ಜನವರಿ 2025ರಲ್ಲಿ ಉತ್ತರ ಪ್ರದೇಶದ ಪ್ರಯಾಗರಾಜ್ ನಲ್ಲಿ ನಡೆಯುವ ಕುಂಭಮೇಳಕ್ಕೆ ಲಿಂಗಾಯತರನ್ನು ವಿಶೇಷವಾಗಿ ಆಹ್ವಾನಿಸಲು RSS ನಿರ್ಧರಿಸಿದೆ. ಇದಕ್ಕೆ ಶರಣತತ್ವ ಚಿಂತಕ ರವಿಕುಮಾರ ಬಿರಾದಾರ ಅವರ ಪ್ರತಿಕ್ರಿಯೆ.
ವಿಜಯಪುರ
1) ಕುಂಭಮೇಳದ ವಿಶೇಷ ಆಹ್ವಾನದ ಉದ್ದೇಶವೇನು?
ವೇದ ಆಗಮಗಳನ್ನು ಕಟುವಾಗಿ ಟೀಕಿಸಿದ್ದ ಬಸವಣ್ಣನವರ ಪರಂಪರೆಯ ಸ್ವಾಮೀಜಿಗಳನ್ನು ವೈದಿಕರನ್ನಾಗಿ ಪರಿವರ್ತಿಸುವ ಆರೆಸ್ಸೆಸ್ ಹುನ್ನಾರ ಇದಾಗಿದೆ.
2) ಲಿಂಗಾಯತರಿಗೆ ವಿಶೇಷ ಆಹ್ವಾನ ಯಾವ ರೂಪದಲ್ಲಿ, ಯಾರಿಗೆ ಬರುತ್ತದೆ?
ಲಿಂಗಾಯತ ಸ್ವತಂತ್ರ ಧರ್ಮ ಹೋರಾಟದಲ್ಲಿ ಮುಂಚೂಣಿಯಲ್ಲಿರುವವರು, ಬಸವನಿಷ್ಠ ಸ್ವಾಮಿಗಳಿಗೆ ಅವರ ಶಿಷ್ಯರ ಮುಖಾಂತರ ಬರಬಹುದು.
3) ಇದಕ್ಕೆ ಲಿಂಗಾಯತ ಸಮುದಾಯದ ಪ್ರತಿಕ್ರಿಯೆ ಹೇಗಿರಬೇಕು?
ನೀರ ಕಂಡಲ್ಲಿ ಮುಳುಗುವರಯ್ಯ, ಬತ್ತುವ ಜಲವ ಒಣಗುವ ಮರವ ನೆಚ್ಚಿದವರು ನಿಮ್ಮನ್ನೆತ್ತ ಬಲ್ಲರು ಎಂಬ ವಚನದಂತೆ ಈ ಆಹ್ವಾನವನ್ನು ಲಿಂಗಾಯತ ಸ್ವಾಮಿಗಳು, ಹೋರಾಟಗಾರರು ತಿರಸ್ಕರಿಸಬೇಕು.
4) ನಿಮ್ಮ ವೈಯಕ್ತಿಕ ಪ್ರತಿಕ್ರಿಯೆ, ನೀವು ಏನು ಮಾಡುತ್ತೀರಿ?
ಇದು ಆರೆಸ್ಸೆಸ್ ನ ಷಡ್ಯಂತ್ರದ ಭಾಗವಾಗಿರುವುದರಿಂದ, ನಾನು ಈ ಮೇಳಕ್ಕೆ ಹೋಗಬಾರದು ಎನ್ನುವ ನಿಲುವಿನವನು. ಬಸವಣ್ಣನವರ ತತ್ವಗಳನ್ನು ಮರೆಮಾಚಲು, ವಚನ ದರ್ಶನ ಪುಸ್ತಕ ಹಾಗೂ ಶರಣರ ಶಕ್ತಿ ಎಂಬ ಚಲನಚಿತ್ರದಂತೆ ಇದೂ ಒಂದು ಆರೆಸ್ಸೆಸ್ ನ ಕುತಂತ್ರವಾಗಿದೆ.
ರವಿಕುಮಾರ ಬಿರಾದಾರ, ವಿಜಯಪುರ, ಜಿಲ್ಲಾಧ್ಯಕ್ಷ ರಾಷ್ಟ್ರೀಯ ಬಸವ ಸೇನೆ.