ವಿಜಯಪುರ
ರಾಜ್ಯದಲ್ಲಿ ಲಿಂಗಾಯತರ ಜನಸಂಖ್ಯೆ ಒಂದು ಕೋಟಿಗಿಂತಲೂ ಜಾಸ್ತಿ ಇದೆ’ ಎಂದು ಸಚಿವ ಎಂ.ಬಿ.ಪಾಟೀಲ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು ಜಾತಿ ಗಣತಿಯಲ್ಲಿ ಲಿಂಗಾಯತರ ಸಂಖ್ಯೆ ಕಡಿಮೆಯಾಗಿದ್ದು, ಕಾಂತರಾಜ್ ಹಾಗೂ ಯಾರ ತಪ್ಪಲ್ಲ. ಲಿಂಗಾಯತ ರೆಡ್ಡಿಗಳು ಹಿಂದೂ ರೆಡ್ಡಿ ಎಂದು ಬರೆಸಿದ್ದಾರೆ. ಜಾತಿ ಗಣತಿಯಲ್ಲಿ ಕಡಿಮೆ ಸಂಖ್ಯೆ ಆಗಿದ್ದಕ್ಕೆ ನಾವು ಕಾರಣವಾಗಿದ್ದೇವೆ.
ಲಿಂಗಾಯತರಲ್ಲಿ ಕೆಲವರು 2 ‘ಎ’ ಮೀಸಲಾತಿಗಾಗಿ ಹಿಂದೂ ಸಾದರ, ಹಿಂದೂ ಗಾಣಿಗ, ಹಿಂದೂ ಬಣಜಿಗ ಎಂದು ನಮೂದು ಮಾಡಿಸಿದ್ದಾರೆ. ಇವೆಲ್ಲ ಸಮುದಾಯಗಳು ಒಳಗೊಂಡರೆ ಲಿಂಗಾಯತ ಸಮಾಜದ ಸಂಖ್ಯೆ ಒಂದು ಕೋಟಿಗೂ ಅಧಿಕವಾಗಲಿದೆ.
ಹಿಂದೂ ಗಾಣಿಗ, ಹಿಂದೂ ಸಾದರ, ಹಿಂದು ಬಣಜಿಗ ಎಂದು ಬರೆಸಿದರೆ ಮೀಸಲಾತಿ ಸಿಗುತ್ತವೆ. ಆದರೆ, ಲಿಂಗಾಯತ ಸಾದರ ಬಣಜಿಗ, ಗಾಣಿಗ ಎಂದು ಬರೆಸಿದರೆ ಮೀಸಲಾತಿ ಸಿಗಲ್ಲ. ಇವರೆಲ್ಲರನ್ನು 3ಬಿಯಲ್ಲಿ ತರಬೇಕು. ಆದರೆ 3ಬಿಯಲ್ಲಿ ಬರೋಕೆ ಇವೆಲ್ಲ ಸಮಾಜ ಒಪ್ಪಲ್ಲ. ಹಾಗಾಗಿ ಅಲ್ಲೇ ಅವರನ್ನು ಕೌಂಟ್ ಮಾಡೋ ಕೆಲಸ ಆಗಬೇಕು ಎಂದು ತಿಳಿಸಿದರು.
ಜಾತಿ ಗಣತಿ ವರದಿ ಓದಿ ಮಾತನಾಡುವೆ. ಜಾತಿಗಣತಿ ಸರಿಯಾಗಿಲ್ಲ ಮತ್ತೊಮ್ಮೆ ಜಾತಿ ಗಣತಿ ಮಾಡಬೇಕೆಂದು ವಿವಿಧ ಸ್ವಾಮೀಜಿಗಳು ಬೇಡಿಕೆಯ ವಿಚಾರದ ಬಗ್ಗೆ ಮಾಹಿತಿ ನೀಡಿದ ಅವರು, ಅದು ಅವರವರ ಅಭಿಪ್ರಾಯಕ್ಕೆ ಬಿಟ್ಟಿದ್ದು ಎಂದರು.