ಔರಂಗಾಬಾದ್ ಜಿಲ್ಲೆಯ ಕನಂದ ತಾಲೂಕಿನಲ್ಲಿ ದಹೆಗಾಂವ ಗ್ರಾಮದಲ್ಲಿ ಇತ್ತೀಚೆಗೆ ಅನುಭವ ಮಂಟಪ ಕಟ್ಟಡ ಹಾಗೂ ಬಸವಣ್ಣನವರ ಮೂರ್ತಿ ಲೋಕಾರ್ಪಣೆಗೊಂಡಿತು.
ಲಿಂಗಾಯತ ಶರಣ ಫೌಂಡೇಶನ್ ಮುಖಂಡರಾಗಿರುವ ವೀರೇಂದ್ರ ಮಂಗಲಗೆ ಅವರ ಸ್ವಂತ ಖರ್ಚಿನಲ್ಲಿ ಅನುಭವ ಮಂಟಪ ನಿರ್ಮಾಣವಾಗಿದೆ. ದಾಸೋಹಿ ಮಂಗಲಗೆ ಅವರು ಮಹಾರಾಷ್ಟ್ರದಲ್ಲಿ ನಡೆದ ಪ್ರತ್ಯೇಕ ಧರ್ಮ ಮಾನ್ಯತೆಗಾಗಿನ ಪ್ರತಿಯೊಂದು ಹೋರಾಟಗಳಿಗೆ ತಮ್ಮ ತನು ಮನ ಧನ ಸಹಾಯ ಮಾಡಿ ಹೋರಾಟಗಳಿಗೆ ಶಕ್ತಿ ತುಂಬುವ ಕಾರ್ಯ ಮಾಡಿದವರು. ಬಸವಾದಿ ಶರಣರ ತತ್ವ ಪ್ರಚಾರಕ್ಕೆಂದು, ತಮ್ಮ ತಂದೆ ಗುರುಲಿಂಗಪ್ಪ ಮಂಗಲಗೆ ಅವರ ಶತಮಾನೋತ್ಸವದ ಸವಿನೆನಪಿಗಾಗಿ ಅನುಭವ ಮಂಟಪ ನಿರ್ಮಿಸಿರುವುದು ವಿಶೇಷವಾಗಿದೆ. (ವರದಿ/ಚಿತ್ರ ಮಂಜುನಾಥ ಹೂಗಾರ,
ರವೀಂದ್ರ ಹೊನವಾಡ)
ಮಹಾರಾಷ್ಟ್ರದಲ್ಲಿ ಸರ್ವ ಧರ್ಮಗಳಿಗೂ ತೆರೆದುಕೊಂಡ ಹೊಸ ಅನುಭವ ಮಂಟಪ
Leave a comment