ಮರಿಯಾಲ ಮಠದಲ್ಲಿ ನಡೆದ ಸಂಭ್ರಮದ ಬಸವೋತ್ಸವ

ಬಸವ ಮೀಡಿಯಾ
ಬಸವ ಮೀಡಿಯಾ

770 ಬಸವಭಕ್ತರಿಂದ 25 ವಚನಗಳ ಪಠಣ, ಗಾಯನ

ಚಾಮರಾಜನಗರ

ತಾಲೂಕಿನ ಮರಿಯಾಲದ ಮುರುಘರಾಜೇಂದ್ರಸ್ವಾಮಿ ಮಹಾಸಂಸ್ಥಾನ ಶ್ರೀಮಠದಲ್ಲಿ ಡಿಸೆಂಬರ್ 15 ಮತ್ತು 16ರಂದು ‘ಬಸವೋತ್ಸವ’ ಧಾರ್ಮಿಕ ಕಾರ್ಯಕ್ರಮಗಳು ಸಂಭ್ರಮದಿಂದ ನೆರವೇರಿದವು.

15ರ ಬೆಳಿಗ್ಗೆ 6 ಗಂಟೆಗೆ ಶ್ರೀಮಠದ ಪೂಜ್ಯರು ಸುಮಾರು 25 ವಿದ್ಯಾರ್ಥಿಗಳಿಗೆ ಲಿಂಗದೀಕ್ಷೆ ನೀಡಿದರು ಮತ್ತು ಅದರ ತತ್ವಪಾಲನೆ, ಆಚರಣೆಗಳ ಬಗ್ಗೆ ಮಾಹಿತಿಯನ್ನು ಮಕ್ಕಳಿಗೆ ಆಶೀರ್ವಚನದಲ್ಲಿ ನೀಡಿದರು.

ಶ್ರೀ ಇಮ್ಮಡಿ ಮುರುಘರಾಜೇಂದ್ರಸ್ವಾಮಿಗಳ 25ನೇ ವರ್ಷದ ಗುರು ಪಟ್ಟಾಧಿಕಾರ ರಜತ ಮಹೋತ್ಸವದ ಪ್ರಯುಕ್ತ ಶ್ರೀಮಠದ ವಿದ್ಯಾಸಂಸ್ಥೆಯ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಬಸವಭಕ್ತರು ಸೇರಿ ಒಟ್ಟಾರೆ 770 ಬಸವಭಕ್ತರು ವಚನ ಪಠಣದಲ್ಲಿ 25 ವಚನಗಳನ್ನು ಏಕಕಾಲದಲ್ಲಿ ಗಾಯನ ಮಾಡಿದರು.

ಸಂಜೆ 4 ಗಂಟೆಗೆ ಪ್ರಾರಂಭವಾದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ, 25 ಕ್ಷೇತ್ರದ ವಿವಿಧ ಸಾಧಕರನ್ನು ಶ್ರೀಮಠದ ವತಿಯಿಂದ ಶ್ರೀ ಮುರುಘಪ್ರಭೆ ಎಂಬ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ವಿದ್ಯಾಸಂಸ್ಥೆಯ ಶಾಲಾ ಕಾಲೇಜು ಮಕ್ಕಳಿಂದ ವಚನ ನೃತ್ಯ ರೂಪಕ ನಡೆಯಿತು.

ರಾತ್ರಿ 8 ಗಂಟೆಗೆ ಬಸವ ಬೆಳವಿ ಚರಂತೇಶ್ವರ ಮಠದ ಪೂಜ್ಯ ಶರಣಬಸವ ದೇವರು ಒಂದು ಗಂಟೆ ಕಾಲ ಪ್ರವಚನ ಕಾರ್ಯಕ್ರಮ ನಡೆಸಿದರು.

ಇದೇ ಪ್ರವಚನದಲ್ಲಿ ಯರಗಂಬಳ್ಳಿಯ ಷಡಕ್ಷರಿಗಳು ಯಡಿಯೂರು ಸಿದ್ದಲಿಂಗೇಶ್ವರರ ಬಗ್ಗೆ ಹಾಗೂ ಶರಣ ಸಾಹಿತ್ಯ ಅದರ ತತ್ವಾಚರಣೆ, ಧರ್ಮದ ಬಗ್ಗೆ ಸಾಕಷ್ಟು ವಿಚಾರಗಳನ್ನು ಭಕ್ತರಿಗೆ ಆಶೀರ್ವಚನದಲ್ಲಿ ನೀಡಿದರು.

ಕಾರ್ಯಕ್ರಮದಲ್ಲಿ ಕೃಷಿ ಮೇಳ, ವಸ್ತು ಪ್ರದರ್ಶನ, ವಿಜ್ಞಾನ-ಸಾಹಿತ್ಯ ಪ್ರದರ್ಶನ ಆಯೋಜಿಸಿದ್ದು ವಿಶೇಷವಾಗಿತ್ತು.

ಕೃಷಿ ಮೇಳವನ್ನು ಹುಲ್ಲಹಳ್ಳಿ ವಿರಕ್ತ ಮಠದ ಇಮ್ಮಡಿ ಚನ್ನಮಲ್ಲದೇಶಿಕೇಂದ್ರ ಸ್ವಾಮೀಜಿ ಉದ್ಘಾಟಿಸಿದರು. ಕಾರಾಪುರ ವಿರಕ್ತ ಮಠದ ಬಸವರಾಜ ಸ್ವಾಮೀಜಿ ವಸ್ತು ಪ್ರದರ್ಶನ ಉದ್ಘಾಟಿಸಿದರೆ, ಕುಂದೂರು ಮಠದ ಶರಶ್ಚಂದ್ರ ಸ್ವಾಮೀಜಿ ವಿಜ್ಞಾನ-ಸಾಹಿತ್ಯ ಪ್ರದರ್ಶನ ಉದ್ಘಾಟಿಸಿದರು.

ಶಿವ ಶರಣೆಯರ ವೇಷಭೂಷಣ, ಗುರುಪರಂಪರೆ ಭಾವಚಿತ್ರ ಮೆರವಣಿಗೆ, ವಚನ ಸಾಹಿತ್ಯ ಮೆರವಣಿಗೆಯು ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಗ್ರಾಮದ ಪ್ರಮಖ ಬೀದಿಗಳಲ್ಲಿ ನಡೆಯಿತು.

ಇದೇ ಸಂದರ್ಭದಲ್ಲಿ 25 ಮಂದಿ ಸಾವಯುವ ಕೃಷಿಕರನ್ನು ಸನ್ಮಾನಿಸಿ ಗೌರವಿಸಲಾಯಿತು. ರಕ್ತದಾನ ಶಿಬಿರ ನಡೆಯಿತು.

ಇದೇ ಸಂದರ್ಭದಲ್ಲಿ 25 ಮಂದಿ ಸಾವಯುವ ಕೃಷಿಕರನ್ನು ಸನ್ಮಾನಿಸಿ ಗೌರವಿಸಲಾಯಿತು. ರಕ್ತದಾನ ಶಿಬಿರ ನಡೆಯಿತು.

ಮಲ್ಲನ ಮೂಲೆ ಮಠದ ಸ್ವಾಮೀಜಿ, ಮೈಸೂರು ಹೊಸ ಮಠದ ಚಿದಾನಂದ ಸ್ವಾಮೀಜಿ, ಸೋಮಹಳ್ಳಿ ವೀರಸಿಂಹಾಸನ ಮಠದ ಸಿದ್ದಮಲ್ಲ ಸ್ವಾಮೀಜಿ, ಬಸವಗಂಗೋತ್ರಿಯ ಡಾ. ಚನ್ನಬಸವಸ್ವಾಮೀಜಿ, ಬಸವಗುರುಕುಲ ಶಿವಮಠ, ದೊಡ್ಡ ಮರಳವಾಡಿಯ ಮೃತ್ಯುಂಜಯ ಸ್ವಾಮೀಜಿ, ಹಣಕೊಳ ಪಟ್ಟದ ಮಠದ ಚಿದ್ಧನ ಶಿವಾಚಾರ್ಯ ಸ್ವಾಮೀಜಿ, ಮೈಸೂರು ಪಂಚಗವಿ ಮಠದ ಶ್ರೀಕಂಠಸ್ವಾಮೀಜಿ, ಇಮ್ಮಡಿ ಮುರುಘರಾಜೇಂದ್ರ ಸ್ವಾಮೀಜಿ, ಉಪಸ್ಥಿತರಿದ್ದರು.

ಎರಡು ದಿನಗಳ ಕಾರ್ಯಕ್ರಮಗಳಲ್ಲಿ ಸುಮಾರು ಒಂದು ಲಕ್ಷದಷ್ಟು ಬಸವ ಭಕ್ತರು ಶ್ರೀಮಠದಲ್ಲಿ ಪ್ರಸಾದ ಸ್ವೀಕರಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/ILsKluXiq8VG6CRftVzc2g

Share This Article
Leave a comment

Leave a Reply

Your email address will not be published. Required fields are marked *