ಶೇಗುಣಸಿ
ಕಣ್ತೆರೆಸಿದ ತೇರದಾಳ 1: ಮೊದಲ ಬಾಲಿಗೆ ಸಿಕ್ಸರ್ ಹೊಡೆದ್ವಿ
ಕಣ್ತೆರೆಸಿದ ತೇರದಾಳ 2: ಮಳೆಯಲ್ಲೂ ಪ್ರವಚನ, ಆತಂಕದಲ್ಲಿ ಪೊಲೀಸ್ ಇಂಟೆಲಿಜೆನ್ಸ್
ಕಣ್ತೆರೆಸಿದ ತೇರದಾಳ 3: ಅಲ್ಲಮರ ಪ್ರಭಾವ, ಬಸವಣ್ಣನವರ ಜನಪ್ರಿಯತೆ
ಕಣ್ತೆರೆಸಿದ ತೇರದಾಳ 4: 21,000 ಜನರಿಂದ 11 ವಚನ ಹೇಳಿಸಿದ ಅದ್ಭುತ ಅನುಭವ
ಇತ್ತೀಚೆಗೆ ತೇರದಾಳದಲ್ಲಿ ಅಲ್ಲಮ ಪ್ರಭುಗಳ ದೇವಾಲಯದ ಲೋಕಾರ್ಪಣೆಗಾಗಿ ನಡೆದ ಕಾರ್ಯಕ್ರಮಗಳು ಇಡೀ ರಾಜ್ಯದ ಗಮನ ಸೆಳೆದವು. ಅಲ್ಲಿ ಹರಿದು ಬಂದ ಜನಸಾಗರ, ಅವರು ನಡೆಸಿದ ನಿಸ್ವಾರ್ಥ ದಾಸೋಹ, ಅಲ್ಲಮ ಬಸವಾದಿ ಶರಣರಿಗೆ ಅವರು ತೋರಿದ ಭಕ್ತಿ ಗೌರವ ಎಲ್ಲರ ಮನಸ್ಸುಗಳನ್ನು ಕಲಕಿದವು. 28 ದಿನಗಳು (ಅಕ್ಟೋಬರ್ 14 ರಿಂದ ನವೆಂಬರ್ 11) ಸಹಸ್ರಾರು ಶರಣ ಬಂಧುಗಳನ್ನು ಸೆಳೆದ ಬಸವ ಪುರಾಣ ಪ್ರವಚನ ಈ ಕಾರ್ಯಕ್ರಮಗಳ ಕೇಂದ್ರಬಿಂದುವಾಗಿತ್ತು.ಅದನ್ನು ನಡೆಸಿಕೊಟ್ಟ ಶೇಗುಣಸಿಯ ಪೂಜ್ಯ ಮಹಾಂತಪ್ರಭು ಸ್ವಾಮೀಜಿ ತಮ್ಮ ಮರೆಯಲಾಗದ ತೇರದಾಳದ ಅನುಭವಗಳನ್ನು ಬಸವ ಮೀಡಿಯಾದ ಓದುಗರೊಡನೆ ಹಂಚಿಕೊಂಡಿದ್ದಾರೆ.
ಬಸವ ಮೀಡಿಯಾ: ಮೊದಲಿನಿಂದಲೂ ಸಣ್ಣದಾಗಿ ನಡೆಯುತ್ತಿದ್ದ ಪ್ರವಚನ ಕಾರ್ಯಕ್ರಮ ಈ ವರ್ಷ ಸಹಸ್ರಾರು ಜನರನ್ನು ಸೆಳೆದದ್ದು ಹೇಗೆ?
ತೇರದಾಳ ಅಲ್ಲಮಪ್ರಭು ಕ್ಷೇತ್ರವಾಗಿರುವುದರಿಂದ, 50-60 ವರ್ಷಗಳಿಂದ ಅಲ್ಲಿ ಪ್ರವಚನ ಕಾರ್ಯಕ್ರಮ ನಡೆಯುತ್ತಾ ಬಂದಿದೆ. ಪ್ರತಿ ವರ್ಷ ಅಲ್ಲಿ ಚಾಮರಸ ವಿರಚಿತ ‘ಪ್ರಭುಲಿಂಗಲೀಲೆ’ ಪ್ರವಚನ ನಡೆಸುತ್ತ ಬರಲಾಗಿದೆ. ವರ್ಷಪ್ರತಿ ಎಷ್ಟೇ ಚೊಲೋ ಪ್ರವಚನ ಹೇಳಿದ್ರು, 100 ರಿಂದ 200 ಮಂದಿ ಮಾತ್ರ ಇಲ್ಲಿ ಸೇರುತ್ತಿದ್ದರು.
“ಚೊಲೋ ಪ್ರವಚನ ಹೇಳಿದರೂ ಎರಡು ನೂರು ಮಂದಿ ಬರ್ತಾರೆ, ಅಂತಹದ್ರೊಳಗ ಇಲ್ಲಿ ಯಾರು ಪ್ರವಚನ ಹೇಳಾಕ್ ಬರ್ತಾರೆ, ಯಾರು ಕೇಳಾಕ ಬರ್ತಾರು,” ಅಂತಿದ್ರು ಊರ ಮಂದಿ.
ಆವಾಗ್ಗೆ ನಾನೇಳಿದ್ದು, ನನ್ನ ಮೇಲೆ ನಂಬಿಕೆ ಇಡ್ರಿ. ಕಾರ್ಯಕ್ರಮ ದೊಡ್ಡದು ಮಾಡ್ತೀವ್ ನಾವು. ದೊಡ್ಡ ಪ್ರಮಾಣದಾಗ ವೇದಿಕೆ ಹಾಕೋಣ. ಆಗವರು, ಸ್ವಾಮಿಗಳದಾರ ಅವರಿಗೆ ಯಾಕ ಎದುರು ವಾದ್ಸೋದು ಅಂತ ಹೂಂ ಅಂದ್ರು ನಮ್ಮ ಮುಂದೆ.
ಆದರೆ ಹಿಂದಿಂದ ಆ ಹಿರಿಯರೆಲ್ಲ ಮಾತಾಡ್ತಿದ್ದದ್ದು ಬೇರೇನೇ. ಇಷ್ಟು ವರ್ಷದ ಪರಂಪರೆ ಇದ್ದರೂ ನಮ್ಮಲ್ಲಿ 100 ಮಂದಿ ಕೇಳಾಕ್ ಬರ್ತಾರ, ಕಂಬಕ್ಕೆ ಒಬ್ಬರು ಕುಂದರ್ತಾರ, ಅಜ್ಜಾರು 5,000 ಮಂದಿ ಬರ್ತಾರ ಅಂತ ಹೇಳತಾರ, ಹ್ಯಾಂಗ ಅಷ್ಟು ಮಂದಿ ಸೇರುತ್ತಾರೆ ಅಂತ ಮಂದಿ ಕೇಳ್ತಿದ್ರು.
ನಮ್ಮ ತಂಡಕ್ಕೆ ನಾವು ಜನ ಸೇರಿಸೋ ಪ್ರಯತ್ನದಲ್ಲಿ ಮೊದಲನೇ ಬಾಲ್ ಗೇನೇ ಸಿಕ್ಸ್ ಹೊಡಿಬೇಕು ಅಂತ ಹೇಳ್ತಿದ್ವಿ. ಹಾಗ್ ಸಿಕ್ಸರ್ ಹೊಡೆದ್ರೆ ಆಮೇಲೆ ನಾವು ಸೆಂಚುರಿ ಹೊಡಿತೀವಿ, ಮ್ಯಾಚ್ ಗೆಲ್ತೀವಿ ಅಂತ ಹೇಳಿ ಪ್ರೋತ್ಸಾಹ ಕೊಡುತ್ತಿದ್ದೆವು.
ಪ್ರವಚನ ಆರಂಭದ ದಿನಕ್ಕಿಂತ ಮುಂಚೆ ಅಕ್ಟೋಬರ್ 14ರಂದು ನಾವು ಬಸವಣ್ಣನವರ ಹೆಸರಿಟ್ಟುಕೊಂಡು ಅಲ್ಲಮಪ್ರಭು ಹುಟ್ಟಿರುವಂತಹ ಬಳ್ಳಿಗಾವಿಯಿಂದ ಪರಂಜ್ಯೋತಿ ತೆಗೆದುಕೊಂಡು ಬಂದೆವು. ಪರಂಜ್ಯೋತಿ ಯಾತ್ರೆಯೊಳಗ 15,000 ಮಂದಿ ಸೇರಿಬಿಟ್ಟರು. ಆಮೇಲೆ ಪ್ರವಚನಕ್ಕೂ ದಿನಾ ಅದೇ ರೀತಿ ಮಂದಿ ಬಂದರು.
ಈಗ ಎಲ್ಲ ಕಾರ್ಯಕ್ರಮ ಆದ ನಂತರ ಊರಿನೋರು ಹೇಳ್ತಾರ ನಮಗ … ಎಷ್ಟು ದೊಡ್ಡ ಪ್ರಮಾಣದೊಳಗ ಪ್ರವಚನ ಬೆಳೀತು ಅಂತಂದ್ರ, ಬಸವ ಪುರಾಣಕ್ಕೊಂದು ಶಕ್ತಿ ಇದೆ, ಬಸವಣ್ಣನವರಿಗೊಂದು ಶಕ್ತಿ ಐತಿ, ಬಸವಣ್ಣವರ ಹೆಸರಿಗೂ ಒಂದು ಶಕ್ತಿ ಅದ…
ಮೊದಲನೇ ಬಾಲ್ ಸಿಕ್ಸ್ ಹೊಡೀರಿ ಅಂತ ಹೇಳಿದ್ರೆ, ನೀವು ಸ್ಟೇಡಿಯಂ ದಾಟಿಯೇ ಹೊಡೆದು ಬಿಟ್ಟಿರಲ್ಲ ಅಂತ ನಮ್ಮ ತಂಡದೋರ್ಗೆ ಹೇಳ್ದೆ.
ಮುಂದುವರೆಯುವುದು
ಓಂ ಶ್ರೀ ಗುರು ಬಸವ ಲಿಂಗಾಯ ನಮಃ 🙏
ಪರಮ ಪೂಜ್ಯ ಶ್ರೀ ಗಳಿಗೆ ಹೃದಯ ಪೂರ್ವಕ ಶರಣಾರ್ಥಿಗಳು. ತೇರ್ದಾಲದಲ್ಲಿ ನಡೆದ ಬಸವ ಪ್ರವಚನ ನಿಜವಾಗಿಯೂ ನಾಡಿನ ಜನರ ಮನ ತನಿಸಿದೆ. ಇ ರೀತಿಯ ಕಾರ್ಯಕ್ರಮ ಗಳು ನಾಡಿನಾದ್ಯನ್ತ ಮೇಲಿಂದ ಮೇಲೆ ನಡಿತಾ ಇದ್ದು..ಸಾಹಿತ್ಯದ ಅನುಭಾವವನ್ನು ಜನಮಾನಸದಲ್ಲಿ ನಿರಂತರ ಬಿತ್ತುತ್ತಾ ಇರಬೇಕು.
ಶರಣು ಶರಣಾರ್ಥಿ ಶರಣು ಶರಣಾರ್ಥಿ ಶರಣು ಶರಣಾರ್ಥಿ.
ಹೌದು ಇದೊಂದು ಅಭೂತಪೂರ್ವ ಶರಣ ಜಾಗೃತಿಯ ಕಾರ್ಯಕ್ರಮವಾಗಿದೆ ಇಂತಹ ಘನ ಕಾರ್ಯದ ಯಶಸ್ವಿಗೆ ಕಾರಣೀಭೂತರಾದ ಸ್ವಾಮೀಜಿಯವರಿಗೆ ಅನಂತ ಶರಣಾರ್ಥಿ
ಹೌದು ಇತಿಹಾಸ ನಿಮಾ೯ಣ ಮಾಡಿದ ಕಾಯ೯ಕ್ರಮ ಇಲ್ಲಿ ಯಾರೆ ಬಂದು ಜಾತಿಯ ವಿಷ ಬೀಜ ಬಿತ್ತಿದರು ನಾಟುವದಿಲ್ಲ ಎಂದು ಬಸವಣ್ಣನವರು ಅಲ್ಲಮ ಪ್ರಭುಗಳು ಈ ಕಾಯ೯ಕ್ರಮ ಮೂಲಕ ಸಂದೇಶ ಸಾರಿದ ಕಾಯ೯ಕ್ರಮವಾಗಿತ್ತು ಇಂಥಹ ಅಬುತ್ವುರವ ಕಾಯ೯ಮಾಡಿದ ನಿಡಶೇಸಿ ಮಠದ ಶ್ರೀಗಳಿಗೆ ಅನಂತ ಶರಣುಗಳು🙏🙏🙏