ಜಯಂತಿ ಎಂದರೆ ಜಾತ್ರೆ ಮಾಡುವುದಲ್ಲ, 770 ಶರಣರು ಕೊಟ್ಟಿರುವ ಸಂಖ್ಯೆ. ಅದನ್ನು 771 ಮಾಡಲು ಸಾಧ್ಯವಿಲ್ಲ. ಮಹಾಸಭೆಗೆ 7 ಪ್ರಶ್ನೆಗಳು.
ಬೆಂಗಳೂರು
ವೀರಶೈವ ಮಹಾಸಭಾದ ರಾಜ್ಯಾಧ್ಯಕ್ಷ ಶಂಕರ ಬಿದರಿಯವರು ಕಳಿಸಿರುವ ವಿವಾದಿತ ಸುತ್ತೋಲೆಯ ಬಗ್ಗೆ ಶರಣ ತತ್ವ ಚಿಂತಕ ಪ್ರೊ. ಪಂಚಾಕ್ಷರಿ ಹಳೇಬೀಡು ಬಸವ ರೇಡಿಯೋ ಕಾರ್ಯಕ್ರಮದಲ್ಲಿ ಏಪ್ರಿಲ್ 17 ಮಾತನಾಡಿದರು.

ವಚನ ಪರಂಪರೆಯ ಬೆಳಕಿನಲ್ಲಿ ಬಿದರಿ ಆದೇಶಗಳನ್ನು ಚರ್ಚಿಸಿದರು.
12ನೆ ಶತಮಾನದಲ್ಲಿ ಬಸವಣ್ಣನವರ ಅನುಭವ ಮಂಟಪ ಸ್ಥಾಪನೆ ಆದಾಗ ಸದಸ್ಯರಾಗಿ ಬಂದಿದ್ದು ಎಲ್ಲಾ ಕೆಳ ವರ್ಗದ ಕಾಯಕ ಜೀವಿಗಳು. ಅಕ್ಷರ ಜ್ಞಾನವೇ ಇಲ್ಲದ ಕಾಯಕ ಜೀವಿಗಳಿಗೆ ಅಕ್ಷರ ಜ್ಞಾನದ ಜೊತೆ ಅನುಭಾವಿಗಳಾಗಿ ವಚನಗಳನ್ನು ರಚಿಸುವ ಹಂತಕ್ಕೆ ಅವರಿಗೆ ಶಕ್ತಿ ತುಂಬಲಾಗಿತ್ತು.
ಅಂದಿನ ಅನುಭವ ಮಂಟಪದಲ್ಲಿ 770 ಅಮರಗಣಂಗಳು ಇದ್ದರು ಮತ್ತು ಅವರೆಲ್ಲ ಅನುಭಾವಿ ಸಾಧಕರಾಗಿದ್ದರು. ಅವರೆಲ್ಲರೂ ಸೇರಿ ಲಿಂಗಾಯತ ಸಿದ್ಧಾಂತವನ್ನು ಅವರ ಅನುಭಾವದ ಹಿನ್ನೆಲೆಯಲ್ಲಿ ನಮಗೆ ವಚನಗಳ ರೂಪದಲ್ಲಿ ಕಟ್ಟಿ ಕೊಟ್ಟಿದ್ದಾರೆ. ಅದನ್ನು ಅನುಸರಿಸುವುದು ಮಾತ್ರ ನಮ್ಮ ಕೆಲಸವಾಗಬೇಕು. ಇದನ್ನು ಮರೆತಿರುವ ವೀರಶೈವ ಮಹಾಸಭೆ ಲಿಂಗಾಯತರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ.
ಶಂಕರ ಬಿದರಿಯವರು ಕಳಿಸಿರುವ ಸುತ್ತೋಲೆಯಲ್ಲಿ ಸಮಯ ಉಳಿಸಲು ಎಲ್ಲರ ಜಯಂತಿಯನ್ನು ಒಟ್ಟಿಗೆ ಮಾಡಲು ಹೇಳಿದ್ದಾರೆ.
ಜಯಂತಿ ಎಂದರೆ ದೊಡ್ಡ ಜಾತ್ರೆ ಮಾಡುವುದಲ್ಲ. ಜಯಂತಿಯ ದಿನ ನಾವು ಎಲ್ಲಿರುತ್ತೇವೆಯೋ ಅಲ್ಲಿಯೇ ಶರಣರ ಬಗ್ಗೆ ತಿಳಿದುಕೊಳ್ಳುವುದು, ಅವರ ವಚನಗಳನ್ನು ಓದುವುದು, ಅವರ ಸಾಧನೆ ಮತ್ತು ಕೊಡುಗೆಗಳ ಬಗ್ಗೆ ತಿಳಿದುಕೊಳ್ಳುವ ಕೆಲಸ ಮಾಡಬೇಕು.
ಸಮಾಜಕ್ಕೆ ಉಪಯೋಗವಾಗುವಂತೆ ಎಲ್ಲಾ ಶರಣರ ಜಯಂತಿಯನ್ನು ಅಂದಂದೆ ಆಚರಿಸಬೇಕು.
ಎಲ್ಲಾ ಒಟ್ಟಿಗೆ ಸೇರಿಸಿದರೆ ಬಸವಣ್ಣನವರ ವಿಷಯವನ್ನು ಬಿಟ್ಟು ಬೇರೆ ಶರಣರ ಬಗ್ಗೆ ಹೆಚ್ಚು ಚರ್ಚೆ ಮಾಡಲು ಸಾಧ್ಯವಿಲ್ಲ. ಆದುದರಿಂದ ಎರಡು ಅಥವಾ ಹೆಚ್ಚು ಜನರ ಜಯಂತಿಯನ್ನು ಒಟ್ಟಿಗೆ ಮಾಡುವುದು ಸೂಕ್ತವಲ್ಲ.
ಇಂತಹ ತೀರ್ಮಾನ ತೀರ್ಮಾನ ತೆಗೆದುಕೊಳ್ಳಲು ನೀವು ಯಾರು ಮತ್ತು ನಿಮಗೆ ಈ ಅಧಿಕಾರವನ್ನು ಕೊಟ್ಟವರು ಯಾರು, ಎಂದು ಡಾ ಪಂಚಾಕ್ಷರಿ ಕೇಳಿದರು.
ಹಾಗೆಯೆ ಬಸವಣ್ಣನವರ ಜಯಂತಿಯ ಜೊತೆ ರೇಣುಕಾ ಜಯಂತಿಯನ್ನು ಸೇರಿಸುವ ಪ್ರಯತ್ನ ಯಾಕೆ ಮಾಡುತ್ತಿದ್ದೀರಾ? 770 ಶರಣರು ಕೊಟ್ಟಿರುವ ಸಂಖ್ಯೆ. ಅದನ್ನು 771 ಮಾಡಲು ಸಾಧ್ಯವಿಲ್ಲ.ಅದನ್ನು 771 ಮಾಡುವ ಅಧಿಕಾರ ಕೊಟ್ಟವರು ಯಾರು, ಎಂದೂ ಪ್ರಶ್ನಿಸಿದರು.
ವೀರಶೈವ ಮಹಾಸಭಾಗೆ ಒಟ್ಟು ಆರು ಪ್ರಶ್ನೆಗಳನ್ನು ಡಾ ಪಂಚಾಕ್ಷರಿ ಕೇಳಿದರು.
- ಯುಗ-ಯುಗಗಳಷ್ಟು ಪುರಾತನರಾದ ಜಗದ್ಗುರು ರೇಣುಕಾಚಾರ್ಯರನ್ನು ಬಸವಾದಿ ಶರಣರು ಅಮರಗಣಗಳೆಂದು ಏಕೆ ಪರಿಗಣಿಸಲಿಲ್ಲ?
- ಶರಣರು ಮಾನ್ಯ ಮಾಡದ ರೇಣುಕಾಚಾರ್ಯರನ್ನು 771 ನೇ ಅಮರಗಣರಾಗಿ ಅಮರಗಣಂಗಳ ಗುಂಪಿಗೆ ಸೇರಿಸಲು ನಿಮಗೆ ಯಾವ ಅಧಿಕಾರವಿದೆ? ನೀವು ಶರಣತ್ವ ಸಾಧಿಸಿದ ಅನುಭಾವಿಗಳೆ?
- ಶೈವ ಪರಂಪರೆಯ 63 ಪುರಾತನರನ್ನು ಬಸವಣ್ಣನವರು ಸ್ಮರಿಸಿದ್ದಾರೆಯೇ ಹೊರತು ಅಮರಗಣಂಗಳೆಂದು ಏಕೆ ಪರಿಗಣಿಸಿಲ್ಲ?
- ಬಸವೋತ್ತರ ಕಾಲದ ಎಡೆಯೂರು ಸಿದ್ದಲಿಂಗೇಶ್ವರರು, ಮಲಯಮಹದೇಶ್ವರರು, ಷಣ್ಮುಖ ಶಿವಯೋಗಿಗಳು, ಫ ಗು ಹಳಕಟ್ಟಿ, ಹೀಗೆ ಅನೇಕ ಶರಣರು ಲಿಂಗಾಯತ ಧರ್ಮದ ಬೆಳವಣಿಗೆಗೆ ಅತ್ಯುತ್ತಮ ಕಾಣಿಕೆ ನೀಡಿದ್ದಾರೆ. ಅವರಾರನ್ನೂ ಅಮರಗಣಗಳನ್ನಾಗಿಸದೆ, ಲಿಂಗಾಯತ ಧರ್ಮದ ಹುಟ್ಟು ಹಾಗೂ ಬೆಳವಣಿಗೆಗೆ ಯಾವುದೇ ಕೊಡುಗೆ ನೀಡದ ರೇಣುಕಾಚಾರ್ಯರನ್ನು ಅಮರಗಣವಾಗಿಸುವ ಹುನ್ನಾರವೇಕೆ?
- ಸಂಸ್ಕೃತದ ವೀರಶೈವ ಸಾಹಿತ್ಯ ಹಾಗೂ ಶರಣರ ಕನ್ನಡದ ಲಿಂಗಾಯತ ವಚನ ಸಾಹಿತ್ಯ ಒಂದೇ ಆಗಿದ್ದರೆ, ಅಂದು ಕಲ್ಯಾಣದಲ್ಲಿ ವಿಪ್ಲವ ಉಂಟಾಗಿದ್ದು ಏಕೆ? ಬೀದಿಬೀದಿಗಳಲ್ಲಿ ಶರಣರ ವಧೆ ಮಾಡಿದ್ದು ಏಕೆ? ವಚನ ಸಾಹಿತ್ಯ ಸುಟ್ಟು ಹಾಕಿದ್ದು ಏಕೆ? ಬಸವಣ್ಣನವರ ಗಡೀಪಾರು ಏಕಾಯಿತು?
- ಮಾರ್ಚ್ 16 ರಂದು ರೇಣುಕಾಚಾರ್ಯ ಜಯಂತಿಯನ್ನು ಸರ್ಕಾರವೇ ಆಚರಿಸುತ್ತಿದ್ದರೂ ಬಸವಜಯಂತಿಯಂದೇ ರೇಣುಕಾಚಾರ್ಯರ ಜಯಂತಿಯನ್ನು ಆಚರಿಸಲು ಕರೆಕೊಡುವ ಹಿಂದಿನ ಹುನ್ನಾರ, ಮರ್ಮವೇನು?
- 900 ವರ್ಷಗಳ ಹಿಂದೆಯೇ ಅಕ್ಷರ ಕಲಿಕೆಯೂ ಇಲ್ಲದ ಶರಣರಿಗೆ ಪ್ರಾಪ್ತವಾದ ವಾಸ್ತವ ಸತ್ಯದ ಅರಿವು ಇಂಥಾ ವಿಜ್ಞಾನ ಯುಗದಲ್ಲೂ ಅನೇಕ ಕಠಿಣತಮ ಪರೀಕ್ಷೆಗಳನ್ನು ಪಾಸು ಮಾಡಿ ಸಮಾಜದಲ್ಲಿ ಉನ್ನತ ಸ್ಥಾನಮಾನ ಗಳಿಸಿ ಜ್ಞಾನಿಗಳೆನಿಸಿದ ಮಹನೀಯರುಗಳಿಗೆ ಅರ್ಥವಾಗದಿರುವುದು ಹೇಗೆ?
ಪ್ರತಿಭೆಯ ಜತೆಗೆ ವಾಸ್ತವಿಕ ಸತ್ಯದ ಅರಿವು ಮತ್ತು ಐತಿಹಾಸಿಕ ತಿಳುವಳಿಕೆ ಹೊಂದಿರಬೇಕು. ಹುಂಬರಂತೆ ತನ್ನ ಅಧಿಕಾರದ ದಿಮ್ಮಿನಲ್ಲಿ ಎನೊನೋ ಹೆಳಿಕೆಗಳನು ಹರಿಯಬಿಟ್ಟು ಹುಂಬತನವನ್ನು ಮತ್ತೆ ಮತ್ತೆ ಪ್ರದರಶಿಸಬಾರದು.
ರೇಣುಕಾಚಾರ್ಯರನ್ನು ಜಾತಿ ಜಂಗಮರು ಮಾತ್ರ ಒಪ್ಪುತ್ತಾರೆ. ಕಾರಣ ಅವರ ಜಯಂತಿ ಸರಕಾರದ ವತಿಯಿಂದ ಮಾಡಿಸಲು ಯಶಸ್ವಿ ಆಗಿರಬಹುದು. ಆದರೆ ಲಿಂಗಾಯತರ ಮನಸ್ಸು ಒಬ್ಬ ಕಲಲ್ಲಿ ಹುಟ್ಟಿದ ವ್ಯಕ್ತಿಯನ್ನು ನಂಬುವುದಿಲ್ಲ.
ಇನ್ನೂ ಒಂದು ಹೆಜ್ಜೆ ಜನರು ಮುಂದೆ ಹೋಗಿ ರೇಣುಕಾಚಾರ್ಯ, ಸಿದ್ದಾಂತ ಶಿಖಾಮಣಿ ಬಗ್ಗೆ ಹೇಳುವ ಮತ್ತು ಜೈ ಪಂಚಾಚಾರ್ಯ ಅನ್ನುವ ಜಾತಿ ಜಂಗಮರಿಗೆ ದಕ್ಷಿಣೆ / ದಾನ ಕೊಡುವುದನ್ನು ನಿಲ್ಲಿಸಬೇಕು.
ಯಾರು ಒಪ್ಪದ ರೇಣುಕಾಚಾರ್ಯನನ್ನು ಬಸವ ಜಯಂತಿ ಮೂಲಕ ಜನರ ಮನಸಲ್ಲಿ ಮೂಡಿಸಿ, ಕ್ರಮೇಣ ಬಸವಣ್ಣರನ್ನು ಮರೆಮಾಚುವ ಹುನ್ನಾರ ಇದು.
Basavajayanthi for any reason should not be meddled and traditional sanctity maintained with the faith ingrained over centuries.
ಪಂಚಾಕ್ಷರಿ ಸರ್ ಅವರು ಹೇಳಿದ ಹಾಗೆ ಐದು ಪ್ರಶ್ನೆಗಳಿಗೆ ಉತ್ತರ ಕೊಡಬೇಕು ಶಂಕರ್ ಬಿದರೆ ಅವರು ತಾಕತ್ತಿದ್ದರೆ ಉತ್ತರಗಳನ್ನು ಕೊಡಿ ಇಲ್ಲವಾದರೆ ಸುಮ್ಮನೆ ಕೂತುಬಿಡಿ ನಿಮ್ಮಂತವರು ಲಿಂಗಾಯತ ಧರ್ಮವನ್ನು ಎಲ್ಲಿಗೆ ಒಯ್ದು ನಿಲ್ಲಿಸಬೇಕೆಂದಿದ್ದರೂ ಅರ್ಥವಾಗುತ್ತಿಲ್ಲ ಧರ್ಮ ಯಾವುದು ಜಾತಿ ಯಾವುದು ಎಂದು ಮೊದಲಿಗೆ ನೀವು ತಿಳಿದುಕೊಳ್ಳಬೇಕು ಶಂಕರ್ ಬಿದರಿಸಾರ್ ಅವರೇ ಮೊದಲು ನೀವು ತಿಳಿದುಕೊಳ್ಳಿ ಶಂಕರ್ ಬಿದರೆ ಸಾರ್ ಅವರೇ , ನೀವು ಹುಟ್ಟಿದ ದಿನದಂದು ನಿಮಗೆ ಶುಭಾಶಯ ತಿಳಿಸುವರೆ ಹೊರತು ಪಕ್ಕದ ಮನೆಯವರಿಗೆಲ್ಲ ಮೊದಲಿಗೆ ನೀವು ಈ ಸಣ್ಣ ವಿಷಯ ತಿಳಿದಿಲ್ಲ ಎಂದರೆ ನಿಮಗೆ ಏನೆನ್ನ ಬೇಕು ಅರ್ಥವಾಗುತ್ತಿಲ್ಲ ನಿಮಗೆ ಒಂದು ದೊಡ್ಡ ಶರಣು ಶರಣಾರ್ಥಿಗಳು
ನಿಮ್ಮ ಎಲ್ಲಾ ವಿಚಾರಗಳಿಗೆ ನಮ್ಮ ಒಪ್ಪಿಗೆ ಇದೇ ರೀತಿಯಾಗಿ ಕೇಳುವುದು ಮುಂದುವರೆಯಲಿ. ಇಲ್ಲಿಯವರೆಗೆ ನಾವುಗಳು ಸುಮನಿದ್ದುದರಿಂದ ಇಂದು ಇಂಥ ಪರಿಸ್ಥಿತಿಯನ್ನು ಎದುರಿಸಬೇಕಾಗಿದೆ. ಇದರಲ್ಲಿರುವ ರಾಜಕೀಯವನ್ನು ನಾವು ಅರ್ಥ ಮಾಡಿಕೊಳ್ಳಬೆಕಾಗಿದೆ. ನಿಮ್ಮ ಪ್ರಯತ್ನಕ್ಕೆ ಅನಂತ ಧನ್ಯವಾದಗಳು.
ಸರಿಯಾಗೇ ಉಗಿಯಿರಿ ಅವನಿಗೆ ಒಬ್ಬ ಉನ್ನತ ಅಧಿಕಾರಿಯಾಗಿ ನಿವೃತ್ತಿ ಆದರೂ ಬುದ್ದಿ ಬಂದಿಲ್ಲ
ನಿವೃತ್ತ ಅಧಿಕಾರಿ ಅಂತಾ ಗೌರವ ಕೊಟ್ಟರೆ ಅದನ್ನ ಅವರು ನನ್ನಷ್ಟು ಬುದ್ದಿವಂತ ಯಾರು ಇಲ್ಲಾ ಅಂತಾ ಅನ್ಕೊಂಡಿದ್ದಾರೆ