ಮೈಸೂರು
ಮೈಸೂರಿನ ದಸರಾದ ಅಂಗವಾಗಿ ನಡೆಯುತ್ತಿರುವ ಫಲಪುಷ್ಪ ಪ್ರದರ್ಶನದಲ್ಲಿ ವಿವಿಧ ನಮೂನೆಯ ಪುಷ್ಪಗಳಿಂದ ನಿರ್ಮಾಣಗೊಂಡ ಕಲಾಕೃತಿಗಳು ಮಾಡಿವೆ.
12ನೇ ಶತಮಾನದಲ್ಲಿ ಅಲ್ಲಮಪ್ರಭು, ಬಸವಣ್ಣ, ಅಕ್ಕ ಮಹಾದೇವಿ ಸೇರಿದಂತೆ ನೂರಾರು ಶರಣರು ಚರ್ಚೆ ನಡೆಸುತ್ತಿದ್ದ ಅನುಭವ ಮಂಟಪ ಕಣ್ಮನ ಸೆಳೆಯುತ್ತಿವೆ.
ಶಿಕ್ಷಣ ಕ್ರಾಂತಿಯ ಸಾಧಕಿ ಸಾವಿತ್ರಿ ಬಾಯಿ ಫುಲೆ, ಭಗವಾನ್ ಬುದ್ಧನು ತಮ್ಮ ಶಿಷ್ಯರ ಜೊತೆ ಕುಳಿತು ಸಂವಾದ ನಡೆಸುತ್ತಿರುವ ದೃಶ್ಯ, ನಮ್ಮ ದೇಶದ ಪಾರ್ಲಿಮೆಂಟ್, ಟಿ-20 ವಿಶ್ವಕಪ್, ಹುಲಿಯನ್ನೇರಿದ ಮಹದೇಶ್ವರ ಸ್ವಾಮಿ, ನಂಜನಗೂಡಿನ ಶ್ರೀಕಂಠೇಶ್ವರ, ಚಾಮುಂಡೇಶ್ವರಿ ದೇವಾಲಯ ಮಾದರಿ ಪುಷ್ಪ ರೂಪದಲ್ಲಿ ಅರಳಿ ನಿಂತಿವೆ.
ಸರ್ಕಾರದ ಗ್ಯಾರಂಟಿ ಯೋಜನೆಗಳಾದ ಅನ್ನಭಾಗ್ಯ, ಯುವನಿಧಿ, ಗೃಹಜ್ಯೋತಿ, ಶಕ್ತಿ ಹಾಗೂ ಗೃಹಲಕ್ಷ್ಮೀ ಯೋಜನೆಗಳ ವಿಷಯಾಧಾರಿತವಾದ ಪುಷ್ಪ ಕಲಾಕೃತಿ ಮಾದರಿಗಳು ಕೂಡ ಲಭ್ಯವಿವೆ.
ಆಫ್ರಿಕನ್ ಮಾರಿಗೋಲ್ಡ್, ಆರ್ಕಿಡ್‌ಗಳು, ಸೆಲೋಸಿಯಾ, ಕಾರ್ನೇಷನ್, ಆಂಥೂರಿಯಂ, ಗರ್ಬೆರಾ, ರೋಸಸ್, ಕಾಸ್ಮೊಸ್, ಬ್ಲೂಡೈಸಿ, ಪಿಂಗ್ ಪಾಂಗ್, ಪೆಟುನಿಯಾ, ಟೊರೆನಿಯಾ, ಡ್ರಾಕೇನಾ, ಟಿಥೋನಿಯಾ, ಜಿನ್ನಿಯಾ ಮುಂತಾದ ಹೂವುಗಳನ್ನು ಬಳಸಿ ಈ ಪ್ರತಿಕೃತಿಗಳನ್ನು ನಿರ್ಮಿಸಲಾಗಿದೆ.
ತೋಟಗಾರಿಕೆ ಇಲಾಖೆ ಪ್ರತಿವರ್ಷವೂ ಕುಪ್ಪಣ್ಣ ಪಾರ್ಕ್‌ನಲ್ಲಿ ದಸರಾ ಪ್ರಯುಕ್ತ ಫಲ-ಪುಷ್ಪ ಪ್ರದರ್ಶನ ಏರ್ಪಡಿಸುತ್ತಾ ಬಂದಿದೆ.