೧೨ನೇ ಶತಮಾನದಲ್ಲಿ ಆಂಧ್ರದ ಆರಾಧ್ಯ ಸಮುದಾಯ ಬಸವಣ್ಣನ ಪ್ರಭಾವಕ್ಕೆ ಸಿಲುಕಿದರೂ ಜನಿವಾರ ಬಿಟ್ಟಿರಲಿಲ್ಲ. ಅರ್ಧ ಲಿಂಗಾಯತ ಅರ್ಧ ವೈದಿಕತೆಯ ಮಿಶ್ರ ಧರ್ಮ ಆಚರಿಸುತ್ತಿದ್ದರು.
ಮೂಲತಃ ಜಾತಿವಾದಿ ಶೈವ ಆಚಾರ್ಯರಾಗಿದ್ದ ಇವರು ಬಸವಣ್ಣನವರ ಕಾಲದಲ್ಲಿಯೇ ಅವರ ಎಲ್ಲಾ ವರ್ಗಗಳನ್ನು ಸೇರಿಸಿ ಏಕ ಸಮಾಜವನ್ನು ಕಟ್ಟುವ ಪ್ರಯತ್ನವನ್ನು ವಿರೋದಿಸಿದರು.
ಭಕ್ತರಾಗಿ ಒಳ ಬಂದ ಇವರು ಆಚಾರ್ಯರಾಗಿ ಲಿಂಗಾಯತರ ಮೇಲೆ ಹಿಡಿತ ಸಾಧಿಸಿದರು. ‘ಜಂಗಮ’ ಜಾತಿ ಹುಟ್ಟು ಹಾಕಿ, ‘ಗುರು-ಭಕ್ತ’ ರೆಂಬ ಎರಡು ಮೇಲು-ಕೀಳು ವರ್ಗಗಳನ್ನು ಹುಟ್ಟುಹಾಕಿದರು.
೧೭-೧೮ನೇ ಶತಮಾನಗಳವರೆಗೆ ಪಂಚಾಚಾರ್ಯ ಮಠಗಳನ್ನು ಹುಟ್ಟುಹಾಕಿ ಅವುಗಳ ಮೂಲಕ ಶೈವ ಭಕ್ತರನ್ನು, ಮಠಗಳನ್ನು ವಶಕ್ಕೆ ತೆಗೆದುಕೊಂಡರು.
ತಮ್ಮ ಸಂಪ್ರದಾಯದ ಮಠಗಳಿಗೆ ಜಾತಿ ಜಂಗಮರನ್ನು ಅದರಲ್ಲೂ ಒಂದೇ ಕುಟುಂಬದ ಸದಸ್ಯರನ್ನು ಪೀಠಕ್ಕೆ ತರುವ ಪದ್ಧತಿ ತಂದರು. ಇದರಿಂದ ಲಿಂಗಾಯತ ಮಠಗಳು ಕೆಲವೇ ಜನರ ಸ್ವತ್ತಾದವು
ಮುಖ್ಯವಾಗಿ ತಮ್ಮ ಮಿಶ್ರ ಧರ್ಮದ ಪ್ರತೀಕವಾಗಿ ‘ವೀರಶೈವ’ ಪದವನ್ನು ‘ಲಿಂಗಾಯತ’ ಪದಕ್ಕೆ ಪರ್ಯಾಯವಾಗಿ ಬೆಳೆಸಿ, ಬಸವ ಭಕ್ತರ ತತ್ವಗಳಿಗೆ, ಅಸ್ಮಿತೆಗೆ ದಕ್ಕೆ ತಂದರು.
(‘ಶರಣ ಧರ್ಮ: ಜಾತಿ ನಾಶ- ಜಾತಿ ನಿರ್ಮಾಣ’ ಲೇಖನದಿಂದ ಆಯ್ದ ಮತ್ತು ಸಂಕ್ಷಿಪ್ತಗೊಳಿಸಿರುವ ಭಾಗ – ಮಾರ್ಗ ೪)