ಲಿಂಗಾಯತರಲ್ಲಿ ವೈದಿಕತೆ ತುಂಬಿದ ವೀರಶೈವರು

ಆಂಧ್ರದ ಶೈವ ಬ್ರಾಹ್ಮಣ ಆರಾಧ್ಯರು ವೀರಭದ್ರನನ್ನು ಪೂಜಿಸಲು ಆಚರಿಸುತ್ತಿದ್ದ ಒಂದು ವ್ರತದ ಹೆಸರು ‘ವೀರಶೈವ.’ ಅವರು ಲಿಂಗಾಯತರಾದಂತೆ ಅದು ಕೂಡ ಶರಣ ಸಮಾಜದಲ್ಲಿ ಸೇರಿಕೊಂಡಿತು.

ಇಷ್ಟಲಿಂಗ ಹಿಡಿದರೂ ಆರಾಧ್ಯರು ತಮ್ಮ ಜನಿವಾರ ಬಿಡಲಿಲ್ಲ. ಬಸವ ಸಿದ್ದಾಂತಕ್ಕೆ ವರ್ಣ, ಗೋತ್ರ, ಜಾತಿ, ಆಗಮಿಕ, ವೈದಿಕ ಆಚರಣೆಗಳನ್ನು ಬೆರೆಸಿದ ಮಿಶ್ರ ಧರ್ಮವನ್ನು ಪಾಲಿಸುತ್ತಿದ್ದರು.

ಶರಣ ಸಮಾಜದಲ್ಲಿ ಮೇಲುಗೈ ಸಾಧಿಸಲು ಜಂಗಮ ಜಾತಿ ಮತ್ತು ಪಂಚಾಚಾರ್ಯ ಮಠಗಳನ್ನು ಹುಟ್ಟು ಹಾಕಿ, ಕನ್ನಡದ ಬದಲು ಸಂಸ್ಕೃತ, ಲಿಂಗಾಯತದ ಬದಲು ವೀರಶೈವ ಬೆಳೆಸಿದರು.

ಕನ್ನಡ ಕೃತಿಗಳಲ್ಲಿ ವೀರಶೈವ ಪದ ಮೊದಲು ಕಾಣಸಿಕೊಳ್ಳುವುದು ೧೪ನೇ ಶತಮಾನದ ಬಸವ ಪುರಾಣದಲ್ಲಿ. ಇದನ್ನು ಬರೆದವನು ಆಂಧ್ರದ ಕಡಪ ಜಿಲ್ಲೆಯ ಭೀಮಕವಿ.

ಮುಂದಿನ ದಿನಗಳಲ್ಲಿ ಆರಾಧ್ಯರ ಪ್ರಭಾವ ಹೆಚ್ಚಿದಂತೆ, ಅವರ ಮಿಶ್ರ ಧರ್ಮವನ್ನು ಪ್ರಚಾರಮಾಡುವ ಸಂಸ್ಕೃತ ಮತ್ತು ಕನ್ನಡ ಕೃತಿಗಳು ವಿಪುಲವಾಗಿ ಹುಟ್ಟಿಕೊಂಡವು.

ಅವು ವೀರಶೈವ ತತ್ವವನ್ನು ಲಿಂಗಾಯತಕ್ಕೆ ಪರ್ಯಾಯವಾಗಿ ಬೆಳೆಸಿದವು. ಅವರ ಪ್ರಧಾನ ಕೃತಿ ಸಂಸ್ಕೃತದ ಸಿದ್ಧಾಂತ ಶಿಖಾಮಣಿ ಬಸವ ಧರ್ಮವನ್ನು ಸೂಚಿಸಲು ವೀರಶೈವ ಪದ ಬಳಸುತ್ತದೆ.

ವೀರಶೈವ ಇತಿಹಾಸ ೨/೩

(‘ವೀರಶೈವ ಇತಿಹಾಸ ಮತ್ತು ಭೂಗೋಲ’ ಲೇಖನದಿಂದ ಆಯ್ದ ಮತ್ತು ಸಂಕ್ಷಿಪ್ತಗೊಳಿಸಿರುವ ಭಾಗ – ಮಾರ್ಗ ೭)

Share This Article
Leave a comment

Leave a Reply

Your email address will not be published. Required fields are marked *