“ಬಸವಣ್ಣನವರ ಲಿಂಗಾಯತ ‘ಪಂಥ’ಕ್ಕೆ ಸೇರಿಕೊಂಡ ಜಾತಿಗಳಿಗೆ ಹಿಂದುಳಿದ ವರ್ಗಗಳ ಆಯೋಗದ ವರದಿಯಲ್ಲಿ ಅನ್ಯಾಯವಾಗಿದೆ.”
ಬೆಂಗಳೂರು
ಹಿಂದುಳಿದ ವರ್ಗಗಳ ಆಯೋಗದ ವರದಿಯಲ್ಲಿ ಲಿಂಗಾಯತರಿಗೆ ಅನ್ಯಾಯವಾಗಿದೆ ಎಂದು ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯಾಧ್ಯಕ್ಷ ಶಂಕರ ಬಿದರಿ ಗುರುವಾರ ಹೇಳಿದರು.
ನಗರದಲ್ಲಿ ಕರೆದ ಸುದ್ದಿ ಗೋಷ್ಠಿಯಲ್ಲಿ ಪೀಠಿಕೆಯಾಗಿ ಮಾತನಾಡುತ್ತ ಬಿದರಿ ಅವರು ಲಿಂಗಾಯತ ಒಂದು ಪಂಥ, ಅದನ್ನು ಧರ್ಮ ಎನ್ನಲು ಆಗವುದಿಲ್ಲ ಎಂದು ಹೇಳಿದರು. ತಮ್ಮ ನಿಲುವಿಗೆ ಕೆಲವು ಕಾರಣಗಳನ್ನೂ ನೀಡಿದರು:
ಸ್ವತಂತ್ರ್ಯ ಧರ್ಮಕ್ಕೆ ಮಹಾಸಭಾ 20 ವರ್ಷದಿಂದ ಹೋರಾಡುತ್ತಿದ್ದರೂ ಇನ್ನೂ ಮಾನ್ಯತೆ ಸಿಕ್ಕಿಲ್ಲ.
1955ರ ಹಿಂದೂ ಕೋಡ್ ಬಿಲ್ಲಿನಲ್ಲಿ, 2011 ಜನಗಣತಿಯಲ್ಲಿ ಲಿಂಗಾಯತರು ಹಿಂದೂ ಧರ್ಮದ ಭಾಗ ಎಂದು ಪರಿಗಣಿಸಲಾಗಿದೆ. ಕೇಂದ್ರ ಸರಕಾರ ಕೂಡ ಈ ವಿಷಯದಲ್ಲಿ ಇದೇ ನಿಲುವು ಹೊಂದಿದೆ.
ಈ ಎಲ್ಲಾ ಕಾರಣಗಳಿಂದ ಲಿಂಗಾಯತ ಎನ್ನುವುದು ಕಾನೂನುಬದ್ದವಾಗಿ ಒಂದು ಧರ್ಮಕ್ಕಿಂತ ಪಂಥ ಎನ್ನುವುದೇ ಸೂಕ್ತ ಎಂದು ಹೇಳಿದರು.
ಲಿಂಗಾಯತ ‘ಪಂಥದ’ ಜಾತಿಗಳಿಗೆ ಅನ್ಯಾಯ
12ನೇ ಶತಮಾನದಲ್ಲಿ ಹಿಂದೂ ಧರ್ಮ ಬಿಟ್ಟು ಲಿಂಗಾಯತ ‘ಪಂಥ’ಕ್ಕೆ ಸೇರಿದ ಜಾತಿಗಳಿಗೆ ಹಿಂದುಳಿದ ವರ್ಗಗಳ ಆಯೋಗದ ವರದಿಯಲ್ಲಿ ಅನ್ಯಾಯವಾಗಿದೆ ಎಂದು ಬಿದರಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.
12ನೇ ಶತಮಾನದಲ್ಲಿ ಬಸವಣ್ಣನವರು ಪ್ರತಿಪಾದಿಸಿದ ಲಿಂಗಾಯತ ‘ಪಂಥ’ಕ್ಕೆ 99ಕ್ಕೂ ಹೆಚ್ಚು ವೃತ್ತಿಗಳ ಜನರು ಸೇರ್ಪಡೆಯಾದರು.
ಅದೇ ವೃತ್ತಿಯ ಕೆಲವರು ಸನಾತನ ಹಿಂದೂ ಧರ್ಮದ ಭಾಗವಾಗಿಯೇ ಮುಂದುವರಿದಿದ್ದಾರೆ.
ಹಿಂದೂ ಧರ್ಮ ಹಾಗೂ ಲಿಂಗಾಯತ ಪಂಥಗಳಲ್ಲಿರುವವರ ವೃತ್ತಿಗಳೂ ಒಂದೇ ಆಗಿದ್ದರೂ ಹಿಂದುಳಿದ ಆಯೋಗ ಭೇದ ಮಾಡಿದೆ.
ಲಿಂಗಾಯತ ಪಂಥದ ಜಾತಿಗಳನ್ನು ಪ್ರವರ್ಗ 3 ‘ಬಿ’ಗೆ ಸೇರಿಸಿ, ಹಿಂದೂ ಧರ್ಮದ ಅದೇ ಜಾತಿಗಳನ್ನು ಅತ್ಯಂತ ಹಿಂದುಳಿದ, ಅತಿ ಹಿಂದುಳಿದ, ಹಿಂದುಳಿದ ಹಾಗೂ ಪರಿಶಿಷ್ಟ ಜಾತಿಯ ಪ್ರವರ್ಗಗಳಿಗೆ ಸೇರಿಸಲಾಗಿದೆ. ಈ ತಾರತಮ್ಯವನ್ನು ಖಂಡಿಸುತ್ತೇವೆ’ ಎಂದರು.
ಸುದ್ದಿಗೊಷ್ಟಿಯಲ್ಲಿ ರಾಜ್ಯ ವೀರಶೈವ ಲಿಂಗಾಯತ ಮಹಾಸಭಾದ ಯುವ ಘಟಕದ ರಾಜ್ಯಾಧ್ಯಕ್ಷ ಮನೋಹರ್ ಅಬ್ಬಿಗೇರಿ, ರಾಜ್ಯ ವೀರಶೈವ ಲಿಂಗಾಯತ ಮಹಾಸಭಾದ ಮಹಿಳಾ ರಾಜ್ಯಾಧ್ಯಕ್ಷೆ ಮುಕ್ತಾ೦ಬ, ಪ್ರಧಾನ ಕಾರ್ಯದರ್ಶಿ ನಟರಾಜ್ ಸಾಗರನಳ್ಳಿ ಉಪಸ್ಥಿತರಿದ್ದರು.
ಕಳೆದ ಅಕ್ಟೋಬರಿನಲ್ಲಿ ಮತ್ತೊಂದು ವೀರಶೈವ ಮಹಾಸಭಾದ ಕಾರ್ಯಕ್ರಮದಲ್ಲಿ ಲಿಂಗಾಯತ ಅನ್ನುವುದು ಒಂದು ಪಂಥ. ನಾವು ಈಗ ಪ್ರತ್ಯೇಕ ಧರ್ಮ ಅಂತ ಹೇಳಲ್ಲ, ಎಂದು ಹೇಳಿ ಶಂಕರ ಬಿದರಿ ವಿವಾದ ಸೃಷ್ಟಿಸಿದ್ದರು.
ಆಗ ನಾನು ಹೇಳಿದ ಮಾತು ತಿರುಚಲಾಗಿದೆ ಎಂದು ಬಿದರಿ ಬಸವ ಮೀಡಿಯಾಗೆ ಹೇಳಿದ್ದರು.
ಅದು ಏಕೆ ಶಂಕರ ಬಿದರಿಯವರು ಲಿಂಗಾಯತ ಧರ್ಮದ ಬಗ್ಗೆ ತಮ್ಮ ನಿಲುವನ್ನು ಬದಲಾಯಿಸುತ್ತಿದ್ದಾರೆ ಎನ್ನುವುದು ಅರ್ಥವಾಗದ ನಿಗೂಡ ಸಂಗತಿ. ವೀರಶ್ಯವ ಮಹಾಸಭೆಯವರು ಸ್ವತಂತ್ರ ಲಿಂಗಾಯತ ಧರ್ಮದ ಬೇಡಿಕೆಯನ್ನು ಎಂದೂ ಎಲ್ಲೂ ಇಟ್ಟಿಲ್ಲ. ಅವರ ಎಲ್ಲಾ ಬೇಡಿಕೆಗಳು ವೀರಶೈವಕ್ಕೆ ಸಂಬಂದಿಸಿದ್ದಾಗಿದ್ದವು ಆದ್ದರಿಂದ ಎಲ್ಲಾ ತಿರಸ್ಕರಿಸಿ ಕೊಂಡಿತ್ತು.
ಇದುವರೆವಿಗು ವೀರಶೈವ ಧರ್ಮ ಎನ್ನುತ್ತಿದ್ದವರು ಈಗ ಪಂಥ ಎನ್ನಲು ಕಾರಣ? ಅವರು ವೀರಶೈವವನ್ನು ಏನಾದರು ಮಾಡಿಕೊಳ್ಳಲಿ, ನಮ್ಮ ಲಿಂಗಾಯತ ಧರ್ಮದ ತಂಟೆಗೆ ಬಾರದಿದ್ದರೆ ಸಾಕು. ಕರ್ನಾಟಕ ಸರಕಾರ ಲಿಂಗಾಯತ ಧರ್ಮವನ್ನು ಸ್ವತಂತ್ರ ಧರ್ಮೆಂದು ಪರಿಗಣಿಸಿ ಅಲ್ಪಸಂಖ್ಯಾತ ಸ್ಥಾನಮಾನ ಸಹ ಘೋಷಿಸಿ ದೆ. ಲಿಂಗಾಯತ ಪಂತವಲ್ಲ, ಧರ್ಮ
ಬಿದರಿಯವರಿಗೆ ಬಸವಣ್ಣನವರ ಬಗ್ಗೆಯಾಗಲಿ, ಲಿಂಗಾಯತ ಧರ್ಮದ ಬಗ್ಗೆ ಆಗಲಿ ಅಪೂರ್ಣ ಮಾಹಿತಿ ಇದೆ. ಅಧ್ಯಯನದ ಕೊರತೆ ಅವರಲ್ಲಿ ಎದ್ದು ಕಾಣುತ್ತಿದೆ.
ಯಾವುದೊ ಆಮಿಶಕ್ಕೆ ಒಳಗಾದವರು ಹೀಗೆ ಹೇಳುತ್ತಾರೆ
ಜಾಮದಾರ ಸಾಹೇಬರು ಬೆಂಗಳೂರಿನ ಸಭೆಗೆ ಇವರನ್ನು ಕರೆಯಲೇ ಬಾರದಿತ್ತು. ಲಿಂಗಾಯತಕ್ಕೂ ಈ ಬಿದರಿಯವರಿಗೂ ಏನೂ ಸಂಬಂಧವಿಲ್ಲ. ನಾವು ತರ್ಕಿಸಿದಂತೆ ‘ಲಿಂಗಾಯತ ಧರ್ಮ’ಕ್ಕೆ ತೊಡಕಾಗಲಿ ಎಂದೇ ಚತುರರು ಇವರನ್ನು ನಿಯೋಜಿಸಿದ್ದಾರೆ. ಇನ್ನು ಇವರನ್ನು ‘ಲಿಂಗಾಯತ ಮಹಾ ಸಭಾ’ ಯಾವುದೇ ಕಾರಣಕ್ಕೂ ಕೂಡಿಸಿಕೊಳ್ಳಬಾರದು. ಸಂದೇಹ ಈಗ ಸ್ಪಷ್ಟ ಆದಂತೆ. ಧರ್ಮ ಬಿಟ್ಟು ಇವರು ಪಂಥಕ್ಕೆ ಹಾರಿದರು. ಅಗಸ್ತ್ಯನಿಗಿಂತ ಪ್ರಾಚೀನರಿವರು. ಪಲ್ಲಕ್ಕಿ ಹೊರಲಿ-ಬಿಡಿ. ಅಂದು ಬಸವಾದಿ ಶರಣರಿಗೆ ಕಾಡಿದರು. ಇಂದು ಲಿಂಗಾಯತಕ್ಕೆ ಕಾಡುವವರ ಸಂಗ/ಸಂಘ ಬೇಡ.ದಯವಿಟ್ಟು ಈ ಮಹನೀಯರನ್ನು ದೂರ ಇಡಬೇಕು. ಶರಣಾರ್ಥಿಗಳು.
ಶಂಕರ ಬಿದರಿ ಅವರಿಗೆ ಇತಿಹಾಸ ಸರಿಯಾಗಿ ಗೊತ್ತಿಲ್ಲ ಅನ್ನುವುದನ್ನು ಅವರ ಅಜ್ಞಾನ ಪ್ರದರ್ಶನದ ಮೂಲಕ ತೋರಿಸಿಕೊಂಡಿದ್ದಾರೆ.
1. ಅನುಭವ ಮಂಟಪ ನಿರ್ಮಿಸಿ ಶರಣ ಪರಂಪರೆಯ ಜ್ಞಾನಜ್ಯೋತಿಯನ್ನು ಬೆಳಗಿದ ಬಸವಣ್ಣನವರಿಗೂ ಇತಿಹಾಸವೇ ಇಲ್ಲದ ರೇಣುಕಾಚಾರ್ಯ ಎನ್ನುವ ಕಲ್ಪನೆಗೂ ಅಸಂಬದ್ಧ ಸಂಬಂಧ ಕಲ್ಪಿಸುವ ಅಜ್ಞಾನದ ಪ್ರದರ್ಶನವನ್ನು ಶಂಕರ್ ಬಿದರಿ ಅಂತಹವರು ನಿಲ್ಲಿಸಬೇಕು.
2. ಮನುವಾದಿಗಳು ಬರೆದ ಇತಿಹಾಸವನ್ನು ಓದಿ ಸಿವಿಲ್ ಸರ್ವಿಸಸ್ ಪರೀಕ್ಷೆಯಲ್ಲಿ ಪಾಸಾಗಿರುವ ಶಂಕರ ಬಿದರಿ ಅಂತಹವರಿಗೆ ಈ ನೆಲದ ಶರಣ ಪರಂಪರೆಯ ಭವ್ಯ ಇತಿಹಾಸ ಹೇಗೆ ಗೊತ್ತಾಗುತ್ತದೆ ಹೇಳಿ?
3. ದೇಶದ ಮೂಲ ಶತ್ರು ವೈದಿಕರ ಸೃಷ್ಟಿ ಚಾತುರ್ವರ್ಣ ಎಂಬ ಎಡಬಿಡಂಗಿ ಅವ್ಯವಸ್ಥೆಯನ್ನು ಧಿಕ್ಕರಿಸಿ ದೇಶದ ಅಭ್ಯದಯಕ್ಕಾಗಿ ಸಮಸಮಾಜದ ನಿರ್ಮಾಣಕ್ಕೆ ಮುಂದಾಗಿ ಅಧಿಕಾರ ತ್ಯಜಿಸಿ ಲೋಕಕಲ್ಯಾಣಕ್ಕಾಗಿ ಜೀವವವನ್ನೇ ಸಮರ್ಪಿಸಿದ ಮಹಾತ್ಯಾಗಿ ಬಸವಣ್ಣನವರಿಗೆ ರೇಣುಕಾಚಾರ್ಯ ಅನ್ನುವ ಕಪೋಕಲ್ಪಿತ ವ್ಯಕ್ತಿತ್ವಕ್ಕೆ ಹೋಲಿಸುವುದು ಬಾಲಿಶಃ ಪ್ರವೃತ್ತಿ. ಅದು ಶಂಕರ ಬಿದರಿ ಅಂತಹವರಿಗೆ ಶೋಭೆ ತರುವಂತಹದಲ್ಲ.
4. ನಾಗಪುರದ “ಮಹಾ ಹಿಂದುಗಳ” ಎಡಬಿಡಂಗಿ ಸಂದೇಶಗಳನ್ನು ಸಾರ್ವಜನಿಕ ವಾಗಿ ಒದರಿ ಸೀಟ್ ಒಂದನ್ನು ಗಿಟ್ಟಿಸಿ ಕೊಳ್ಳುವ ಹುನ್ನಾರದಲ್ಲಿ ಶ್ರೇಷ್ಠ ತತ್ವದ ಮೇಲೆ ನಿಂತ ಶರಣ ಧರ್ಮವನ್ನು ಧರ್ಮದ ಯಾವುದೇ ಗುಣ ಇಲ್ಲದ, ಸರ್ವೋಚ್ಛ ನ್ಯಾಯಾಲಯ ಅದು ಧರ್ಮವೇ ಅಲ್ಲ ಎಂದು ಹೇಳಿರುವ “ಹಿಂದು” ಅನ್ನುವ ಗೊಂದಲದ ಗೂಡಿನಲ್ಲಿ ಇಟ್ಟು ನೋಡುವ ಬಾಲಿಶಃತನವನ್ನು ಬಿಟ್ಟು ಶಂಕರ ಬಿದರಿ ಅವರು ವಯಸ್ಸಿಗೆ ತಕ್ಕಂತೆ ನಡೆದುಕೊಳ್ಳುವ ಜವಾಬ್ದಾರಿಯನ್ನು ತೋರಲಿ.
5. ಹಿಂದು ಅನ್ನುವ ಪದಕ್ಕೆ ಸರಿಯಾಗಿ ಅರ್ಥ ಗೊತ್ತಿಲ್ಲದಿದ್ದಲ್ಲಿ ಶಂಕರ ಬಿದರಿ ಅವರು ಡಾ|| ಬಾಬಾಸಾಹೇಬ್ ಅಂಬೇಡ್ಕರ್ ಅವರ ಬರಹ ಮತ್ತು ಭಾಷಣಗಳ ಸಂಪುಟ 1, 3, 5 ಮತ್ತು 8 ಇವುಗಳನ್ನು ಒಮ್ಮೆ ಓದಿಕೊಂಡು ನಂತರ ಹಿಂದು ಪದ ಬಳಕೆ ಮಾಡುವುದು ಸೂಕ್ತ.
ಶಂಕರ ಬಿದರಿ ಯಂತಹ ಮೂರ್ಖ ಮತ್ತು RSS ಏಜಂಟನ ಹಿಂದೆ ಲಿಂಗಾಯತ ಸಮಾಜ ಹೋಗಬಾರದು
ನ್ಯಾಯಮೂರ್ತಿ ಶ್ರೀ ನಾಗಮೋಹನದಾಸ ಅವರು ಸುದೀರ್ಘವಾಗಿ ದಾಖಲೆಗಳನ್ನು ಪರಿಶೀಲಿಸಿ ಲಿಂಗಾಯತ ಧರ್ಮವು ಒಂದು ಸ್ವತಂತ್ರವಾದ ಧರ್ಮವೆಂದು ಸಲ್ಲಿಸಿದ ವರದಿಯನ್ನಾಧರಿಸಿ ಕರ್ನಾಟಕ ಸರ್ಕಾರ ಅನುಮೋದನೆಗಾಗಿ ಕೇಂದ್ರಕ್ಕೆ ಶಿಫಾರಸ್ಸು ಮಾಡಿದ್ದು, ಬಿದರಿ ಅವರಿಗೆ ಗೊತ್ತಿಲ್ಲವೇ? ಮತ್ತೆ ಲಿಂಗಾಯತ ಒಂದು ಪಂಥ ಅಂತ ಏಕೆ ಉಸುರುತ್ತಿದ್ದಾರೆ?. ಅ.ಭಾ.ವೀ.ಲಿಂ.ಮಹಾಸಭೆಗೆ ರಾಜ್ಯಾಧ್ಯಕ್ಷ ದಾದರೆ ಮನಸ್ಸಿಗೆ ಬಂದಂತೆ ಹೇಳಿಕೆ ನೀಡುವುದು ಸರಿಯಲ್ಲ.