ಸಮಾಜದಲ್ಲಿ ವೈಚಾರಿಕ ಪ್ರಜ್ಞೆ ಮೂಡಿಸಿದ ಮಡಿವಾಳ ಮಾಚಿದೇವ: ತಂಗಡಗಿ

ಬಸವ ಮೀಡಿಯಾ
ಬಸವ ಮೀಡಿಯಾ

ಬೆಂಗಳೂರು

ಮನುಷ್ಯನಿಗೆ ದೈಹಿಕ ಮತ್ತು ಮಾನಸಿಕ ಶುಚಿ ಅಗತ್ಯ. ಜೊತೆಗೆ ಪರಿಸರವೂ ಶುಚಿಯಾಗಿರಬೇಕು. ಮಡಿವಾಳ ಮಾಚಿದೇವ ಅಂಥ ದಾರಿ ತೋರಿದವರು. ಕಾಯಕ ಮಾಡುತ್ತಲೇ ವಚನ ರಚಿಸಿ ಹಾಡಿದವರು ಎಂದು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ಎಸ್. ತಂಗಡಗಿ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಿದ್ದ ಮಡಿವಾಳ ಮಾಚಿದೇವರ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಮಡಿವಾಳ‌ ಮಾಚಿದೇವರು ಸಮಾಜದಲ್ಲಿನ ತಾರತಮ್ಯ ಮತ್ತು ಡೋಂಗಿತನವನ್ನು ವಿರೋಧಿಸುವ‌ ಮೂಲಕ ವೈಚಾರಿಕ ಪ್ರಜ್ಞೆಯನ್ನು ಮೂಡಿಸಿದ್ದರು. ಅಂತಹ ವೈಚಾರಿಕ ಪ್ರಜ್ಞೆ ನಮ್ಮಲ್ಲೂ ಬರಬೇಕು,’ ಎಂದು ತಂಗಡಗಿ ಹೇಳಿದರು.

ಇಂದು ಸಮಾಜದಲ್ಲಿ ಜಾತಿಗಳ ನಡುವೆ ಹಾಗೂ ಧರ್ಮಗಳ‌ ನಡುವೆ ಚರ್ಚೆ ಮತ್ತು ಸಂಘರ್ಷ ಹೆಚ್ಚಾಗಿರುವುದು ವಿಪರ್ಯಾಸ. ಇದನ್ನು ಮೀರಿ ಬದುಕುವ ತತ್ವವನ್ನು ಶರಣರು ನಮಗೆ ನೀಡಿದ್ದಾರೆ ಎಂದರು.

ಮುಖ್ಯಮಂತ್ರಿಯವರ ವೈದ್ಯಕೀಯ ಸಲಹೆಗಾರ ಡಾ.ರವಿಕುಮಾರ್, ಮಡಿವಾಳ‌ ಅಭಿವೃದ್ಧಿ ನಿಗಮದ ಅಧ್ಯಕ್ಷ ನಂಜಪ್ಪ, ಸಮುದಾಯದ ಮುಖಂಡ ಗೋಪಾಲ್, ಇಲಾಖೆ ನಿರ್ದೇಶಕಿ ಕೆ.ಎಂ. ಗಾಯಿತ್ರಿ ಉಪಸ್ಥಿತರಿದ್ದರು.

ಬಸವ ಮೀಡಿಯಾ Facebook ಪುಟ ಸೇರಲು ಕ್ಲಿಕ್ ಮಾಡಿ
https://www.facebook.com/basavamedia1/

Share This Article
Leave a comment

Leave a Reply

Your email address will not be published. Required fields are marked *