ನೆಲಮಂಗಲ
ರಾಜ್ಯದ ಗಮನ ಸೆಳೆದಿದ್ದ ಪವಾಡ ಬಸವಣ್ಣ ದೇವರ ಮಠ ಆಯೋಜಿಸಿದ್ದ ವಚನ ಕಂಠಪಾಠ ಸ್ಪರ್ಧೆಯ ವಿಜೇತರಿಗೆ ಬುಧವಾರ ಬಹುಮಾನ ವಿತರಣೆ ಮಾಡಲಾಯಿತು.

ರಾಜ್ಯಮಟ್ಟದ ಕಂಠಪಾಠ ಸ್ಪರ್ಧೆಯಲ್ಲಿ 1051 ವಚನಗಳನ್ನು ನಿರಂತರವಾಗಿ ವಾಚಿಸಿದ ಹಿರೇಬಾಗೇವಾಡಿಯ ಲಾವಣ್ಯ ಅಂಗಡಿ ಅವರಿಗೆ ಪ್ರಥಮ ಬಹುಮಾನವಾಗಿ ₹1 ಲಕ್ಷ ನಗದು ಹಾಗೂ ‘ವಚನ ರತ್ನ’ ಪ್ರಶಸ್ತಿ ನೀಡಲಾಯಿತು.

990 ವಚನಗಳನ್ನು ವಾಚಿಸಿದ ಬೇಲೂರಿನ ವೈ.ಎನ್.ನೀಲಾ ಅವರಿಗೆ ದ್ವಿತೀಯ ಬಹುಮಾನವಾಗಿ ₹75 ಸಾವಿರ ನಗದು 465 ವಚನಗಳನ್ನು ವಾಚಿಸಿದ ಬೈಲಹೊಂಗಲದ ಮದನಬಾವಿಯ ವಿನಾಯಕ ಗುಜನಾಳ ಅವರಿಗೆ ತೃತೀಯ ಬಹುಮಾನವಾಗಿ ₹50 ಸಾವಿರ ನಗದು ನೀಡಲಾಯಿತು.

ತೆಲಂಗಾಣದ ಜ್ಯೋತಿ ಅವರಿಗೆ (444 ವಚನ ವಾಚನ) ಸಮಾಧಾನಕರ ಬಹುಮಾನವಾಗಿ ₹25 ಸಾವಿರ ನಗದು ಹಾಗೂ ಪ್ರದೀಪ್ ಅವರಿಗೆ ಮತ್ತೊಂದು ಸಮಾಧಾನಕರ ಬಹುಮಾನವಾಗಿ ₹10 ಸಾವಿರ ನೀಡಿ ಗೌರವಿಸಲಾಯಿತು.
ಸಂಜೆ 30 ಹಳ್ಳಿಗಳಿಂದ ಎತ್ತಿನಗಾಡಿಗಳಲ್ಲಿ ಬಂದಿದ್ದ ಬಸವಣ್ಣನ ಮೂರ್ತಿಗಳನ್ನು ವಿವಿಧ ಕಲಾಪ್ರಕಾರಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.

ಕಂಠಪಾಠ ಸ್ಪರ್ಧೆಯ ವಿಜೇತರನ್ನೂ ಮೆರವಣಿಗೆಯಲ್ಲಿ ಕರೆದೊಯ್ದು ಗೌರವಿಸಲಾಯಿತು.
ನಗರಸಭೆ ಅಧ್ಯಕ್ಷ ಎನ್.ಗಣೇಶ್, ಉಪಾಧ್ಯಕ್ಷ ಆನಂದ್, ಸದಸ್ಯರಾದ ಲತಾ ಹೇಮಂತ್ ಕುಮಾರ್, ಪೂರ್ಣಿಮಾ ಸುಗ್ಗರಾಜು ಇದ್ದರು.
ಈ ಬಸವ ಜಯಂತಿಯಲ್ಲಿ ದೊಡ್ಡ ವಿವಾದವೆಬ್ಬಿಸಿದ್ದ ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯಾಧ್ಯಕ್ಷ ಶಂಕರ ಬಿದರಿ ಅವರಿಗೆ ‘ಪವಾಡ ಶ್ರೀ’ ಪ್ರಶಸ್ತಿ ನೀಡಲಾಯಿತು.
Audio put by listening every one can get the vachanas
ಈ ಒಂದು ಹೆಗ್ಗಳಿಕೆ ನಮ್ಮ ಜನಮಾನಸದಲ್ಲಿ ಆಸಕ್ತಿಯನ್ನು ಬೆಳೆಸಿ ಮುಂದಿನ ನಮ್ಮ ಮಕ್ಕಳಿಗೆ ದಾರಿದೀಪವಾಗಲಿ. ಶ್ಣು ಶರಣು ಶರಣಾರ್ಥಿಗಳು