8ನೇ ದಿನದ ಲೈವ್ ಬ್ಲಾಗ್
ಸಾರ್ವಜನಿಕ ಸಮಾರಂಭ ಮಂಗಳ
ಸಾಣೇಹಳ್ಳಿ ಕಲಾತಂಡದ ಜಯ ಕಲ್ಯಾಣಕೆ ಗೀತೆಯೊಂದಿಗೆ ಸಾರ್ವಜನಿಕ ಸಮಾರಂಭ ಮಂಗಳಗೊಂಡಿತು.
‘ಬಸವ ಸಂಸ್ಕೃತಿಯಲ್ಲಿ ಸ್ವಾತಂತ್ರ್ಯದ ಪರಿಕಲ್ಪನೆ’
ಮನಗುಂಡಿಯ ಬಸವಾನಂದ ಶ್ರೀಗಳಿಂದ ಅನುಭಾವ.

ಡಾ. ಸಂಗಮೇಶ ಕಲಹಾಳ ಅವರ ಪುಸ್ತಕ ಬಿಡುಗಡೆ
ಡಾ. ಸಂಗಮೇಶ ಕಲಹಾಳ ಅವರ ‘ಲಿಂಗಾಯತ ಧರ್ಮದ ಮಹತ್ವ’ ಪುಸ್ತಕವನ್ನು ಡಾ. ತೋಂಟದ ಸಿದ್ದರಾಮ ಸ್ವಾಮಿಗಳು ಹಾಗೂ ಇತರ ಪೂಜ್ಯರು ಬಿಡುಗಡೆ ಮಾಡಿದರು.

ವಚನ ಚಳುವಳಿ ಇಂದಿನ ಅಗತ್ಯ
ಮಧುಶ್ರೀ ಗಾರ್ಡನ್ ನಲ್ಲಿ ನಡೆದಿರುವ ಸಾರ್ವಜನಿಕ ಸಮಾರಂಭದಲ್ಲಿ
‘ವಚನ ಚಳುವಳಿ ಇಂದಿನ ಅಗತ್ಯ’ ವಿಷಯವಾಗಿ ಕಲಬುರ್ಗಿಯ ಡಾ.ಕಾವ್ಯಶ್ರೀ ಮಹಾಗಾಂವಕರ ಅವರಿಂದ ಅನುಭಾವದ ನುಡಿಗಳು.




ವೇದಿಕೆ ಕಾರ್ಯಕ್ರಮ ಲೈವ್ ವಿಡಿಯೋ
ಭವ್ಯ ಮೆರವಣಿಗೆ – ಫೋಟೋಗಳಲ್ಲಿ






ಸಾವಿರಾರು ಜನರ ಸೆಳೆದ ಮೆರವಣಿಗೆ
ಬಸವೇಶ್ವರ ವೃತ್ತದಿಂದ ಮಧುಶ್ರೀ ಗಾರ್ಡನ್ ತನಕ ಮೆರವಣಿಗೆ ನಡೆಯಿತು.
ಬಸವೇಶ್ವರ ವೃತ್ತದಿಂದ ಮೆರವಣಿಗೆ
ಬಸವೇಶ್ವರ ವೃತ್ತದಿಂದ ಆರಂಭವಾದ ಸಾವಿರಾರು ಜನರ ಮೆರವಣಿಗೆ. ಮಧುಶ್ರೀ ಗಾರ್ಡನ್ ವರೆಗೆ ನಡೆಯಲಿದೆ.
ವಿದ್ಯಾರ್ಥಿಗಳೊಂದಿಗೆ ಪೂಜ್ಯರ ಸಂವಾದ
ಶೇಖರ ಇಂಗಳದಾಳ, ಡಾ. ಸಂಗಮೇಶ ಕಲಹಾಳ
ಮಾಹಿತಿ, ಚಿತ್ರ, ವಿಡಿಯೋ ಕಳಿಸುತ್ತಿರುವ ಶೇಖರ ಇಂಗಳದಾಳ, ಡಾ. ಸಂಗಮೇಶ ಕಲಹಾಳ ಅವರಿಗೆ ಧನ್ಯವಾದ.
ವಚನ ಸಂವಾದದ ಮಂಗಲ
ವಚನ ಸಂವಾದ ಕಾರ್ಯಕ್ರಮ ಕಲ್ಯಾಣ ಗೀತೆಯೊಂದಿಗೆ ಮಂಗಲವಾಯಿತು.

ಸಂವಾದದ ದೃಶ್ಯಗಳು








ತುಂಬಿದ ಸಭಾಂಗಣ
ಶ್ರೀ ಶಾರದಾ ಇಂಟರ್ನ್ಯಾಷನಲ್ ಸ್ಕೂಲಿನ ಸಭಾಂಗಣದಲ್ಲಿ ನಡೆಯುತ್ತಿರುವ ಸಂವಾದ ಕಾರ್ಯಕ್ರಮ.



ಸಂವಾದ ಶುರುವಾಗಿದೆ: ಲೈವ್ ವಿಡಿಯೋ
ಮಕ್ಕಳಿಂದ ವಚನ ನೃತ್ಯ
ರೀತಿಕಾ ಶೇಖರ್ ಇಂಗಳದಾಳ ಮತ್ತು ಅರ್ಪಿತಾ ಹೂವಿನಾಳ ಅವರು ಈಶ್ವರ ಮಂಟೂರ ಶರಣರ ಹಾಡಿಗೆ ನೃತ್ಯ ಪ್ರದರ್ಶನ ಮಾಡಿದರು. ಮಕ್ಕಳು ವಚನ ನೃತ್ಯ ಮಾಡಿ ಗುರುಗಳಿಂದ ವಚನ ಪುಸ್ತಕದ ಆಶೀರ್ವಾದ ಪಡೆದುಕೊಂಡರು.

ಇಂದಿನ ಕಾರ್ಯಕ್ರಮಗಳು
ವಚನ ಸಂವಾದ
11 ಗಂಟೆಗೆ ಶ್ರೀ ಶಾರದಾ ಇಂಟರ್ನ್ಯಾಷನಲ್ ಸ್ಕೂಲು ಮತ್ತು ಶ್ರೀ ಶಾರದಾ ಪಿ.ಯು. ಕಾಲೇಜಿನ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಜೊತೆ ವಚನ ಸಂವಾದ ಕಾರ್ಯಕ್ರಮ.
ಪಾದಯಾತ್ರೆ, ಮೆರವಣಿಗೆ
ಸಂಜೆ 5 ರಿಂದ 6 ಗಂಟೆ: ಶ್ರೀ ಬಸವೇಶ್ವರ ವೃತ್ತದಿಂದ ಮಧುಶ್ರೀ ಗಾರ್ಡನ್ ವರೆಗೆ ಪಾದಯಾತ್ರೆ, ಮೆರವಣಿಗೆ.
ಸಾರ್ವಜನಿಕ ಸಮಾರಂಭ
ಸಾಯಂಕಾಲ 6 ಗಂಟೆಗೆ ಸಾರ್ವಜನಿಕ ಸಮಾರಂಭ, ಮಧುಶ್ರೀ ಗಾರ್ಡನ್, ಹೊಸಪೇಟೆ ರಸ್ತೆ, ಕೊಪ್ಪಳ.
ಉಪನ್ಯಾಸಗಳು
‘ಬಸವ ಸಂಸ್ಕೃತಿಯಲ್ಲಿ ಸ್ವಾತಂತ್ರ್ಯದ ಪರಿಕಲ್ಪನೆ’ ಈ ವಿಷಯವಾಗಿ, ಬಸವಾನಂದ ಸ್ವಾಮಿಗಳು, ಮನಗುಂಡಿ ಇವರಿಂದ.
‘ವಚನ ಚಳುವಳಿ ಇಂದಿನ ಅಗತ್ಯ’ ವಿಷಯವಾಗಿ ಕಾವ್ಯಶ್ರೀ ಮಹಾಗಾಂವ್ಕರ್, ಸಾಹಿತಿಗಳು ಕಲಬುರ್ಗಿ ಇವರಿಂದ.
ಕೈಜೋಡಿಸಿರುವ ಸಂಘಟನೆಗಳು
ಕೊಪ್ಪಳ ಜಿಲ್ಲಾ ಲಿಂಗಾಯತ ಮಠಾಧಿಪತಿಗಳ ಒಕ್ಕೂಟ, ಜಾಗತಿಕ ಲಿಂಗಾಯತ ಮಹಾಸಭಾ, ಬಸವ ಸಮಿತಿ, ವಿಶ್ವಗುರು ಬಸವೇಶ್ವರ ಟ್ರಸ್ಟ್, ರಾಷ್ಟ್ರೀಯ ಬಸವದಳ, ಅಖಿಲ ಭಾರತ ವೀರಶೈವ ಮಹಾಸಭಾ, ಶರಣ ಸಾಹಿತ್ಯ ಪರಿಷತ್ತು, ಕದಳಿ ವೇದಿಕೆ, ಅಕ್ಕಮಹಾದೇವಿ ಮಹಿಳಾ ಮಂಡಲ ಹಾಗೂ ಜಿಲ್ಲೆಯ ಸರ್ವ ಬಸವಪರ ಸಂಘಟನೆಗಳ ಸಹಯೋಗದೊಂದಿಗೆ ಬಸವ ಸಂಸ್ಕೃತಿ ಅಭಿಯಾನ ನಡೆಯುತ್ತಿದೆ.
ಅಭಿಯಾನಕ್ಕೆ ಕೊಪ್ಪಳ ಸಿದ್ಧ
ಗದುಗಿನ ತೋಂಟದ ಸಿದ್ಧರಾಮ ಶ್ರೀಗಳು ಸಿದ್ಧತೆಗಳನ್ನು ವೀಕ್ಷಿಸಿದರು.

“The Koppal report is uniquely designed. Basava Media is really working very hard, reporting instantly. I congratulate you on your magnificent efforts.”
ಕೊಪ್ಪಳದಲ್ಲಿ ನಡೆದ ಕಾರ್ಯಕ್ರಮ ಬಹಳ ಸುಂದರವಾಗಿತ್ತು. ಕಾರ್ಯಕ್ರಮ ಸುಗಮವಾಗಿ ನಡೆಯಲು ಶ್ರಮಪಟ್ಟ ಎಲ್ಲರಿಗೂ ಧನ್ಯವಾದಗಳು
https://www.youtube.com/@ChandruGaraga
ಚಂದ್ರು ವಿ ಎಂ