ವಿಜಯಪುರ:
ಒಂದು ವೇಳೆ ಮುಖ್ಯಮಂತ್ರಿ ಬದಲಾವಣೆ ಮಾಡುವ ಅನಿವಾರ್ಯ ಸಂದರ್ಭ ಬಂದರೆ, ಲಿಂಗಾಯತ ನಾಯಕರಾದ ಎಂ.ಬಿ. ಪಾಟಿಲ ಅವರನ್ನು ಮುಖ್ಯಮಂತ್ರಿ ಹುದ್ದೆಗೆ ಪರಿಗಣಿಸಬೇಕೆಂದು ಕೆಪಿಸಿಸಿ ವೈದ್ಯ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಡಾ. ರವಿಕುಮಾರ ಬಿರಾದಾರ ಅವರು ಆಗ್ರಹಿಸಿದ್ದಾರೆ.
ಸೋಮವಾರ ನಡೆದ ಜಂಟಿ ಪತ್ರಿಕಾಗೋಷ್ಟಿಯಲ್ಲಿ ಕಾಂಗ್ರೆಸ್ ವರಿಷ್ಟರನ್ನು ಆಗ್ರಹಿಸಿ ಅವರು ಮಾತನಾಡಿದರು.
2023 ರ ವಿಧಾನಸಭೆ ಚುನಾವಣೆಯಲ್ಲಿ ಅತಿಹೆಚ್ಚು ಅಂದರೆ 35 ಲಿಂಗಾಯತ ಶಾಸಕರು ಆರಿಸಿ ಬಂದಿದ್ದಾರೆ. ಅಲ್ಲದೆ ಕಾಂಗ್ರೆಸ್ ಪಕ್ಷಕ್ಕೆ ಲಿಂಗಾಯತರ ಮತಗಳನ್ನು ಸೆಳೆದು ತರುವಲ್ಲಿ ಎಂ.ಬಿ. ಪಾಟೀಲರು ಯಶಸ್ವಿಯಾಗಿದ್ದಾರೆ. ಆದ್ದರಿಂದ ಲಿಂಗಾಯತರಿಗೆ ಅವಕಾಶ ನೀಡಬೇಕೆಂದು ಅಗ್ರಹಿಸಿದ್ದಾರೆ.
1989ರಲ್ಲಿ ವೀರೇಂದ್ರ ಪಾಟೀಲ ಅವರ ನೇತೃತ್ವದಲ್ಲಿ 178 ಕಾಂಗ್ರೆಸ್ ಶಾಸಕರು ಆರಿಸಿ ಬಂದಿದ್ದರು. ಆ ಗತವೈಭವ ಮರುಕಳಿಸಬೇಕೆಂದರೆ, ಅಲ್ಲದೆ ಲಿಂಗಾಯತರ ಮನಸ್ಸಿನಲ್ಲಿ ಇನ್ನೂ ಸ್ವಲ್ಪ ಬೇರೂರಿರುವ, ಹಿಂದೆ ವೀರೇಂದ್ರ ಪಾಟೀಲರ ಸಂದರ್ಭದಲ್ಲಿ ಲಿಂಗಾಯತರಿಗೆ ಆಗಿದೆ ಎನ್ನಲಾದ ಅನ್ಯಾಯವನ್ನು ಸರಿಪಡಿಸಲು ಇದೊಂದು ಸೂಕ್ತ ಅವಕಾಶ. ಅಲ್ಲದೆ ಒಬ್ಬ ಸಮರ್ಥ ಮುಖ್ಯಮಂತ್ರಿ ಅಭ್ಯರ್ಥಿ ಡಾ. ಪಾಟೀಲರು ಆಗಲಿದ್ದಾರೆ.
ತಮಗೆ ಕೊಟ್ಟಿರುವ ಎಲ್ಲಾ ಖಾತೆಗಳನ್ನು ಅತ್ಯಂತ ಸಮರ್ಥವಾಗಿ ನಿರ್ವಹಿಸುತ್ತಿರುವ ಅತ್ಯಂತ ದಕ್ಷ ಆಡಳಿತಗಾರರಾದ ಬೃಹತ್ ಹಾಗೂ ಮದ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ದಿ ಸಚಿವರು ಎಂ.ಬಿ. ಪಾಟೀಲರಾಗಿದ್ದಾರೆ.
ಎಂ. ಬಿ. ಪಾಟೀಲ ಅವರು 2013-18 ರ ಅವಧಿಯಲ್ಲಿ ನೀರಾವರಿ ಸಚಿವರಾಗಿ ಬರದ ಜಿಲ್ಲೆಯಾದ ವಿಜಯಪುರ ಜಿಲ್ಲೆಯನ್ನು ಒಳಗೊಂಡಂತೆ ಇಡೀ ಉತ್ತರ ಕರ್ನಾಟಕಕ್ಕೆ ನೀರಾವರಿ ಸೌಲಭ್ಯ ಒದಗಿಸಿದ್ದಾರೆ. ಅಲ್ಲದೆ ಕಾವೇರಿ ಸಮಸ್ಯೆಯನ್ನು ಸುಪ್ರೀಂ ಕೊರ್ಟನಲ್ಲಿ ಸಮರ್ಥವಾಗಿ ಪ್ರತಿನಿಧಿಸಿ ಗೆಲುವು ತಂದು ಕೊಟ್ಟಿದ್ದಾರೆ.
ಆದ್ದರಿಂದ ವರಿಷ್ಟರು ಮುಂದೆ ಮುಖ್ಯಮಂತ್ರಿ ಬದಲಾವಣೆ ಸಂದರ್ಭ ಬಂದಾಗ ಒಬ್ಬ ನಿಷ್ಟಾವಂತ ಕಾಂಗ್ರೆಸ್ ಕಟ್ಟಾಳು, ಲಿಂಗಾಯತ ನಾಯಕ ಎಂ.ಬಿ. ಪಾಟೀಲರನ್ನು ಪರಿಗಣಿಸಬೇಕೆಂದು ಬಿರಾದಾರ ಆಗ್ರಹಿಸಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಎಸ್.ಎಂ. ಪಾಟೀಲ ಗಣಿಯಾರ, ಫಯಾಜ ಕಲಾದಗಿ, ವಸಂತ ಹೊನಮೋಡೆ ಉಪಸ್ಥಿತರಿದ್ದರು.
