ಸಾವಿರಾರು ವರ್ಷಗಳಿಂದ ತುಳಿತಕ್ಕೊಳಗಾದ ಜನಕ್ಕೆ ಧಾರ್ಮಿಕ ಸ್ವಾತಂತ್ರ್ಯ ಬೇಡವೇ?
ಚಿತ್ರದುರ್ಗ
ಕನ್ನೇರಿ ಕಾಡಸಿದ್ದೇಶ್ವರ ಮಠದ ಸ್ವಾಮಿ ವಿಶ್ವದ ಎಲ್ಲಾ ತಾಯಂದಿರಿಗೆ ಅವಮಾನವಾಗುವಂತಹ ಅವಹೇಳನಕಾರಿ ಮಾತುಗಳನ್ನು ಆಡಿದ್ದಾರೆಂದು ಹೇಳಿ ರಾಷ್ಟ್ರೀಯ ಬಸವದಳ ರಾಜ್ಯ ಘಟಕ ತೀವ್ರವಾಗಿ ಪ್ರತಿಭಟಿಸಿದೆ.
ರಂಗಯ್ಯನ ಬಾಗಿಲು ಬಳಿ ಇರುವ ಬಸವ ಮಂಟಪದಲ್ಲಿ ಗುರುವಾರ ರಾಜ್ಯಾಧ್ಯಕ್ಷ ವೀರೇಶಕುಮಾರ, ಚಿತ್ರದುರ್ಗ ಜಿಲ್ಲಾ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಅಕ್ಕಮಹಾದೇವಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ವಿರಕ್ತಮಠದ ಗುರುವರ್ಗದವರೆಲ್ಲಾ ಒಟ್ಟಾಗಿ ಒಂದು ತಿಂಗಳು ಕಾಲ ಎಲ್ಲಾ ಜಿಲ್ಲೆಗಳಲ್ಲಿ ಲಿಂಗಾಯತ ಧರ್ಮ ಜಾಗೃತಿಗಾಗಿ ಬಸವಸಂಸ್ಕೃತಿ ಅಭಿಯಾನವನ್ನು ಮಾಡಿದ್ದಾರೆ. ಅಭಿಯಾನದಲ್ಲಿ ವಿಶ್ವಗುರು ಬಸವಣ್ಣನವರ ಸಂದೇಶಗಳನ್ನು, ಬಸವತ್ವದ ನಿಯಮಗಳನ್ನು ಬಿತ್ತರಿಸಲಾಯಿತು.
ಲಿಂಗಾಯತ ಧರ್ಮೀಯರು ಇಷ್ಟಲಿಂಗವನ್ನು ಮಾತ್ರ ಪೂಜಿಸಬೇಕು. ದೇವತೆಗಳ ಪೂಜೆಯಾಗಲೀ, ಪಂಚಭೂತಗಳ ಪೂಜೆಯಾಗಲೀ, ಲಿಂಗಾಯತ ಧರ್ಮದಲ್ಲಿ ನಿಷಿದ್ಧ ಎಂದು ತಿಳಿಸಿದ್ದು ಬಸವಧರ್ಮದ ಅಣತಿಯಂತೆಯೇ ಎಂಬುದನ್ನು ಮರೆತು ವೃತ ಆಪಾದನೆ ಹಾಗೂ ಸುಳ್ಳುಗಳನ್ನು ಕನ್ನೇರಿ ಸ್ವಾಮಿ ಹೇಳಿ ಬಸವತತ್ವಕ್ಕೆ ಅಪಚಾರ ಎಸಗುತ್ತಿದ್ದಾರೆ.
ಇಲ್ಲಿ ಯಾರೂ ಗುಡಿ ಗುಂಡಾರಗಳಿಗೆ ಹೋಗುವುದನ್ನು ತಡೆಯುವುದಾಗಲೀ, ಇನ್ನೊಬ್ಬರ ನಂಬಿಕೆಗಳಿಗೆ ಅಡ್ಡಿಪಡಿಸುವ ಕೆಲಸ ಮಾಡಿಲ್ಲ. ಲಿಂಗಾಯತ ಧರ್ಮೀಯರು ಲಿಂಗಾಯತ ಧರ್ಮೀಯರುಗಳಿಗೆ ಇಂಥಹ ಪೂಜೆಗಳು ನಿಷಿದ್ಧ ಎಂದು ತಿಳಿಸುವ ಸ್ವಾತಂತ್ರ್ಯವಿಲ್ಲವೇ? ಸಾವಿರಾರು ವರ್ಷಗಳಿಂದ ತುಳಿತಕ್ಕೊಳಗಾದ ಜನಕ್ಕೆ ಧಾರ್ಮಿಕ ಸ್ವಾತಂತ್ರ್ಯ ಬೇಡವೇ? ಹಿಂದೂ ಧರ್ಮ ಎಂದು ಹೇಳಿಕೊಳ್ಳುವವರು ಯಾವ ದೇವಸ್ಥಾನದಲ್ಲಿ ಮುಕ್ತಪ್ರವೇಶ ಪೂಜೆ ಪ್ರಾರ್ಥನೆಗೆ ಅವಕಾಶ ಕೊಟ್ಟಿದ್ದಾರೆ?
ಯಾರು ಏನೇ ಹೇಳಿದರೂ ಲಿಂಗಾಯತ ಧರ್ಮ ಪ್ರಚಾರ ನಿಲ್ಲುವುದಿಲ್ಲ. ಸಮಾಜದ ಸ್ವಾಸ್ಥ್ಯವನ್ನು ಕೆಡಿಸುತ್ತಿರುವ ಕನ್ನೇರಿ ಶ್ರೀಗಳಿಗೆ ಬುದ್ದಿ ಬರುವ ದಿನ ದೂರವಿಲ್ಲ.
ವಿರಕ್ತ ಮಠದವರಾಗಿ ಬಸವತತ್ವಕ್ಕೆ ವಿರೋಧವಾದ ಆಚರಣೆಗಳು ನಿಷಿದ್ಧ ಎಂದು ಪರಮಪೂಜ್ಯ ಲಿಂಗಾನಂದ ಸ್ವಾಮೀಜಿಗಳು ಹಾಗೂ ಪರಮಪೂಜ್ಯ ಮಾತೆಮಹಾದೇವಿ ತಾಯಿಯವರು ಮತ್ತು ಭಾಲ್ಕಿ, ಇಳಕಲ್, ಗದಗ, ಪಾಂಡೋಮಟ್ಟಿ ಇಂತಹ ಅನೇಕ ವಿರಕ್ತ ಮಠಗಳು ಘೋಷಿಸುತ್ತಲೇ ಬಂದಿವೆ.
ಮಠಗಳು ಈಗ ಸುಧಾರಣೆ ಹಾದಿಯಲ್ಲಿ ಇದೆ. ಇಂದಲ್ಲ ನಾಳೆ ಪರಿಪೂರ್ಣ ಬಸವತತ್ವ ಅನುಯಾಯಿಗಳಾಗಿ ಬಸವತತ್ವವನ್ನು ಪ್ರಾಮಾಣಿಕ ನೆಲೆಗಟ್ಟಿನಲ್ಲಿ ಮಠಗಳು ನಡೆಯಲಿದ್ದಾವೆ. ಮುಂದಿನ ದಿನಗಳಲ್ಲಿ ಒಕ್ಕೂಟದಿಂದ ಹೊರಗುಳಿದಿರುವ ಬಸವ ಪರಂಪರೆಯ ವಿರಕ್ತ ಮಠಗಳನ್ನು ಒಗ್ಗೂಡಿಸಿಕೊಂಡು ನಿರಂತರವಾಗಿ ಬಸವತತ್ವ ಪ್ರಚಾರವನ್ನು ಮಾಡಲು ಪೂಜ್ಯರು ನಿರ್ಧರಿಸಿದ್ದಾರೆ.
ಇದನ್ನು ನೋಡಿ ತಡೆಯಲಾರದೇ ಹೊಲಸು ಪದಗಳನ್ನು ಬಳಸಿ ಗುರುಲಿಂಗ ಎನ್ನಿಸಿಕೊಂಡ ನಾಲಿಗೆಯನ್ನು ತಾವು ಹೊಲಸು ಮಾಡಿಕೊಂಡಿದ್ದೀರಿ.
ಪತ್ರಿಕಾಗೋಷ್ಠಿಯಲ್ಲಿ ರಾ.ಬ.ದಳದ ವೆಂಕಟೇಶ ಲಿಂಗಾಯತ, ಎಂ.ಬಿ. ಶಂಕರಪ್ಪ ಉಪಸ್ಥಿತರಿದ್ದರು.

ಯಾರ ವಿರುದ್ಧ ದಂಗೆ ಮಾಡ್ತರಂತೆ
ಇದೆ ತರದ ನಮ್ಮ ನಮ್ಮಲ್ಲಿಯ ಜಗಳ ದ್ವೇಷ ದಿಂದಾಗಿಯೇ ಭಾರತ ಸಾವಿರ ವರ್ಷಕ್ಕೂ ಮೇಲ್ಪಟ್ಟು ಗುಲಾಮರಾಗಿ ಇರಬೇಕಾಯಿತು. ಈಗ ಎಲ್ಲ ಲಿಂಗಾಯತ ಸಮಾಜ ಒಕ್ಕಟ್ಟಾಗ್ಬೇಕು. ಒಕ್ಕತ್ತಿನಲ್ಲೇ ಸಾಮರ್ಥ್ಯ ಇರುತ್ತದೆ. ಕರ್ನಾಟಕದಲ್ಲಿ ಲಿಂಗಾಯತರ ಸರಕಾರ ಸ್ಥಾಪನೆ ಆಗಬೇಕು
ಕನ್ನೇರಿ ಸ್ವಾಮಿಗಳನ್ನು ಬೆಂಬಲಿಸುವ ರಾಜಕಾರಣಿಗಳಿಗೆ ಮುಂದಿನ ಚುನಾವಣೆಗಳಲ್ಲಿ
ಪ್ರತ್ಯುತ್ತರ ನೀಡಲು ಸಿದ್ದರಾಗಿ ಬಸವ ಸಂಸ್ಕೃತಿಯ ಅಭಿಯಾನದ ಮುನ್ನುಡಿಯಾಗಲಿ