ಬೆಂಗಳೂರು
ವಿಶ್ವದ ಪ್ರಥಮ ಮಹಿಳಾ ಜಗದ್ಗುರು ಪೂಜ್ಯ ಬಸವಾತ್ಮಜೆ ಮಾತೆ ಮಹಾದೇವಿಯವರ ಸ್ಮರಣೋತ್ಸವ 79 ನೇ ಜಯಂತಿ, 6ನೇ ಲಿಂಗೈಕ್ಯ ಸಂಸ್ಮರಣೆ ಹಾಗೂ ಲಿಂಗಾಯತ ಧರ್ಮ ಸಂಕಲ್ಪ ದಿನ ಮಾರ್ಚ್ 16, ಬೆಳಿಗ್ಗೆ 11ಗಂಟೆಗೆ ಬೆಂಗಳೂರು ಕುಂಬಳಗೋಡು ಬಸವಗಂಗೋತ್ರಿ ಆಶ್ರಮದಲ್ಲಿ ನಡೆಯಲಿದೆ.
ಸಾನಿಧ್ಯವನ್ನು ಕೂಡಲಸಂಗಮ ಬಸವ ಧರ್ಮ ಪೀಠಾಧ್ಯಕ್ಷೆ ಡಾ. ಮಾತೆ ಗಂಗಾದೇವಿ ಹಾಗೂ ತುಮಕೂರು ಸಿದ್ಧಗಂಗಾ ಮಠದ ಅಧ್ಯಕ್ಷರಾದ ಪೂಜ್ಯ ಸಿದ್ಧಲಿಂಗ ಮಹಾಸ್ವಾಮಿಗಳು ವಹಿಸಿಕೊಳ್ಳಲಿದ್ದಾರೆ.
ಸಮ್ಮುಖವನ್ನು ನೆಲಮಂಗಲದ ಪೂಜ್ಯ ಸಿದ್ದಲಿಂಗ ಮಹಾಸ್ವಾಮಿಗಳು, ಬೆಂಗಳೂರಿನ ನಂಜುಂಡ ಮಹಾಸ್ವಾಮಿಗಳು ವಹಿಸಿಕೊಳ್ಳುವರು. ನೇತೃತ್ವವನ್ನು ಬಸವಧರ್ಮ ಪೀಠದ ಜಂಗಮೂರ್ತಿಗಳು ವಹಿಸಲಿದ್ದಾರೆ.
ಉದ್ಘಾಟನೆಯನ್ನು ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ಮಾಡಲಿರುವರು. ಧ್ವಜಾರೋಹಣವನ್ನು ಯಶವಂತಪುರ ಶಾಸಕರಾದ ಎಸ್. ಟಿ. ಸೋಮಶೇಖರ್ ಮಾಡುವರು.
ಅಧ್ಯಕ್ಷತೆಯನ್ನು ಜಾ.ಲಿಂ. ಮಹಾಸಭೆಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶಿವಾನಂದ ಜಾಮದಾರ್ ವಹಿಸುವರು. ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ಹುನಗುಂದ ಶಾಸಕರಾದ ವಿಜಯಾನಂದ ಕಾಶಪ್ಪನವರ ಉಪಸ್ಥಿತರಿರಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಅ.ಭಾ.ವಿ.ಲಿಂ ಮಹಾಸಭಾ ರಾಜ್ಯಾಧ್ಯಕ್ಷ ಶಂಕರ ಬಿದರಿ, ಹಿರಿಯ ನ್ಯಾಯವಾದಿ ಜೈ ರಾಜ್ ಭಾಗವಹಿಸುವರು.
ಅತಿಥಿಗಳಾಗಿ ಶರಣರಾದ ಎನ್. ದೇವರಾಜ್, ಚಿಕ್ಕರಾಜು ಎಂ, ರಹಮತ್ ಕಂಚಗಾರ, ಎಂ. ನಾಗೇಶ, ರಾಜೇಂದ್ರಕುಮಾರ ಗಂದಿಗೆ, ಬಸಂತ್, ಎನ್. ಚಂದ್ರಮೌಳಿ, ಕೆ.ವಿ. ವೀರೇಶ್ ಭಾಗವಹಿಸುವರು.
ಸಮಾರಂಭದಲ್ಲಿ ವಚನ ವೈಭವ ನೃತ್ಯಗಳು, ವಚನ ಗಾಯನ ಜರುಗಲಿವೆ. ಶರಣರತ್ನ ಪ್ರಶಸ್ತಿ ಪ್ರದಾನ ಹಾಗೂ ಗೌರವ ಸತ್ಕಾರ ನಡೆಯುವದು.
16ರ ಬೆಳಿಗ್ಗೆ 10 ಕ್ಕೆ ಧರ್ಮಗುರು ಪೂಜೆ, ಮಾತಾಜಿ ಪೂಜೆ ನಡೆಯುವುದು.
ಮಾರ್ಚ್ 15 ರಂದು ಬೆಳಿಗ್ಗೆ 10ರಿಂದ ಬಸವಾತ್ಮಜೆ ಕ್ರೀಡಾಕೂಟ ಆಯೋಜಿಸಲಾಗಿದ್ದು, ಶರಣ ಬಂಧುಗಳು ಇದರಲ್ಲಿ ಭಾಗವಹಿಸುತ್ತಾರೆ. ಎರಡು ದಿನಗಳ ಕಾಲ ವಸತಿ ಹಾಗೂ ದಾಸೋಹ ಸೇವೆ ಇರುತ್ತದೆ.
ವಿಶ್ವ ಕಲ್ಯಾಣ ಮಿಷನ್, ಬಸವ ಧರ್ಮ ಪೀಠ, ರಾಷ್ಟ್ರೀಯ ಬಸವ ದಳ, ಲಿಂಗಾಯತ ಧರ್ಮ ಮಹಾಸಭಾ ಮತ್ತು ಅಕ್ಕ ನಾಗಲಾಂಬಿಕ ಮಹಿಳಾ ಗಣಗಳು ಈ ಸ್ಮರಣೋತ್ಸವದ ನೇತೃತ್ವ ವಹಿಸಿವೆ.



