ಇಳಕಲ್ಲ
ನಗರದ ಲಿಂಗಾಯತ ಬಣಗಾರ ಸಮಾಜವು ಪ್ರತಿ ವರ್ಷದಂತೆ ಮಹಾಶಿವರಾತ್ರಿಯಂದು ಅಡ್ಡಪಲ್ಲಕ್ಕಿ ಮಹೋತ್ಸವ ಕಾರ್ಯಕ್ರಮ ನಡೆಸುತ್ತಾರೆ. ಆ ಕಾರ್ಯಕ್ರಮದ ಸಮಾರೋಪವನ್ನು ವಿಜಯ ಶ್ರೀ ಮಹಾಂತೇಶ್ವರ ಶ್ರೀಮಠದ ದಾಸೋಹ ಭವನದಲ್ಲಿ ಈಚೆಗೆ ಹಮ್ಮಿಕೊಳ್ಳಲಾಗಿತ್ತು.
ಸಾನಿಧ್ಯವಹಿಸಿ ಮಾತನಾಡಿದ ಪೂಜ್ಯ ಗುರುಮಹಾಂತ ಶ್ರೀಗಳು, ಬಣಗಾರ ಸಮಾಜ ಅಂತ ಬಳಸದೇ ‘ಲಿಂಗಾಯತ ಬಣಗಾರ ಸಮಾಜ’ ಅಂತ ಹೇಳಬೇಕು ಮತ್ತು ಬಳಸಬೇಕು ಎಂದರು. ನಾವೆಲ್ಲರೂ ಲಿಂಗವನ್ನು ಕಟ್ಟಿಕೊಂಡು ಲಿಂಗಪೂಜೆ ಮಾಡಿಕೊಳ್ಳುವ ಲಿಂಗಾಯತರಾಗಿದ್ದೇವೆ. ಲಿಂಗಪೂಜೆಯನ್ನು ತಪ್ಪದೇ ಮಾಡಿಕೊಳ್ಳಬೇಕೆಂದು ಹೇಳಿದರು.

ಸಾಹಿತಿ ಇಂದುಮತಿ ಅಂಗಡಿ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು. ನಂತರ ಮಾತನಾಡಿದ ಇಂದುಮತಿ ಅಂಗಡಿಯವರು ಬಸವಣ್ಣನವರ ಸಮಕಾಲೀನರಾದ ಶರಣ ಶಂಕರ ದಾಸಿಮಯ್ಯನವರ ಬದುಕು ಮತ್ತು ಚರಿತ್ರೆಯ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಶಿರೂರ ಮಹಾಂತತೀರ್ಥದ ಬಸವಲಿಂಗ ಸ್ವಾಮೀಜಿ, ಮಹಾಂತಪ್ಪ ಚನ್ನಿ, ಬಣಗಾರ ಸಮಾಜದ ಅಧ್ಯಕ್ಷರಾದ ಚಂದ್ರಶೇಖರ ಶಿವಬಲ, ರಾಚಣ್ಣ ಶಿವಬಲ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಸವಿತಾ ಶಿವಬಲ ಮತ್ತು ಸುಮಾ ಶಿವಬಲ ಕಾರ್ಯಕ್ರಮ ನಿರೂಪಿಸಿದರು. ಅಶ್ವಿನಿ ಕನಕೇರಿ ಸ್ವಾಗತಿಸಿ, ಕೊನೆಗೆ ವಂದಿಸಿದರು.