ಹುಬ್ಬಳ್ಳಿ
ಹಿಂದುತ್ವದ ಕಪಿಮುಷ್ಟಿಯಿಂದ ಲಿಂಗಾಯತ ಯುವಕರನ್ನು ರಕ್ಷಿಸಿಕೊಳ್ಳಲು, ಶರಣ ಪರಂಪರೆಯ ಮೇಲಿನ ಸಾಂಸ್ಕೃತಿಕ ಆಕ್ರಮಣ ಪ್ರತಿರೋಧಿಸಲು ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಮಹತ್ವದ ಸಭೆ ಜನವರಿ 17ರಂದು ಧಾರವಾಡದಲ್ಲಿ ನಡೆಯಲಿದೆ. ಇದು ಅತ್ಯಂತ ಕ್ರಾಂತಿಕಾರ ಹೆಜ್ಜೆ ಈ ಸಭೆಗೆ ಸೇರುವ ಪೂಜ್ಯ ಮಠಾಧೀಶರಲ್ಲಿ ವಿನಯಪೂರ್ವಕವಾಗಿ ನನ್ನ ಮನವಿಯಲ್ಲಿ ಈ ಕೆಳಗಿನಂತೆ ತಿಳಿಸಿರುತ್ತೇನೆ.
1) ಮಠಾಧೀಶರು ಪ್ರತಿ ಸೋಮವಾರ ಮಠದಲ್ಲಿ ಜನತಾದರ್ಶನ ಏರ್ಪಡಿಸಿ ಅವರ ಸಮಸ್ಯೆಗಳಿಗೆ ಲೋಕನೀತಿ ವಚನಗಳ ಮೂಲಕ ಪರಿಹಾರ ಸೂಚಿಸಬೇಕು. (ಲಿಂಗಾಯತರು ಜೋತಿಷಿಗಳಲ್ಲಿ ಹೋಗುವುದನ್ನು ತಪ್ಪಿಸಬಹುದು)
2) ಮಠದ ಶಿಕ್ಷಣ ಸಂಸ್ಥೆಗಳಲ್ಲಿ 10% ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಶಿಕ್ಷಣ ನೀಡುವ ವ್ಯವಸ್ಥೆ ಆಗಬೇಕು. ಇದರಿಂದ ಕಲಿಯುವವರ ಸಂಖ್ಯೆ ಹೆಚ್ಚುತ್ತದೆ.
3) ಮಠದ ಶಿಕ್ಷಣ ಸಂಸ್ಥೆಗಳಲ್ಲಿ ಐಎಎಸ್ ಐಪಿಎಸ್ ಉನ್ನತ ಶಿಕ್ಷಣದ ತರಬೇತಿ ಶಿಬಿರ ಉಚಿತವಾಗಿ ಏರ್ಪಡಿಸಬೇಕು. ಮುಂದೆ ಉದ್ಯೋಗ ಪಡೆದವರು ನಮ್ಮ ಸಮಾಜದ ಆಸ್ತಿಯಾಗುತ್ತಾರೆ
4) ಲಿಂಗಾಯತ ಧರ್ಮೀಯರ ನಡುವೆ ನಡೆಯುವ ವ್ಯಾಜ್ಯಗಳನ್ನು ಕೋರ್ಟ್ ಮೆಟ್ಟಿಲು ಹತ್ತುತ್ತವೆ. ವ್ಯಾಜ್ಯಗಳು ಬಗೆ ಹರಿಯುವುದೆ ಇಲ್ಲ ಮಠದಲ್ಲೇ ಸಮಸ್ಯೆ ಪರಿಹಾರ ಮಾಡಲು ಪ್ರಯತ್ನಿಸಿದರೆ
ಕುಟುಂಬಗಳು ನಾಶವಾಗುವುದು ತಪ್ಪುತ್ತವೆ. (ಮುಸ್ಲಿಮರಲ್ಲಿ ಈ ವ್ಯವಸ್ಥೆ ಇದೆ.)
5) ಮಠದಲ್ಲಿ ಕೋಟ್ಯಾಂತರ ಬೆಲೆ ಬಾಳುವ ಜಮೀನು ಅನ್ಯರ ಪಾಲಾಗಿ ಮಠಕ್ಕೆ ಯಾವುದೇ ರೀತಿ ಆದಾಯ ಬರುತ್ತಿಲ್ಲ ಅಲ್ಲದೆ ಇನ್ನೂ ಸಾಕಷ್ಟು ಜಮೀನು ಖಾಲಿ ಬಿದ್ದಿವೆ ಅದರ ಉಪಯೋಗ ಆಗಬೇಕು. ಆ ಜಾಗೆಯಲ್ಲಿ ಬಡ ಮಕ್ಕಳಿಗೆ ಉಚಿತ ಹಾಸ್ಟೆಲ್ ವ್ಯವಸ್ಥೆ ಮಾಡಬೇಕು ( ಕಟ್ಟಡ ಕಟ್ಟಿಸಲು ದಾಸೋಹಿಗಳು ಸಿಗುತ್ತಾರೆ)
7)ಹಲವಾರು ಮಠಗಳಲ್ಲಿ ಇನ್ನೂ ಸಂಸ್ಕೃತದಲ್ಲಿ ಗದ್ದಿಗೆ ಪೂಜೆ ನಡೆಯುತ್ತಿದೆ ಅದು ನಿಲ್ಲಬೇಕು. ವಚನಗಳಿಂದ ಪೂಜೆ ನಡೆಯಬೇಕು
8) ಮಠಾಧೀಶರು ಪ್ರತಿವಾರ ಒಂದು ಓಣಿಯಲ್ಲಿ ಪಾದಯಾತ್ರೆ ಮಾಡಿ ಧರ್ಮ ಜಾಗೃತಿ ಮಾಡಬೇಕು. ಇದರಿಂದ ಯುವಕರು ದುಷ್ಚಟಕ್ಕೆ ಬೀಳುವುದು ಕಡಿಮೆಯಾಗುತ್ತದೆ
9)ಮಠದಲ್ಲಿ ಪ್ರತಿವಾರ ಸಾಮೂಹಿಕ ಪ್ರಾರ್ಥನೆ ಏರ್ಪಡಿಸಿ ಅದನ್ನು ಪ್ರತಿವಾರವೂ ಒಂದೊಂದು ಓಣಿಯ ಭಕ್ತರು ನಡೆಸಿಕೊಡಬೇಕು. ಇದರಿಂದ ಅನ್ಯ ದೇವರ ಗುಡಿಗೆ ಹೋಗುವುದು ತಪ್ಪುತ್ತದೆ.
10) ಪ್ರತಿ ತಿಂಗಳು ಒಂದು ಗ್ರಾಮದಲ್ಲಿ ಧರ್ಮ ಜಾಗೃತಿ ಪಾದಯಾತ್ರೆ ಮಾಡಬೇಕು ಪಾದಪೂಜೆಯನ್ನು ಮಾಡಿಸಿಕೊಳ್ಳಬಾರದು. ಇದರಿಂದ ಮನುಸಿದ್ಧಾಂತದ ಸಂಘಟನೆಗಳ ಪ್ರಭಾವ ಕಡಿಮೆಯಾಗುತ್ತದೆ
11) ಮಠಾಧೀಶರು ಕಳಸಾರೋಹಣ, ಮೂರ್ತಿ ಪ್ರಾಣ ಪ್ರತಿಷ್ಟಾಪನೆಗೆ ಹೋಗಬಾರದು. ಸೌಹಾರ್ದ ಕಾರ್ಯಕ್ರಮಕ್ಕೆ ಹೋಗಬೇಕು.
12) ಉಚಿತ ವಧುವರರ ವೇದಿಕೆಯನ್ನು ಸಿದ್ಧಪಡಿಸಬೇಕು.
13) ಅಂತರ್ ಜಾತಿ ವಿವಾಹ ಮಾಡಿಕೊಳ್ಳುವವರಿಗೆ ಲಿಂಗ ದೀಕ್ಷೆ ನೀಡಿ ಅವರ ವಿವಾಹವನ್ನು ಮಠದಲ್ಲಿ ಸರಳವಾಗಿ ಮಾಡಬೇಕು. ಇದರಿಂದ ಮರ್ಯಾದಾ ಹತ್ಯೆ ಕಡಿಮೆಯಾಗುತ್ತವೆ.
14) ಮಠಾಧೀಶರು ಯಾವುದೆ ರಾಜಕೀಯ ಪಕ್ಷದೊಂದಿಗೆ ಗುರುತಿಸಿಕೊಳ್ಳಬಾರದು.
15) ಲಿಂಗಾಯತ ಶರಣರು, ಸಾಹಿತಿಗಳು ಚಿಂತಕರಿಗೆ ಅವಮಾನ ಆದರೆ ತಕ್ಷಣ ಪ್ರತಿಕ್ರಿಯೆ ಕೊಟ್ಟು ಪ್ರತಿಭಟಿಸಬೇಕು.
16)ಮಠದಲ್ಲಿ ಸಮಾನತೆ ನಮಬೋಧಿಸಿದ ಮಹಾಪುರುಷರ ಇತಿಹಾಸ ಲೇಖನಗಳ ಲೈಬ್ರರಿ ಇರಬೇಕು
17) ಪ್ರತಿ ವಾರ್ಡನಲ್ಲಿ ಸಾಯಂಕಾಲದ ವಚನ ಪಾಠಶಾಲೆ ಮಾಡ ಬೇಕು. ವಚನ ಕಲಿಸುವವರಿಗೆ ತಿಂಗಳಿಗೆ 1000 ಸಹಾಯಧನ ಕೊಡಬೇಕು ( ಇದಕ್ಕೆ ದಾಸೋಹಿಗಳು ಸಿಗುತ್ತಾರೆ)
ಈ ಎಲ್ಲ ಕಾರ್ಯಗಳನ್ನು ಮಾಡಲು ಸ್ವಯಂ ಸೇವಕರ ಒಂದು ತಂಡ ರಚನೆ ಮಾಡಬೇಕು.
ಇವು ಜಾರಿಗೆ ಬರುತ್ತವೆ ಎನ್ನುವ ವಿಶ್ವಾಸ ನನಗಿದೆ.
ಒಳ್ಳೆಯ ಸಲಹೆಗಳು. ಮಠಾಧೀಶರುಗಳು ಗಂಭೀರವಾಗಿ ಪರಿಗಣಿಸಬೇಕು.