‘ಎದೆಯ ಮೇಲೆ ಲಿಂಗ, ಹಣೆಯ ಮೇಲೆ ವಿಭೂತಿ ಹಚ್ಚಿ ಲಿಂಗ ಪೂಜೆ ಮಾಡು’ ಎಂದು ತಮ್ಮ ಮಕ್ಕಳಿಗೆ ಹೇಳಬೇಕಾದ ಪೋಷಕರು ಪ್ರತಿ ಶನಿವಾರ ಶನಿಮಾತ್ಮ ದೇವಸ್ಥಾನಕ್ಕೆ ಹೋಗು ಎಂದು ಬೆಟ್ಟಹಳ್ಳಿ ಮಠದ ಚಂದ್ರಶೇಖರ ಸ್ವಾಮೀಜಿ ಮಂಗಳವಾರ ಹೇಳಿದರು.
ತಾಲ್ಲೂಕಿನ ಚಕ್ರಬಾವಿ ಮರಳುಸಿದ್ದೇಶ್ವರ ಮಠದಲ್ಲಿ ಶಿವರಾತ್ರಿ ರಾಜೇಂದ್ರ ಸ್ವಾಮಿಗಳ ಸ್ಮರಣಾರ್ಥ ನಲವತ್ತಕ್ಕೂ ಹೆಚ್ಚು ವಟುಗಳಿಗೆ ಲಿಂಗಧಾರಣೆ ನೆರವೇರಿಸಿ ಅವರು ಮಾತನಾಡಿದರು.
‘ಲಿಂಗಾಯಿತ ಧರ್ಮವು ಲಿಂಗ ಸಂಸ್ಕಾರಕ್ಕೆ ವಿಶೇಷ ಪ್ರಾಧಾನ್ಯತೆ ನೀಡಿದೆ. ಮಾದೇಶ್ವರ, ಸಿದ್ದಲಿಂಗೇಶ್ವರ, ಎದೆಯ ಮೇಲೆ ಲಿಂಗಧಾರಣೆ ಮಾಡಿದ ಪರಿಣಾಮ ಅವರನ್ನು ನಾವು ಈಗ ಪೂಜೆ ಮಾಡುತ್ತಿದ್ದೇವೆ,’ ಎಂದು ಚಂದ್ರಶೇಖರ ಸ್ವಾಮೀಜಿ ಹೇಳಿದರು.
ಚಕ್ರಬಾವಿ ಮರಳುಸಿದ್ದೇಶ್ವರ ಮಠದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಪ್ರತಿಯೊಬ್ಬ ಲಿಂಗಾಯತ ಎದೆಯ ಮೇಲೆ ಲಿಂಗಧಾರಣೆ ಮಾಡಿಕೊಳ್ಳಬೇಕು.ನಮ್ಮ ಧರ್ಮದ ಆಚರಣೆ, ಸಂಸ್ಕಾರವನ್ನು ಯಾವುದೇ ಕಾರಣಕ್ಕೂ ಬಿಡಬಾರದು ಎಂದು ಕಿವಿಮಾತು ಹೇಳಿದರು.
ಸೂತ್ತೂರು ಮಠದ ಪಂಚಾಕ್ಷರಿ, ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ನಿರ್ದೇಶಕ ಪಟೇಲ್ ಜಗದೀಶ್, ಕೆರೆ ಬೀದಿ ಸಿದ್ದಲಿಂಗಪ್ಪ, ಹಾಲಶೆಟ್ಟಿಹಳ್ಳಿ ಶಿವಪ್ರಸಾದ್, ಚಕ್ರಬಾವಿ ರಾಜಣ್ಣ, ಸಿ.ಮಹೇಶ್, ದೇವರಾಜ್, ಕೆಇಬಿ ಮನು, ವಿಶ್ವ, ಮಹೇಶ್ ಭಾಗವಹಿಸಿದ್ದರು.