“ಮೀಸಲಾತಿ ವಿರೋಧದಿಂದ ವಿಶ್ವೇಶ್ವರಯ್ಯ ಹುದ್ದೆ ಕಳೆದುಕೊಂಡಿದ್ದು”

ಬಸವ ಮೀಡಿಯಾ
ಬಸವ ಮೀಡಿಯಾ

ಬೆಂಗಳೂರು

ಮೈಸೂರು ಸಂಸ್ಥಾನದಲ್ಲಿ ಬ್ರಾಹ್ಮಣೇತರರಿಗೆ ಮೀಸಲಾತಿ ವಿರೋಧಿಸಿದ ಸರ್‌ ಎಂ.ವಿಶ್ವೇಶ್ವರಯ್ಯ ಅವರಿಂದ ರಾಜೀನಾಮೆ ಪಡೆದು, ಗೌರವದಿಂದ ಕಳುಹಿಸಿಕೊಡಲಾಗಿತ್ತು ಎಂದು ವಿಧಾನ ಪರಿಷತ್‌ ಸದಸ್ಯ ಬಿ.ಕೆ.ಹರಿಪ್ರಸಾದ್‌ ಹೇಳಿದರು.

“1918ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಬ್ರಾಹ್ಮಣೇತರರಿಗೂ ತಮ್ಮ ಸಂಸ್ಥಾನದ ಆಡಳಿತದಲ್ಲಿಅವಕಾಶ ಕಲ್ಪಿಸಲು ಮೀಸಲು ತರಬೇಕೆಂದು ಮಿಲ್ಲರ್‌ ಕಮಿಷನ್‌ ರಚಿಸಿದರು. ಕಮಿಷನ್‌ ಬ್ರಾಹ್ಮಣೇತರರಿಗೆ ಶೇ.75ರಷ್ಟು ಮೀಸಲು ನೀಡಲು ಶಿಫಾರಸುಗೊಳಿಸಿ ವರದಿ ನೀಡಿತು. ಇದನ್ನು ವಿರೋಧಿಸಿದ ಸರ್‌ ಎಂ.ವಿಶ್ವೇಶ್ವರಯ್ಯ ಅವರಿಂದ ರಾಜೀನಾಮೆ ಪಡೆದು, ಗೌರವದಿಂದ ಕಳುಹಿಸಿಕೊಡಲಾಯಿತು,” ಎಂದು ತಿಳಿಸಿದರು.

“ಅಂದು ನಾಲ್ವಡಿ ಅವರು ನೀಡಿದ ಮೀಸಲಾತಿಯ ಪರಿಣಾಮ ಇಂದಿಗೂ ಶೂದ್ರರೆಂದೇ ಪರಿಗಣಿಸಿರುವ ಒಕ್ಕಲಿಗರು ಮತ್ತು ಬಸವಾದಿ ಶರಣರು ಎಂದುಕೊಳ್ಳುವ ಲಿಂಗಾಯತರು ಪ್ರಜಾಪ್ರತಿನಿಧಿ ಸಭೆ ಸೇರಿದಂತೆ ಸಂಸ್ಥಾನದ ವಿವಿಧ ಹುದ್ದೆಗಳಲ್ಲಿಅವಕಾಶ ಪಡೆದರು. ಇತರೆ ಸಮುದಾಯಗಳಿಗೆ ಅವಕಾಶ ಸಿಗಲಿಲ್ಲ. ಆದರೆ, ಇಂದಿಗೂ ಜಾತಿಗಣತಿ ವರದಿ ಜಾರಿಗೆ ಒಕ್ಕಲಿಗ ಮತ್ತು ಲಿಂಗಾಯತರೇ ವಿರೋಧ ವ್ಯಕ್ತಪಡಿಸುವುದು ವಿಪರ್ಯಾಸ” ಎಂದು ಬೇಸರ ವ್ಯಕ್ತಪಡಿಸಿದರು.

ಇತ್ತೀಚೆಗೆ ಬೆಂಗಳೂರು ನಗರದ ಶೇಷಾದ್ರಿಪುರಂ ಕಾಲೇಜಿನಲ್ಲಿ ಕೆ.ಎನ್‌.ಲಿಂಗಪ್ಪ ಅವರ ರಚನೆಯ ‘ಮೀಸಲಾತಿಯ ಒಳಮುಖ’ ಪುಸ್ತಕವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

Share This Article
Leave a comment

Leave a Reply

Your email address will not be published. Required fields are marked *