ಕನ್ನೇರಿ ಸ್ವಾಮಿಗೆ ಎರಡು ತಿಂಗಳು ವಿಜಯಪುರ ಜಿಲ್ಲೆ ಪ್ರವೇಶ ನಿರ್ಬಂಧ

ಬಸವ ಮೀಡಿಯಾ
ಬಸವ ಮೀಡಿಯಾ

ವಿಜಯಪುರ

ಕನ್ನೇರಿ ಕಾಡಸಿದ್ದೇಶ್ವರ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಅವರಿಗೆ ಎರಡು ತಿಂಗಳ ಕಾಲ ವಿಜಯಪುರ ಜಿಲ್ಲಾ ಪ್ರವೇಶವನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ಡಾ.ಆನಂದ್ ಕೆ. ಆದೇಶ ಹೊರಡಿಸಿದ್ದಾರೆ.

ಸ್ವಾಮೀಜಿ ಅವರಿಗೆ ಇದೇ ಅಕ್ಟೋಬರ್‌ 16ರಿಂದ ಡಿಸೆಂಬರ್ 16ರ ವರೆಗೆ ವಿಜಯಪುರ ಜಿಲ್ಲಾ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಲಿಂಗಾಯತ ಧರ್ಮದ ಪೀಠಾಧಿಪತಿಗಳ ಅವಹೇಳನ ಮಾಡಿರುವುದರಿಂದ ಲಿಂಗಾಯತ ಧರ್ಮಿಯರು ರೊಚ್ಚಿಗೆಳುವ ಸಂಭವವಿರುತ್ತದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದು, ಇನ್ನೂ ಮುಂದಿನ ದಿನಗಳಲ್ಲಿಯೂ ಸಹ ಎಲ್ಲ ಕಡೆಗಳಲ್ಲಿ ಪ್ರತಿಭಟನೆಗಳು ಜರುಗುವ ಸಂಭವವಿದೆ ಎಂದು ಪೊಲೀಸ್ ಅಧೀಕ್ಷಕರು, ವಿಜಯಪುರ ಇವರು ವರದಿಯಲ್ಲಿ ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ಅಕ್ಟೋಬರ್ 16 ಮತ್ತು 17ರಂದು ಬಸವನ ಬಾಗೇವಾಡಿಗೆ ಕನ್ನೇರಿ ಸ್ವಾಮೀಜಿ ಬಂದರೆ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರುವಂತಹ ಎಲ್ಲ ಸಾಧ್ಯತೆಗಳಿವೆ ಎಂದು ಸ್ಥಳೀಯ ಠಾಣಾ ವರದಿಯನ್ನು ಡಿಎಸ್‌ಪಿ ಬಸವನ ಬಾಗೇವಾಡಿ ಉಪ-ವಿಭಾಗ ರವರು ಸಲ್ಲಿಸಿರುತ್ತಾರೆ.

ಆದ್ದರಿಂದ ಕಾಡಸಿದ್ದೇಶ್ವರ ಸ್ವಾಮೀಜಿಯವರ ಭೇಟಿಯು ಜಿಲ್ಲೆಯ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರದ ಹಾಗೆ ಮಾಡಲು ಸದರಿ ಸ್ವಾಮೀಜಿಯವರನ್ನು ಕನಿಷ್ಠ ಪಕ್ಷ 02 ತಿಂಗಳವರೆಗೂ ಬಸವನ ಬಾಗೇವಾಡಿ ಹಾಗೂ ವಿಜಯಪುರ ಜಿಲ್ಲೆಯಾದ್ಯಂತ ಭೇಟಿ ನೀಡುವುದನ್ನು ತುರ್ತಾಗಿ ನಿಷೇಧಿಸಿ ಬಿಎನ್‌ಎಸ್ಎಸ್ 163 ಕಲಂ. ಆಡಿಯಲ್ಲಿ ಆದೇಶ ಹೊರಡಿಸಿದ್ದೇನೆ, ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಇಂದು ಪಟ್ಟಣದಲ್ಲಿ ಕನ್ನೇರಿ ಸ್ವಾಮಿಯ ವಿರುದ್ಧ ಬಸವಪರ ಸಂಘಟನೆಗಳು ಭಾರಿ ಪ್ರತಿಭಟನೆ ನಡೆಸಲು ಸಜ್ಜಾಗಿವೆ.

ಬಸವ ಮೀಡಿಯಾ ಯೂ ಟ್ಯೂಬ್ ಚಾನೆಲ್ ಸೇರಿ
https://www.youtube.com/@basavamedia1

Share This Article
5 Comments
  • ಕರ್ನಾಟಕಕ್ಕೆ ಅವರ ಪ್ರವೇಶವನ್ನು ಪ್ರತಿಬಂಧಿಸುವ ಅವಶ್ಯಕತೆಯಿದೆ. ಗೂಂಡಾಗಳ ಪಟ್ಟಿಗೆ ಸೇರಿಸಿದರೆ ಇನ್ನೂ ಒಳ್ಳೆಯದು.

  • ಪೂಜ್ಯ ಶ್ರೀ ಬಸವಗೀತಾ ಮಾತಾಜಿ ಗುರುಬಸವ ಮಠ ನಾಗನೂರ says:

    ಇಂಥವರನ್ನ ದೇಶದಿಂದಲೇ ಗಡಿಪಾರು ಮಾಡಬೇಕು

  • ಇಂಥಹ ಅವಹೇಳನಕಾರಿ ಅಶ್ಲೀಲ ಪದ ಬಳಕೆ ಮಾಡಿದ ಸ್ವಾಮಿ ಎಂದು ಹೇಳುವುದಕ್ಕೂ ಅಸಹ್ಯ, ಸಮಾಜದಲ್ಲಿ ಕೆಡುಕನ್ನು ಹೊತ್ತಿಸುವ ಇವನಿಗೆ ದೇಶದಿಂದಲೇ ಬಹಿಷ್ಕಾರ ಮಾಡುವುದು ಸಮಂಜಸ.

    • ನಿಮ್ಮ ಬಳಿ ಪ್ರೂಫ್ ಇದ್ದರೆ ಅವರ ಮೇಲೆ ಕ್ರಮ ಕೈಗೊಳ್ಳಿ ಅಸ್ಲಿಲ ಪದ ಬಳಸಿದವರು ಯಾರೇ ಆಗಿರಲಿ ಯಾರೂ ಒಪ್ಪುವುದಿಲ್ಲ. ಒಪ್ಪಲೂಬಾರದು.

  • ವೀರಶೈವ ಅಂತ ಹೇಳುವವರಿಗೆ ಇನ್ನೂ ಜ್ಞಾನೋದಯ ಆಗಿಲ್ಲ ಹಾಗಾಗಿ ಸಿದ್ದರಾಮಯ್ಯ ಏನು ಮಾಡಲು ಸಾಧ್ಯ… ಮತ್ತೆ ಕನ್ನೆರಿ ಸ್ವಾಮೀಜಿಗೆ ಬುದ್ದಿ ಬ್ರಮಣೆ ಆಗಿದೆ ಇಡೀ ಕರ್ನಾಟಕ ರಾಜ್ಯಕ್ಕೆ ನಿಷೇಧ ಹೇರುವುದು ಉತ್ತಮ…

Leave a Reply

Your email address will not be published. Required fields are marked *