ಹೈದರಾಬಾದ್
ನಿಜಗುಣಾನಂದ ಶ್ರೀಗಳ ಪ್ರವಚನ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ್ದ ಶಿಬಿರದಲ್ಲಿ ಬುಧವಾರ 80 ಜನ ರಕ್ತದಾನ ಮಾಡಿದರು.
ಅತ್ತಾಪುರ ರಾಷ್ಟ್ರೀಯ ಬಸವದಳ ನೈತೃತ್ವದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಥಲಸ್ಸಿಮಿಯಾ ಮತ್ತು ಸಿಕಲ್ ಸೆಲ್ ಸೊಸೈಟಿ ವತಿಯಿಂದ ರಕ್ತ ಸಂಗ್ರಹಿಸಿಲಾಯಿತು. ರಕ್ತದಾನ ಮಾಡಿದವರಿಗೆ ಪ್ರಮಾಣಪತ್ರ ನೀಡಲಾಯಿತು.
“ರಕ್ತದಾನದ ಕಾರ್ಯವನ್ನು ಬಸವತತ್ವದ ಆಧಾರದ ಮೇಲೆ, ಬಸವಣ್ಣನ ಕೃಪಾಶೀರ್ವಾದದ ಮೇಲೆ ನಡೆಸುತ್ತಿದ್ದಾರೆ. ಈ ಕಾರ್ಯ ಪ್ರತಿವರ್ಷ ಹೀಗೆ ಸುಗಮವಾಗಿ ನಡೆಯಲೆಂದು ಬಸವ ತಂದೆಯಲ್ಲಿ ಪ್ರಾರ್ಥಿಸುತ್ತೇನೆ,” ಎಂದು ಮುಂಡರಗಿ ಹಾಗೂ ಬೈಲೂರು ನಿಷ್ಕಲ ಮಂಟಪದ ಶ್ರೀ ನಿಜಗುಣಾನಂದ ಮಹಾಸ್ವಾಮೀಜಿ ಹೇಳಿದರು.
“ಈ ಕಾರ್ಯ ಮಾಡಿದ ರಾಷ್ಟ್ರೀಯ ಬಸವದಳದ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಹಾಗೂ ಈ ರಕ್ತವನ್ನು ಸಂಗ್ರಹಿಸುತ್ತಿರುವ ಸಂಸ್ಥೆಯವರಿಗೂ ಹೃತ್ಪೂರ್ವಕವಾದ ಧನ್ಯವಾದಗಳು ಅರ್ಪಿಸುವೆ,” ಎಂದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಬಸವದಳ ಅಧ್ಯಕ್ಷ ಸಂಜಯ ಪಾಟೀಲ, ಪ್ರಧಾನ ಕಾರ್ಯದರ್ಶಿ ಪ್ರದೀಪ ಬಿರಾದಾರ, ಖಜಾಂಚಿ ಸಂಗಯ್ಯಸ್ವಾಮಿ, ವಿಜಯಕುಮಾರ ಪಟ್ನೆ, ಪ್ರಭಯ್ಯಸ್ವಾಮಿ, ಭೀಮರಾವ ಬಿರಾದಾರ, ಸಿದ್ದಪ್ಪ ಭಾಲ್ಕೆ, ಸಂತೋಷ ಪಾಟೀಲ, ಸಂತೋಷ ಕಂಗಳೆ, ಘಾಳೆಪ್ಪ ಬಿಲಗುಂದೆ, ಶ್ಯಾಮರಾವ ಚಿಟಗುಪಕರ, ಶಿವರಾಯ ಮೂರ್ಖಂಡೆ, ವೀರಶೆಟ್ಟಿ ಕುಂಬಾರ, ಗುರುನಾಥ ಸುಲಗಂಟಿ, ಮತ್ತೀತರರು ಉಪಸ್ಥಿತರಿದ್ದರು.
ಆಗಸ್ಟ್ ೧೧ರಿಂದ ಆರಂಭಗೊಂಡ ಪ್ರವಚನ ಕಾರ್ಯಕ್ರಮ ಸೆಪ್ಟೆಂಬರ್ ೦೧ರಂದು ಮುಕ್ತಾಯಗೊಳ್ಳಲಿದೆಯೆಂದು ವ್ಯವಸ್ಥಾಪಕ, ಶರಣ ನಾಗಯ್ಯ ಹಿರೇಮಠ, ನವೀನ ಪುರಕಿ ತಿಳಿಸಿದರು.
ಶ್ರೀಗಳ ಕಾಯ೯ಕ್ರಮ ಅಥ೯ಪೂರ್ಣ, ಲೆಖನ ಬರೆದು ನಮಗೆ ತಲುಪಿಸಿದ ಬಸವ ಮಿಡಿಯಕ್ಕೆ ಶರಣು ಶರಣಾಥಿ೯ಗಳು 🙏🙏