ರೇಣುಕಾಚಾರ್ಯರ ಹೆಸರು ತೆಗೆದ ಶಂಕರ ಬಿದರಿ ವಿರುದ್ಧ ತಿರುಗಿ ಬಿದ್ದ ಸಭಿಕರು

ಎಂ. ಎ. ಅರುಣ್
ಎಂ. ಎ. ಅರುಣ್

“ಇನ್ನು ಮೂರು ನಾಲ್ಕು ವರ್ಷಗಳಲ್ಲಿ ‘ವೀರಶೈವ’ ಅನ್ನೋ ಪದ ಹೋಗಿ, ‘ಲಿಂಗಾಯತ’ ಅನ್ನೋ ಒಂದೇ ಪದ ಉಳಿಯಬೇಕು,” ಎಂದು ಗೊರುಚ ಹೇಳಿದರು.

ಬೆಂಗಳೂರು

ಇಂದು ನಗರದಲ್ಲಿ ನಡೆದ ‘ವಚನ ದರ್ಶನ ಮಿಥ್ಯ-ಸತ್ಯ’ ಪುಸ್ತಕದ ಬಿಡುಗಡೆ ಸಮಾರಂಭದಲ್ಲಿ ವೀರಶೈವ ಮಹಾಸಭಾ ಅಧ್ಯಕ್ಷ ಶಂಕರ ಬಿದರಿ ಸಭಿಕರ ಆಕ್ರೋಶಕ್ಕೆ ಗುರಿಯಾಗಿ ಕೆಲವು ನಿಮಿಷಗಳು ಭಾಷಣ ನಿಲ್ಲಿಸಬೇಕಾಯಿತು.

ಅವರ ಭಾಷಣಕ್ಕೆ ಜೋರಾದ ದನಿಯಿಂದ ಆಕ್ಷೇಪವೆತ್ತಿ ಎದ್ದು ನಿಂತ ಸಭಿಕರನ್ನು ಮತ್ತೆ ಕೂರಿಸಲು ಆಯೋಜಕರು ಪ್ರಯಾಸ ಪಡಬೇಕಾಯಿತು. ಬಿದರಿ ಕೂಡ ಭಾಷಣ ನಿಲ್ಲಿಸಿ ಸಿಟ್ಟಾದ ಸಭಿಕರನ್ನು ಸಮಾಧಾನ ಪಡಿಸಲು ಹಲವಾರು ಬಾರಿ ಪ್ರಯತ್ನಿಸಿ, ತಮ್ಮ ಮಾತನ್ನು ‘ಒಪ್ಪಿಕೊಳ್ಳದಿರುವ ಸ್ವಾತಂತ್ರ್ಯ ನಿಮಗೆ ಕೊಡುತ್ತೇನೆ’ ಎಂದು ಹೇಳಿದರು.

ವಿವಾದದ ನಂತರ ತಮ್ಮ ಭಾಷಣವನ್ನು ಮುಕ್ತಾಯಗೊಳಿಸುತ್ತಾ ಬಿದರಿಯವರು ಇನ್ನು ನಾಲ್ಕು ವರ್ಷಗಳಲ್ಲಿ ಹಿರಿಯರಾದ ಶಾಮನೂರು ಶಿವಶಂಕರಪ್ಪ ಅವರ ನೇತೃತ್ವದಲ್ಲಿ ಎಲ್ಲ ಲಿಂಗಾಯತ ಸಂಘಟನೆಗಳು ಒಂದೇ ಷಟ್ಸ್ಥಲ ಧ್ವಜದ ಅಡಿಯಲ್ಲಿ ಒಂದಾಗಬೇಕೆಂಬ ಆಶಯ ವ್ಯಕ್ತ ಪಡಿಸಿದರು.

ಅವರ ಭಾಷಣವನ್ನು ಜಾಗತಿಕ ಲಿಂಗಾಯತ ಮಹಾಸಭಾದ ಎಸ್ ಎಂ ಜಾಮದಾರ್ ವೇದಿಕೆಯಿಂದಲೇ ನೇರವಾಗಿ ಖಂಡಿಸಿದರು. ಗೊ ರು ಚನ್ನಬಸಪ್ಪ, ತೋಂಟದಾರ್ಯ ಮತ್ತು ಭಾಲ್ಕಿ ಶ್ರೀಗಳು ಕೂಡ ತೀಕ್ಷ್ಣವಾಗಿ ವೇದಿಕೆಯಿಂದಲೇ ಖಂಡಿಸಿದರು. ವೇದಿಕೆಯಲ್ಲಿ ಮುಂದಿನ ಸಾಲಿನಲ್ಲಿಯೇ ಕುಳಿತ್ತಿದ್ದ ಮಿಥ್ಯ-ಸತ್ಯಪುಸ್ತಕದ ಸಂಪಾದಕ ಟಿ ಆರ್ ಚಂದ್ರಶೇಖರ್ ಬಿದರಿ ಭಾಷಣವನ್ನು ಪ್ರತಿಭಟಿಸಿ ಎದ್ದು ನಡೆದರು.

ಬಿದರಿ ಭಾಷಣವನ್ನು ಜಾಗತಿಕ ಲಿಂಗಾಯತ ಮಹಾಸಭಾದ ಎಸ್ ಎಂ ಜಾಮದಾರ್ ವೇದಿಕೆಯಿಂದಲೇ ನೇರವಾಗಿ ಖಂಡಿಸಿದರು.

ಬಿದರಿ ಹೇಳಿದ್ದೇನು

ಬಿದರಿ ತಮ್ಮ ಭಾಷಣದಲ್ಲಿ 770 ಬಸವಾದಿ ಶರಣರ ಜಯಂತಿಯನ್ನು ಪ್ರತ್ಯೇಕವಾಗಿ ಆಚರಿಸಲು ಕಾಯಕ ಜೀವಿಗಳಾದ ಲಿಂಗಾಯತರಿಗೆ ಕಷ್ಟವಾಗುತ್ತದೆ. ಅದಕ್ಕೆ ಈ ವರ್ಷದಿಂದ ಎಲ್ಲಾ ಶರಣರ ಜಯಂತಿಯನ್ನು ಬಸವ ಜಯಂತಿಯಂದೇ ಸಾಮೂಹಿಕವಾಗಿ ಆಚರಿಸಬೇಕೆಂದು ಕರೆ ಕೊಟ್ಟರು.

ಅದಕ್ಕೆ ತಾವು ಎಲ್ಲಾ ಶರಣರ ಭಾವಚಿತ್ರಗಳನ್ನು ಮುದ್ರಿಸಿ ವೀರಶೈವ ಮಹಾಸಭಾದ ಜಿಲ್ಲಾ ಘಟಕಗಳಿಗೆ ಕಳಿಸುತ್ತಿದ್ದೇವೆಂದು ಹೇಳಿ, ಮುದ್ರಣ ಮಾಡಬೇಕೆಂದಿರುವ ಕೆಲವು ಶರಣರ ಹೆಸರುಗಳನ್ನು ಒಂದೊಂದಾಗಿ ಹೇಳಲು ಶುರು ಮಾಡಿದರು.

ಬಸವಣ್ಣ, ಅಲ್ಲಮ ಪ್ರಭು, ಅಕ್ಕ ಮಹಾದೇವಿ, ಹೇಮರೆಡ್ಡಿ ಮಲ್ಲಮ್ಮ, ಮಾದಾರ ಚನ್ನಯ್ಯ, ಸಿದ್ದರಾಮೇಶ್ವರ, ಜೇಡರ ದಾಸಿಮಯ್ಯ…

ಹೀಗೆ ಹೇಳುತ್ತಾ ‘ಆದಿ ಗುರು ರೇಣುಕಾಚಾರ್ಯರ ಭಾವಚಿತ್ರವನ್ನೂ ಮಾಡಿಸಿ ಕೊಡ್ತೀನಿ’ ಎಂದು ಹೇಳಿದರು.

ಸಭೆಯಲ್ಲಿ ಕೋಲಾಹಲ ಸೃಷ್ಟಿಸಿದ್ದು ಈ ಹೇಳಿಕೆ. ಅಲ್ಲಿದ್ದ ಬಸವ ಭಕ್ತರು ಎದ್ದು ನಿಂತು ವೇದಿಕೆಯತ್ತ ಧಾವಿಸುವಂತೆ ಮಾಡಿದ್ದೂ ಈ ಹೇಳಿಕೆ.

‘ಆದಿ ಗುರು ರೇಣುಕಾಚಾರ್ಯರ ಭಾವಚಿತ್ರವನ್ನೂ ಮಾಡಿಸಿ ಕೊಡ್ತೀನಿ’ ಎಂದು ಬಿದರಿ ಹೇಳಿದರು.

ಬಿದರಿ ಭಾಷಣ ಮುಗಿಸುವುದನ್ನೇ ಕಾಯುತ್ತಿದ್ದ ಜಾಮದಾರ್ ಸಿಟ್ಟಿನಿಂದ ತಕ್ಷಣವೇ ಮೈಕ್ ತೆಗೆದುಕೊಂಡು ತಮ್ಮ ಪ್ರತಿಕ್ರಿಯೆ ನೀಡಿದರು.

ರೇಣುಕಾಚಾರ್ಯರ ಹೆಸರು ಹೇಳದೆಯೇ ‘ವೀರಶೈವ ಹೆಸರು ದುರ್ಬಳಕೆ ಮಾಡಿಕೊಂಡು ಒಳಗೆ ಬಂದು ಮತ್ತೆ ವೇದ ಆಗಮ ಅಂತ ಶುರು ಮಾಡಿದರೆ ನೀವು (ಸಮಾಜದ ಒಡಕಿಗೆ) ಕಾರಣರಾಗ್ತೀರಿ,” ಎಂದು ಖಡಕ್ ಎಚ್ಚರಿಕೆ ನೀಡಿದರು.

ಬದಲಾದ ಸಭೆಯ ವಾತಾವರಣ

ಬಿದರಿ ಭಾಷಣ ಸಭೆಯ ವಾತಾವರಣವನ್ನು ಸಂಪೂರ್ಣವಾಗಿ ಬದಲಾಯಿಸಿತು. ಅಲ್ಲಿಯವರೆಗೆ ಹಾವು ಮುಂಗುಸಿಯಂತೆ ಇರುವ, ಏಕ ವಚನದಲ್ಲಿಯೇ ಪರಸ್ಪರ ತಾರೀಫು ಮಾಡಿಕೊಳ್ಳುವ ಸಮುದಾಯದ ಎರಡು ದೊಡ್ಡ ಸಂಘಟನೆಗಳು ಒಂದೇ ವೇದಿಕೆಯನ್ನು ಹಂಚಿಕೊಳ್ಳುತ್ತಿದ್ದು ಎಲ್ಲರಲ್ಲಿಯೂ ಒಂದು ಹೊಸ ಒಗ್ಗಟ್ಟಿನ ಸಂಭ್ರಮ ಮೂಡಿಸಿತ್ತು.

ಬಿದರಿ ಭಾಷಣದ ನಂತರ ಈ ಸಂಭ್ರಮ ಬಂದ ವೇಗದಲ್ಲಿಯೇ ಮಾಯವಾಯಿತು. ನಂತರ ಮಾತನಾಡಿದವರು ಶಿಷ್ಟಾಚಾರ ಬದಿಗಿಟ್ಟು ಬಿದರಿಯವರ ಮೊಂಡು ವೀರಶೈವವಾದಕ್ಕೆ ಮುಚ್ಚುಮರೆಯಿಲ್ಲದೆ ತಮ್ಮ ಪ್ರತಿಕ್ರಿಯೆ ನೀಡಿದರು.

ಹಿರಿಯ ಸಾಹಿತಿ ಗೊ ರು ಚನ್ನಬಸಪ್ಪ ಬಿದರಿ ಹೇಳಿದಂತೆ ಲಿಂಗಾಯತರೆಲ್ಲ ಒಗ್ಗಾಟಾಗಬೇಕು ಎಂದು ಹೇಳುತ್ತಾ “ಇನ್ನು ಮೂರು ನಾಲ್ಕು ವರ್ಷಗಳಲ್ಲಿ ‘ವೀರಶೈವ’ ಅನ್ನೋ ಪದ ಹೋಗಿ, ‘ಲಿಂಗಾಯತ’ ಅನ್ನೋ ಒಂದೇ ಪದ ಉಳಿಯಬೇಕು,” ಎಂದು ನೇರವಾಗಿ ಹೇಳಿದರು.

ಗೊರುಚ ಅವರನ್ನು ಅನುಮೋದಿಸಿ ಗದಗಿನ ಪೂಜ್ಯ ತೋಂಟದಾರ್ಯ ಶೀಗಳು ‘ವೀರಶೈವ’ ಶೈವದ ಶಾಖೆ, ಬಸವಾದಿ ಶರಣರಿಗೆ ಸಂಬಂಧಿಸಿದ ಪದವಲ್ಲ, ಎಂದರು.

ವೀರಶೈವ ಪದ ಬೇಕು ಎನ್ನುವ ಕೆಲವು ಲಿಂಗಾಯತರಿಗೆ ಅದು ಅಸ್ತಿತ್ವದ ಪ್ರಶ್ನೆಯಾಗಿದೆ.
ಅವರಲ್ಲಿ ಸ್ವಾರ್ಥವಿದೆ, ಸಮಾಜದ ಹಿತವಿಲ್ಲ. ಇದನ್ನು ಅಖಿಲ ಭಾರತ ವೀರಶೈವ ಮಹಾಸಭಾ ತಿಳಿದುಕೊಂಡು ಕೆಲವೇ ವ್ಯಕ್ತಿಗಳ ಸ್ವಾರ್ಥಕ್ಕೆ ಹೋರಾಡುವುದನ್ನು ನಿಲ್ಲಿಸಿ ಸಮಾಜದ ಹಿತಕ್ಕಾಗಿ ಹೋರಾಟ ಮಾಡಬೇಕು, ವೀರಶೈವ ಪದವನ್ನು ಬಿಡಬೇಕು ಎಂದು ಹೇಳಿದರು.

ವೀರಶೈವ ಮಹಾಸಭಾ ಕೆಲವೇ ವ್ಯಕ್ತಿಗಳ ಸ್ವಾರ್ಥಕ್ಕೆ ಹೋರಾಡುವುದನ್ನು ನಿಲ್ಲಿಸಿ ಸಮಾಜದ ಹಿತಕ್ಕಾಗಿ ಹೋರಾಟ ಮಾಡಬೇಕು, ವೀರಶೈವ ಪದವನ್ನು ಬಿಡಬೇಕು

ಭಾಲ್ಕಿಯ ನಾಡೋಜ ಬಸವಲಿಂಗ ಪಟ್ಟದೇವರು ಸ್ವತಂತ್ರ ಲಿಂಗಾಯತ ಧರ್ಮಕ್ಕೆ ಮಾನ್ಯತೆ ಸಿಗುವಲ್ಲಿ ವೀರಶೈವ ಮಹಾಸಭಾವೇ ದೊಡ್ಡ ತೊಡಕಾಗಿದೆ ಎಂದು ಹೇಳಿದರು.

ವೇದಿಕೆಯಲ್ಲಿದ್ದ ಗಣ್ಯರೊಬ್ಬರು ಪೌರಾಣಿಕ ವ್ಯಕ್ತಿ ರೇಣುಕಾಚಾರ್ಯರನ್ನು ಬಸವಣ್ಣನವರ ಗುರುವಾಗಿಸುವ ಕುತಂತ್ರ ಶತಮಾನಗಳಿಂದ ನಡೆದಿದೆ. ಇದರ ಬಗ್ಗೆ ಲಿಂಗಾಯತರಲ್ಲಿ ಬಹಳ ಸಿಟ್ಟಿದೆ.

ರೇಣುಕಾಚಾರ್ಯ ಕಾಲ್ಪನಿಕ ವ್ಯಕ್ತಿ. ಅವರನ್ನು ಬಸವ ಜಯಂತಿಗೆ ಜೋಡಿಸುವ ಪ್ರಯತ್ನ ಯಾರೂ ಸಹಿಸಲು ಸಾಧ್ಯವಿಲ್ಲ.

ಇಂತಹ ಕಾಲ್ಪನಿಕ ವ್ಯಕ್ತಿಯನ್ನು ಬಸವ ಜಯಂತಿಗೆ ಜೋಡಿಸುವ ಪ್ರಯತ್ನ ಯಾರೂ ಸಹಿಸಲು ಸಾಧ್ಯವಿಲ್ಲ. ಸಭೆಯಲ್ಲಿದ್ದ ಗಣ್ಯರು ಮುಚ್ಚು ಮರೆಯಿಲ್ಲದೆ ಮಾತನಾಡಲು ಇದೇ ಕಾರಣ, ಎಂದು ಹೇಳಿದರು.

ವೇದಿಕೆಯಲ್ಲಿದ್ದ ಪೂಜ್ಯರೊಬ್ಬರು ಬಿದರಿಯವರು ಶಂಕರ ಮಠಕ್ಕೆ, ಮಂತ್ರಾಲಯಕ್ಕೆ ತಾವು ಮಾಡಿರುವ ಸೇವೆಯನ್ನು ಇಲ್ಲಿ ಸ್ಮರಿಸಿಕೊಳ್ಳುವ ಅವಶ್ಯಕತೆಯಿರಲಿಲ್ಲ. ಆದರೂ ಅವರ ಭಾಷಣದಲ್ಲಿ ಕೆಲವು ಒಳ್ಳೆಯ ಅಂಶಗಳಿದ್ದವು. ಮಠಗಳಲ್ಲಿ ವಚನ ಪರಂಪರೆಯನ್ನು ಗಟ್ಟಿಗೊಳಿಸುವ ಬಗ್ಗೆ, ಸಂಸ್ಕೃತದ ಬದಲು ಕನ್ನಡದಲ್ಲಿ ಪೂಜೆಯನ್ನು ಜನಪ್ರಿಯಗೊಳಿಸುವ ಬಗ್ಗೆ ಬಿದರಿ ಚೆನ್ನಾಗಿ ಮಾತನಾಡಿದರು.

ಆದರೆ ಒಂದು ಮಾತಿಗೇಡಿತನದ ಹೇಳಿಕೆಯಿಂದ ಇಡೀ ಭಾಷಣವೇ ಎಲ್ಲರಲ್ಲಿ ಆಕ್ರೋಶ ಮೂಡಿಸಿದೆ ಎಂದು ಪೂಜ್ಯರು ಹೇಳಿದರು.

Share This Article
13 Comments
  • ಶಂಕರಬಿದರಿಯವರು ಜಾಣಪೆದ್ದಾಟವನ್ನ ಯಾಕೆ ಮಾಡಿದರು ತಿಳಿಯದು. ಇಂತವರಿಂದಲೇ ಲಿಂಗಾಯತ ಜನಸಾಮಾನ್ಯರಿಗೆ ಅನ್ಯಾಯವಾಗುತ್ತಿದೆ. ಇವರುಗಳು ಹೇಗೋ ಶ್ರೀಮಂತಿಕೆಯನ್ನ ಪಡೆದುಕೊಂಡಿದ್ದಾರೆ ಆದರೆ ಲಿಂಗಾಯತರಲ್ಲಿನ ಬಡತನವನ್ನ ದೂರ ಮಾಡಲು ಶ್ರಮಿಸದೆ ಪಂಚಪೀಠದವರ ಅನುಯಾಯಿಗಳಂತೆ ರೇಣುಕಾಚಾರ್ಯರ ಹೆಸರನ್ನ ಯಾಕೆ ಪ್ರಸ್ತಾಪ ಮಾಡಿದರೆಂದು ಅವರ ಜಾಣಕುರುಡುತನಕ್ಕೆ ಏನು ಹೇಳಬೇಕು ತಿಳಿಯದು

  • ಸಂಘಟನೆ ಮಾಡಲು ನಾವೆಲ್ಲರೂ ವಿಶಾಲವಾದ ಮನಸ್ಸು ಇರಬೇಕು ಅಣ್ಣ ಬಸವಣ್ಣ ನವರು ಅಂದು ಸವ೯ ಕಾಯಕಯೋಗಿಗಳನ್ನು ಒಂದೇ ವೇದಿಕೆಯಲ್ಲಿ ಸಂಘಟಣೆ ಮಾಡಿದರು ಇವನಾರವ ಇವನಾರವ ಎಂದೆನನಿಸದಿರಯ್ಯ ಇವ ನಮ್ಮವ ಇವ ನಮ್ಮವ ಎಂದೆನಿಸಯ್ಯ ನಿಮ್ಮ ಮನೆಯ ಮಗ ನೆಂದೆಸಯ್ಯ ಕೂಡಲ ಸಂಗಮ ದೇವ ಅನ್ನುತ್ತಿ ಎಲ್ಲರನ್ನೂ ಅನುಭವ ಮಂಟಪ ಕ್ಕೆ ಕರೆದು ಲಿಂಗಾಯತ ಧರ್ಮ ಸ್ಥಾಪನೆ ಮಾಡಿಕೊಟ್ಟರು ಎಂಬುದನ್ನು ನಾವು ನೆನಪಿಸಿಕೊಳ್ಳತ್ತೇವೆಐ

    • ಶಂಕರ್ ಬಿದರಿ ಅವರಾಗಲಿ, ಕೆಲವು ಪಂಚಪೀಠಗಳಾಗಲಿ ಬಸವಣ್ಣನವರ ಕೆಲವು ವಚನಗಳನ್ನು ಹೇಳಿ ಜನರಿಗೆ ಅದರಲ್ಲೂ ಲಿಂಗಾಯತರಿಗೆ ಮೂರ್ಖರನ್ನಾಗಿ ಮಾಡಲು ಪ್ರಯತ್ನ ಪಡುತ್ತಿದ್ದಾರೆ ಇಂಥವರಿಗೆ ಮೊದಲೇ ವೇದಿಕೆಗೆ ಔಹಾನಿಸಬಾರದು. ಲಿಂಗಾಯತ ಸ್ವತಂತ್ರ ಧರ್ಮ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ…..

  • ಶಂಕರ ಬಿದರಿಯವರು ಕೊನೆಯಲ್ಲಿ ಈ platform ಉಪಯೋಗಿಸುತ್ತ ಇದ್ದೇನೆ ಅಂತ ಹೇಳುವದು ನೋಡಿದರೆ , ಮುಂಚಿತವಾಗಿ plan ಮಾಡಿಕೊಂಡು ಬಂದಿದ್ದಾರೆ ಎಂದು ತಿಳಿಯುತ್ತದೆ .. ಇಂಥವರಿಗೆ ಲಿಂಗಾಯಿತ ಸಮಾಜ ಮನೆ ಹಾಕಬಾರದು.

  • ಶಂಕರ ಬಿದರಿಯವರು ತಿಳಿದವರು. ಓದಿ ಕೊಂಡವರು. ಉನ್ನತ ಹುದ್ದೆಯಲ್ಲಿ ದೇಶ ಸೇವೆಯನ್ನ ಮಾಡಿದವರು. ಆದರೂ ಅವರಿಗೆ ಲಿಂಗಾಯತ ಧರ್ಮ ಏಕೆ ಅರ್ಥ ಆಗುತ್ತಿಲ್ಲ. ಆದರೂ ಅವರು ಒಂದು ವ್ಯವಸ್ಥೆಯ ಭಾಗವಾಗಿ ಪ್ರತಿಪಾದನೆಯನ್ನು ಮಾಡುವಾದನ್ನ ನೋಡಿದರೆ ಕನಿಕರ ಅನಿಸುತ್ತೆ. ಎಲ್ಲಾ ಅಹಂ ಬಿಟ್ಟು, ಸತ್ಯವನ್ನು ಅರಿತು ಒಪ್ಪಿಕೊಂಡು ಲಿಂಗಾಯತ ಧರ್ಮವನ್ನು ಅಪ್ಪಿಕೊಳ್ಳ ಬೇಕು. ಅವರಿಗೆ ತಿಳಿವಳಿಕೆ ಇಲ್ಲವೇ

    • ರೇಣುಕಾಚಾರ್ಯ ಶೈವ ಪರಂಪರೆಯ (ಪೌರಾಣಿಕ ಹಿನ್ನೆಲೆಯ) ಕಾಲ್ಪನಿಕ ವ್ಯಕ್ತಿ. ಬಸವಾದಿ ಶರಣರು ಐತಿಹಾಸಿಕ ವ್ಯಕ್ತಿಗಳು, ಅಂದಿನ ಸಮಾಜದಲ್ಲಿ ಜಾರಿಯಲ್ಲಿದ್ದ ಸಾಮಾಜಿಕ ಅನಿಷ್ಟಗಳ ವಿರುದ್ಧ ಹೋರಾಡಿ ಕ್ರಾಂತಿಯನ್ನೇ ಮಾಡಿದವರು. ಕನ್ನಡ ನಾಡಿನಲ್ಲಿ ಲಿಂಗಾಯತವೆಂಬ ಹೊಸದೊಂದು ಧರ್ಮದ ಹುಟ್ಟಿಗೆ ಕಾರಣರಾದವರು. ವೀರಶೈವವು ಸಪ್ತ ಶೈವಗಳಲ್ಲಿ ಒಂದಾದರೂ ಆ ಶೈವ ಪ್ರಬೇಧವೇ ಬೇರೆ, ಲಿಂಗಾಯತವೇ ಬೇರೆ. ಹನ್ನೆರಡನೇ ಶತಮಾನದಲ್ಲಿ ಈ ಶೈವ ಪರಂಪರೆಗಳು ಲಿಂಗಾಯತ ಧರ್ಮದಲ್ಲಿ ತಾವಾಗಿಯೇ ಬಂದು ಲೀನವಾದವು. ಕಲ್ಯಾಣ ಕ್ರಾಂತಿಯ ನಂತರ ಈ ಶೈವರು ತಮ್ಮ ಹಳೆಯ ಸಂಪ್ರದಾಯಗಳನ್ನೇ ಆಚರಿಸಿಕೊಂಡು ಬರುತ್ತಿದ್ದಾರೆ. ಇದೇ ಭಿನ್ನಾಭಿಪ್ರಾಯ ಭೂತವಾಗಿ ಲಿಂಗಾಯತ ಧರ್ಮಕ್ಕೆ ತೊಡರುಗಾಲಾಗಿ ಪರಿಣಮಿಸಿದೆ.

  • ನೀಲಕಂಠ ಗೌಡ ಪಾಟೀಲ ,ಗಡ್ಡಿಕರವಿನಕೊಪ್ಪ, ಬೈಲಹೊಂಗಲ ತಾಲೂಕ್. says:

    ಓಂ ಶ್ರೀ ಗುರು ಬಸವ ಲಿಂಗಾಯ ನಮಃ 🙏🙏🙏
    ಜೈ ಗುರು ಬಸವ ಜೈ ಲಿಂಗಾಯತ ❤️❤️❤️

    • ಲಿಂಗಾಯತ ಎಂಬುದು ಶೂದ್ರರಿಂದ ಕಟ್ಟಲ್ಪಟ್ಟ ಶರಣ ಸಂಸ್ಕೃತಿ. ಲಿಂಗಾಯತ ಎಂಬುದು ಜಾತಿಯಲ್ಲ ಒಂದು ಧರ್ಮ. ವೈದಿಕ ಆಚಾರಗಳನ್ನು ವಿರೋಧಿಸಿ ನಿಂತಂತಹ ಹೆಮ್ಮರ. ಅದಕ್ಕೆ ವೀರಶೈವ ಎಂಬುದು ಹೇಗೆ attach ಆಯ್ತೋ ಆಶ್ಚರ್ಯ ಮತ್ತು ಹುನ್ನಾರ. ಬಸವಣ್ಣ ಕಟ್ಟಿದ ಧರ್ಮ ಲಿಂಗಾಯತ ಮಾತ್ರ.

  • ಲಿಂಗಾಯತಕ್ಕೆ ಯಾವ ಸಂಬಂಧವೂ ಇರದ ಕಾಲ್ಪನಿಕ ವ್ಯಕ್ತಿ ರೇಣುಕಾಚಾರ್ಯರನ್ನು ಬಸವಣ್ಣನವರ ಜೊತೆ ಸೇರಿಸುವ ತಂತ್ರ ಮೊದಲಿನಿಂದಲೂ ನಡೆದಿದೆ. ಲಿಂಗಾಯತ ವೇದಿಕೆ ಬಳಸಿಕೊಂಡು ಬಹಿರಂಗವಾಗಿಯೆ ಬಿದರಿ ಹೇಳಿದರು

    • ಶರಣ ಶಂಕರ ಬಿದರಿಯವರು ಬಸವಾನುಯಾಯಿ ಅನ್ನುವುದರಲ್ಲಿ ಯಾರು ಸಂಶಯ ಪಡಬಾರದು. ಅವರು ವೀರಶೈವ ಮಹಾಸಭೆಯಲ್ಲಿರತಕ್ಕ ಲಿಂಗಾಯತರು. ಅಲ್ಲಿರುವ ಲಿಂಗಾಯತರ ಒತ್ತಡದಮೇಲೆ ರಾಜ್ಯಾಧ್ಯಕ್ಷರಾಗಿದ್ದಾರೆ.ಅವರು ನಮ್ಮ ಅಹ್ವಾನದ ಮೇಲೆ ಅತಿಥಿಯಾಗಿ ಬಂದು ನಮ್ಮ ಕೈಜೋಡಿಸಿದರು. ಅವರ ಸಂಪೂರ್ಣ ಮಾತು ಲಿಂಗಾಯತಮಯ ಆಗಿತ್ತು. ಅವರು ಲಿಂಗಾಯತ ಧರ್ಮವನ್ನು ಮಾತ್ರ ಉಚ್ಚರಿಸಿದರು. ಎಲ್ಲೂ ವೀರಶೈವ ವಾಗಲಿ,ವೀರಶೈವ ಲಿಂಗಾಯತವಾಗಲಿ ಉಚ್ಚರಿಸಲಿಲ್ಲ. ೧೯೦೫ ರಲ್ಲಿ ಆದ ತಪ್ಪನ್ನು ಬಿದರಿ,ಶ್ಯಾಮನೂರು ಶಿವಶಂಕರಪ್ಪ, ಈಶ್ವರ ಖಂಡ್ರೆ ಸರಿಮಾಡಲು ಪ್ರಯತ್ನಿಸುತ್ತಿದ್ದಾರೆ. ಸದ್ಯದಲ್ಲೇ ಅಂದರೆ ಕೆಲವೇ ತಿಂಗಳಲ್ಲಿ ವೀರಶೈವ-ಲಿಂಗಾಯತ ಬೇರೆ ಬೇರೆ ಆಗಲಿದೆ..ಪಟದವಿಚಾರ ಬಂದಾಗ ಅಪವಾದ ತಪ್ಪಿಸಿಕೊಳ್ಳುವ ಉದ್ದೇಶದಿಂದ ರೇಣುಕರ ಹೆಸರು ಎತ್ತಿದ್ದಾರೆ.

  • ಮಾನ್ಯ ಶಂಕರ ಬಿದರಿಯವರೇ…. 1904ರಿಂದ ಅಖಿಲ ಭಾರತ ವೀರಶೈವ ಮಹಾಸಭಾ ಎಂಬ ಹೆಸರಿದ್ದರೂ, ಈ ವೀರಶೈವದ ಹೆಸರು ಲಿಂಗಾಯತ ಧುರೀಣರಿಂದ ಸ್ಥಾಪಿಸಲ್ಪಟ್ಟಿದ್ದು ಅವರೆಲ್ಲರ ಆಶಯಗಳಿಗೆ ಅನುಗುಣವಾಗಿ ವೀರಶೈವ ಪದ ಬಳಕೆಯನ್ನು ನಿಲ್ಲಿಸಿ, ಅವರ ಬದಲಿಗೆ ಇನ್ನು ಮುಂದೆ ಅಖಿಲ ಭಾರತ ಲಿಂಗಾಯತ ಮಹಾಸಭೆ ಎಂದೇ ಕರೆಯುವ ಬಗ್ಗೆ ಅಖಿಲ ಭಾರತ ವೀರಶೈವ ಮಹಾಸಭೆಯು 1940 ರ ತನ್ನ ಕುಂಭಕೋಣಂ ಮಹಾಧಿವೇಶನದಲ್ಲಿ ಈಗಾಗಲೇ ಅಧಿಕ್ರುತವಾಗಿ ಠರಾವು ಪಾಸು ಮಾಡಿ ನಿರ್ಣಯ ಕೈಗೊಂಡಿದೆ.
    ಈಗ ಮಾಡಬೇಕಾಗಿರುವುದು ಅಖಿಲ ಭಾರತ ವೀರಶೈವ ಮಹಾಸಭೆಯ 1940 ರ ನಿರ್ಣಯವನ್ನು ಜಾರಿಗೆ ತರುವುದಷ್ಟೇ!

    ಅಭಾವೀ ಮ ಸಭೆಯು 2024ರ ದಾವಣಗೆರೆ ಸಮಾವೇಶದಲ್ಲಿ ವೀರಶೈವರು ಹಿಂದುಗಳಲ್ಲ ಎ೦ದು ಅಧಿಕ್ರುತವಾಗಿ ಘೋಷಿಸಿ ನಿರ್ಣಯ ಕೈಗೊಂಡು ಜಾಗತಿಕ ಲಿಂಗಾಯತ ಮಹಾಸಭಾದೊಂದಿಗೆ ಜೊತೆಯಾಗಿ ಕೈಜೋಡಿಸಿ ಮುಂದುವರೆದಿದೆ. ಲಿಂಗಾಯತ ಸಮಾಜದ ಅಭಿಮಾನ ಗೌರವಗಳಿಗೆ ಪಾತ್ರವಾಗಿದೆ.

    ದಿನಾಂಕ 27 – 02-2025 ರ ಬಸವ ಸಮಿತಿ ಸಭಾಂಗಣದಲ್ಲಿನ ಸಮಾಜ ಬಾಂಧವರೆಲ್ಲರ ಆಶಯಗಳಿಗೆ ಅನುಗುಣವಾಗಿ ಈಗ ಉಳಿದಿರುವ ಒಂದೇ ಒಂದು ಬಾಕಿ
    ಕೆಲಸವೆಂದರೆ…. ಅಭಾವೀ ಮ ಸಭೆ 1940 ರ ತನ್ನದೇ ಆದ ನಿರ್ಣಯವನ್ನು ಈ ಕೂಡಲೇ ಜಾರಿಗೆ ತರುವುದು… ಅರ್ಥಾತ್ ವೀರಶೈವ ಮಹಾಸಭೆ ಬದಲಿಗೆ ಲಿಂಗಾಯತ ಮಹಾಸಭಾ ಎ೦ದು ಅಧಿಕ್ರುತವಾಗಿ ಬಳಕೆ ಮಾಡುವುದು… ಅಷ್ಟೇ!

    ನಿಜಗುಣಮೂರ್ತಿ ಕನಕಪುರ
    ಬೆಂಗಳೂರು

  • ಏನೋ ಒಂದು ಸಣ್ಣ ಯಾರದೋ ಹಂಗಿನ,,,ಉಪಕಾರದ,,,, ಒತ್ತಾಯ ದಿಂದ ಹೇಳಿಸಿದರ ಮಾತು ಎನಿಸುತ್ತದೆ….ಬಿದರಿ ಸಾಹೇಬರಿಗೆ……. ಎಲ್ಲಾ ಗೊತ್ತಿದ್ದೂ ಮಾತನಾಡಿಸಲು ಹೇಳಿದ ಮಾತು ಇರುತ್ತದೆ ಎನಿಸುತ್ತದೆ…..ನನ್ನ ಅಂದಾಜು ತಿಳಿಸಿಸುತ್ತದೆ….. ಸಾಹೇಬ್ ರ….. ಪ್ರಯೋಗ ಮಾಡಿಸಿ ನೋಡಲು ಕಲಿಸಿದ ಪಾಠ ಆಗಿರಬಹುದು…… ಬಸವಾದಿ ಶಿವಶರಣರಿಗೆ…… ಪಂಚಾಚಾರ್ಯರನ್ನು ಜೊಡಿಸಿ ಅಪಚಾರ ಮಾಡಬೇಡಿರಿ… ಸರ್… ದಯಮಾಡಿ ಕಳಕಳಿಯ ಮನವಿ….. ಗೌರವ ಸಲ್ಲದು.. ಜೈ ಕರ್ನಾಟಕ… ಜೈ ಬಸವಣ್ಣನವರು… ಜೈ ಸಂವಿಧಾನ…

  • ಅಲ್ಲಾ ರಿ ಶಂಕರ ಬಿದರಿ ಅವರು ಹೇಳ್ಳಿದ್ದು ತಪ್ಪಲ್ಲಾ ಆದಿ ಜಗದ್ಗುರು ಶ್ರೀ ರೇಣುಕಾಚಾರ್ಯ ಸಿದ್ಧಾಂತ ಶಿಖಾಮಣಿಯೆ ಬಸವಾದಿ ಶಿವಶರಣರ ವಚನಗಳು ತಪ್ಪೇನು

Leave a Reply

Your email address will not be published. Required fields are marked *