ಬಸವಾದಿ ಶರಣರ ತತ್ವ ಸಿದ್ಧಾಂತವನ್ನು ತಿರುಚುವ ಹುನ್ನಾರಗಳಿರುವ ‘ವಚನ ದರ್ಶನ’ ಪುಸ್ತಕ ವಿರೋಧಿಸಿ ‘ವಿಶ್ವಗುರು ಬಸವಣ್ಣನವರ ಅನುಯಾಯಿಗಳ ಒಕ್ಕೂಟ’ದಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನೆ ಆರಂಭ.
ವಚನ ದರ್ಶನ ಪುಸ್ತಕದ ವಿರುದ್ಧ ಬೆಂಗಳೂರಿನಲ್ಲಿ ಯಶಸ್ವಿ ಪ್ರತಿಭಟನೆ
ಸಂಘ ಪರಿವಾರದ ಪ್ರಜ್ಞಾಪ್ರವಾಹ ಸಂಸ್ಥೆ ಪ್ರಕಟಿಸಿರುವ ‘ವಚನ ದರ್ಶನ’ ಪುಸ್ತಕವನ್ನು ರಾಜ್ಯ ಸರ್ಕಾರ ಕೂಡಲೇ ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ಆಗ್ರಹಿಸಿ ಸ್ವಾತಂತ್ರ್ಯ ಉದ್ಯಾನವನದಲ್ಲಿಂದು ಬಸವಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು.
ವಚನ ದರ್ಶನ ಪುಸ್ತಕದ ಮೂಲಕ ಬಸವಾದಿ ಶರಣರ ತತ್ವ ಸಿದ್ಧಾಂತವನ್ನು ತಿರಚುವ, ಸಮಾಜವನ್ನು ದಾರಿತಪ್ಪಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಹೇಳಿದರು.
ಪ್ರತಿಭಟನೆ ಸಭೆಯ ವೇದಿಕೆಯಿಂದ ಪೂಜ್ಯ ಶ್ರೀ ಬಸವಯೋಗಿ ಪ್ರಭು ಸ್ವಾಮೀಜಿ ಮಾತನಾಡುತ್ತಾ, ಸಮಾಜದಲ್ಲಿ ನೆಲೆಯೂರಿದ್ದ ಮೌಢ್ಯ, ಕಂದಾಚಾರ ವ್ಯವಸ್ಥೆಯನ್ನು ಧಿಕ್ಕರಿಸಿ, ಬಸವಣ್ಣನವರು ಹೊಸ ಸಮಾಜ ನಿರ್ಮಾಣಕ್ಕಾಗಿ ಲಿಂಗಾಯತ ಧರ್ಮವನ್ನು ಸ್ಥಾಪನೆ ಮಾಡಿದರು.
ವಚನ ದರ್ಶನ ಪುಸ್ತಕದ ಮುಖಪುಟ ಸುಟ್ಟ ಪ್ರತಿಭಟನಾಕಾರರು
ಇವತ್ತು ಸಂಜೆ 6 ಗಂಟೆಗೆ ವಚನ ದರ್ಶನ ಪುಸ್ತಕ ಬಿಡುಗಡೆಯಿದೆ. ಲಿಂಗಾಯತರ ಒತ್ತಡಕ್ಕೆ ಮಣಿದು ಬೇಲಿ ಮಠದ ಶ್ರೀಗಳು ಕಾರ್ಯಕ್ರಮಕ್ಕೆ ಹೋಗಲು ನಿರಾಕರಿಸಿದ್ದರು. ಆದರೆ ನೆನ್ನೆ ಮಾಧ್ಯಮಗಳಿಗೆ ಹಂಚಿರುವ ಆಹ್ವಾನ ಪತ್ರಿಕೆಯಲ್ಲಿ ಅವರ ಹೆಸರಿದೆ.
ಬೇರೆ ಕಾರ್ಯಕ್ರಮ ಇದೆ, ವಚನ ದರ್ಶನ ಪುಸ್ತಕ ಬಿಡುಗಡೆಗೆ ಹೋಗುತ್ತಿಲ್ಲ: ಬೇಲಿ ಮಠ ಶ್ರೀಗಳು
“ಬೇರೆ ಕಾರ್ಯಕ್ರಮ ಇರುವುದರಿಂದ ವಚನ ದರ್ಶನ ಪುಸ್ತಕದ ಬಿಡುಗಡೆಗೆ ಹೋಗುತ್ತಿಲ್ಲ,” ಎಂದು ಬೇಲಿ ಮಠದ ಶ್ರೀ ಶಿವರುದ್ರ ಮಹಾ ಸ್ವಾಮೀಜಿಯವರು ಬುಧವಾರ ಹೇಳಿದರು.
ಬಸವ ಮೀಡಿಯಾದ ಜೊತೆ ಮಾತನಾಡುತ್ತ ಶ್ರೀಗಳು, “ಯಾರ ಒತ್ತಡಕ್ಕೂ ಸಿಲುಕಿ ಈ ನಿರ್ಧಾರ ತೆಗೆದುಕೊಂಡಿಲ್ಲ, ಪುಸ್ತಕ ಓದಿ ಸೂಕ್ತವಾದ ನಿರ್ಧಾರ ತೆಗೆದುಕೊಂಡಿದ್ದೇನೆ. ಮನಸ್ಸಿಗೆ ಒಪ್ಪಿಗೆ ಯಾಗಿದ್ದರೆ ಕಾರ್ಯಕ್ರಮಕ್ಕೆ ಹೋಗುತ್ತಿದ್ದೆ,” ಎಂದರು.
ಆಗಸ್ಟ್ 20 ಬೆಂಗಳೂರಿನಲ್ಲಿ ವಿವಾದಿತ ವಚನ ದರ್ಶನ ಪುಸ್ತಕವನ್ನು ಬಿಡುಗಡೆ ಮಾಡಲು ಒಪ್ಪಿಕೊಂಡಿದ್ದ ಬೇಲಿ ಮಠದ ಶ್ರೀ ಶಿವರುದ್ರ ಮಹಾ ಸ್ವಾಮೀಜಿಯವರ ನಿರ್ಧಾರಕ್ಕೆ ವ್ಯಾಪಕವಾದ ವಿರೋಧ ವ್ಯಕ್ತವಾಗಿತ್ತು.
ಫ್ರೀಡಂ ಪಾರ್ಕಿನಲ್ಲಿ ಪೂಜ್ಯ ಬಸವಯೋಗಿ ಪ್ರಭು ಸ್ವಾಮೀಗಳು ಮಾಧ್ಯಮಗಳ ಜೊತೆ ಮಾತನಾಡುತ್ತಿರುವುದು
ಫ್ರೀಡಂ ಪಾರ್ಕಿನಲ್ಲಿ ಬಸವಣ್ಣನವರ ಅನುಯಾಯಿಗಳು ಸೇರುತ್ತಿದ್ದಾರೆ. ವೇದಿಕೆ ಚಿತ್ರ ಕೃಪೆ ಶಂಕರಪ್ಪ ಬೇವೂರ
ಬೆಂಗಳೂರು ಪ್ರತಿಭಟನೆ ಬಗ್ಗೆ ಇಂದು ವಿವಿಧ ಪತ್ರಿಕೆಗಳಲ್ಲಿ ಬಂದಿರುವ ವರದಿಗಳು
‘ವಚನ ದರ್ಶನ’ ಕೃತಿ ಮುಟ್ಟುಗೋಲಿಗೆ ಆಗ್ರಹ
(ಆಗಸ್ಟ್ 19 ಬೆಂಗಳೂರಿನಲ್ಲಿ ಬಸವ ಪರ ಸಂಘಟನೆಗಳ ನಡೆಸಿದ ಪತ್ರಿಕಾ ಘೋಷ್ಟಿ – ಪ್ರಜಾವಾಣಿ ವರದಿ )
ಬೆಂಗಳೂರು: ‘ವಚನ ಸಾಹಿತ್ಯ ನಾಶಪಡಿಸುವ ಉದ್ದೇಶದಿಂದ ಪ್ರಜ್ಞಾಪ್ರವಾಹ ಸಂಸ್ಥೆ ಪ್ರಕಟಿಸಿರುವ ‘ವಚನ ದರ್ಶನ’ ಕೃತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು’ ಎಂದು ವಿಶ್ವಗುರು ಬಸವಣ್ಣನವರ ಅನುಯಾಯಿಗಳ ಒಕ್ಕೂಟ ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಓಂಕಾರ್ ಚೊಂಡಿ, ‘ವಚನ ದರ್ಶನ ಪುಸ್ತಕದ ಮುಖಪುಟದಲ್ಲಿ ಬಸವಣ್ಣ ಅವರ ಭಾವಚಿತ್ರವನ್ನು ವಿರೂಪವಾಗಿ ಬಿಂಬಿಸಿದ್ದು, ಅದರಲ್ಲಿ ಬಸವಾದಿ ಶರಣರ ಕುರುಹುಗಳಿಲ್ಲದೆ ಕೇಶಶಿಖಾ ಧ್ಯಾನಾಸಕ್ತ ಭಂಗಿಯ ವಟು, ಬಿಲ್ಲು ಬಾಣ, ತುಳಸಿಕಟ್ಟೆ ಚಿತ್ರಿಸಲಾಗಿದೆ. ಪುಸ್ತಕ ಬಿಡುಗಡೆ ವಿರೋಧಿಸಿ ಮಂಗಳವಾರ ಸ್ವಾತಂತ್ರ್ಯ ಉದ್ಯಾನದಲ್ಲಿ ಮಠಾಧೀಶರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುವುದು’ ಎಂದರು.
ಕೆಚ್ಚೆದೆಯ ಕನ್ನಡಿಗರ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಶ್ರೀನಿವಾಸ್ ಭದ್ರಣ್ಣವರ ಮಾತನಾಡಿ, ‘ಪುಸ್ತಕದಲ್ಲಿ ಲಿಂಗಾಯತ ಧರ್ಮದ ತತ್ವ ಸಿದ್ಧಾಂತಗಳ ವಿರುದ್ಧವಾದ ವಿಚಾರಗಳನ್ನು ಪ್ರಕಟಿಸಲಾಗಿದೆ. ಸರಿಯಾದ ಅಧ್ಯಯನ ನಡೆದಿಲ್ಲ. ಇದರಿಂದ ಜನರಿಗೆ ತಪ್ಪು ಸಂದೇಶ ಹೋಗುತ್ತಿದೆ. ಪುಸ್ತಕವನ್ನು ಯಾರೂ ಖರೀದಿ ಮಾಡಬಾರದು. ವಚನ ಪುಸ್ತಕಗಳ ಬಗ್ಗೆ ಪ್ರಚಾರ ಮಾಡುವ ಉದ್ದೇಶವಿದ್ದರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಕಟಿಸಿರುವ ‘ಸಮಗ್ರ ವಚನ ಸಾಹಿತ್ಯ’ ಪುಸ್ತಕವನ್ನು ಹಂಚಿಕೆ ಮಾಡಲಿ’ ಎಂದು ಸಲಹೆ ನೀಡಿದರು.
ಗೋಷ್ಠಿಯಲ್ಲಿ ಒಕ್ಕೂಟದ ಸಂಜೀವ್ ಕಡಗದ್, ಶಿವಕುಮಾರ್ ಇದ್ದರು.
ವಚನದರ್ಶನ ಪುಸ್ತಕದ ವಿರುದ್ಧ ಬೆಂಗಳೂರಿನಲ್ಲಿ ಆಗಸ್ಟ್ 20 ಪ್ರತಿಭಟನೆ
ಮಂಡ್ಯದಲ್ಲಿ ಆಗಸ್ಟ್ 16ರಂದು ನಡೆದ ಪತ್ರಿಕಾ ಘೋಷ್ಟಿ