ಮೈಸೂರು
ಬಸವ ಭಕ್ತರನ್ನು ಬಸವ ತಾಲಿಬಾನಿಗಳೆಂದು ಕರೆದಿರುವ ಕನ್ನೇರಿ ಸ್ವಾಮಿಯ ವಿರುದ್ಧ ಶರಣ ಸಮಾಜದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ಇಂದು ಮೈಸೂರಿನ ಬಸವ ಕಾರ್ಯಕರ್ತ ಶಿವಶಂಕರಪ್ಪ ಎನ್.ಎಸ್. ಪ್ರತಿಕ್ರಿಯೆ ನೀಡಿದ್ದಾರೆ.
“ಸ್ತ್ರೀ ಸಮಾನತೆಗೆ ಹೋರಾಡಿದ ಬಸವಣ್ಣವರನ್ನು ತಾಲಿಬಾನಿಗಳಿಗೆ ಹೋಲಿಸಿರುವುದು ಮೂರ್ಖತನದ ಮಾತು. ಕನ್ನೇರಿ ಸ್ವಾಮಿಯ ವಿರುದ್ಧ ಭಾರತೀಯರು ಧ್ವನಿಯೆತ್ತಬೇಕೆಂದು,” ಎಂದು ಶಿವಶಂಕರಪ್ಪ ಕರೆ ನೀಡಿದ್ದಾರೆ.
