ಈ ಸಂಘರ್ಷದ ದಿನಗಳಲ್ಲಿ ಲಿಂಗಾಯತರು ಮಾಡಬೇಕಾದ 10 ಕೆಲಸಗಳು

ಡಾ ಸಂಗಮೇಶ ಕಲಹಾಳ
ಡಾ ಸಂಗಮೇಶ ಕಲಹಾಳ

ಮುಸಲ್ಮಾನರ ಬಗ್ಗೆ ಭಯ ಹುಟ್ಟಿಸಿ ಹಿಂದುತ್ವದ ಪ್ರಚಾರ ನಡೆಯುತ್ತಿದೆ. ಲಿಂಗಾಯತರು ಇದನ್ನು ಅರ್ಥ ಮಾಡಿಕೊಳ್ಳಬೇಕು.

ಕೊಪ್ಪಳ

ಹಿಂದೂ ಸಂಪ್ರದಾಯವಾದಿಗಳು ಹೊಟ್ಟೆ ಹೊರೆದುಕೊಳ್ಳುವದಕ್ಕಾಗಿ ಧರ್ಮದ ಹೆಸರಿನಲ್ಲಿ ವ್ಯಾಪಾರ ಮಾಡುತ್ತಾರೆ. ಮಠ, ಮಂದಿರ, ಉತ್ಸವ, ಜಾತ್ರೆ, ಮಡಿಸ್ನಾನ, ಮಾಲೆ ಬಿಡುವುದು, ಸಮಾವೇಶಗಳನ್ನು ನಡೆಸುವುದರ ಮೂಲಕ ಮುಗ್ದ ಜನರನ್ನು ಶೋಷಣೆ ಮಾಡುತ್ತಾರೆ.

ಅದಕ್ಕೆ ಈಗ ಬೆಳೆಯುತ್ತಿರುವ ಬಸವ ತತ್ವದ ಪ್ರಭಾವದಿಂದ ಭೀತಿ, ದ್ವೇಷ, ಅಸೂಯೆ, ಹತಾಶೆ, ನಿರಾಶೆಯಿಂದ ಬಾಲ ತುಳಿಸಿಕೊಂಡ ಬೆಕ್ಕಿನಂತೆ ಆಡುತ್ತಿದ್ದಾರೆ. ಬಸವ ಸಂಸ್ಕೃತಿ ಅಭಿಯಾನಕ್ಕೆ ಕೌಂಟರ್ ಕೊಡಲು ಬಸವ ಹೆಸರಿನಲ್ಲಿ ಹಿಂದೂ ಸಮಾವೇಶ ಮಾಡುತ್ತಿದ್ದಾರೆ.

ಬಬಲೇಶ್ವರದಲ್ಲಿ ಕನ್ನೇರಿ ಸ್ವಾಮಿಯನ್ನು ಮುಂದಿಟ್ಟುಕೊಂಡು ನಡೆಸಿದ ಬಸವಾದಿ ಶರಣರ “ಹಿಂದೂ ಸಮಾವೇಶ”, ಇವರ ಅನೇಕ ಸತ್ಯಗಳನ್ನು ಅನಾವರಣ ಮಾಡಿದೆ. ಅದರಲ್ಲಿ ಒಬ್ಬ ಕಾವಿಧಾರಿ ಹೀಗೆ ಮಾತನಾಡುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಅನಾಗರಿಕರಲ್ಲಿ ಅನಾಗರಿಕ – ಅಸಂಸ್ಕೃತರಲ್ಲಿ ಅಸಂಸ್ಕೃತ ಈ ಕನ್ನೇರಿ ಸ್ವಾಮಿ.

ವಚನ ದರ್ಶನದಿಂದ ಹಿಡಿದು ಲಿಂಗಾಯತ ಸಮಾಜದಲ್ಲಿ ಒಂದಾದ ಮೇಲೆ ಒಂದು ಗೊಂದಲ‌ ಹುಟ್ಟು ಹಾಕುತ್ತಿದ್ದಾರೆ. ಬಹುಶಃ ಮುಂದಿನ ದಿನಗಳಲ್ಲಿ ಇಂತಹ ಪ್ರಯತ್ನಗಳು ಇನ್ನೂ ಹೆಚ್ಚು ಹೆಚ್ಚು ಬರಬಹುದು.

ನಾವು ಲಿಂಗಾಯತ ಧರ್ಮ ಬೆಳೆಸು‌ವ ಕಾರ್ಯ ಮಾಡದೇ ಅನಾವಶ್ಯಕ ವಿವಾದಗಳಲ್ಲಿ ಕಾಲ ಕಳೆಯುವಂತೆ ಮಾಡುವುದು ಇದರ ಹುನ್ನಾರ.

ಈ ಸಂಘರ್ಷವನ್ನು ಬಸವತತ್ವ ಅನುಯಾಯಿಗಳಾದ ನಾವು ಹೇಗೆ ಎದುರಿಸಬೇಕು? ಒಂದಿಷ್ಟು ಚಿಂತನೆಗಳು ಇಲ್ಲಿವೆ.

1) ಮೊದಲು ಬಸವಣ್ಣನವರು ಕೊಟ್ಟ ತತ್ವ, ಸಿದ್ಧಾಂತದಂತೆ ನಾವೆಲ್ಲರೂ ಲಿಂಗಾಯತರಾಗಬೇಕು. ಲಿಂಗಾಯತರಾಗಿರಬೇಕಾದ ಅವಶ್ಯಕತೆ ಹಿಂದಿಗಿಂತಲೂ ಇಂದು ಹೆಚ್ಚಿದೆ.

2) ಲಿಂಗಾಯತ ಧರ್ಮದ ಪ್ರಚಾರ ತೀವ್ರಗೊಳಿಸಬೇಕು. ಧರ್ಮ ಬೆಳೆಸಲು ಪ್ರತಿಯೊಂದು ತಾಲೂಕಿಗೆ ಒಬ್ಬ ಸೂಕ್ತ ಲಿಂಗಾಯತ ಮಠಾಧೀಶರನ್ನು ನೇಮಕ ಮಾಡಿ ಬಸವತತ್ವ ಪ್ರಸಾರ ಯುದ್ಧೋಪಾದಿಯಲ್ಲಿ ನಡೆಯಬೇಕು.

3) ಎಲ್ಲ ಬಸವಪರ ಸಂಘಟನೆಗಳು ಮನೆಮನೆಗೆ ಹೋಗಿ ಶರಣರ ಜೀವನ ಚರಿತ್ರೆ, ವಚನಗಳ ಕಿರುಪುಸ್ತಕಗಳನ್ನು ವಿತರಿಸಬೇಕು.

4) ಪ್ರತಿಯೊಂದು ಶಾಲೆ-ಕಾಲೇಜುಗಳಲ್ಲಿ ವಚನಕಮ್ಮಟ ಪರೀಕ್ಷೆಗಳನ್ನು ನಡೆಸುವಂತಾಗಬೇಕು.

5) ಮಕ್ಕಳು, ಯುವಕರು ಮತ್ತು ಮಹಿಳೆಯರಿಗೆ ವಚನ ಶಿಕ್ಷಣ, ನಿಜಾಚರಣೆಗಳ ಕಮ್ಮಟ, ಶರಣತತ್ವ ಅರಿವು ನಿರಂತರವಾಗಿ ನಡೆಸಬೇಕು.

6) ಊರಿಗೊಬ್ಬರಂತೆ ವಚನಮೂರ್ತಿಗಳನ್ನು ರೂಪಿಸಬೇಕು.

7) ಜಾತಿಬೇಧ ಬಿಡಲೇಬೇಕು. ಲಿಂಗಾಯತ ಎಲ್ಲ ಕಾಯಕವರ್ಗದವರು ಪರಸ್ಪರ ವಿವಾಹ ಸಂಬಂಧ ಬೆಳೆಸಬೇಕು.

8) ಲಿಂಗಾಯತರಲ್ಲಿ ಮೇಲು ವರ್ಗದವರೆಂದು ಎನಿಸಿಕೊಳ್ಳುತ್ತಿರುವವರು ತಾವು ಮೇಲಿನವರು ಎಂಬ ಮನಸ್ಥಿತಿ ಬದಲಾಯಿಸಿಕೊಂಡು, ಎಲ್ಲರನ್ನೂ ಸಮಾನತೆಯಿಂದ ಕಾಣಬೇಕು.

9) ಲಿಂಗಾಯತರಲ್ಲಿಯೇ ಕೆಳವರ್ಗದವರೆಂದು ಎನಿಸಿಕೊಳ್ಳುತ್ತಿರುವವರಿಗೆ ವಚನ ಶಿಕ್ಷಣ, ನಿಜಾಚರಣೆಗಳ ಕಮ್ಮಟ, ಶರಣತತ್ವ ಅರಿವು ನಿರಂತರವಾಗಿ ಕೊಡಬೇಕು. ಅವರು ತಮ್ಮಲ್ಲಿರುವ ಕೀಳರಿಮೆಯನ್ನು ಬಿಡಬೇಕು. ಮೇಲುವರ್ಗದವರಿಂದ ದೂರ ಉಳಿಯದೇ ಸೇರಿಕೊಳ್ಳುವ ಪ್ರಯತ್ನ ಮಾಡಬೇಕು.

10) ಮುಸಲ್ಮಾನರ ಬಗ್ಗೆ ಭಯ ಹುಟ್ಟಿಸಿ ಹಿಂದುತ್ವದ ಪ್ರಚಾರ ನಡೆಯುತ್ತಿದೆ. ಲಿಂಗಾಯತರು ಇದನ್ನು ಅರ್ಥ ಮಾಡಿಕೊಳ್ಳಬೇಕು.

ಲಿಂಗಾಯತರು ಮುಸಲ್ಮಾನ ವಿರೋಧಿ ಭಾವನೆ ಮೆದುಳಿನಿಂದ ಕಿತ್ತು ಹಾಕಬೇಕು. ಹಿಂದುತ್ವವಾದಿಗಳಿಗೆ ಬಸವತತ್ವದಿಂದ ತಮ್ಮ ನಂಬಿಕೆಗಳಿಗೆ ಕೊಡಲಿ ಪೆಟ್ಟು ಬಿದ್ದೀತೆಂಬ ಭಯ ಕಾಡುತ್ತಿದೆ. ಅದಕ್ಕೆ ಮುಸಲ್ಮಾನರ ಮೇಲೆ ಭಯ, ದ್ವೇಷ ಸೃಷ್ಟಿಸಿ ಹಿಂದುತ್ವದಡಿಯಲ್ಲಿ ಜನರನ್ನು ಸಂಘಟಿಸುತ್ತಿದ್ದಾರೆ. ಈ ಸಂಚನ್ನು ಲಿಂಗಾಯತರು ಅರ್ಥ ಮಾಡಿಕೊಳ್ಳಬೇಕು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HxAWJ403uVgK5HFZlxTVut

Share This Article
15 Comments
  • ಈ ಮಾಲಿಕೆ ಯಲ್ಲಿ 10 ಮಾಡ ಬೇಕಾದ ಕೆಲಸಗಲ್ಲಿ 9 ಒಪ್ಪಿ ಕೊಳ್ಳುವನಂಥವು ಆದ್ರೆ 10 ನೆದರ ಬಗ್ಗೆ ಇನ್ನಷ್ಟು ಆಲೋಚಿಸಬೇಕು ಒಂದು ಕಡೆ ಲಿಂಗಾಯತರು ಹಿಂದು ಅಲ್ಲ ಯಾದವರು ಹಿಂದು ಅಲ್ಲ ದ್ರಾವಿಡರು ಹಿಂದು ಅಲ್ಲ ಹಾಗಾದ್ರೆ ದೇಶ ಹೇಗೆ ಉಳಿದೀತು

    • ಹಿಂದೂ ಅಂದರೆ ದೇಶವೇ?
      ಹಿಂದೂಗಳು ಮಾತ್ರ ದೇಶವೇ?
      ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಮುಸ್ಲಿಮರು ಭಾಗ ವಹಿಸಿರಲಿಲ್ಲವೇ?
      ಮುಸ್ಲಿಮ ಲೀಗ್, ಹಿಂದು ಮಹಾಸಭಾ ಎರಡು ದೇಶ ಒಡೆಯಲು, ಸ್ವತಂತ್ರ ಹೋರಾಟದ ಹಾದಿ ತಪ್ಪಿಸಲು ಬ್ರಿಟಿಷರ ಕುಮ್ಮಕ್ಕಿನಿಂದ ಕೂಡಿದ ಜನರು ಕಟ್ಟಿದ ಸಂಸ್ಥೆಗಳು.
      Rss, bjp ಹಿಂದೂ ಮಹಾಸಭಾದ ಕೂಸುಗಳು. ದೇಶದ ಜನರಲ್ಲಿ ಬೆಂಕಿ ಹಚ್ಚಿ ದೇಶ ಒಡೆಯುವುದು ಮಹಾಸಭೆಯ ಮೂಲ ಉದ್ದೇಶ.
      1932 ರಲ್ಲಿ ಮೊದಲ ಬಾರಿಗೆ ಎರಡು ದೇಶ ಅಂತ ವಿಷ ಬೀಜ ಬಿತ್ತಿದೆ ಈ ಮಹಾಸಭೆ.

      • ಉತ್ತಮ ಚಿಂತನೆ ಸಮಾನ ಮನಸ್ಕರ physical meet ಆಗಬೇಕು.

    • ಇನ್ನು ಒಂದು ಸೇರಿಸಬೇಕು.
      ಸಂಭಂದಪಟ್ಟ ಮಠಗಳು, ಅವರವರ ವ್ಯಾಪ್ತಿ ನಿರ್ಧಾರಿಸಿ, ಊರಿಗೊಬ್ಬ ಸ್ವಾಮಿ, ಅಥವಾ ವಿರಕ್ತ ರನ್ನ ನೇಮಿಸಿ, ಮದುವೆ, ತೊಟ್ಟಿಲು, ಸೀಮಂತ, ಜನನ, ಮರಣ ಇನ್ನಿತರ ಅವಶ್ಯಕ ಕೆಲಸಗಳನ್ನ ಮಾಡಲು ಅನುಕೂಲ ಮಾಡಿಕೊಡಬೇಕು.
      10. ಮುಸಲ್ಮಾನರ ಬಗ್ಗೆ ಭಯ ಹುಟ್ಟಿಸಿ, ಅಂತಾ ದೂಷಿಸುವುದು.. ಲಿಂಗಾಯತರು ಬ್ರಹ್ಮಣ್ಯದ ಬಗ್ಗೆ ಅದೇ ತರಹ ಮಾಡಿದ ಹಾಗೆ ಅನ್ನಿಸುವುದಿಲ್ಲವೇ?

  • 7 ಕಾಲಂನಲ್ಲಿ ಗೊಂದಲ ಸೃಷ್ಟಿ ಮಾಡಬೇಡಿ ಏಕೆಂದರೆ ಅಣ್ಣ ಬಸವಣ್ಣ ನವರು ಎಲ್ಲಾ ವಗ೯ದವರನ್ನು ಅಪ್ಪಿಕೊಂಡು ಅವರಿಗೆ ಲಿಂಗಾಧೀಕ್ಷೆ ಮಾಡಿನಂತರ ಸಂಬಂಧ ಬೆಳೆಸಿದ್ದು ತಾವು ತಪ್ಪು ಭಾವನೆ ಮೂಡಿಸಬೇಡಿ ಯಾವುದೇ ಕಾಯಕ ವಗ೯ದವರು ಬಸವಣ್ಣ ನವರು ಕೊಟ್ಟ ವಚನಗಳನ್ನು ಪಾಲಿಸಿಕೊಂಡು ಲಿಂಗವನ್ನು ಧರಿಸಿ ನಮ್ಮ ಧರ್ಮ ಕ್ಕೆ ಬರಲಿ ಸ್ವಾಗತಮಾಡೋಣ ಆದರೆ ಅವರು ಹಿಂದೂಧರ್ಮ ದ ಜಾತಿಯಾಗೌ ಉಳಿದುಕೊಂಡರೆ ಪ್ರಯೋಜನ ಏನು ಹೇಳಿ ಹೀಗಾಗಲೇ ಸಾವಿರಾರು ಲಿಂಗಾಯತ ಹುಡುಗರಿಗೆ ಹುಡುಗಿಯರು ಇಲ್ಲ ಇದು ಬಹಳಷ್ಟು ಸೂಕ್ಷ್ಮ ವಿಷಯ ಅವಸಲ ಪಡಬಾರದು

    • ಬಸವಣ್ಣನವರು ಅಂತರ್ ಜಾತಿ ಮದುವೆ ಒಪ್ಪಿದರು.ಅಂತರ್ ಧರ್ಮ ದ, ಬಗ್ಗೆ ಹೆಚ್ಚು ತಿಳಿದಿಲ್ಲ..ಸ್ವಲ್ಪ ವಿವರಿಸಿ.

    • ಬಹು ಮುಖ್ಯವಾದ ಅತ್ತಾಂಶಗಳು ಇದನ್ನು ನಾವೆಲ್ಲರೂ ಛಲದಿಂದ ಮಾಡಲೇಬೇಕಾಗಿದೆ

  • ಮೊದಲು ನಿಜಾಚರಣೆ ಜಾರಿಗೆ ಬರಬೇಕು. ಪ್ರತಿಯೊಂದು ಗ್ರಾಮದಲ್ಲಿನ ವಿರಕ್ತ ಮಠಾಧೀಶರು ಅಭಿಮಾನದಿಂದ, ನಿಷ್ಠೆಯಿಂದ ಹೆಚ್ಚು ದಕ್ಷಿಣೆಗೆ ಒತ್ತುಕೊಡದೆ ತತ್ವಕ್ಕೆ ಮಹತ್ವಕೊಟ್ಟು ಮಾಡಬೇಕು. ಸರಳವಾಗಿ ನಡೆಸಿಕೊಡುವ ನಿಜಾಚರಣೆಯತ್ತ ಜನರು ಅದರಲ್ಲೂ ಯುವಕರು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಏಕೆಂದರೆ ಮದುವೆ, ಮನೆಶಾಂತಿ, ತೊಟ್ಟಿಲು ಅಂತ್ಯ ಸಂಸ್ಕಾರ ಇತ್ಯಾದಿ ಕಾರ್ಯಕ್ರಮಗಳಿಗೆ ಸಾಕಷ್ಟು ಹಣ ವ್ಯಯಸುತ್ತಿದ್ದಾರೆ. ನಮ್ಮ ಗೆಳೆಯರೊಬ್ಬರ ಪತ್ನಿ ತೀರಿಕೊಂಡಾಗ ನಿಜಾಚರಣೆ ಪ್ರಕಾರ ಅಂತ್ಯ ಸಂಸ್ಕಾರ ಮಾಡಲು ಯಾರು ಸಿಗಲಿಲ್ಲ ಕೊನೆಗೆ ವೈದಿಕ ಸಂಪ್ರದಾಯದಂತೆ ಮಾಡಬೇಕಾಯಿತು. ನಿಜಾಚರಣೆಯಿಂದ ದೇವರು, ಪೂಜೆಯ ಹೆಸರಿನಲ್ಲಿ ಆಗುವ ಖರ್ಚು ಉಳಿಸಬಹುದು ಮತ್ತು ಶರಣರ ವಿಚಾರಗಳನ್ನು ತಳಮಟ್ಟದಲ್ಲಿ ಪ್ರಚಾರ ಪ್ರಸಾರ ಮಾಡಬಹುದು. ವೀರಕ್ತ ಮಠಾಧೀಶರು ಮನಸ್ಸು ಮಾಡಬೇಕಷ್ಟೆ.ನಿಜಾಚರಣೆಗೆ ಪ್ರಥಮ ಆದ್ಯತೆ ನೀಡಬೇಕು. ಹಳ್ಳಿಗಳಲ್ಲಿ ಅದರಲ್ಲೂ ಹೆಣ್ಣುಮಕ್ಕಳಲ್ಲಿ ನಿಜಾಚರಣೆ ಬಗ್ಗೆ ಅರಿವೂ ಮೂಡಿಸಬೇಕು. ನಾವು ಎಷ್ಟೇ ಉಪನ್ಯಾಸ ಭಾಷಣ ಪ್ರವಚನ ಮಾಡಿದರೂ ನಿಜಾಚರಣೆ ಇಲ್ಲದಿದ್ದರೆ ಅದೆಲ್ಲವೂ ವ್ಯರ್ಥವಾಗುತ್ತದೆ. ಈ ಬಗ್ಗೆ ವೀರಕ್ತ ಮಠಾಧೀಶರು ಮತ್ತು ಶರಣ ಸಿದ್ದಾಂತದ ಪೂಜ್ಯರು, ಮತಾಜಿಯವರು ಗಂಭಿರವಾಗಿ ಯೋಚಿಸಬೇಕು. ನಾಡಿನ ತುಂಬೆಲ್ಲ ಹರಡಿರುವ ಪೂಜ್ಯರು, ಮಾತಾಜಿಯವರು ವೇದಿಕೆಯಲ್ಲಿ ಪ್ರವಚನ ಮಾಡುವುದರ ಜೊತೆಗೆ ನಿಜಾಚರಣೆಯನ್ನೂ ನಡೆಸಿಕೊಡುವಂತಾಗಬೇಕು. ಜ್ಞಾನ ಮತ್ತು ಕ್ರೀಯೆ ಎರಡೂ ಸಮನ್ವಯದಿಂದ ಜಾರಿಗೊಂಡಾಗ ಬಸವಾದಿ ಶರಣರ ವಿಚಾರಗಳು ಬೆಳೆಯಲು ಉಳಿಯಲು ಸಾಧ್ಯವೆಂದು ನನ್ನ ಅಭಿಪ್ರಾಯ. ಶರಣುಶರಣಾರ್ಥಿಗಳು🙏🙏

  • ಬೇರೆಯವರ ಸಂಘರ್ಷಗಳಿಗೆ ಬದಲಿಗೆ ಅಥವಾ ವಿರೋದಿಗಳ ನಡೆಗೆ ಪರ್ಯಾಯವಾಗಿ ,ನಾವು ನಮ್ಮ ಕಾರ್ಯಕ್ರಮ ಮಾಡುವುದಾದರೆ ಅದು ಪೂರ್ಣವದಿಯ ಶಾಶ್ವತ ಯಶಸ್ಸು ಪಡೆಯುವುದಿಲ್ಲ. ಮೊದಲು ನಮ್ಮ ನಮ್ಮಿಂದಲೇ ಆಗಿರುವ ತಪ್ಪುಗಳನ್ನು ಸರಿಪಡಿಸಿಕೊಂಡು, ಲಿಂಗಾಯತ ಮಠಾಧೀಶರ ಒಕ್ಕೂಟವೇ ಧರ್ಮಾಭಿಮಾನಿ ಹಿರಿಯ ಸಮುದಾಯದ ಮುಖಂಡರು, ಸಾಹಿತಿಗಳ ಜೊತೆಗೂಡಿ ಸಂಯುಕ್ತ ಚಿಂತನಮಂತನ ಸಭೆಯ ಮೂಲಕ ಅಗತ್ಯ ಯೋಜನೆ ರೂಪಿಸಿ ,ಅದರ ಮೇಲುಸ್ತುವಾರಿ ಒಕ್ಕೂಟವೆ ವಹಿಸಿ ಕೊಂಡು ಮಠಗಳನ್ನೆಲ್ಲ ಬಸವ ಕೇಂತ್ರ ಗಳನ್ನಾಗಿ ಸಜ್ಜುಗೊಳಿಸಿ ಅದರ ಮೂಲಕವೇ ಕಾರ್ಯಕ್ರಮ ನಡೆಯುವಂತಾದರೆ , ಎಲ್ಲರ ನಡೆ ನುಡಿ ಒಂದಾಗಿ ಗೊಂದಲಗಳಿಗೆ ಅವಕಾಶ ವಿರುವುದಿಲ್ಲ. ಸಮುದಾಯದಲ್ಲೂ ಒಗ್ಗಟ್ಟು ಮೂಡುವುದಲ್ಲದೆ ಮಠಗಳಿಗೂ ಗೌರವ ತರುತ್ತದೆ.. ಕಾರ್ಯಕ್ರಮಗಳು ಸಹ ಯಶಸ್ಸು ಪಡೆದು ಉದ್ದೇಶ ನೆರವೇರುವುದು.

  • ಬಹಳಷ್ಟು ಜನರು, ಬಸವಾಭಿಮಾನಿಗಳು, ಉತ್ತಮವಾದ ,ತಮ್ಮ ಅಮೂಲ್ಯ ಸಲಹೆಗಳನ್ನು, ಸೂಚನೆಗಳನ್ನು ತಿಳಿಸಿದ್ದಾರೆ. ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು. ಲಿಂಗಾಯತ ಸಂಪ್ರದಾಯತಂತೆ ಎಲ್ಲ ನಿತ್ಯ ಪ್ರಚಾರ ಕಾರ್ಯ ಪ್ರವರ್ತ ರಾಗಲು ಸೂಕ್ತ ಸಮಯ ಒದಗಿ ಬಂದಿದೆ. ಊರಿಗೊಬ್ಬರು, ತಾಲೂಕಿಗೊಬ್ಬರು,ಮುಖ್ಯ ಲಿಂಗಾಯತ ಧರ್ಮದ ಗುರುಗಳನ್ನು ನೇಮಿಸಿ, ಸರಳವಾದ ಎಲ್ಲ ಆಚರಣೆಗಳನ್ನು ಊರೂರಿಗೆ ಸಲ್ಲುವಂತೆ ವ್ಯವಸ್ಥೆ ಮಾಡುವ ಮೂಲಕ ಬಸವ ಧರ್ಮ, ಗುರುವಿನ, ಲಾಂಛನ, ಲಿಂಗ ಪೂಜೆ ಇತ್ಯಾದಿ. ಅಗಲಿ ಎಂದು ಆಶಿಸುತ್ತೇನೆ.

  • Swamijies who do not accept Vachana Sahitya should not be invited . Some swamijies who perform functions like marriage ,House warming , birts ,deaths , deliberately avoid the names of Basaveshwara , Channa Basavanna , Akka mahadevi , Allama prabhu , and several others . Such swamies need not be invited to any functions .

  • ಮುಸಲ್ಮಾನರ ಬಗ್ಗೆ ಭಯ ಹುಟ್ಟಿಸಿ
    ಹಿಂದುತ್ವದ ಪ್ರಚಾರ ನಡೆಯುತ್ತಿದೆ.
    ಲಿಂಗಾಯತರು ಇದನ್ನು,
    ಅರ್ಥ ಮಾಡಿಕೊಳ್ಳಬೇಕು.
    ಇದೇನು ಸರಿ !?
    ಹಾಗಂತ ಮೈ ಮರೆಯುವ ಹಾಗಿಲ್ಲ.
    ಮುಸ್ಲಾಂನರು ಭಯೋತ್ಪಾದಕರಲ್ಲ.
    ಆದರೆ, ಭಾರತದಲ್ಲಿ ನಡೆಯುತ್ತಿರುವ
    ಬಹುತೇಕ ಕೃತ್ಯಗಳಿಗೆ ಅವರ
    ಕೊಡುಗೆ ಕಮ್ಮಿಯನಿಲ್ಲ ಬಿಡು.
    ಅಲಖೈದ್, ಹರ್ಖತುಲ್ ಮುಜಾಯಿದ್ದೀನ್,
    ಹಿಜಾಬುಲ್ ಮುಜಾಯಿದ್ದೀನ್, ಇಂಡಿಯನ್
    ಮುಜಾಯಿದ್ದೀನ್, ಇಸ್ಲಾಮಿಕ್ ಸ್ಟೇಟ್(ISIS)
    ಜೈಶೆಮೋಯಿದ್ದೀನ್, ಜಮಾಯಿತ್ ವುಲ್ ಮಜಾ ಹಿಸ್ ದೀನ್, ಲಸ್ಕರಯಿ ತೋಯಿಬ್, ಸ್ಟೂಡೆಂಟ್ ಇಸ್ಲಾಮಿಕ್ ಮೂಮೆಂಟ್, ತೆಹರಿಕ್ ಉಲ್ ಮಜಾ ಹಿಸ್ ದೀನ್, ಅಬ್ವಾ ಹನುಮಂತನ ಬಾಲಕ್ಕಿಂತ, ಕಡಿಮೆಯನಿಲ್ಲ ಇವರ ಸಂಘಟನೆ.
    ಅದಕ್ಕೆ ಎಚ್ಚರ ಇರಬೇಕು.
    ಲಿಂಗಾಯತರಾಗುತ್ತೇವೆ ಎನ್ನುತ್ತಲೆ
    ಮಠಗಳು ಖಬ್ಜಾ ಆದರೆ ನೀವೆನು ಮಾಡುವಿರಿ.
    ಹಿಂದೂ ನಮ್ಮ ನೇರ ಶತ್ರು,
    ವೀರಶೈವ ನಮ್ಮ ಒಳ ಶತ್ರು
    ಇತರೆ ಧರ್ಮಿಯರನ್ನು, ಸೂಕ್ಷ್ಮವಾಗಿ
    ಗಮನಿಸುತ್ತಲೆ ಇರ ಬೇಕು.
    ನಮ್ಮ ಉಸಾರಿನೊಳು ನಾವಿರ ಬೇಕು.
    ಲಿಂಗಾಯತವನು ಕಟ್ಟ ಬೇಕು.
    ಜಗ ಮೆಚ್ಚುವಂತೆ ಸೆಟೆದು ನಿಲ್ಲ ಬೇಕು.

    • ಹಿಂದೂ ನಮ್ಮ ನೇರ ಶತ್ರುವಲ್ಲ, ವೀರಶೈವ ನಮ್ಮ ಒಳ ಶತ್ರುವಲ್ಲ. ಇದು ಆರೆಸ್ಸೆಸ್ ಮಾಡುತ್ತಿರುವ ಅಪಪ್ರಚಾರ. ಲಿಂಗಾಯತರನ್ನು ಮೂಲೆಗುಂಪು ಮಾಡಿ ಸಮಾಜದಲ್ಲಿ ನಮ್ಮ ಮೇಲೆ ದ್ವೇಷ ಹುಟ್ಟಿಸುವುದು ಇದರ ಉದ್ದೇಶ. ಎಚ್ಚರ

  • ಅಣ್ಣ

    ಕಲಬುರ್ಗಿ, ಗೌರಿ ಕೊಂದವರು ಯಾವ ಧರ್ಮದ ಭಯೋತ್ಪಾದಕರು? ಆ ಹಂತಕರಿಗೆಲ್ಲಾ ಬೇಲ್ ಕೊಡುವಂತೆ ನ್ಯಾಯಾಂಗದ ಸ್ವಾತಂತ್ರ್ಯಹರಣ ಮಾಡಿರುವವರು ಯಾರು? ಅದನ್ನೂ ಹೇಳಿ.

    ಇಂದು ದಿನ ನಿತ್ಯ ಸಮಾಜದಲ್ಲಿ ಅಶಾಂತಿ, ಹಿಂಸೆ ಹುಟ್ಟು ಹಾಕುತ್ತಿರುವವರು ಹಿಂದೂ ಭಯೋತ್ಪಾದಕರಲ್ಲವೇ?

    ನಾವು ಎಲ್ಲಾ ರೀತಿಯ ಹಿಂಸೆಯನ್ನು ಪಕ್ಷಾತೀತವಾಗಿ ಧರ್ಮಾತೀತವಾಗಿ ಖಂಡಿಸಬೇಕು.

    ಆದರೆ ಈ ಆರೆಸ್ಸೆಸ್ ಜನ ಮುಸ್ಲಿಮರ ಬಗ್ಗೆ ಭಯ ಹುಟ್ಟಿಸಿ ಮುಗ್ದ ಹಿಂದೂಗಳನ್ನು ತಮ್ಮ ಕಾಲಡಿಯಲ್ಲಿ ಇಟ್ಟುಕೊಂಡಿದ್ದಾರೆ. ಇದನ್ನು ಲಿಂಗಾಯತರು ಅರ್ಥ ಮಾಡಿಕೊಳ್ಳಬೇಕು.

    ಇನ್ನೊಂದು ಮಾತು. ಲಿಂಗಾಯತರಿಗೆ ಹಿಂದೂಗಳು ಶತ್ರುಗಳಲ್ಲ, ವೀರಶೈವರೂ ಶತ್ರುಗಳಲ್ಲ. ನಾವು ಎಲ್ಲರನ್ನು ಗೌರವಿಸುತ್ತೇವೆ. ನಮ್ಮ ಹೋರಾಟ ನಮ್ಮ ಭಿನ್ನ ಧರ್ಮ, ಪರಂಪರೆ ಸಂರಕ್ಷಿಸಿಕೊಳ್ಳಲು ಮಾತ್ರ. ಯಾರನ್ನು ದ್ವೇಷಿಸಲು ಅಲ್ಲ.

  • “ಈ ಸಂಘರ್ಷದ ದಿನಗಳಲ್ಲಿ ಲಿಂಗಾಯತರು ಮಾಡಬೇಕಾದ 10 ಕೆಲಸಗಳು” ಲೇಖನದ ಕುರಿತು ಚಿಂತನೆ ಮಾಡಿದ ಸರ್ವರಿಗೂ ಧನ್ಯವಾದಗಳು.

    ತಾವೆಲ್ಲಾ ತುಂಬಾ ಪ್ರಾಯೋಗಿಕ ಅನುಷ್ಠಾನ (Practical applicability) ಅಂಶಗಳನ್ನು ಗಮನಿಸಿ ಸಲಹೆ ನೀಡಿದ್ದೀರಿ.

    ಬಸವ ತತ್ವ- ಸಿದ್ಧಾಂತಗಳ ಅನುಷ್ಠಾನ ಮತ್ತು ಆಚರಣೆ ಕುರಿತು ಈ ರೀತಿಯ ಅರ್ಥಪೂರ್ಣ ಸಂವಾದಗಳು ನಡೆಯಬೇಕು.

    ಇದರಿಂದ ಲಿಂಗಾಯತರು ಹೆಚ್ಚು ಹೆಚ್ಚು ಪಾಲನೆಯತ್ತ ಕಾಳಜಿವಹಿಸಲು ಸಾಧ್ಯವಾಗುತ್ತದೆ ಮತ್ತು ಪ್ರಾಯೋಗಿಕ ವಿಧಾನಗಳನ್ನು ಜಾರಿ ಮಾಡಲು ಸಾಧ್ಯವಾಗುತ್ತದೆ.

    ಒಟ್ಟಾರೆಯಾಗಿ ಚಿಂತನೆಗಳ ಸಾರ :
    1. ತಾಲೂಕಿಗೊಬ್ಬ ಬಸವತತ್ವ ನಿಷ್ಠ ಸ್ವಾಮೀಜಿಯವರನ್ನು ನೇಮಕ ಮಾಡಬೇಕು.
    2. ಕನಿಷ್ಠ ಪಕ್ಷ ತಾಲೂಕಿಗೊಬ್ಬ ವಚನಮೂರ್ತಿಗಳನ್ನು ಸಿದ್ಧಪಡಿಸಬೇಕು.
    3. ನಿಜಾಚರಣೆಗಳನ್ನು ಹೆಚ್ಚು ಹೆಚ್ಚು ನಡೆಸುವತ್ತ ಗಮನಹರಿಸಬೇಕು.
    4. ಬಸವತತ್ವವನ್ನು ಮನೆಮನೆಗೆ ತಲುಪಿಸುವ ಕಾರ್ಯವಾಗಬೇಕು.
    5. ಇಂತಹ ಚಿಂತನೆಗಳ ಸಮಾನ ಮನಸ್ಕರ ಸಭೆ ನಡೆಯಬೇಕು.

    ಮೇಲಿನ ಸಂವಾದದಲ್ಲಿ ಪಾಲ್ಗೊಂಡ ಎಲ್ಲ ಶರಣರು ತಮ್ಮ ಹೆಸರು, ಊರು, ದೂರವಾಣಿ ಸಂಖ್ಯೆ ಕಳಿಸಿರಿ.

    ಡಾ ಸಂಗಮೇಶ ಕಲಹಾಳ
    ದೂ : 9482151960

    ಶರಣು ಶರಣಾರ್ಥಿಗಳು.

Leave a Reply

Your email address will not be published. Required fields are marked *