ಪಂಚಮಸಾಲಿ ಪೀಠದಿಂದ ಮೃತ್ಯುಂಜಯ ಶ್ರೀ ಉಚ್ಚಾಟನೆ

ಅಕ್ರಮ ಆಸ್ತಿ, ಲಿಂಗಾಯತ ವಿರೋಧಿ ಆರೋಪ; ಅಗತ್ಯ ಬಿದ್ದರೆ ಸಿಡಿ ಬಿಡುಗಡೆ, ಎಂದ ಕಾಶಪ್ಪನವರ್

ಕೂಡಲಸಂಗಮ

ಇಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದಲ್ಲಿ ನಡೆದ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಟ್ರಸ್ಟ್ ಸಭೆಯಲ್ಲಿ ಪಂಚಮಸಾಲಿ ಪೀಠದ ಪೀಠಾಧ್ಯಕ್ಷರಾದ ಪೂಜ್ಯ ಬಸವಜಯಮೃತ್ಯುಂಜಯ ಸ್ವಾಮೀಜಿಯವರನ್ನು ಉಚ್ಚಾಟನೆ ಮಾಡಲಾಗಿದೆ.

ಟ್ರಸ್ಟನ ಧರ್ಮಧರ್ಶಿಗಳು, ಸಮಾಜದ ಮುಖಂಡರು ಮೂರು ಗಂಟೆಗಳ ಕಾಲ ಟ್ರಸ್ಟನ ಗುಪ್ತ ಸಭೆ ನಡೆಸಿ ನಂತರ ಕಾರ್ಯಕಾರಣಿ ಸಭೆಯಲ್ಲಿ ಕೈಗೊಂಡ ನಿರ್ಣಯಗಳನ್ನು ಟ್ರಸ್ಟನ ಪ್ರಧಾನ ಕಾರ್ಯದರ್ಶಿ ನೀಲಕಂಠ ಅಸೂಟಿ ತಿಳಿಸಿದರು. ಸಭೆಯಲ್ಲಿ ಸೇರಿದ ವಿವಿಧ ಭಾಗದ ಸಮಾಜದ ಮುಖಂಡರು ಒಪ್ಪಿಗೆ ಸೂಚಿಸಿದರು.

ಸ್ವಾಮೀಜಿ ಸ್ವಂತಕ್ಕಾಗಿ ಆಸ್ತಿ ಮಾಡಿಕೊಂಡಿದ್ದು, ಲಿಂಗಾಯತ ಧರ್ಮವನ್ನು ವಿರೋಧಿಸುತ್ತಿದ್ದಾರೆ, ಬಿಜೆಪಿ ಬೆಂಬಲಿಸುತ್ತಿದ್ದಾರೆ ಎನ್ನುವುದು ಪ್ರಮುಖ ಆರೋಪವಾಗಿದೆ. ಸಭೆಯಲ್ಲಿ ಟ್ರಸ್ಟ್ನ 30 ಸದಸ್ಯರು ಭಾಗವಹಿಸಿದ್ದರು.

ಟ್ರಸ್ಟ್ ಕಾರ್ಯದರ್ಶಿ ನೀಲಕಂಠ ಅಸೂಟಿ ಸ್ವಾಮೀಜಿ ಉಚ್ಚಾಟನೆ ಬಗ್ಗೆ ನಿರ್ಧಾರ ಪ್ರಕಟಿಸಿದರು. ಪೀಠಕ್ಕೆ ಹೊಸದಾಗಿ ಸ್ವಾಮೀಜಿ ನೇಮಕಗೊಳಿಸುವುದಾಗಿ ಘೋಷಿಸಿದರು.

ಅಕ್ರಮ ಆಸ್ತಿ ಗಳಿಕೆ, ಲಿಂಗಾಯತ ಧರ್ಮ ವಿರೋಧಿ ಹೇಳಿಕೆ ಅವರ ಉಚ್ಚಾಟನೆಗೆ ಕಾರಣವಾಗಿವೆ.

“ಸ್ವಾಮೀಜಿ ಟ್ರಸ್ಟ್ ಬೈಲಾ ಕಡೆಗಣಿಸಿ ಆಸ್ತಿ ಮಾಡಿದ್ದಾರೆ. ಅಕ್ರಮ ಆಸ್ತಿ ಗಳಿಕೆ, ಲಿಂಗಾಯತ ಧರ್ಮ ವಿರೋಧಿ ಹೇಳಿಕೆ ಅವರ ಉಚ್ಚಾಟನೆಗೆ ಕಾರಣವಾಗಿವೆ.

2014ರಲ್ಲೂ ವರ್ತನೆ ಬದಲಿಸಿಕೊಳ್ಳುವಂತೆ ಅವರಿಗೆ ಸೂಚನೆ ನೀಡಲಾಗಿತ್ತು. ಅವರು ಬಸವತತ್ವಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಮಠಕ್ಕೂ ಸ್ವಾಮೀಜಿಯವರಿಗೂ ಇನ್ನು ಸಂಬಂಧವಿಲ್ಲ. ಬೇರೊಬ್ಬ ಸ್ವಾಮೀಜಿಯನ್ನು ಪೀಠಾಧಿಪತಿಯಾಗಿ ನೇಮಿಸಲಾಗುತ್ತದೆ,” ಎಂದು ನೀಲಕಂಠ ಅಸೂಟಿ ಹೇಳಿದರು.

ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಟ್ರಸ್ಟನ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಮಾತನಾಡಿ, ಇಂದಿನಿಂದ ಬಸವವಜಯಮೃತ್ಯುಂಜಯ ಸ್ವಾಮೀಜಿಯವರು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರುಗಳಲ್ಲ, ಅವರನ್ನು ಬಿಡುಗಡೆ ಮಾಡಿದ್ದೆವೆ, ಸ್ವಾಭಿಮಾನ ಇದ್ದರೆ ಪೀಠದ ಕಡೆ ಬರಬಾರದು, ಎಂದು ಹೇಳಿದರು.

“ಟ್ರಸ್ಟನ ವಿರುದ್ದ ಸ್ವಾಮೀಜಿ ಅಕ್ರಮ ಆಸ್ತಿ ತಮ್ಮ ಹೆಸರಿನಲ್ಲಿ ಮಾಡಿಕೊಂಡಿರುವುದು, ಪ್ರತ್ಯೇಕ ಟ್ರಸ್ಟ ಮಾಡಿಕೊಂಡಿರುವುದು ಭಕ್ತರಿಗೆ ನೋವಾಗಿದೆ. ಅಗತ್ಯ ಬಿದ್ದರೆ ಸ್ವಾಮೀಜಿಗೆ ಸಂಬಂಧಿಸಿದ ಸಿಡಿ ಬಿಡುಗಡೆ ಮಾಡಲು ಸಿದ್ದ, ಸಿ.ಸಿ.ಪಾಟೀಲ, ಬಸನಗೌಡ ಪಾಟೀಲ ಯತ್ನಾಳ ಸ್ವಾಮೀಜಿಯನ್ನು ಕರೆದುಕೊಂಡು ಹೋಗಿ ಮಠ ಕಟ್ಟಲಿ, ನಮ್ಮ ಮಠ ಕಟ್ಟುವ ಶಕ್ತಿ ನಮ್ಮ ಪೀಠಕ್ಕೆ ಇದೆ,” ಎಂದರು.

ಪಕ್ಷಾತೀತವಾದ ನಮ್ಮ ಮಠವನ್ನು ಶ್ರೀಗಳು ಪಕ್ಷಕ್ಕೆ ಸಿಮೀತ ಮಾಡಿದ್ದಾರೆ, ಸಮಾಜವನ್ನು ದಾರಿ ತಪ್ಪಿಸುತ್ತಿದ್ದಾರೆ, ೨ಎ ಮೀಸಲಾತಿಯನ್ನು ಹತ್ತಿಕ್ಕಲು ಕೆಲವರ ಕುತಂತ್ರಕ್ಕೆ ಮಣಿದು ಬಸವಜಯಮೃತ್ಯುಂಜಯ ಸ್ವಾಮೀಜಿ ಜನಗಣತಿಯಲ್ಲಿ ಧರ್ಮ ಕಾಲಂನಲ್ಲಿ ಹಿಂದೂ, ಜಾತಿ ಕಾಲಂನಲ್ಲಿ ಲಿಂಗಾಯತ ಎಂದು ಬರೆಸಲು ಕರೆಕೊಟ್ಟಿರುವರು.

ಕುತಂತ್ರಕ್ಕೆ ಮಣಿದು ಜನಗಣತಿಯಲ್ಲಿ ಧರ್ಮ ಕಾಲಂನಲ್ಲಿ ಹಿಂದೂ ಬರೆಸಲು ಹೇಳಿದರು

ಜಾತಿಗಣತಿಯಲ್ಲಿ ಧರ್ಮ ಹಿಂದೂ ಎಂದು ಬರೆಸಿದರೆ ನಮ್ಮ ಸಮಾಜಕ್ಕೆ ೨ಎ ಮೀಸಲಾತಿ ಸಿಗುವುದಿಲ್ಲ. ಧರ್ಮ ಲಿಂಗಾಯತ ಎಂದು ಬರೆಸಿದರೆ ಮಾತ್ರ ನಮಗೆ ೨ಎ ಮೀಸಲಾತಿ ದೊರೆಯುವುದು.

ಮೀಸಲಾತಿ ಹೋರಾಟದಿಂದ ನಾನು ಹಿಂದೆ ಸರದಿಲ್ಲ ಮೀಸಲಾತಿ ದೊರೆಯುವವೆಗೂ ಹೋರಾಟ ಮಾಡುತ್ತೇನೆ. ಮುಖಮಂತ್ರಿಗಳಿಗೆ ಮೀಸಲಾತಿಯ ಕುರಿತು ಮನವಿ ಮಾಡಿದ್ದೇವೆ. ಭರವಸೆ ಕೊಟ್ಟಿದ್ದಾರೆ ಹಿಂದುಳಿದ ವರ್ಗದಿಂದ ಸಂಪೂರ್ಣ ವರದಿ ಪಡೆದು ಕೂಡಲೇ ಮೀಸಲಾತಿ ಕೊಡುತ್ತೇನೆ ಎಂದು ಹೇಳಿದ್ದಾರೆ.

ಪೀಠಕ್ಕೆ ನೂತನ ಸ್ವಾಮೀಜಿ ನೇಮಕ ಮಾಡುವ ಕುರಿತು ಸಮಾಜದ ಎಲ್ಲ ಜನರನ್ನು ಸೇರಿಸುತ್ತೇವೆ. ಸಮಾಜದ ಜನ ಯಾರನ್ನೂ ಸೂಕ್ತ ಎಂದು ಸೂಚಿಸುತ್ತಾರೆ ಅವರನ್ನು ಸ್ವಾಮೀಜಿಯಾಗಿ ನೇಮಕ ಮಾಡುತ್ತೇವೆ.

ಸಭೆಯಲ್ಲಿ ಮಾಜಿ ಎಮ್‌ಎಲ್‌ಸಿ ಎಂ.ಪಿ. ನಾಡಗೌಡ, ಟ್ರಸ್ಟನ ಧರ್ಮದರ್ಶಿಗಳಾದ ಶಿವಾನಂದ ಕಂಠಿ, ಗಂಗಣ್ಣ ಬಾಗೇವಾಡಿ, ಶೇಖಪ್ಪ ಬಾದವಾಡಗಿ, ಚಂದ್ರಣ್ಣ ಹುಣಸಿಕಟ್ಟಿ, ಅಶೋಕ ಪವಾಡಶೆಟ್ಟಿ, ಕಲ್ಲಪ್ಪಣ್ಣ ಎಲಿವಾಳ, ನೂತನ ಕಾರ್ಯದರ್ಶಿ ಅಮರೇಶ ನಾಗೂರ, ಮುಖಂಡರಾದ ನಂದಕುಮಾರ ಪಾಟೀಲ, ಮಂಜುನಾಥ ಎಚ್.ಎಂ, ಮಹಾಂತಗೌಡ ಪಾಟೀಲ, ಮಹಾಂತೇಶ ಅವಾರಿ ಮುಂತಾದವರು ಇದ್ದರು.

ಮೃತ್ಯುಂಜಯ ಶ್ರೀ ಪ್ರತಿಕ್ರಿಯೆ

ಪೀಠದಿಂದ ತೆಗೆದುಹಾಕಿರುವುದು ನನ್ನ ಗಮನಕ್ಕೆ ಇಲ್ಲ. ಮಾಧ್ಯಮದಿಂದ ತಿಳಿದುಕೊಂಡೆ. ಪೀಠ, ಟ್ರಸ್ಟ್ ಗೆ ಸಂಬಂದ ಇಲ್ಲ. ಪುನಃ ನಾನು ಮೀಸಲಾತಿ ಹೋರಾಟ ಆರಂಭಿಸಿದ್ದೆನೆ. ನಾಳೆ ೧೦:೩೦ಕ್ಕೆ ಸಂಗಮೇಶ್ವರ ಉಚಿತ ಪ್ರಸಾದ ನಿಲಯದಲ್ಲಿ ಭಕ್ತರ ಸಭೆ ಕರೆದಿರುವೆ. ಮುಂದಿನ ನಿರ್ಣಾಯವನ್ನು ಅಲ್ಲಿ ‌ಕೈಗೊಳ್ಳುತ್ತೇವೆ, ಎಂದು ಹೇಳಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LeqMgqmTFRYEVSrkuQhpeJ

Share This Article
4 Comments
  • ಕಾವಿ ಬಟ್ಟೆ, ತ್ಯಾಗದ, ಅರಿವಿನ/ ಗ್ಯಾನದ,ಶಾಂತಿಯ ಮತ್ತು ತೃಪ್ತಿಯ ಸಂಕೇತ. ಸ್ವಂತ ಹಿತಾಸಕ್ತಿಗೆ ಒತ್ತು ನೀಡುವುದಕ್ಕೆ ಅವಕಾಶವಿಲ್ಲ. ಜನರ, ಸಮಾಜದ ಹಿತಕಾಪಾಡುವುದೇ ಆಗಿದೆ. ಟ್ರಸ್ಟಿನ ನಿರ್ಣಯಗಳನ್ನು ಎಲ್ಲರೂ ಮನ್ನಿಸಬೇಕು. ಎಲ್ಲ ಆಸ್ತಿ, ಧನ, ಸ್ವತ್ತು ಇತ್ಯಾದಿ ವೈಕ್ತಿಕ ವಾದದ್ದಲ್ಲ.
    ಬಸವ ಗುರು ಎಲ್ಲರಿಗೂ ಒlleyadu ಮಾಡಲಿ.

  • ಎಚ್ಚೆತ್ತ ಲಿಂಗಾಯತ ಪಂಚಮಸಾಲಿಯವರು ನಿಜವಾಗಿಯೂ ಬಸವ ತತ್ವವನ್ನು ಎತ್ತಿ ಹಿಡಿದಿದ್ದಕ್ಕೆ ಧನ್ಯವಾದ ಜನಗಣತಿಯ 11ನೇ ಕಾಲಮ್ನಲ್ಲಿ ಧರ್ಮ ಲಿಂಗಾಯತ ಎಂದು ಬರಿಸಲು ಹೇಳಿಕೆಯನ್ನು ಕೊಟ್ಟಿದ್ದಕ್ಕೆ ಅಭಿನಂದನೆಗಳು

  • ನೀಲಕಂಠ ಗೌಡ ಪಾಟೀಲ ,ಗಡ್ಡಿಕರವಿನಕೊಪ್ಪ, ಬೈಲಹೊಂಗಲ ತಾಲೂಕ್. says:

    ಶರಣು ಶರಣಾರ್ಥಿಗಳು
    ಒಳ್ಳೆಯ ನೀರ್ಣಯ ತೆಗೆದುಕೊಂಡಿದ್ದಕ್ಕೆ ಅನಂತ ಧನ್ಯವಾದಗಳು. 🙏

  • ಮೇಲೆಳಲು ಆಸರೆ ಬೇಕಿತ್ತು
    ಬಸವನೆಂಬ ಕೋಲನಿಡಿದು
    ಸೆಟೆದು ನಿಂತರು.
    ಸೆಟೆದ ಮೇಲೆ ಮತ್ತೆಕೆ ಕೋಲು?
    ಎಸೆದು ಬಿಟ್ಟರು
    ಇಬ್ಬದಿಯ ನೀತಿಯವರು.
    ಇಬ್ಬರು ಖಾವಿ ತೊಟ್ಟ,
    ಪಕ್ಕ ಖಾದಿ ದಾರಿಗಳು.
    ಒಬ್ಬನಿಗೆ ನೂರಾನೆ ಬಲ
    ಮತ್ತೊಬ್ಬನಿಗೆ,
    ಹರಕು ಬಾಯಿ ಕೊತ್ನಾಳ ಬಲ
    ಮತ್ತೇನು ಮಾಡಿಯಾರು.
    ಲಿಂಗಾಯತವನು ಮಣ್ಣು ಮುಕ್ಕಿಸಲು
    ಒಳಗೊಳಗೆ ಕತ್ತಿ ಮಸಿದವರು.
    ಮೇಲಷ್ಟ ಬಸಪ್ಪನವರು
    ಒಳಗೆಲ್ಲ ವಿಷಪ್ಪನವರು.
    ಚಡ್ಡಿಗಳ ಮಾತಿಗೆ, ತಲೆ ಅಲ್ಲಾಡಿಸುವ
    ಕಜ್ಜಿ ನಾಯಿಗಳಿವರು.
    ಲಿಂಗಾಯತವನು ಮಾರಲು ಹೇಸದವರು.
    ಮೀಸಲಾತಿ ಬೇಕಂತೆ, ಧರ್ಮ ಬೇಡವಂತೆ
    ಶೂದ್ರ ಸೊಣಗಗಳೆರಡು
    ತೊಲಗಲಿ ಬೇಗ ನಮ್ಮನ್ನು ಬಿಟ್ಟು.

Leave a Reply

Your email address will not be published. Required fields are marked *