“ಮಕ್ಕಳಿಗೆ ಬಸವಾದಿ ಶರಣರ, ಹೂಗಾರ ಮಾದಯ್ಯನವರ ಇತಿಹಾಸ ಕಲಿಸಿ”

ರೋಣ:

ರೋಣ ತಾಲೂಕಿನ ಹೂಗಾರ ಸಮಾಜದ ವತಿಯಿಂದ 12ನೇ ಶತಮಾನದ ಬಸವಾದಿ ಶರಣ ಹೂಗಾರ ಮಾದಯ್ಯನವರ ಜಯಂತಿ ಕಾರ್ಯಕ್ರಮ ಹಾಗೂ ಸರ್ವಸದಸ್ಯರ ಸಭೆ ಶ್ರೀ ಸಿದ್ಧಾರೂಢ ಮಠದ ಆವರಣದಲ್ಲಿ ರವಿವಾರ ನಡೆಯಿತು.

ಸಮಾಜದ ಭಾಂದವರು ಹೂಗಾರ ಮಾದಯ್ಯನವರಂತೆ ಕಾಯಕದ ಮೇಲಿನ ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಜೀವನ ನಡೆಸಬೇಕು ಎಂದು ಸಮಾಜದ ಮಾಜಿ ಜಿಲ್ಲಾಧ್ಯಕ್ಷರಾದ ಶರಣ ಉಮೇಶ ಹೂಗಾರ ಹೇಳಿದರು.

ಸಮಾಜ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ಶರಣ ಶಶಿಧರ ಹೂಗಾರ ಮಾತನಾಡಿ, ಸಮಾಜದ ಬಾಂಧವರು ತಮ್ಮ ತಮ್ಮ ಮಕ್ಕಳಿಗೆ 12 ನೇ ಶತಮಾನದ ಬಸವಾದಿ ಶರಣರ ಬಗ್ಗೆ ಮತ್ತು ಹೂಗಾರ ಮಾದಯ್ಯನವರ ಇತಿಹಾಸ ಬಗ್ಗೆ ತಿಳಿಹೇಳಬೇಕು ಎಂದರು.

ಗಜೇಂದ್ರಗಡ ತಾಲೂಕ ಹೂಗಾರ ಸಮಾಜದ ಪ್ರಧಾನ ಕಾರ್ಯದರ್ಶಿ ಮಂಜುನಾಥ ಹೂಗಾರ ಮಾತನಾಡಿ,
ನಮ್ಮ ಲಿಂಗಾಯತ ಧರ್ಮದ ಎಲ್ಲ ಶರಣರ ಬಗ್ಗೆ, ಕಲ್ಯಾಣ ಕ್ರಾಂತಿಯ ಬಗ್ಗೆ, ಆ ಸಮಯದಲ್ಲಿ ಎಲ್ಲ ಶರಣರು ಅನುಭವಿಸಿದ ಕಷ್ಟ ಮತ್ತು ಹಿಂಸೆಯನ್ನ ನಾವು ಯಾರು ಕೂಡಾ ಮರೆಯಬಾರದು ಎಂದು ಹೇಳಿದರು. ಶರಣ ಹೂಗಾರ ಮಾದಯ್ಯ ಆದಿಯಾಗಿ ತತ್ವ ಸಿದ್ಧಾಂತಕ್ಕಾಗಿ ಶರಣರು ತಮ್ಮ ಜೀವವನ್ನೇ ಕಳೆದುಕೊಂಡಿದ್ದಾರೆ.
ಅದಕ್ಕಾಗಿ ನಾವೆಲ್ಲರೂ ಅವರು ಹಾಕಿಕೊಟ್ಟ ಹಾದಿಯಲ್ಲಿ, ಶರಣರ ತತ್ವ ಸಿದ್ಧಾಂತದಂತೆ ನಡೆದುಕೊಳ್ಳಬೇಕು. ಹಾಗೆ ನಡೆದಾಗಲೇ ಅವರಿಗೆ ನಾವು ಸಲ್ಲಿಸುವ ನಿಜವಾದ ಗೌರವ ಎಂದರು.

ಗದಗ ಜಿಲ್ಲಾ ಅಧ್ಯಕ್ಷರಾದ ಶ್ರೀ ಬಸವರಾಜ ಹೂಗಾರ ಅವರು ಗದಗನಲ್ಲಿ ಕಟ್ಟಲು ಪ್ರಾರಂಭಿಸಿರುವ ಸಮುದಾಯ ಭವನದ ಬೆಳೆವಣಿಗೆ ಬಗ್ಗೆ, ಮುಂದಿನ ಉಳಿದ ಕಟ್ಟಡ ಕೆಲಸದ ಬಗ್ಗೆ ಮಾತಮಾಡಿದರು.

ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಶರಣೆ ಸಾವಿತ್ರಿ ಹೂಗಾರ, ಶರಣ ಹೂಗಾರ ಮಾದಯ್ಯನವರ ಬಗ್ಗೆ ಮತ್ತು ಸಮಾಜದ ಸಂಘಟನೆ ಬಗ್ಗೆ ಒತ್ತಿ ಹೇಳಿದರು.

ಇದೇ ಸಂಧರ್ಭದಲ್ಲಿ ನೂತನವಾಗಿ ರೋಣ ತಾಲೂಕಿನ 17 ಜನ ಪಧಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಈ 17 ಜನರಲ್ಲೇ ಎಲ್ಲ ಪಧಾಧಿಕಾರಿಗಳನ್ನ ತಾವೇ ಸೇರಿಕೊಂಡು ಆಯ್ಕೆ ಮಾಡಬೇಕು ಎಂದು ಜಿಲ್ಲಾ ಅಧ್ಯಕ್ಷರ ಸಮ್ಮುಖದಲ್ಲಿ ನಿರ್ದೇಶನ ನೀಡಲಾಯಿತು.

ವಿವಿಧ ರಂಗದಲ್ಲಿ ಸಾಧನೆ ಮಾಡಿದ ಸಮಾಜದ ಹಿರಿಯರನ್ನು ಸನ್ಮಾನಿಸಲಾಯಿತು.

ರೋಣ ತಾಲೂಕಿನ ಮುಖಂಡರಾದ ಶ್ರೀಶೈಲ ಹೂಗಾರ, ಶಂಕರ ಹೂಗಾರ, ಮಂಟೆಪ್ಪ ಹೂಗಾರ, ಶೇಖಪ್ಪ ಹೂಗಾರ, ಶಿವರಾಜ ಹೂಗಾರ, ಸಂಗಪ್ಪ ಹೂಗಾರ, ಮುತ್ತಣ್ಣ ಹೂಗಾರ, ಹನಮಂತಪ್ಪ ಹೂಗಾರ ಹಾಗೂ ತಾಲೂಕಿನ ಅನೇಕ ಸಮಾಜಬಂಧುಗಳು ಉಪಸ್ಥಿತರಿದ್ದರು.

Share This Article
Leave a comment

Leave a Reply

Your email address will not be published. Required fields are marked *