ವೀರಶೈವರ ಪಾಡು ಈಗ ಎಲ್ಲಿಗೆ ಬಂತೋ ಸಂಗಯ್ಯಾ…

ಎಸ್ಸಿ ಎಂಬೆ ಹೆಂಗಯ್ಯ… ಲಿಂಗಿಬ್ರಾಹ್ಮಣನೆಂಬೆ ಸಂಗಯ್ಯ… ಬ್ರಾಹ್ಮಣ ವೀರಶೈವನೆಂಬೆ ಹೆಂಗಯ್ಯ?

ಬೆಂಗಳೂರು

ಕುರುಬ ಸಮುದಾಯದ ಲಿಂಗದಬೀರರ ಕುಣಿತವು ವೀರಶೈವರ ಕೈವಶವಾಗಿ ಬಿನ್ನಾಯ ಮಾಡುವ ಜಂಗಮರ ಪುರವಂತಿಕೆಯಾಯಿತು. ಇದೇ ಕುರುಬ ಮೂಲದ ರೇವಣಸಿದ್ಧನು ರೇಣುಕಾಚಾರ್ಯನಾಗಿ, ಬೀರಲಿಂಗನು ವೀರಭದ್ರನಾಗಿ ಹಾಗೂ ಲಿಂಗದಬೀರರ ಕುಣಿತವು ವೀರಗಾಸೆಯಾಗಿ ಉನ್ನಯನಗೊಂಡಿತು.

ಹೀಗಾಗಿ ವೀರಗಾಸೆಯ ವಚನ ಪಲುಕುಗಳು ಲಿಂಗಿಬ್ರಾಹ್ಮಣರ ಶ್ಲೋಕಗಳೇ ಆಗಿರುತ್ತವೆ. ಸಂಸ್ಕೃತದ ಸಿದ್ಧಾಂತ ಶಿಖಾಮಣಿಯ ಪ್ರಭಾವಲಯದಲ್ಲಿ ಶರಣರ ವಚನಗಳನ್ನು ಪ್ರಕ್ಷಿಪ್ತಗೊಳಿಸಿದ ಬ್ರಾಹ್ಮಣ್ಯವನ್ನು ನಾವಿಲ್ಲಿ ಕೂಡ ನೋಡಬಹುದು.

ವೀರಗಾಸೆಯು ಹೆಣ್ಣುಮಕ್ಕಳನ್ನು ಒಳಗೊಳ್ಳದೆ ಗಂಡಾಳ್ವಿಕೆಯ ಕುಣಿತವಾಗಿರುವುದು ಬ್ರಾಹ್ಮಣ್ಯವಲ್ಲದೆ ಮತ್ತೇನು? ಇತ್ತೀಚೆಗೆ ಅಪವಾದವೆಂಬಂತೆ ಚಿಕ್ಕ ವಯಸ್ಸಿನ ಹೆಣ್ಣುಮಕ್ಕಳು ವೀರಗಾಸೆ ನೃತ್ಯದಲ್ಲಿ ಭಾಗವಹಿಸುತ್ತಿದ್ದಾರೆ. ಅದೂ ಕೂಡಾ ಧಾರ್ಮಿಕ ಆಚರಣೆಗೆ ಹೊರತಾದ ರಾಜಕೀಯ ಮೆರವಣಿಗೆ, ಸರ್ಕಾರಿ, ಶಾಲಾ ಕಾಲೇಜು ಕಾರ್ಯಕ್ರಮಗಳಲ್ಲಿ ಮಾತ್ರ.

ಉಳಿದಂತೆ ವೀರಗಾಸೆಯು ಬಹುತೇಕ ಲಿಂಗಾಯತರ ದಿಬ್ಬಣದ ಮೆರವಣಿಗೆ, ರಾಜಕಾರಣಿಗಳ – ಸರ್ಕಾರದ- ಸಂಘಸಂಸ್ಥೆಗಳ ಮೆರಣಿಗೆಗಳ ಕಿಬ್ಬಿಗೆ ಒದಗುವ ಉರವಣಿಗೆಯಾಗಿದೆ ಅಷ್ಟೇ…

ಬ್ರಾಹ್ಮಣ ವೀರಶೈವರ ಪಲುಕು

ಕಾನ್ ಕಾನ್ ಒತ್ತಿ ಒತ್ತಿ…
ಹಿಂದೆ ಹಿಂದೆ ಸುತ್ತಿ ಸುತ್ತಿ.‌‌..
ಈ ವೀರಶೈವರ ಪಾಡು ಈಗ
ಎಲ್ಲಿಗೆ ಬಂತೋ ಸಂಗಯ್ಯಾ?

… ಇಲ್ಲಿಗೆ ಬಂತು ಸಂಗಯ್ಯ ,
ಜಂಗಮನೆಂಬೆ ಹೆಂಗಯ್ಯ?,
ಲಿಂಗಾಯತನೆಂಬೆ ಸಂಗಯ್ಯ,
ವೀರಶೈವ ಲಿಂಗಾಯತನೆಂಬೆ ಹೆಂಗಯ್ಯ?,
ಬೇಡಜಂಗಮನೆಂಬೆ ಸಂಗಯ್ಯ,
ಎಸ್ಸಿ ಎಂಬೆ ಹೆಂಗಯ್ಯ?,
ಲಿಂಗಿಬ್ರಾಹ್ಮಣನೆಂಬೆ ಸಂಗಯ್ಯ,
ಬ್ರಾಹ್ಮಣ ವೀರಶೈವನೆಂಬೆ ಹೆಂಗಯ್ಯ?
ವೀರಶೈವನೂ ಆಗಿ, ಲಿಂಗಾಯತನೂ ಆಗಿ,‌
ಎಸ್ಸಿಯೂ ಆಗಿ,
ಅಲೆಮಾರಿ ದಲಿತನೂ ಆಗಿ,
ಬ್ರಾಹ್ಮಣನೂ ಆಗಿ,
ಭಿಕ್ಷುಕನೂ ಆಗಿ,
ಲಿಂಗಾಯತರಿಗೆ ಗುರುವೂ ಆಗಿ,
ಲಿಂಗಿಬ್ರಾಹ್ಮಣನೂ ಆಗಿ,
ಸನಾತನಿ ಸಂಘಿಯೂ ಆಗಿ
ಮುಂದಕ್ಹೋಗೋದು ಹೆಂಗಯ್ಯಾ….?
ಸುಳ್ಳು ಎಸ್ಸಿ ಜಾತಿಪತ್ರವ ನೋಡಿ ಹೇಳಯ್ಯಾ…

ಸುಳ್ಳು ಅಯೋನಿಜ ಪಂಚಾಚಾರ್ಯರ ನೋಡಿ ಹೇಳಯ್ಯ,
ನಿನ್ನ ಪಂಚಾಂಗವ ನೋಡಿ ಹೇಳಯ್ಯ…
ಪಂಚಪೀಠಗಳ ನೋಡಿ ಹೇಳಯ್ಯ…

ಒಂದು ಕಡೆ ಕುರುಬರ ರೇವಣಸಿದ್ಧನನ್ನು ಹೈಜಾಕ್ ಮಾಡಿ ರೇಣುಕಾಚಾರ್ಯನನ್ನಾಗಿಸಿದೆ… ಹೆಂಗಯ್ಯ ?
ಮತ್ತೊಂದು ಕಡೆ ಮಾದಾರ ಮರುಳಸಿದ್ಧನನ್ನು ಹೈಜಾಕ್ ಮಾಡಿ ಮರುಳಾರಾಧ್ಯನನ್ನಾಗಿಸಿದೆ ಸಂಗಯ್ಯ…
ಇವರು ಲಿಂಗೋದ್ಭವರು ಹೆಂಗೆ ಹೇಳಯ್ಯ…?
ಮುಂದಕ್ಹೋಗೋದು ಹೆಂಗಯ್ಯಾ….?!

ಕಾನ್ ಕಾನ್ ಒತ್ತಿ ಒತ್ತಿ…
ಹಿಂದೆ ಹಿಂದೆ ಸುತ್ತಿ ಸುತ್ತಿ…

ಬಸವ ಮೀಡಿಯಾ ವಾ ಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ_
https://chat.whatsapp.com/GavGlyNxCLf7iBbDBH8P5b

Share This Article
Leave a comment

Leave a Reply

Your email address will not be published. Required fields are marked *