ಲಿಂಗಾಯತ ಸಂಘಟನೆಯಿಂದ ಅಲ್ಲಮಪ್ರಭುದೇವರ ಜಯಂತಿ ಆಚರಣೆ

ಬೆಳಗಾವಿ

ಲಿಂಗಾಯತ ಸಂಘಟನೆಯಿಂದ ಅಲ್ಲಮಪ್ರಭುದೇವರ ಜಯಂತಿ ಆಚರಣೆ, ರವಿವಾರ ಡಾ.ಫ. ಗು.ಹಳಕಟ್ಟಿ ಭವನದಲ್ಲಿ ಜರುಗಿತು.

ಮಹಾದೇವಿ ಅರಳಿ ಸಾಮೂಹಿಕ ಪ್ರಾರ್ಥನೆ ನಡೆಸಿಕೊಟ್ಟರು. ಬಸವರಾಜ ಬಿಜ್ಜರಗಿ, ಆನಂದ ಕಕಿ೯, ಶಾಂತಾ ತಿಗಡಿ, ಸುನೀಲ ಸಾಣಿಕೊಪ್ಪ, ಸುಜಾತಾ ಮತ್ತಿಕಟ್ಟಿ, ಶ್ರೀದೇವಿ ನರಗುಂದ, ಬಸವರಾಜ ಗುರುನಗೌಡ, ಬಿ. ಪಿ. ಜೇವನಿ, ಪವಿತ್ರಾ ನರಗುಂದ ಹಾಗೂ ಶರಣ ಶರಣೆಯರು ವಚನ ವಿಶ್ಲೇಷಣೆ ಮಾಡಿದರು.

ಭಾರತೀಯ ನೂತನ ವರ್ಷ ಆರಂಭ ದಿನ ಇಂದು, ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪ ಶೂನ್ಯಸಿಂಹಾಸನದ ಪ್ರಥಮ ಅಧ್ಯಕ್ಷ ಅಲ್ಲಮಪ್ರಭು ಪ್ರಭು ದೇವರು. ಅವರು ಎತ್ತರದ ಸ್ಥಾನದಲ್ಲಿದ್ದರು. ಹೆಣ್ಣಿಗಾಗಿ ಸತ್ತವರು ಕೋಟಿ, ಮಣ್ಣಿಗಾಗಿ ಸತ್ತವರು ಕೋಟಿ ಜನ, ಗುಹೆಶ್ವರ ನಿನಗಾಗಿ ಸತ್ತವರು ಯಾರೋ ಕಾಣೆ ಎಂದಿದ್ದಾರೆ ಅಲ್ಲಮಪ್ರಭುದೇವರು.

ಜೀವಂತ ಇದ್ದಾಗ ಎಲ್ಲರನ್ನ ಸಮಾನವಾಗಿ ಕಾಣಿರಿ, ಕೊಡುವ ಕೈ ಮೇಲೆ ಇರಲಿ, ದೇವರು ಗಾಳಿಯಂತೆ ಎಲ್ಲ ಕಡೆ ಇದ್ದಾನೆ ಎಂದು ಶರಣ ಮಹಾಂತೇಶ ಇಂಚಲ ಮಾತನಾಡಿದರು.

ನೇತ್ರಾವತಿ ಕೆಂಪಣ್ಣ ರಾಮಾಪುರೆ ದಾಸೋಹ ಸೇವೆಗೈದರು. ಮಹಾಂತೇಶ ಮೆಣಸಿನಕಾಯಿ, ಸಂಗಮೇಶ ಅರಳಿ ನಿರೂಪಿಸಿದರು. ಬಸವರಾಜ ಮತ್ತಿಕಟ್ಟಿ, ಶೇಖರ ವಾಲಿಇಟಿಗಿ, ಶಿವಾನಂದ ನಾಯಕ, ಬಾಬಣ್ಣ ತಿಗಡಿ, ಲಕ್ಷ್ಮಣ ಕುಂಬಾರ, ಗಂಗಪ್ಪ ಉಣಕಲ್, ಕೆಂಪಣ್ಣ ರಾಮಪುರೆ ಇತರ ಶರಣ ಶರಣೆಯರು ಉಪಸ್ಥಿತರಿದ್ದರು. ಸುರೇಶ ನರಗುಂದ ವಂದಿಸಿದರು

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ_
https://chat.whatsapp.com/FEOgQepEXSP8R5OtHvcD7O

Share This Article
Leave a comment

Leave a Reply

Your email address will not be published. Required fields are marked *