‘ವಚನ ನಿಜದರ್ಶನ’ಕ್ಕೆ ಕರ್ನಾಟಕ ಲೇಖಕಿಯರ ಸಂಘದ ಪ್ರಶಸ್ತಿ

ಬಸವ ಮೀಡಿಯಾ
ಬಸವ ಮೀಡಿಯಾ

ಕಲಬುರಗಿ

ಕರ್ನಾಟಕ ಲೇಖಕಿಯರ ಸಂಘದ 2024ನೇ ಸಾಲಿನ ದತ್ತಿ ಪ್ರಶಸ್ತಿಗೆ ಹಿರಿಯ ಲೇಖಕಿ, ಚಿಂತಕಿ ಡಾ. ಮೀನಾಕ್ಷಿ ಬಾಳಿ ಹಾಗೂ ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಕನ್ನಡ ಅಧ್ಯಯನ ಮಂಡಳಿ ಸದಸ್ಯೆ ಡಾ. ಸುಜಾತಾ ಚಲವಾದಿ ಅವರು ಆಯ್ಕೆಯಾಗಿದ್ದಾರೆ.

ಡಾ. ಮೀನಾಕ್ಷಿ ಬಾಳಿ ಅವರ ‘ವಚನ ನಿಜದರ್ಶನ’ ಕೃತಿಗೆ ಶ್ರೀ ವಿಜಯಕಲಕೋಟಿ ಪ್ರಶಸ್ತಿ ಮತ್ತು ಡಾ. ಸುಜಾತಾ ಚಲವಾದಿ ಅವರ ‘ಲಚಮವ್ವ ಮತ್ತು ಇತರ ಕತೆಗಳು’ ಕಥಾ ಸಂಕಲನಕ್ಕೆ ತ್ರಿವೇಣಿ ದತ್ತಿ ನಿಧಿಯ ಪ್ರಥಮ ಬಹುಮಾನ ಲಭಿಸಿದೆ.

ಪ್ರಶಸ್ತಿ ಪುರಸ್ಕೃತರಿಗೆ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾದ ಪ್ರೊ. ಎಚ್.ಟಿ. ಪೋತೆ, ಸಂದರ್ಶಕ ಪ್ರಾಧ್ಯಾಪಕರು ಡಾ. ಶ್ರೀಶೈಲ ನಾಗರಾಳ, ಡಾ. ಸೂರ್ಯಕಾಂತ ಸುಜ್ಯಾತ್ ಹಾಗೂ ಕನ್ನಡ ಅಧ್ಯಯನ ಮಂಡಳಿಯ ಎಲ್ಲ ಸದಸ್ಯರು ಹಾಗೂ ಉಪನ್ಯಾಸಕ ಬಳಗ ಮತ್ತು ವಿದ್ಯಾರ್ಥಿಗಳು ಇಬ್ಬರೂ ಲೇಖಕಿಯರಿಗೆ ಅಭಿನಂದಿಸಿದ್ದಾರೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KVCwk6IT1VBLPSuFiyKvN1

Share This Article
2 Comments

Leave a Reply

Your email address will not be published. Required fields are marked *