ಈ ರಾಜಕೀಯ ಸಮಾವೇಶಕ್ಕೆ ಬಂದಿದ್ದು 200 ಬೈಕ್, 3,000 ಜನ ಮಾತ್ರ
ವಿಜಯಪುರ:
ಇತ್ತೀಚೆಗೆ ಬಬಲೇಶ್ವರದಲ್ಲಿ ಜರುಗಿದ ಬಸವಾದಿ ಶರಣರ ಹಿಂದೂ ಸಮಾವೇಶದಲ್ಲಿ ಕನ್ನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮಿ ಬಸವಾನುಯಾಯಿಗಳು, ಲಿಂಗಾಯತ ಮಠಾಧೀಶರು ಇನ್ನು ಮುಂದೆ ಹಿಂದೂ ಲಿಂಗಾಯತ ಎಂದರೆ ಮಾತ್ರ ಗ್ರಾಮ ಪ್ರವೇಶಿಸಲು ಬಿಡುತ್ತೇವೆಂದು ಹೇಳಿದ್ದಾರೆ. ಹಾಗೂ ಬಸವಾದಿ ಶರಣರ ಅಂಕಿತ ನಾಮಗಳ, ಅವರ ತತ್ವಗಳ ಬಗ್ಗೆ ಹಗುರವಾಗಿ ಹಾಗೂ ಪ್ರಚೋದನಕಾರಿಯಾಗಿ ಮಾತನಾಡಿದ್ದಾರೆ.
ಅವರ ಎಲ್ಲಾ ನಡೆ ನುಡಿಗಳನ್ನು ರಾಷ್ಟ್ರೀಯ ಬಸವ ಸೇನಾ ವಿಜಯಪುರ ಜಿಲ್ಲಾ ಘಟಕ ತೀವ್ರವಾಗಿ ಖಂಡಿಸುತ್ತದೆ. ನಾವು ಲಿಂಗಾಯತರು, ನಮ್ಮ ಧರ್ಮ ಲಿಂಗಾಯತ, ನಮ್ಮ ಧರ್ಮಗುರು ಅಪ್ಪ ಬಸವಣ್ಣ, ನಮ್ಮ ಧರ್ಮಗ್ರಂಥ ಸಮಗ್ರ ವಚನಸಾಹಿತ್ಯ. ನಾವು ಹೀಗೆ ಹೇಳುತ್ತೇವೆ, ಹೀಗೆ ಹೇಳುತ್ತ ಗ್ರಾಮಗಳನ್ನು ಪ್ರವೇಶಿಸುತ್ತೇವೆ, ಕನ್ನೇರಿ ಪಟಾಲಂ ಗಳಿಗೆ ತಾಕತ್ತು ಇದ್ದರೆ ತಡೆಯಲಿ, ಎಂದು ಆಕ್ರೋಶ ದಿಂದ ಬಸವ ಸೇನೆ ಸವಾಲು ಹಾಕಿದೆ.
ಬಸವಾದಿ ಶರಣರ ಬಗ್ಗೆ ಅರ್ಧಂಬರ್ಧ ಓದಿಕೊಂಡು ಸಂಘ ಪರಿವಾರದ ಗುಲಾಮಮಗಿರಿ ಮಾಡುತ್ತಾ ಬಿಜೆಪಿ ವಕ್ತಾರರಂತೆ ವರ್ತಿಸುತ್ತಿರುವ ಕನ್ನೇರಿ ಸ್ವಾಮಿಗಳು ಈ ರೀತಿ ಬೆದರಿಕೆ ಹಾಕುತ್ತಾ ತಿರುಗಾಡಿದರೆ ಯಾರೂ ಕೇಳಲ್ಲ.
ಬಬಲೇಶ್ವರದ ಸಮಾವೇಶದಲ್ಲಿ ಭಾಗವಹಿಸಿದವರೆಲ್ಲ ರಾಜಕೀಯ ನಿರಾಶ್ರಿತರು, ವಿಜಯಪುರದ ಲಿಂಗಾಯತ ಮಠಾಧೀಶರು ಬಹಿಷ್ಕರಿಸಿದ್ದರಿಂದ ಜಿಲ್ಲೆಯ ಬೆರಳೆಣಿಕೆಯ ಬಸವ ವಿರೋಧಿ ಸ್ವಾಮಿಗಳು ಭಾಗವಹಿಸಿರಬಹುದು. ಅಲ್ಲದೇ ವೇದಿಕೆ ತುಂಬಿಸಲು ಆಯೋಜಕರು ಬೇರೆ ರಾಜ್ಯ ಹಾಗೂ ಬೇರೆ ಜಿಲ್ಲೆಗಳಿಂದ ಕೆಲ ಸಾಧುಗಳನ್ನು ಕರೆಸಿಕೊಂಡಿದ್ದರು. ಅಲ್ಲದೆ 2500 ಬೈಕ್ ರ್ಯಾಲಿ ಅಂತ ಹೇಳಿದವರು ಕನಿಷ್ಟ 200 ಬೈಕ್ ಗಳು ಇರಲಿಲ್ಲ, ಅಲ್ಲದೆ 50 ಸಾವಿರ ಜನ ಸೇರುತ್ತಾರೆಂದ ಮಾಜಿ ಶಾಸಕರೊಬ್ಬರು ಬುರುಡೆ ಬಿಟ್ಟಿದ್ದರು. ಆದರೆ ಅಲ್ಲಿ ಸೇರಿದ್ದು 3000ಕ್ಕಿಂತ ಕಡಿಮೆ.
ಒಟ್ಟಾರೆಯಾಗಿ ಆ ಒಂದು ಹಿಂದೂ ಸಮಾವೇಶ ಬಸವಾದಿ ಶರಣರ ಭಾವಚಿತ್ರ ಮೆರವಣಿಗೆ, ಅವರುಗಳ ವಚನ ಚಿಂತನೆಗಳನ್ನು ಬಿಟ್ಟು ಬರೀ ವೈಯಕ್ತಿಕ ರಾಜಕೀಯ ಪ್ರತಿಷ್ಟೆಗಾಗಿ ಮಾಡಿದಂತೆ ಆಗಿತ್ತು, ಉತ್ತರಪ್ರದೇಶದ ಯೋಗಿ ಆದಿತ್ಯನಾಥನಾಗಿ ಕನ್ನೇರಿ ಸ್ವಾಮಿಗಳನ್ನು ನೋಡಬೇಕೆಂಬ ಕೆಲ ಜನರ ಆಸೆಯು ಸಮಾರಂಭ ಸಂಪೂರ್ಣ ವಿಫಲವಾಗುವುದರೊಂದಿಗೆ ಕಮರಿ ಹೋಯಿತು.
ಕನ್ನೇರಿ ಸ್ವಾಮಿಗಳಿಗೆ ಘನ ಸರ್ವೋಚ್ಚ ನ್ಯಾಯಾಲಯ “ನೀವು ಉತ್ತಮ ಪ್ರಜೆಯಲ್ಲ” ಎಂದು ಹೇಳಿರುವುದು ಸರಿಯಾಗಿದೆ. ಅಲ್ಲದೆ ಕನ್ನೇರಿ ಸ್ವಾಮಿಗಳು ಎತ್ತಿರುವ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕೊಡಲು ರಾಷ್ಟ್ರೀಯ ಬಸವ ಸೇನೆ ಕಾರ್ಯಕರ್ತರು ಯಾವುದೇ ವೇದಿಕೆಯಲ್ಲಿ ತಯಾರು ಇದ್ದಾರೆ ಎಂದು ತಿಳಿಸಿದರು.
ಬಸವತತ್ವದ ಸ್ವಾಮಿಜಿಗಳನ್ನು ಬಸವ ತಾಲಿಬಾನಿಗಳು ಎಂದು ಕರೆದಿರುವುದು ಶಾಂತಿದೂತ, ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನವರನ್ನು ಉಗ್ರವಾದಿ ತಾಲೀಬಾನಿ ಸಂಘಟನೆಯೊಂದಿಗೆ ಹೋಲಿಸಿರುವುದು ಅಕ್ಷಮ್ಯ ಅಪರಾಧ. ಇದು ಅಸಂಖ್ಯಾತ ಬಸವಾಭಿಮಾನಿಗಳಲ್ಲಿ ಅತೀವ ಬೇಸರವನ್ನು ತರಿಸಿದೆ.
ಕನ್ನೇರಿ ಸ್ವಾಮಿಗಳ ಈ ಹೇಳಿಕೆಯನ್ನು ಕೆಲವು ದಿನಗಳ ಹಿಂದೆ ಬಸವ ಸಂಸ್ಕೃತಿ ಅಭಿಯಾನದಲ್ಲಿ ಭಾಗವಹಿಸಿದ್ದ ಮಠಾಧೀಶರ ಕುರಿತು ಅಶ್ಲೀಲವಾಗಿ ಆವಾಚ್ಯವಾಗಿ ಸೂ… ಮಕ್ಕಳನ್ನು ಮೆ… ಹೊಡೆಯಬೇಕೆಂದು ಸಾರ್ವಜನಿಕವಾಗಿ ಭಾಷಣದಲ್ಲಿ ನಿಂದಿಸಿದ್ದರು. ತದನಂತರ ವಿಜಯಪುರ ಜಿಲ್ಲಾಧಿಕಾರಿಗಳು ಕನ್ನೇರಿ ಸ್ವಾಮಿಗಳನ್ನು ಎರಡು ತಿಂಗಳುಗಳ ಕಾಲ ವಿಜಯಪುರ ಪ್ರವೇಶಿಸದಂತೆ ನಿಷೇಧ ಹೇರಿದ್ದರು, ಘನತೆವೆತ್ತ ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ ಗಳು ವಿಜಯಪುರ ಜಿಲ್ಲಾಧಿಕಾರಿಗಳ ಆದೇಶವನ್ನು ಎತ್ತಿ ಹಿಡಿದು ಕನ್ನೆರಿ ಸ್ವಾಮಿಗಳಿಗೆ ನೀವು ಒಳ್ಳೆಯ ಪ್ರಜೆಯಲ್ಲ ಎಂದು ಛೀಮಾರಿ ಹಾಕಿದ್ದರು.
ಆದರೂ ಇದರಿಂದ ಕಿಂಚಿತ್ತೂ ಬುದ್ದಿ ಕಲಿಯದ ಸ್ವಾಮಿಗಳು ಮತ್ತೆ ತಮ್ಮ ಕೊಳಕು ಬಾಯಿಯಿಂದ ಮತ್ತೊಮ್ಮೆ ನಾಲಿಗೆ ಹರಿಬಿಟ್ಟಿದ್ದಾರೆ. ಕರ್ನಾಟಕದ ಸಾಂಸ್ಕೃತಿಕ ನಾಯಕ, ಲಿಂಗಾಯತ ಧರ್ಮಗುರು, ಶಾಂತಿದೂತ, ಸಮಾನತೆಯ ಹರಿಕಾರ, ಸ್ತ್ರೀ ಕುಲೋದ್ದಾರಕ, ದೀನದಲಿತೊದ್ದಾರಕ, ಪ್ರಜಾಪ್ರಭುತ್ವವಾದಿ ಅಪ್ಪ ಬಸವಣ್ಣನವರನ್ನು ವೈರುದ್ಯ ದಿಕ್ಕಿನಲ್ಲಿರುವ ತಾಲಿಬಾನ್ ಎಂಬ ಉಗ್ರ ಸಂಘಟನೆಯೊಂದಿಗೆ ಜೋಡಿಸಿರುವುದು ಅಕ್ಷಮ್ಯ ಅಪರಾಧ, ದೇಶದ್ರೋಹದ ಮಾತು. ಅಲ್ಲದೆ ಕರ್ನಾಟಕ ಸರಕಾರ ಒಬ್ಬ ಉಗ್ರವಾದಿಯನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕನನ್ನು ಅರಿಸಿದೆಯೇ ಎಂಬ ಸಹಿಸಲಸಾದ್ಯವಾದುದು.
ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು ಯಾಕೆಂದರೆ ಕನ್ನೇರಿ ಸ್ವಾಮಿಗಳು ಪದೇ ಪದೇ ಬಸವಣ್ಣನವರ, ಅವರ ತತ್ವಗಳು, ಮಠಾಧೀಶರನ್ನು, ಅನುಯಾಯಿಗಳನ್ನು ಅತ್ಯಂತ ಕಟುವಾಗಿ ಅಶ್ಲೀಲವಾಗಿ ಟೀಕಿಸುತ್ತ ಸಮಾಜದಲ್ಲಿ ಕೋಮುಗಲಭೆಗಳನ್ನು ಎಬ್ಬಿಸಿ ಸಮಾಜದಲ್ಲಿ ಅಶಾಂತಿ ಉಂಟು ಮಾಡುವ ಉದ್ದೇಶ ಹೊಂದಿದ್ದಾರೆ.
ಆದ್ದರಿಂದ ಇಂತಹ ಮಾನಸಿಕ ಸ್ಥಿಮಿತ ಕಳೆದುಕೊಂಡಿರುವ ಕನ್ನೇರಿ ಸ್ವಾಮಿಯನ್ನು ಕರ್ನಾಟಕಕ್ಕೆ ಪ್ರವೇಶ ಮಾಡದಂತೆ ರಾಜ್ಯ ಸರಕಾರ ಹಾಗೂ ಜಿಲ್ಲಾಧಿಕಾರಿಗಳು ಬಹಿಷ್ಕಾರ ಆದೇಶವನ್ನು ಮುಂದುವರೆಸಬೇಕು. ಇಲ್ಲವಾದಲ್ಲಿ ಬಸವಪರ ಸಂಘಟನೆಗಳೆಲ್ಲವೂ ಸೇರಿ ಬೀದಿಗಿಳಿದು ಉಗ್ರ ಹೋರಾಟ ಮಾಡಲಾಗುವುದೆಂದು ಎಂದು ರಾಷ್ಟ್ರೀಯ ಬಸವ ಸೇನಾ ಜಿಲ್ಲಾದ್ಯಕ್ಷ ಡಾ ರವಿಕುಮಾರ ಬಿರಾದಾರ ಹಾಗೂ ಪಧಾಧಿಕಾರಿಗಳಾದ ಶಾಂತವೀರ ಥಾಲಭಾವಡಿ, ನಿಂಗಪ್ಪ ಸಂಗಾಪುರ್, ಮಾತೋಶ್ರೀ ಚಂದ್ರಕಲಾ ಪಾಟೀಲ್ ಗುಣದಾಳ, ಪ್ರದೀಪ್ ತೊರವಿ, ಪ್ರಭುಗೌಡ ಪಾಟೀಲ ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

ನನಗನಿಸಿದಂತೆ 2017 ರಿಂದ ಇಲ್ಲಿಯವರೆಗೂ ಎಷ್ಟು ಸಾಧ್ಯವೋ ಅಷ್ಟರ ಮಟ್ಟಿಗೆ ಬಸವ ತತ್ವಕ್ಕೆ ಮಟ್ಟ ಹಾಕಿ ಹಿಂದುತ್ವದ ಪರಿಧಿಯೊಳಗೆ ಬಂಧಿಸಲು BJP RSS VHP ಭಜರಂಗಿದಳ ಇತ್ಯಾದಿಗಳೆಲ್ಲವೂ ನಿರಂತರವಾಗಿ ಯತ್ನಿಸುತ್ತಲೇ ಇವೆ !
ಅದುಮಿಡಲು ಯತ್ನಿಸಿದಷ್ಟೂ ಉಕ್ಕೇರುತ್ತಿರುವ ಜಾಗೃತಿ , ಮತ್ತೆ ಕಲ್ಯಾಣ , ಬಸವ ಸಂಸ್ಕೃತಿ ಅಭಿಯಾನ ಹಮ್ಮಿಕೊಂಡ ಹಾಗೂ ಹಮ್ಮಿಕೊಳ್ಳುತ್ತಿರುವ ಸಮಾವೇಶಗಳಿಗೆ ಲಕ್ಷೋಪ ಲಕ್ಷ ಸಂಖ್ಯೆಯಲ್ಲಿ ಬಸವಾಭಿಮಾನಿಗಳು ಭಾಗವಹಿಸಿ ತೋರುತ್ತಿರುವ ಉತ್ಸಾಹದ ಬೆಂಬಲ ಹಿಂದೂ ಮೂಲಭೂತವಾದಿಗಳ ವಲಯದಲ್ಲಷ್ಟೇ ಅಲ್ಲ, ಅಣ್ಣನನ್ನು ರಾಜಕೀಯ ದಾಳವಾಗಿ ಬಳಸಿ ಕೊಳ್ಳಲೆತ್ನಿಸುತ್ತಿರುವ ಎಲ್ಲಾ ರಾಜಕೀಯ ಪಕ್ಷಗಳ ಎದೆಯಲ್ಲಿ ನಡುಕ ಉಂಟು ಮಾಡಿರುವುದು .. ಮಾಡುವರುವುದಂತೂ ನಿಜ ! ಬಸವಣ್ಣನನ್ನು ತಡೆಯಲೆತ್ನಿಸಿದಷ್ಟೂ ಜಗದಗಲ ಮುಗಿಲಗಲ ವ್ಯಾಪಿಸುತ್ತಲೇ ಇದ್ದಾನೆ … ಉಕ್ಕೇರುತ್ತಿರುವ ಬಸವ ಪ್ರಜ್ಞೆಯ ಮೂಲಕ…!
👍
ನಿಮ್ಮ ಮಾತು ಸತ್ಯವಾದ ಮಾತು ಈ ಮಾತಿಗೆ ತಪ್ಪದೆ ಇದನ್ನು ಇನ್ನೂ ಹೆಚ್ಚಿಗೆ ಪ್ರಸಾರ್ಮಾಡಿರಿ ನಿಮ್ಮ ನಡೆಗೆ ನಮ್ಮ ಬೆಂಬಲ 🤝ಧನ್ಯವಾದಗಳು 💐👏🏻
😳🥲💐