ಚಿತ್ರದುರ್ಗ
ನಗರದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಲ್ಲಿ ಇತ್ತೀಚೆಗೆ ಪೂಜ್ಯ ಬಸವಪ್ರಭು ಸ್ವಾಮೀಜಿ ಅವರ ನೇತ್ರತ್ವದಲ್ಲಿ ಶರಣಸಂಸ್ಕೃತಿ ಉತ್ಸವ ಸಮಿತಿಯ ಪೂರ್ವಭಾವಿ ಸಭೆ ನಡೆಯಿತು.
ಶ್ರೀ ಜಯದೇವ ಜಗದ್ಗುರುಗಳ ೧೫೦ನೇ ಜಯಂತೋತ್ಸವದ ಅಂಗವಾಗಿ ಜಯದೇವ ಜಗದ್ಗುರುಗಳ ಬೆಳ್ಳಿ ಮೂರ್ತಿಯನ್ನು ಮಾಡಿಸಬೇಕೆಂದು ತೀರ್ಮಾನಿಸಲಾಯಿತು. ಈ ಬಾರಿ ಗುರುಗಳ ಉತ್ಸವವನ್ನು ಅದ್ದೂರಿಯಾಗಿ ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಬೇಕೆಂದು ತೀರ್ಮಾನಿಸಲಾಯಿತು.
ಪಟೇಲ ಶಿವಕುಮಾರ್ರವರು ಮಾತನಾಡಿ ಬೃಹನ್ಮಠದ ಘನತೆಯನ್ನು ಹೆಚ್ಚಿಸಿದ ಶ್ರೀ ಜಯದೇವ ಜಗದ್ಗುರುಗಳ ಜಯಂತೋತ್ಸವದ ನಾಡಹಬ್ಬದ ರೀತಿಯಲ್ಲಿ ನಡೆಯಬೇಕೆಂದು ಆಶ್ರಯ ವ್ಯಕ್ತಪಡಿಸಿದರು.
ಎಸ್ ಎಂ ಎಲ್ ತಿಪ್ಪೇಸ್ವಾಮಿ, ಕೆ.ಸಿ. ನಾಗರಾಜ, ಕೆ.ಎಂ.ವೀರೇಶ, ಶಶಿಧರ್ಬಾಬು, ಶ್ರೀಮತಿ ದೇವಿಕುಮಾರಿ, ರುದ್ರಣಿ ಗಂಗಾಧರ್, ಮುಂತಾದ ಸಮಾಜದ ಮುಖಂಡರು ಪಾಲ್ಗೊಂಡಿದ್ದರು.