ಕನ್ನೇರಿ ಸ್ವಾಮಿ ಚರ್ಚೆಗೆ ನಿಮ್ಮ ಆಹ್ವಾನವನ್ನು ಒಪ್ಪಿದ್ದೇವೆ, ವೇದಿಕೆ ಸಿದ್ಧ ಮಾಡಿ
ದಾವಣಗೆರೆ
ಕನ್ನೇರಿ ಸ್ವಾಮಿಗಳೇ, ಬಬಲೇಶ್ವರದಲ್ಲಿ ನಡೆದ ನಿಮ್ಮ ಸಮಾವೇಶದಲ್ಲಿ ನೀವು ಹೇಳಿದಂತೆ ಬಸವಾದಿ ಶರಣರು ವೇದಗಳನ್ನು ಶಾಸ್ತ್ರ ಪುರಾಣಗಳು ಆಗಮಗಳನ್ನು ತಿರಸ್ಕರಿಸಿಲ್ಲ ಒಪ್ಪಿದ್ದಾರೆ ಬೇಕಾದರೆ ಚರ್ಚೆಗೆ ಬನ್ನಿ ಎಂದು ಆಹ್ವಾನ ಕೊಟ್ಟಿದ್ದೀರಿ ನಿಮ್ಮ ಆಹ್ವಾನವನ್ನು ಬಸವ ಭಕ್ತರು ಸ್ವೀಕರಿಸಿದ್ದೇವೆ ನಾವು ಚರ್ಚೆಗೆ ಸಿದ್ದರಿದ್ದೇವೆ.
ವೇದಿಕೆಯನ್ನು ಸಿದ್ದಪಡಿಸಿ ದಿನಾಂಕವನ್ನು ನಿಗದಿ ಮಾಡಿ. ಇನ್ನು ಅದೇ ವೇದಿಕೆಯಲ್ಲಿ ನೀವು ಲಿಂಗಾಯತ ಅಂದರೆ ನಿಮಗೆ ಪ್ರವೇಶ ಇಲ್ಲ ಎಂದಿದ್ದೀರಿ. ನಾವು ಈಗಲೂ ಗಟ್ಟಿಯಾಗಿ ನಮ್ಮದು ಲಿಂಗಾಯತ ಧರ್ಮ ಎಂದೇ ಹೇಳುತ್ತೇವೆ. ನಿಮ್ಮ ಚೇಲಾಗಳನ್ನು ಕಳುಹಿಸು ನಾವು ಹೆದರುವುದಿಲ್ಲ.
ಏಕೆಂದರೆ ಶರಣರು ಸ್ವತಂತ್ರ ಧೀರರು. ನೀವು ಅದೇ ವೇದಿಕೆಯಲ್ಲಿ ಬಸವ ಸಂಸ್ಕೃತಿ ಅಭಿಯಾನದ ಸಂದರ್ಭದಲ್ಲಿ ಜಗುಲಿಯ ದೇವರನ್ನು ಹೊರಹಾಕುವಂತೆ ಹೇಳಿದ್ದಾರೆ ಎಂದು ಲಿಂಗಾಯತ ಮಠಾಧೀಶರ ಮೇಲೆ ಅರೋಪ ಮಾಡಿದ್ದೀರಿ, ಇದು ನಿಮ್ಮ ವಚನ ಸಾಹಿತ್ಯದ ಅಜ್ಞಾನ ಎಂದೇ ಹೇಳಬೇಕಾಗುತ್ತದೆ.
ಬಸವಣ್ಣನವರು ಈ ಕೆಳಗಿನ ವಚನದಲ್ಲಿ ಜಗುಲಿ ಮೇಲೆ ಇರುವ ದೇವರನ್ನು ವಿಡಂಬನೆ ಮಾಡಿದ್ದಾರೆ. ಅರಗು ತಿಂದು ಕರಗುವ ದೈವವನೆಂತು ಸರಿಯೆಂಬೆನಯ್ಯಾ ಉರಿಯ ಕಂಡಡೆ ಮುರುಟುವ ದೈವವನೆಂತು ಸರಿಯೆಂಬೆನಯ್ಯಾ ಅವಸರ ಬಂದಡೆ ಮಾರುವ ದೈವವನೆಂತು ಸರಿಯೆಂಬೆನಯ್ಯಾ ಅಂಜಿಕೆಯಾದಡೆ ಹೂಳುವ ದೈವವನೆಂತು ಸರಿಯೆಂಬೆನಯ್ಯಾ ಸಹಜಭಾವ ನಿಜೈಕ್ಯ ಕೂಡಲಸಂಗಮದೇವನೊಬ್ಬನೆ ದೇವ.
ಅದೇ ವೇದಿಕೆಯಲ್ಲಿ ನೀವು ಮತ್ತೊಂದು ಮಾತು ಹೇಳಿದ್ದೀರಿ ಮನೆ ದೇವರು ಊರ ದೇವರು ಬಿಡಿ ಎಂದು ಲಿಂಗಾಯತ ಮಠಾಧೀಶರು ಹೇಳಿದ್ದಾರೆ ಎಂದು. ಇದೂ ಸಹ ನಿಮ್ಮ ಅಜ್ಞಾನ ಎಂದೇ ಹೇಳದೇ ವಿಧಿಯಿಲ್ಲ.
ಹಲವಾರು ದೈವಗಳನ್ನು ಶರಣರು ತಿರಸ್ಕರಿದ ವಚನಗಳು ಇವೆ. ಹಾಗೆಯೇ ಮನೆ ದೇವರು ಮನ ದೇವರು ಹೀಗೆ ಮಾಡುವ ದೇವರನ್ನು ಸಹ ಬಸವಣ್ಣನವರು ವಿಡಂಬನೆ ಮಾಡಿದ್ದಾರೆ. ಬಸವಣ್ಣನವರು ವಿಡಂಬನೆ ಮಾಡಿದ ವಚನ ಈ ರೀತಿಯಲ್ಲಿ ಇದೆ, ಮಡಕೆ ದೈವ, ಮೊರ ದೈವ, ಬೀದಿಯ ಕಲ್ಲು ದೈವ, ಹಣಿಗೆ ದೈವ, ಬಿಲ್ಲನಾರಿ ದೈವ, ಕಾಣಿರೊ! ಕೊಳಗ ದೈವ, ಗಿಣ್ಣಿಲು ದೈವ, ಕಾಣಿರೊ! ದೈವ ದೈವವೆಂದು ಕಾಲಿಡಲಿಂಬಿಲ್ಲ, ದೈವನೊಬ್ಬನೆ ಕೂಡಲಸಂಗಮದೇವ.
ಕನ್ನೇರು ಶ್ರೀಗಳೇ ನೀವು ಅಲ್ಲಿ ಮುನ್ನೂರಕ್ಕು ಹೆಚ್ಚು ಮಠಾಧೀಶರು ಭಗವಹಿಸುವರು ಎಂದು ಹೇಳಿದ್ದೀರಿ, ಆದರೆ ಒಬ್ಬರೇ ಒಬ್ಬ ಮಠಾಧೀಶರು ಭಾಗವಹಿಸಿಲ್ಲ. ನಿಮ್ಮನ್ನು ಮಠಾಧೀಶರು ಅಂತ ಹೇಳಲು ಸಾಧ್ಯವಿಲ್ಲ ಏಕೆಂದರೆ ಸುಪ್ರೀಂಕೋರ್ಟ್ ಸಹ ಹೇಳಿದೆ ಸಾಮಾನ್ಯ ನಾಗರಿಕ ಆಗಲು ಯೋಗ್ಯ ಅಲ್ಲ ನೀವು.
ಇಂಥಹ ನಿಮ್ಮನ್ನು ಸ್ವಾಮಿ ಅನ್ನಲು ಸಾಧ್ಯವೇ ನೀವೇ ಹೇಳಿ. ಹೆಚ್ಚೆಂದರೆ ಪುಡಿ ರೌಡಿ ಅನ್ನಬಹುದು ಇರಲಿ ಹೆಚ್ಚೇನು ಹೇಳಲು ಸಾಧ್ಯವಿಲ್ಲ. ನೀವೇ ಆಹ್ವಾನ ಕೊಟ್ಟಂತೆ ವೇದಿಕೆ ಸಿದ್ಧ ಮಾಡಿ ದಿನಾಂಕ ಸ್ಥಳ ತಿಳಿಸಿ, ನಾವು ಬಸವ ಭಕ್ತರು ಚರ್ಚೆಗೆ ಬರಲು ಸಿದ್ದ ಇದ್ದೇವೆ.
