ಲಿಂಗಾಯತ ಹಂಡೆವಜೀರ ಸಂಘದಿಂದ ಹನುಮಪ್ಪನಾಯಕರ ಮೂರ್ತಿ ಪ್ರತಿಷ್ಠಾಪನೆ

ಮಂಜು ಕಲಾಲ
ಮಂಜು ಕಲಾಲ

‘ಹಂಡೆ ಹನುಮಪ್ಪನಾಯಕರು ಸಮಾಜ ಸುಧಾರಣೆ ಕಾರ್ಯಗಳಲ್ಲಿ ತೊಡಗಿಸಿಕೊಂಡು ಇತಿಹಾಸ ನಿರ್ಮಾಣ ಮಾಡಿದ ಮಹಾನ್ ವ್ಯಕ್ತಿ.’

ಬಸವನಬಾಗೇವಾಡಿ

ಬಸವನ ಬಾಗೇವಾಡಿ ತಾಲೂಕಿನ ಸಂಕನಾಳ ಗ್ರಾಮದಲ್ಲಿ ಬುಧವಾರ ಅಖಿಲ ಕರ್ನಾಟಕ ಲಿಂಗಾಯತ ವೀರಶೈವ ಹಂಡೆವಜೀರ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ಹಮ್ಮಿಕೊಂಡ ರಾಜ್ಯಮಟ್ಟದ ೫೩೯ನೇ ರಾಜಾ ಹಂಡೆ ಹನುಮಪ್ಪನಾಯಕರ ಜಯಂತೋತ್ಸವ ಹಾಗೂ ಮೂರ್ತಿ ಪ್ರತಿಷ್ಠಾಪನೆ ಸಮಾರಂಭ ನಡೆಯಿತು.

ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ ಹಂಡೆ ಹನುಮಪ್ಪನಾಯಕರು ಸಮಾಜ ಸುಧಾರಣೆ ಕಾರ್ಯಗಳಲ್ಲಿ ತೊಡಗಿಸಿಕೊಂಡು ಇತಿಹಾಸ ನಿರ್ಮಾಣ ಮಾಡಿದ ಮಹಾನ್ ವ್ಯಕ್ತಿ ಎಂದು ಬಣ್ಣಿಸಿದರು.

ಸಮಾಜದ ಸಲುವಾಗಿ ದುಡಿದ ವ್ಯಕ್ತಿಯನ್ನು ಒಂದೇ ಸಮುದಾಯಕ್ಕೆ ಸೀಮಿತಗೊಳಿಸದೆ ಅವರು ಮಾಡಿದ ಕಾರ್ಯಗಳನ್ನು ಶ್ಲಾಘಿಸುವ ಮೂಲಕ ಅಂತವರ ವ್ಯಕ್ತಿತ್ವ ಹಾಗೂ ಆದರ್ಶಗಳನ್ನು ನಮ್ಮ ಜೀವನದಲ್ಲಿ ರೂಢಿಸಕೊಳ್ಳಬೇಕು ಎಂದರು.

ಮಾಜಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ ಮಾತನಾಡಿ, ಹಂಡೆವಜೀರ ಸಮಾಜದ ಜನರು ಯಾವಾಗಲು ಕಾಯಕ ಜೀವಿಗಳು, ರೈತಾಪಿವರ್ಗದಿಂದ ಬಂದವರು ಅವರು ಪ್ರಾಮಾಣಿಕವಾಗಿ ದುಡಿದುಕೊಂಡು ತಮ್ಮ ಜೀವನದಲ್ಲಿ ವಿಶ್ವಾಸಾರ್ಹ ಬದುಕು ಕಟ್ಟಿಕೊಂಡು ಜೀವನ ಸಾಗಿಸುತ್ತಾ ಬಂದವರು ಎಂದು ಹೇಳಿದರು.

ಉಪನ್ಯಾಸಕ ಆಯ್. ಬಿ. ಹಿರೇಮಠ ಮಾತನಾಡಿ, ೧೨ ನೇ ಶತಮಾನದ ೨ನೇ ಅಲೀಆದಿಲ್ ಶಾಯಿ ರಾಜಮನೆತನದಲ್ಲಿ ಹನುಮಪ್ಪ ನಾಯಕ ತಂದೆ ಕೆಲಸ ಮಾಡುವ ಸಮಯದಲ್ಲಿ ಹನುಮಪ್ಪ ನಾಯಕ ಹಾಗೂ ಅವನ ಸಹೋದರರು ಕೂಡಿಕೊಂಡು ಯುದ್ದವೊಂದರಲ್ಲಿ ಜಯವನ್ನು ತಂದು ಕೊಟ್ಟರು ಎಂಬ ಇತಿಹಾಸ ಈಗಲೂ ಪ್ರಸ್ತುತವಾಗಿದೆ ಎಂದು ಉಪನ್ಯಾಸದಲ್ಲಿ ಹೇಳಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ ಪ್ರಭುಗೌಡ ಲಿಂಗದಳ್ಳಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರಾಸ್ತಾವಿಕವಾಗಿ ಗ್ರಾಮದ ಮುಖಂಡ ಶಿವನಗೌಡ ಬಿರಾದಾರ ಮಾತನಾಡಿದರು. ವೇದಿಕೆಯಲ್ಲಿ ಹಲವರಿದ್ದರು.

ಸಾನಿದ್ಯವಹಿಸಿದ್ದ ಜಮಖಂಡಿಯ ಶ್ರೀ ಆನಂದ ದೇವರು, ಕರಿಭಂಟನಾಳ ಹಿರೇಮಠದ ಶ್ರೀ ಶಿವಕುಮಾರ ಸ್ವಾಮೀಜಿ, ಪತ್ರಿವನ ಮಠದ ದ್ರಾಕ್ಷಾಯಣಿ ಅಮ್ಮನವರು ಆರ್ಶಿವಚನ ನೀಡಿದರು.

ಈ ವೇಳೆಯಲ್ಲಿ ಗಂಗಾಧರಯ್ಯ ಹಿರೇಮಠ, ಮಲ್ಲಯ್ಯ ಹಿರೇಮಠ, ರಾಜ್ಯಾಧ್ಯಕ್ಷ ಡಾ|| ಎಸ್. ಎಸ್. ಪಾಟೀಲ, ಮುಖ್ಯ ಅತಿಥಿಗಳಾಗಿ ಗ್ರಾಪಂ. ಅಧ್ಯಕ್ಷ ಅಪ್ಪು ನಾಯಕ, ಜಿ. ಎನ್. ಪಾಟೀಲ, ಎಸ್. ಜಿ. ಪಾಟೀಲ, ಆರ್. ಎಸ್. ಪಾಟೀಲ, ದೇವೆಂದ್ರ ಗೋನಾಳ, ಸಂಗನಗೌಡ ಯಕಂಚಿ, ಸಂಗನಗೌಡ ಕರಭಂಟನಾಳ, ವ್ಹಿ. ಕೆ. ಪಾಟೀಲ, ಸಿದ್ದನಗೌಡ ಪಾಟೀಲ, ಪ್ರೇಮಕುಮಾರ ಮ್ಯಾಗೇರಿ, ಎಸ್. ಎಸ್. ಚೌದ್ರಿ ಸೇರಿದಂತೆ ರಾಜುಗೌಡ ಬಿರಾದಾರ, ಸತೀಶ ಬಿರಾದಾರ, ಶಾಂತಗೌಡ ಬಿರಾದಾರ, ಮಾಂತಗೌಡ ಬಿರಾದಾರ, ಶಿವನಗೌಡ ಬಿರಾದಾರ, ಸೇರಿ ಇತರರು ಇದ್ದರು.

ಪ್ರಭಾಕಾರ ಖೇಡದ, ರಾಜುಗೌಡ ಬಿರಾದಾರ ನಿರೂಪಿಸಿದರು. ದೇವೇಂದ್ರ ಗೋನಾಳ ವಂದಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ_
https://chat.whatsapp.com/FEOgQepEXSP8R5OtHvcD7O

Share This Article
Leave a comment

Leave a Reply

Your email address will not be published. Required fields are marked *