ಲಿಂಗಾಯತರ ಮೇಲೆ ನಿರಂತರ ದಾಳಿ ತಡೆಯಲು ಮಠಾಧೀಶರ ಮಹತ್ವದ ಸಭೆ

ರವೀಂದ್ರ ಹೊನವಾಡ
ರವೀಂದ್ರ ಹೊನವಾಡ

ಹಿಂದುತ್ವದ ಕಪಿಮುಷ್ಟಿಯಿಂದ ಲಿಂಗಾಯತ ಯುವಕರನ್ನು ರಕ್ಷಿಸಿಕೊಳ್ಳಲು, ಶರಣ ಪರಂಪರೆಯ ಮೇಲಿನ ಸಾಂಸ್ಕೃತಿಕ ಆಕ್ರಮಣ ಪ್ರತಿರೋಧಿಸಲು ರಾಜ್ಯಾದ್ಯಂತ ಅಭಿಯಾನ ರೂಪಿಸಲು ಚಿಂತನೆ

ಧಾರವಾಡ

ಲಿಂಗಾಯತರ ಮೇಲೆ ನಡೆಯುತ್ತಿರುವ ನಿರಂತರ ಸಾಂಸ್ಕೃತಿಕ ದಾಳಿಯನ್ನು ಎದುರಿಸಿ ಲಿಂಗಾಯತ ಅಸ್ಮಿತೆ ಉಳಿಸಲು ಸಮಾಜದ ಮಠಾಧೀಶರ ಮಹತ್ವದ ಸಭೆ ಜನವರಿ 17ರಂದು ಧಾರವಾಡದಲ್ಲಿ ನಡೆಯಲಿದೆ.

ಹಿಂದುತ್ವ ಕಪಿಮುಷ್ಟಿಯಿಂದ ಲಿಂಗಾಯತ ಯುವಕರನ್ನು ಮುಕ್ತಿಗೊಳಿಸುವ ಮಾರ್ಗವನ್ನೂ ತೋಂಟದ ಸಿದ್ಧರಾಮ ಶ್ರೀಗಳ ಸಾನಿಧ್ಯದಲ್ಲಿ ನಡೆಯುವ ಸಭೆಯಲ್ಲಿ ಚರ್ಚಿಸಲಾಗುವುದು. ಇದಕ್ಕೆಲ್ಲಾ ಪರಿಹಾರವಾಗಿ ರಾಜ್ಯಾದ್ಯಂತ ಒಂದು ಅಭಿಯಾನ ರೂಪಿಸಲು ಕೂಡ ಪ್ರಯತ್ನಿಸಲಾಗುವುದು ಎಂದು ತಿಳಿದು ಬಂದಿದೆ.

ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಅಧ್ಯಕ್ಷ ಭಾಲ್ಕಿ ಹಿರೇಮಠದ ಶ್ರೀ ಬಸವಲಿಂಗ ಪಟ್ಟದ್ದೇವರು ನಾಡಿನ ಪ್ರಮುಖ ಮಠಾಧೀಶರಿಗೆ ಪತ್ರ ಬರೆದು ಸಭೆಗೆ ಆಹ್ವಾನಿಸಿದ್ದಾರೆ.

ರಾಜ್ಯಾದ್ಯಂತ ಅಭಿಯಾನ

ಡಿಸೆಂಬರ್ 21ರಂದು ಕಳಿಸಿರುವ ಪತ್ರದಲ್ಲಿ ದಕ್ಷಿಣ ಭಾರತದಲ್ಲಿಯೇ ಬಹು ದೊಡ್ಡ ಜನಾಂಗವಾಗಿರುವ ಲಿಂಗಾಯತರ ಮೇಲೆ ನಡೆಯುತ್ತಿರುವ ವಿವಿಧ ರೀತಿಯ ಆಕ್ರಮಣಗಳ ಬಗ್ಗೆ ಗಮನ ಸೆಳೆದಿದ್ದಾರೆ.

“ಶರಣರ ವಚನ ಚಳುವಳಿ ಮತ್ತು ಲಿಂಗಾಯತ ಧರ್ಮದ ಮೇಲೆ ಅನೇಕ ರೀತಿಯ ಸಾಂಸ್ಕೃತಿಕ ಆಕ್ರಮಣಗಳು ನಡೆಯುತ್ತಿವೆ. ಲಿಂಗಾಯತ ಸಮಾಜದ ಅಸ್ಮಿತೆ ಕಾಪಾಡುವ ದಿಶೆಯಲ್ಲಿ ರಾಜ್ಯಾದ್ಯಂತ ಒಂದು ಅಭಿಯಾನ ನಡೆಸುವ ಅಗತ್ಯತೆ ಸೃಷ್ಟಿಯಾಗಿದೆ,” ಎಂದು ಬರೆದಿದ್ದಾರೆ.

ಲಿಂಗಾಯತ ಯುವಕರು

ಮಠಾಧಿಪತಿಗಳ ಒಕ್ಕೂಟದ ಕಾರ್ಯದರ್ಶಿ ಹಂದಿಗುಂದ ವಿರಕ್ತಮಠದ ಪೂಜ್ಯ ಶಿವಾನಂದ ಮಹಾಸ್ವಾಮಿಗಳು ಲಿಂಗಾಯತ ಯುವಕರನ್ನು ದಾರಿ ತಪ್ಪಿಸುತ್ತಿರುವ ಹಿಂದುತ್ವ ಸಂಘಟನೆಗಳ ಅಪಾಯವನ್ನು ಸಭೆಯಲ್ಲಿ ಪ್ರಮುಖವಾಗಿ ಚರ್ಚಿಸಲಾಗವುದೆಂದು ಹೇಳಿದರು.

“ನಮ್ಮ ಯುವಕರನ್ನು ಹಿಂದುತ್ವ ಸಂಘಟನೆಗಳು ದುರ್ಬಳಕೆ ಮಾಡಿಕೊಂಡು ತಮ್ಮ ಹಿತಾಸಕ್ತಿ ಸಾಧಿಸಿಕೊಳ್ಳುತ್ತಿವೆ. ನಮ್ಮ ಲಿಂಗಾಯತ ಸಮುದಾಯವನ್ನು, ನಮ್ಮ ಸಮುದಾಯದ ಯುವಪಡೆಯನ್ನು ಈ ಅಪಾಯದಿಂದ ಸಂರಕ್ಷಣೆ ಮಾಡಿಕೊಳ್ಳಬೇಕು. ನಮ್ಮ ಯುವ ಪಡೆಗೆ ಸೂಕ್ತ ತಿಳುವಳಿಕೆ ಕೊಡಬೇಕಾಗಿದೆ.

ಇದರ ಬಗ್ಗೆ ಲಿಂಗಾಯತ ಮಠಾಧಿಪತಿಗಳಾದವರು ನಾವು ಏನು ಮಾಡಬೇಕು, ಏನೇನು ಐಡಿಯಾಗಳಿವೆ ಎಂದು ಎಲ್ಲರಿಂದ ಕೇಳಿ ಚರ್ಚಿಸಲಾಗುವುದು. ನಂತರ ಸಭೆಯಲ್ಲಿ ಬರುವ ನಿರ್ಣಯವನ್ನು ಎಲ್ಲರೂ ಆಚರಣೆಗೆ ತರಲು ಶ್ರಮಿಸುತ್ತೇವೆ,” ಎಂದು ಬಸವ ಮೀಡಿಯಾದ ಜೊತೆ ಮಾತನಾಡುತ್ತ ಹೇಳಿದರು.

ಬಹಳ ದಿವಸಗಳ ಆಲೋಚನೆ

ಲಿಂಗಾಯತ ಯುವಕರ ಈ ಆತಂಕದ ಬಗ್ಗೆ ಬಹಳ ದಿವಸದಿಂದ ವೈಯಕ್ತಿಕವಾಗಿ ಎಲ್ಲರೂ ಮಾತಾಡುತ್ತ ಇದ್ದೇವೆ. ಈಗ ಎಲ್ಲರೂ ಸೇರಿ, ಚರ್ಚೆ ಮಾಡಿ ಅದರ ಬಗ್ಗೆ ಸೂಕ್ತ ನಿರ್ಣಯ ತೆಗೆದುಕೊಳ್ಳಲು ಈ ಸಭೆ ಕರೆಯಲಾಗಿದೆ, ಎಂದರು.

142
ಲಿಂಗಾಯತ ಮಠಾಧೀಶರಿಂದ ರಾಜ್ಯಾದ್ಯಂತ ಅಭಿಯಾನ

ಲಿಂಗಾಯತರ ಮೇಲಿನ ಸಾಂಸ್ಕೃತಿಕ ಆಕ್ರಮಣ ಪ್ರತಿರೋಧಿಸಲು, ಹಿಂದುತ್ವದಿಂದ ಯುವಕರನ್ನು ರಕ್ಷಿಸಲು ರಾಜ್ಯ ಮಟ್ಟದ ಅಭಿಯಾನದ ಅಗತ್ಯವಿದೆಯೇ?

Share This Article
12 Comments
  • ಉತ್ತಮವಾದ ಬೆಳವಣಿಗೆ. ಪೂಜ್ಯರೇ ಈಗಲಾದರೂ ದಾರಿ ತೋರಿಸಿ ಸಾವಿರ ಸಾವಿರ ಸಂಖ್ಯೆಯಲ್ಲಿ ಬರುತ್ತೇವೆ

    • ಒಳ್ಳೆಯ ಚಿಂತನೆಯ ಬೆಳವಣಿಗೆ……
      ಬಸವಣ್ಣನ ಶಿವಾಚಾರದ ಬೆಳವಿಗೆ ಬೆಳಗಲಿ…
      ಶರಣು ಶರಣಾರ್ಥಿಗಳು…👍👌💐🙏🙏

      • ಇದು ಆಗಲೆ ಬೇಕು ಇಲ್ಲದಿದ್ದರೆ ಉಳಿಗಾಲವಿಲ್ಲ

        • ತಡವಾದರೂ ಪರವಾಗಿಲ್ಲ. ಲಿಂಗಾಯತ ಧರ್ಮ ಮಠಾಧೀಶರು ಅತ್ಯುತ್ತಮ ಹೆಜ್ಜೆ ಇಟ್ಟಿದ್ದಾರೆ. ರಾಜ್ಯಾದ್ಯಂತ ಬೃಹತ್ ಪ್ರಮಾಣದಲ್ಲಿ ಆಂದೋಲನ ನಡೆಯಲೇಬೇಕು. ನಮ್ಮನ್ನು ನಾವೇ ರಕ್ಷಿಸಿಕೊಳ್ಳುವ ಮಹತ್ತರ ಜವಾಬ್ದಾರಿ ಎಲ್ಲರ ಮೇಲಿದೆ

  • ಇದು ಯಾವಗೋ ಆಗಬೇಕಿತ್ತು ಆದರೂ ಈಗ ನಡೆಯುತ್ತಿರುವುದು ಒಳ್ಳೆ ಬೆಳವಣಿಗೆ 👌👌👌👌👌

  • ಒಳ್ಳೆಯ ಆಲೋಚನೆ ,ಈ ಕಾಯ೯ ಈ ಹಿಂದೆಯೇ ಆಋಬೆಕಿತ್ತು ,ತಡವಾದರೂ ಈ ಬೆಳವಣಿಗೆ ಲಿಂಗಾಯತ ಧಮ೯ದವರಿಗೆ ಕುಷಿ ತಂದಿದೆ.

  • ಈ ವಿಷಯ ಅತ್ಯಂತ ಅಗತ್ಯ ವಾಗಿದೆ. ನಮ್ಮ ಸಮಾಜದ ಯುವಕರು ಹುಸಿ ಹಿಂದುತ್ವದ ಹಿಂದೆ ಬಿದ್ದಿದ್ದಾರೆ. ಅವರನ್ನು ಎಚ್ಚರಿಸಲು ಪೂಜ್ಯರ ಈ ಸಭೆ ಅತ್ಯಂತ ಮಹತ್ವದ್ದಾಗಿದೆ.

    • ಲಿಂಗಾಯ್ತ, ಹಿಂದೂ, ಜಾತಿ ಅಂತ ಹಿಂಗೆ ಅಡ್ತಾ ಇದ್ದರೆ ಇವತ್ತು ಬಾಂಗ್ಲದೇಶದಲ್ಲಿ ಇರೂ ಹಿಂದೂಗಳಿಗೆ ಬಂದಿರೊ ಹೀನ ಸ್ತಿತಿ ಭಾರತದಲ್ಲೂ ಬರುತ್ತೆ, ಮಠಾಧೀಶರುಗಳು ಆ ನಿಟ್ಟಿನಲ್ಲಿ ಯೋಚನೆ ಮಾಡಬೇಕು,

  • ತಡವಾದರೂ ಪರವಾಗಿಲ್ಲ. ಲಿಂಗಾಯತ ಧರ್ಮ ಮಠಾಧೀಶರು ಅತ್ಯುತ್ತಮ ಹೆಜ್ಜೆ ಇಟ್ಟಿದ್ದಾರೆ. ರಾಜ್ಯಾದ್ಯಂತ ಬೃಹತ್ ಪ್ರಮಾಣದಲ್ಲಿ ಆಂದೋಲನ ನಡೆಯಲೇಬೇಕು. ನಮ್ಮನ್ನು ನಾವೇ ರಕ್ಷಿಸಿಕೊಳ್ಳುವ ಮಹತ್ತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಮಠಾಧೀಶರು ಕೈಗೊಳ್ಳುವ ಮತ್ತು ಮುಂದಿನ ಕಾರ್ಯಗಳನ್ನು ನಿರೂಪಿಸಿ ಕೊಡುವ ನಿರ್ದೇಶನಗಳನ್ನು ; ವೈಯಕ್ತಿಕವಾಗಿ ಮತ್ತು ಸಾಂಘಕವಾಗಿ ಕಂಕಣಬದ್ಧರಾಗಿ ಮಡೋಣ ಮತ್ತು ಮಾಡುತ್ತೇವೆ. ಶರಣು ಶರಣಾರ್ಥಿಗಳು

  • ಬರೀ ಲಿಂಗಾಯತ ಯುವಕರು ದಾರಿ ತಪ್ಪುತಿಲ್ಲ ಕೆಲವು ಮಠದ ಸ್ವಾಮೀಜಿಗಳು ಕೂಡ ದಾರಿ ತಪ್ಪುತ್ತಿದ್ದಾರೆ ಅವರಿಗೂ ಸ್ವಲ್ಪ ಬಿಸಿ ಮುಟ್ಟಿಸಬೇಕಾಗಿದೆ

  • ವೀರಶೈವರು ಹಿಂದೂಗಳಿಗಿಂತ ಭಿನ್ನ ಆದರೂ ನಾವು ಭಾರತೀಯರು ಹಿಂದೂಗಳು ಎಂದು ಒಪ್ಪಿಕೊಂಡಿರುವಾಗ ಮತ್ತೇಕೆ ಈ ಭೇದ ಭಾವ?. ವೀರಶೈವ ಜಾಗತಿಕ ಧರ್ಮ ಆಗಿರುವಾಗ ಅದರಲ್ಲಿ ಹಿಂದೂಗಳು ಕೂಡ ಇರುತ್ತಾರೆ ಅಲ್ಲವೇ?. ಇದರಲ್ಲಿ ಹಿಂದೂಗಳಿಂದ ಸಂಸ್ಕೃತಿಕ ದಾಳಿ ಪ್ರಶ್ನೆ ಎಲ್ಲಿ ಬಂತು?

Leave a Reply

Your email address will not be published. Required fields are marked *