ಸಾಂಗ್ಲಿ (ಮಹಾರಾಷ್ಟ್ರ);
ಮುಸ್ಲಿಂ, ಮರಾಠ, ಜೈನ, ಲಿಂಗಾಯತ-ಒಳಪಂಗಡದವರೆಲ್ಲ ಕೂಡಿ ಸಾಂಗ್ಲಿ ಮತ್ತು ಮಿರಜ್ ನಗರದಲ್ಲಿ ಬಸವ ಜಯಂತಿ ಆಚರಣೆ ಮಾಡುವುದರ ಮುಖಾಂತರ ದೇಶಕ್ಕೆ ಏಕತೆಯ ಸಂದೇಶವನ್ನು ಸಾರಿದರು.



ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಕೋರಣೇಶ್ವರ ಸ್ವಾಮಿಗಳ ನೇತೃತ್ವದಲ್ಲಿ ವಿವಿಧ ಮುಸ್ಲಿಂ ಸಂಘಟನೆಗಳಿಂದ ಬಸವ ಜಯಂತಿ ಆಚರಣೆ ನಡೆಯಿತು.


ಜಾಗತಿಕ ಲಿಂಗಾಯತ ಮಹಾಸಭೆ ಸಾಂಗ್ಲಿ ಜಿಲ್ಲಾ ಘಟಕ ಮತ್ತು ಯುನೈಟೆಡ್ ಮುಸ್ಲಿಂ ಫೋರಂ, ಯುನಿಟಿ ಸೋಶಿಯಲ್ ಫೌಂಡೇಶನ್, ಆಲ್ ಇಂಡಿಯಾ ಬಹುಜನ ಸಮನ್ವಯ ಸಮಿತಿ, ಭಾರತೀಯ ಸ್ವಾಭಿಮಾನಿ ಸಂಘ ಮತ್ತು ಭಾರತೀಯ ಕರ್ಮಚಾರಿ ಸಂಘಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವಗುರು ಬಸವಣ್ಣನವರ ಜಯಂತಿ ಉತ್ಸವವನ್ನು ಆಚರಿಸಲಾಯಿತು.