ಜನವರಿ 2025ರಲ್ಲಿ ಉತ್ತರ ಪ್ರದೇಶದ ಪ್ರಯಾಗರಾಜಿನಲ್ಲಿ ನಡೆಯುವ ಕುಂಭಮೇಳಕ್ಕೆ ಲಿಂಗಾಯತರನ್ನು ವಿಶೇಷವಾಗಿ ಆಹ್ವಾನಿಸಲು RSS ನಿರ್ಧರಿಸಿದೆ. ಇದಕ್ಕೆ ವಿಜಯಪುರದ ಶರಣತತ್ವ ಚಿಂತಕ ಡಾ. ಜೆ ಎಸ್ ಪಾಟೀಲರ ಪ್ರತಿಕ್ರಿಯೆ.
ನಿಮ್ಮ ಮತ
1) ಕುಂಭಮೇಳಕ್ಕೆ ಹೋಗಲು ಲಿಂಗಾಯತರಿಗೆ ವಿಶೇಷ ಆಹ್ವಾನ. ಇದರ ಉದ್ದೇಶವೇನು?
ಆರೆಸ್ಸೆಸ್ ನವರು ಲಿಂಗಾಯತರನ್ನು ಕುಂಭಮೇಳ ಎನ್ನುವ ಮೌಢ್ಯದ ಜಾತ್ರೆಗೆ ವಿಶೇಷವಾಗಿ ಆಹ್ವಾನಿಸುತ್ತಿರುವ ಹಿಂದೆ ಅವೈದಿಕ ಲಿಂಗಾಯತ ಧರ್ಮಿಯರನ್ನು ವೈದಿಕ ಪ್ರಣೀತ ಹಿಂದುತ್ವದ ಭಾಗವೆಂದು ಬಿಂಬಿಸುವ ದುರುದ್ದೇಶ ಇದೆ.
2) ಯಾವ ಲಿಂಗಾಯತರಿಗೆ ವಿಶೇಷ ಆಹ್ವಾನ ಬರುತ್ತದೆ?
ಕುಂಭಮೇಳಕ್ಕೆ ಲಿಂಗಾಯತರಿಗೆ ವಿಶೇಷ ಆಹ್ವಾನ ಬಸವದ್ರೋಹಿ ಹಾಗು ಲಿಂಗಾಯತ ಧರ್ಮ ಹೊರಾಟವನ್ನು ವಿರೋಧಿಸಿದ ಅಥವಾ ತಟಸ್ಥವಾಗಿ ಉಳಿದ, ಹಾಗೂ ಎರಡೂ ಕಡೆ ವಾಲುವ ಸೈದ್ಧಾಂತಿಕ ಅಸ್ಪಷ್ಟತೆಯುಳ್ಳ ಮಠಾಧೀಶರಿಗೆ ಬರುತ್ತದೆ. ಅಧಿಕಾರದ ಆಶೆಗಾಗಿ ಹಿಂದುತ್ವದ ಗುಂಪುಗಳೊಂದಿಗೆ ಗುರುತಿಸಿಕೊಂಡ ರಾಜಕಾರಣಿ ಮತ್ತು ಉದ್ಯಮಿಗಳಿಗೂ ಬರಬಹುದು.
3) ಇದಕ್ಕೆ ಲಿಂಗಾಯತ ಸಮುದಾಯದ ಪ್ರತಿಕ್ರಿಯೆ ಹೇಗಿರಬೇಕು?
ಲಿಂಗಾಯತ ಧರ್ಮೀಯರು ಸಾಮರಸ್ಯ ಪ್ರಿಯರು. ಬಹುತ್ವ ಭಾರತದಲ್ಲಿ ನಂಬಿಕೆ ಇಟ್ಟವರು. ವೈದಿಕ ಧರ್ಮದ ಕುಂಭಮೇಳದದಲ್ಲಿ ಅನ್ಯ ಧರ್ಮೀಯ ಅತಿಥಿಗಳಾಗಿ ಲಿಂಗಾಯತರು ಖಂಡಿತವಾಗಿ ಭಾಗವಹಿಸಬಹುದು. ಆದರೆ ಲಿಂಗಾಯತರು ಸನಾತನ ವೈದಿಕ ಧರ್ಮದ (ಹಿಂದೂ) ಭಾಗವಾಗಿ ಖಂಡಿತ ಹೋಗಬಾರದು. ಆಹ್ವಾನಿಸಲು ಬರುವವರನ್ನು ಲಿಂಗಾಯತರನ್ನು ತಾವು ಅವೈದಿಕ ಧರ್ಮೀಯರೆಂದು ಗೌರವದಿಂದ ಆಹ್ವಾನಿಸಬೇಕು ಎನ್ನುವ ಕರಾರಿನ ಮೇಲೆ ಮಾತ್ರ ಒಪ್ಪಿಕೊಳ್ಳಬೇಕು.
4) ಕುಂಭಮೇಳ ಭಾಗ್ಯಕ್ಕೆ ನಿಮ್ಮ ವೈಯಕ್ತಿಕ ಪ್ರತಿಕ್ರಿಯೆ ಏನು. ನೀವೇನು ಮಾಡುತ್ತೀರಿ?
ಸಂಘ ಪರಿವಾರದವರು ಇಡೀ ಭಾರತೀಯ ಹಿಂದೂಗಳನ್ನು ವೈದಿಕ ಧರ್ಮದ ಭಾಗವೆಂದು ರಾಜಕೀಯ ಸಂಘಟಾತ್ಮಕ ದುರುದ್ದೇಶದಿಂದ ಬಿಂಬಿಸುವುದನ್ನು ನಾನು ವೈಯಕ್ತಿಕವಾಗಿ ವಿರೋಧಿಸುತ್ತೇನೆ. ನಾನು ಧರ್ಮದ ಹೆಸರಿನಲ್ಲಿ ನಡೆಯುವ ಮೌಢ್ಯಾಚರಣೆ ಹಾಗು ನದಿ, ನೀರು ಮುಂತಾದ ನಿಸರ್ಗ ಸಂಪತ್ತನ್ನು ಕಲುಷಿತಗೊಳಿಸುವ ಯಾವುದೇ ಧಾರ್ಮಿಕ ಆಚರಣೆಗಳಲ್ಲಿ ಭಾಗವಹಿಸುವುದಿಲ್ಲ.
I am always Sri Basava tatva anuyayi and 1 stand my talk Jai Basava Jai guru Basava,
ಲಿಂಗಾಯತರೆ ಎಚ್ಚತ್ತುಕೋಳ್ಳಿ, ಗುರು ಬಸವಣ್ಣನವರು ಸ್ಥಾಪಿಸಿರುವದು ಅವೈದಿಕ ಲಿಂಗಾಯತ ಧಮ೯ RSS (ವೈದಿಕರು) ಲಿಂಗಾಯತ ಧಮ೯ ಬೆಳೆಯಬಾರದು ಎಂದು ಯಾವಲ್ಲಾ ಗಾಳವನ್ನು ಬೀಸಿ ಅಂದರೆ ಕುಂಭಮೇಳದಂತ ಕಾಯ೯ಕ್ರಮಕ್ಕೆ ಆಮಂತ್ರಣ ನೀಡಿ ನಿಮ್ಮನ್ನು ವೈದಿಕದೋಳಗೆ ಬಂಧಿಸುವ ಹುನ್ನಾರ ಮರಳಾಗಬೇಡಿ ವಿನಂತಿ.
ಈಗಾಗಲೆ ಅವರು ವಚನ ದಶ೯ನ ಪುಸ್ತಕ ಮತ್ತು ಶರಣ ಶಕ್ತಿಯಂತ ಚಲನ ಚಿತ್ರದ ಮೂಲಕ ಬಸವ ತತ್ವ ಮಾಡುವ ಅವರ ಹುನ್ನಾರಕ್ಕೆ ಜಾಗತಿಕ ಲಿಂಗಾಯತ ಮಹಾಸಭಾ ಮತ್ತು ಬಸವ ಸಂಘಟನೆಗಳು ತಿವ್ರವಾದ ಪ್ರತಿರೋಧದಿಂದ ಅವರಿಗೆ ಮುಖಭಂಗವಾಗಿದೆ ಎಂಬುದು ನಿಮಗೆ ತಿಳಿದಿರಲಿ.