ನಂಜನಗೂಡು
ಪಟ್ಟಣದ ಫ.ಗು.ಹಳಕಟ್ಟಿನಗರದಲ್ಲಿ ನಾಲ್ಕನೇ ವರ್ಷದ ಬಸವ ಮಾಸ ಕಾರ್ಯಕ್ರಮವು ಶನಿವಾರ ಪ್ರಾರಂಭವಾಯಿತು.
ಸಮಿತಿಯ ಅಧ್ಯಕ್ಷರಾದ ಆಯರಳ್ಳಿಯ ಪ್ರಭುಸ್ವಾಮಿ ದಂಪತಿಗಳು, ಬಸವೇಶ್ವರಿ ಮಾತಾಜಿಯವರು ಮತ್ತು ಮೂಡಗೂರು ಮಠದ ಶ್ರೀ ಉಧ್ಧಾನ ಶಿವಯೋಗಿಸ್ವಾಮಿಗಳು ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಅತ್ತಿವೇರಿಯ ಬಸವೇಶ್ವರಿ ಮಾತಾಜಿಯವರು ಬಸವಣ್ಣನವರ ಜೀವನ ದರ್ಶನ ಎಂಬ ವಿಚಾರವಾಗಿ 30 ದಿನಗಳ ಪ್ರವಚನ ಆರಂಭಿಸಿದರು.