ಮೈಸೂರಿನ ವಿದ್ಯಾರ್ಥಿ ನಿಲಯದಲ್ಲಿ 35 ಕಾಲೇಜು ವಿದ್ಯಾರ್ಥಿಗಳಿಗೆ ಲಿಂಗಧಾರಣೆ

ಪ್ರಸನ್ನ. ಎಸ್. ಎಂ
ಪ್ರಸನ್ನ. ಎಸ್. ಎಂ

ಬಸವಭಾರತ ಪ್ರತಿಷ್ಠಾನ ಮತ್ತು ಚಿಕ್ಕವೀರ ದೇಶಿಕೇಂದ್ರ ಸ್ವಾಮಿ ಉಚಿತ ವಿದ್ಯಾರ್ಥಿ ನಿಲಯ, ಮೈಸೂರು ಸಹಭಾಗಿತ್ವದಲ್ಲಿ ಲಿಂಗಧಾರಣೆ, ಶಿವಯೋಗ ಮತ್ತು ಉಪನ್ಯಾಸ ಕಾರ್ಯಕ್ರಮಗಳು ಶನಿವಾರ ನಡೆದವು.

ಶರಣ ಚೌಹಳ್ಳಿ ನಿಂಗರಾಜಪ್ಪನವರು ಶನಿವಾರ 35 ಕಾಲೇಜು ವಿದ್ಯಾರ್ಥಿಗಳಿಗೆ ಲಿಂಗಧಾರಣೆ ಮಾಡಿ ಶಿವಯೋಗವನ್ನು ಹೇಗೆ ವೈಜ್ಞಾನಿಕವಾಗಿ ಮಾಡಬೇಕೆಂದು ತೋರಿಸಿದರು.

ಬಸವಭಾರತ ಪ್ರತಿಷ್ಠಾನದ ಶಿವರುದ್ರಪ್ಪನವರು ಪ್ರಾಸ್ತಾವಿಕವಾಗಿ ಮಾತನಾಡಿ 7 ವರ್ಷಗಳ ಹಿಂದೆ ತಮ್ಮ ಊರಿನಲ್ಲಿ ನಡೆದ ಕಹಿ ಘಟನೆಯಿಂದ ಶರಣರ ತತ್ವ ವಿಚಾರಗಳನ್ನು ಪ್ರಚಾರ ಮಾಡಲು ಒಂದು ಪತ್ರಿಕೆ ಅವಶ್ಯವಿದೆಯೆಂದು,ಪತ್ರಿಕೆ ಪ್ರಾರಂಭ ಮಾಡಿದೆ ಎಂದು ಹೇಳಿದರು. ನಂತರ ಸಮಾಜ ಸೆವೆ ಮಾಡಲು, ಧರ್ಮ ಪ್ರಚಾರ ಮಾಡಲು ಒಂದು ಸಂಘಸಂಸ್ಥೆ ಅವಶ್ಯಕತೆಯದೆ ಎಂದು ಬಸವಭಾರತ ಪ್ರತಿಷ್ಠಾನವನ್ನು 3 ವರ್ಷಗಳ ಹಿಂದೆ ಪ್ರಾರಂಭ ಮಾಡಿದೆ ಎಂದು ಹೇಳಿದರು.

ಈ ವರ್ಷ ಸಂಘಟನೆಗಳಲ್ಲಿ, ವಿದ್ಯಾರ್ಥಿ ನಿಲಯಗಳಲ್ಲಿ ಮೈಸೂರು ಜಿಲ್ಲೆ ಗ್ರಾಮಾಂತರ ಪ್ರದೇಶಗಳಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲು ತಿರ್ಮಾನಿಸಿ 20 ಕಾರ್ಯಕ್ರಮವನ್ನು ಯಶಸ್ವಿಯಾಗಿ ಮಾಡಿದ್ದೆವೆ ಎಂದು ಹೇಳಿದರು.

ಬಸವತತ್ವ ಪ್ರಚಾರದಲ್ಲಿ ಯುವಕರು ಪಾತ್ರದ ಬಗ್ಗೆ ಶರಣ ಬಸವಯೋಗಿಶ್ ರವರು ಮಾತನಾಡಿ , ಬಸವತತ್ವವನ್ನು ಕಳೆದ 10 ವರ್ಷಗಳಿಂದ ಪ್ರಚಾರ ಮಾಡಲು ತಮಗಾದ ಪ್ರೇರಣೆ ಮತ್ತು ಅನುಭವವನ್ನು ಹಂಚಿಕೊಂಡರು.

ಈ ವಿದ್ಯಾರ್ಥಿ ನಿಲಯದಲ್ಲಿಇನ್ನು ಮುಂದೆ ಬಸವಜಯಂತಿ ಆಚರಿಸಿ, ಬಸವತತ್ವದ ವಿಚಾರ ವಿನಿಮಯ ಮಾಡಿಕೊಂಡು, ಬಸವಾದಿಶರಣರ ತ್ಯಾಗ ಬಲಿದಾನವನ್ನು ಸ್ಮರಿಸಬೇಕು ಎಂದು ಹೇಳಿದರು.

ಹಾಗೇ ಎಲ್ಲಾ ಶರಣರ ಜಯಂತಿಯನ್ನು ವಿದ್ಯಾರ್ಥಿ ನಿಲಯದಲ್ಲಿ ಆಚರಿಸಬೇಕೆಂದು ಮನವಿ ಮಾಡಿದರು.

ವಿದ್ಯಾರ್ಥಿ ನಿಲಯದ ಹಳೆ ವಿದ್ಯಾರ್ಥಿ ವೃಷಬೇಂದ್ರವರು ವಚನ ಪ್ರಾರ್ಥನೆ ಮಾಡಿದರು.

ಶರಣು ಗಂಗಾಧರಪ್ಪನವರು( ವಿದ್ಯಾರ್ಥಿ ನಿಲಯದ ನಿರ್ದೇಶಕರು) ಕಾರ್ಯಕ್ರಮ ನಿರೂಪಣೆ ಮಾಡಿದರು. ಅವರು ನಿಂಗರಾಜುಪ್ಪನವರು ಗಣಾಚಾರ ವೇದಿಕೆ ಕಟ್ಟಿಕೊಂಡು ಬಸವತತ್ವ ಪ್ರಚಾರ ಮಾಡಿದರೆ, ಬಸವಯೋಗಿಶ್ ರವರು ವಿಶ್ವ ಬಸವಸೇನೆ ಮೂಲಕ ನಂಜನಗೂಡಿನ ವಿವಿಧ ಬಡಾವಣೆಗೆ, ವೃತ್ತಗಳಿಗೆ ಶರಣ ಹೆಸರನ್ನಿಟ್ಟಿದ್ದಾರೆ ಮತ್ತು ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಮೈಸೂರು ಜಿಲ್ಲೆ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಯುವಕರನ್ನು ಸಂಘಟನೆ ಮಾಡಿದ್ದಾರೆಂದು ಹೇಳಿದರು.

ವಿದ್ಯಾರ್ಥಿ ನಿಲಯದ ವತಿಯಿಂದ ನಿಂಗರಾಜಪ್ಪ, ಬಸವಯೋಗಿಶ್ ಮತ್ತು ಶಿವರುದ್ರಪ್ಪನವರನ್ನು ಸನ್ಮಾನಿಸಲಾಯಿತು .

ಬಸವಪ್ರತಿಷ್ಟಾನದ ವತಿಯಿಂದ ವಿದ್ಯಾರ್ಥಿ ನಿಲಯದ ವಾರ್ಡನ್ ಮಹದೇವಪ್ಪನವರನ್ನು ಸನ್ಮಾನಿಸಲಾಯಿತು.
ನಿರ್ದೇಶಕಾರದ ಆಲೂರುಮೂರ್ತಿ ತಮ್ಮ ವಿದ್ಯಾರ್ಥಿನಿಲಯದಲ್ಲಿ ಕಾರ್ಯಕ್ರಮ ನಡೆಸಿಕೊಟ್ಟಿದ್ದಕ್ಕಾಗಿ ಧನ್ಯವಾದಗಳನ್ನು ಹೇಳಿ ವಂದನಾರ್ಪಣೆ ಮಾಡಿದರು.

ವೇದಿಕೆಯಲ್ಲಿ ವಿದ್ಯಾರ್ಥಿ ನಿಲಯದ ಅಧ್ಯಕ್ಷರಾದ ಡಾ.ಮಹೇಶ್ ರವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆಯ ಸದಸ್ಯರು ಮತ್ತು ಜಗದಂಬಾ ಪ್ರಸನ್ನರವರು ಉಪಸ್ಥಿತರಿದ್ದರು.

Share This Article
Leave a comment

Leave a Reply

Your email address will not be published. Required fields are marked *