿಸಿದ್ದೆವು. ಇಲ್ಲಿಯವರೆಗೆ ಕ್ರಮಗಳನ್ನು ಜರುಗಿಸದ್ದರ ಬಗ್ಗೆ ತಾವು ತಿಳಿಸಿರುವುದಿಲ್ಲ. ಇದು ನಮಗೆ ಅಸಮಾಧಾನವನ್ನುಂಟು ಮಾಡಿದೆ,” ಎಂದು ನೆನ್ನೆ ಸಲ್ಲಿಸಿದ ಮನವಿ ಪತ್ರದಲ್ಲಿ ತಿಳಿಸಲಾಗಿದೆ.

ನಂತರ ಬಸವ ಸಂಘಟನೆಗಳ ಪರವಾಗಿ ಬಸವ ಕೇಂದ್ರದ ಬಸವಂತಪ್ಪ ತೋಟದ ಮಾಧ್ಯಮಗಳೊಂದಿಗೆ ಮಾತನಾಡಿದರು. “ಅಣ್ಣಿಗೇರಿ ತಾಲೂಕಿನ ಹಳ್ಳಿಕೇರಿ ಗ್ರಾಮದ ಕಾರ್ಯಕ್ರಮಕ್ಕೆ ಕನ್ನೇರಿ ಸ್ವಾಮಿ ಬಂದರೆ ಬಸವಪರ ಸಂಘಟನೆಗಳಿಂದ ಪ್ರತಿಭಟನೆ ನಡೆಯಲಿದೆ. ಕನ್ನೇರಿ ಸ್ವಾಮಿ ಎಲ್ಲಾ ಲಿಂಗಾಯತ ಮಠಾಧೀಶರಿಗೆ **ಮಕ್ಕಳು ಎಂದು ಬೈದಿದ್ದಾರೆ. ಅವರನ್ನು ಕರ್ನಾಟಕ ರಾಜ್ಯಕ್ಕೇ ಬರದಂತೆ ನಿರ್ಬಂಧಿಸಬೇಕು,” ಎಂದು ತೋಟದ ಹೇಳಿದರು.

ಹಳ್ಳಿಕೇರಿ ಗ್ರಾಮದ ಕಾರ್ಯಕ್ರಮದ ಕರಪತ್ರ ಪ್ರದರ್ಶಿಸಿದ ಬಸವ ಸಂಘಟನೆಗಳ ಮುಖಂಡರು

“ಕನ್ನೇರಿ ಸ್ವಾಮಿ ಧಾರವಾಡಕ್ಕೆ ಬಂದರೆ ಬಸವಭಕ್ತರ ಮನಸ್ಸಿಗೆ ನೋವಾಗಿತ್ತದೆ, ಸಮಾಜದಲ್ಲಿ ಅಶಾಂತಿಯ ವಾತಾವರಣವುಂಟಾಗುತ್ತದೆ. ಆದ್ದರಿಂದ ಜಿಲ್ಲಾಡಳಿತ ಸೂಕ್ತ ಕ್ರಮ ತೆಗೆದುಕೊಂಡು ಕಾನೂನು ಸುವ್ಯವಸ್ಥೆ ಕಾಪಾಡಬೇಕೆಂದು,” ಎಂದು ಹೈಕೋರ್ಟ್ ನ್ಯಾಯವಾದಿ ಕೆ. ಎಸ್. ಕೋರಿಶೆಟ್ಟರ್ ಹೇಳಿದರು.

“ಕಾಡುಸಿದ್ದೇಶ್ವರರದು ಅಪ್ಪಟ್ಟ ಬಸವ ತತ್ವದ ಲಿಂಗಾಯತ ಮಠ. ಅಂತಹ ಮಠದ ಪೀಠಾಧಿಕಾರಿಯಾಗಿ ಈ ರೀತಿ ಮಾತನಾಡುವುದು, ತಾವೇ ಪ್ರತಿನಿಧಿಸುವ ಸಮುದಾಯವನ್ನು ಅವಹೇಳನ ಮಾಡುವುದು ಸರಿಯಲ್ಲ. ಮುಂದಿನ ದಿನಗಳಲ್ಲಿ ಕನ್ನೇರಿ ಸ್ವಾಮಿ ಪಶ್ಚಾತ್ತಾಪಪಡಬೇಕಾಗುತ್ತದೆ. ಯಾರು ಅವರನ್ನು ಇಂದು ಎತ್ತಿ ಕಟ್ಟುತ್ತಿದ್ದಾರೆ ಅವರೇ ಮುಂದೆ ಕೈ ಬಿಡುತ್ತಾರೆ.

ಮನುವಾದಿಗಳು ಲಿಂಗಾಯತ ಸಮಾಜ ಹಾಳು ಮಾಡಲು ಲಿಂಗಾಯತ ನಾಯಕರನ್ನ, ಸ್ವಾಮೀಜಿಯರನ್ನ ಬಳಸಿಕೊಳ್ಳುತ್ತಿದ್ದಾರೆ. ಬಸವಾದಿ ಶರಣರ, ಅಂಬೇಡ್ಕರ್ ಚಿಂತನೆಗಳನ್ನು ವಿರೋಧಿಸಲು ನಮ್ಮವರನ್ನೇ ಬಳಸಿಕೊಳ್ಳುತ್ತಿದ್ದಾರೆ. ಈ ಸಂಚನ್ನು ಸಮಾಜ ಅರ್ಥ ಮಾಡಿಕೊಳ್ಳಬೇಕು,” ಎಂದು ಹೇಳಿದರು.

ಅಕ್ಟೊಬರ್ 17ರ ಪ್ರತಿಭಟನೆಯ ದೃಶ್ಯ

ವಿಜಯಪುರ, ಬಾಗಲಕೋಟೆ ಜಿಲ್ಲೆಗಳಿಂದ ಕನ್ನೇರಿ ಸ್ವಾಮಿಯನ್ನು ಹೊರ ಹಾಕಲಾಗಿದೆ. ಅದನ್ನು ನ್ಯಾಯಾಲಯಗಳೂ ಅನುಮೋದಿಸಿವೆ. ತಾವು ಪ್ರತಿಬಂಧಕ ಆದೇಶವನ್ನು ಇಂದೇ ಹೊರಡಿಸುವಿರಿ ಎಂದು ಈಗಲೂ ವಿಶ್ವಾಸವನ್ನು ಹೊಂದಿದ್ದೇವೆ. ತಾವು ಕೂಡಲೇ ಆದೇಶ ಮಾಡದಿದ್ದರೆ ಮುಂದೆ ನಡೆಯುವ ಅಹಿತಕರ ಘಟನೆಗಳಿಗೆ ಸರ್ಕಾರವೇ ಜವಾಬ್ದಾರಿ ಆಗುತ್ತದೆ, ಎಂದು ಮನವಿ ಪತ್ರದಲ್ಲಿ ಜಿಲ್ಲಾಧಿಕಾರಿಗಳಿಗೆ ತಿಳಿಸಲಾಗಿದೆ.

ಬಸವಂತಪ್ಪ ತೋಟದ, ಬಸವ ಕೇಂದ್ರ, ಸಿ.ಜಿ. ಪಾಟೀಲ, ಜಾಗತಿಕ ಲಿ೦ಗಾಯತ ಮಹಾಸಭಾ, ಕೆ.ಎಸ್. ಕೋರಿಶೆಟ್ಟರ, ರಾಷ್ಟ್ರೀಯ ಬಸವ ದಳ, ಮತ್ತು ಇತರ ಬಸವಪರ ಸಂಘಟನೆಗಳ ಪ್ರಮುಖರಾದ ಸುನಿಲ ದನಗೊಂಡ, ಅಭಿಷೇಕ ರಾಯಕೊಪ್ಪ, ರಾಜೇಶ್ವರಿ ಕಟ್ಟಿಮನಿ, ಪ್ರಭಣ್ಣ ನಡಕಟ್ಟಿ, ಶಿವಾನಂದ ಶೆಟ್ಟನ್ನವರ, ಮದನ ನಂದೆಪ್ಪನವರ ಮತ್ತಿತರರ ನೇತೃತ್ವದಲ್ಲಿ ಸರ್ಕಾರಕ್ಕೆ ಮನವಿಪತ್ರ ಸಲ್ಲಿಸಲಾಗಿದೆ.

ಆಳವಾದ ಚಿಂತನೆಯಲ್ಲಿ ಕನ್ನೇರಿ ಸ್ವಾಮಿ – ಫೈಲ್ ಫೋಟೋ

ಹಳ್ಳಿಕೇರಿ ಗ್ರಾಮಕ್ಕೆ ಕನ್ನೇರಿ ಸ್ವಾಮಿ

ಅಣ್ಣಿಗೇರಿ ತಾಲೂಕು ಹಳ್ಳಿಕೇರಿ ಗ್ರಾಮದಲ್ಲಿ ಶ್ರೀ ಸಹಜಾನಂದ ಮಹಾರಾಜರ ಸಪ್ತಾಹದ ಕಾರ್ಯಕ್ರಮದಲ್ಲಿ ನವೆಂಬರ್ 7 ಕನ್ನೇರಿ ಸ್ವಾಮಿ ಭಾಗವಹಿಸಲಿದ್ದಾರೆಂದು ಆಮಂತ್ರಣ ಪತ್ರಿಕೆಯಲ್ಲಿ ಪ್ರಕಟಿಸಲಾಗಿದೆ.

ಈ ಗ್ರಾಮದ ಕಾರ್ಯಕ್ರಮಗಳು ಯಶಸ್ವಿಯಾಗಲಿ, ನಮ್ಮ ತಕರಾರು ಇಲ್ಲ.
ಆದರೆ, ಈ ಕಾರ್ಯಕ್ರಮದಲ್ಲಿ ಈ ಸ್ವಾಮಿಗಳು ಭಾಗವಹಿಸಲು ಹಾಗೂ ಧಾರವಾಡ ಜಿಲ್ಲೆಯನ್ನು ಪ್ರವೇಶಿಸಲು ನಮ್ಮ ವಿರೋಧವಿದೆ, ಎಂದು ಬಸವ ಸಂಘಟನೆಗಳು ಹೇಳಿಕೆ ನೀಡಿವೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/H81yNL3dGRcHb7EBxL5oqr

Share This Article
4 Comments
  • ಈ ಸ್ವಾಮಿಯ ಹಿಂದೆ ನಿಂತಿರುವ ಬಾಡಿಗೆ ಭಾಷಣಕಾರ ಮತ್ತು ಸುಳ್ಳನ್ನೇ ಮನೆ ದೇವರು ಮಾಡಿಕೊಂಡ ಪುಂಗ್ಲಿಯನ್ನು ಒಂಚೂರು ಮಾತಾಡಿಸುತ್ತಿಲ್ಲ ಯಾಕೆ,,

  • ದಾರವಾಡ ಜಾಗತಿಕ ಲಿಂಗಾಯತ ಮಹಾಸಭದ ಸರ್ವ ಸದಸ್ಯರುಗಳಿಗೆ ಅಭಿನಂದನೆಗಳು, ಈ ಹೋರಾಟ ಮುಂದುವರಿಯಬೇಕು, ಅಣ್ಣಿಗೇರಿ ತಾಲೂಕಿನ ಹಳ್ಳಿಕೇರಿಯ ಸೂಕ್ಷ್ಮ ಪ್ರದೇಶ ೮ ವರ್ಷದ ಹಿಂದೆ ಹಿಂದೆ ಕೋಮುಗಲಭೆಯಾಗಿ ೩ ಜನ ಸತ್ತಿದ್ದರು ,ಹಾಗಾಗಿ ಕನ್ಹೇರಿ ಸ್ವಾಮಿ ಬರದಂತೆ ಜಿಲ್ಲಾಧಿಕಾರಿಗಳು ನಿರ್ಭಂದ ಹೇರಬೇಕು .

    ಚಕ್ರವರ್ತಿ ಸೂಲಿಬೆಲೆ ಲಿಂಗಾಯತ ಮಠಾಧೀಶರ ವಿರುದ್ದ ಅವಹೇಳನಕಾರಿ ಶಬ್ದ ಬಳಸಿದ್ದನ್ನು ಸಮರ್ಥಿಸಿದ್ದು ಕೂಡ ನಾಚಿಕೆಗೇಡು, ಇಂತಹ ಕೋಮುವಾದಿ ಬಸವಾದಿ ಶರಣರ ಹೆಸರಲ್ಲಿ ಯಾತ್ರೆ ಮಾಡಿದರೆ ಅದು ಕೋಮು ಸಾಮರಸ್ಯ ಹದಗೆಡಿಸುತ್ತೆ, ಅವನು ಬೇಕಿದ್ದರೆ ರಾಘವೇಂದ್ರ ಸ್ವಾಮಿಗಳ ಯಾತ್ರೆ ಮಾಡಿಕೊಳ್ಳಲಿ ಅವರ ಸಾವಿನ‌ಕುರಿತು ಮಾತನಾಡುವ ಧೈರ್ಯ ತೋರಲಿ , ನಮ್ಮ ಲಿಂಗಾಯತ ಅಸ್ಮಿತೆ ಕುರಿತು ಮಾತನಾಡಿದರೆ ಪ್ರತಿರೋಧ ಬಂದೇ ಬರುತ್ತೆ.

  • ಈಕುಂಕುಂಮಧಾರಿ ಅವಿವೇಕಿಗೆ ದೇಶದ ಉಚ್ಚ ನ್ಯಾಯಾಲಯವು ಇವನ ಅನಾಗರಿಕ ನಡವಳಿಗೆಯನ್ನು ಖಂಡಿಸಿ ಛೀಮಾರಿ ಹಾಕಿದೆ. ಇವನನ್ನುಜನ ಹಿಸ್ಕರಿಸಬೇಕು.

    • ಒಬ್ಬ ಸ್ವಾಮೀಜಿಗಿಂತ ಸಮಾಜದ ಶಾಂತಿ ಮುಖ್ಯವಾಗಬೇಕು. ಸುಪ್ರೀಮ್ ಕೋರ್ಟ್ ಇವರಿಗೆ “ಒಳ್ಳೆಯ ಪ್ರಜೆಯಲ್ಲ” ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ. ಅವರ ಅಸಂವಿಧಾನಿಕ ಮತ್ತು ಅವಾಚ್ಯ ಪದ ಪ್ರಾಯೋಗಕ್ಕೆ ಕ್ಷಮೆ ಕೇಳಿ, ಈ ವಿವಾದಕ್ಕೆ ಅಂತ್ಯ ಹಾಡಲಿ.

Leave a Reply

Your email address will not be published. Required fields are marked *