ಕಲ್ಬುರ್ಗಿಯವರನ್ನು ಟಾರ್ಗೆಟ್ ಮಾಡಿದ ರೀತಿಯಲ್ಲಿಯೇ ನಿಜಗುಣಾನಂದ ಸಾಮೀಜಿಯವರನ್ನು ಟಾರ್ಗೆಟ್ ಮಾಡುತ್ತಿದ್ದಾರೆ.
ಬನಹಟ್ಟಿ
ಪಟ್ಟಣದಲ್ಲಿ ಈಚೆಗೆ ನಡೆದ ಹಿಂದೂ ಸಮಾವೇಶದಲ್ಲಿ ಪೂಜ್ಯ ನಿಜಗುಣಾನಂದ ಸ್ವಾಮೀಜಿ ಅವರ ಮೇಲೆ ಹಲ್ಲೆಗೆ ಕನ್ನೇರಿ ಸ್ವಾಮಿ ಪ್ರಚೋದನೆ ಮಾಡಿದರು.
ಅನೇಕ ಲಿಂಗಾಯತ ಸ್ವಾಮೀಜಿ, ಗಣ್ಯರ, ಬಸವ ಭಕ್ತರ ಹೆಸರು ಹೇಳದೆ “ನೀಚ,” “ಕುಡುಕ,” “ನಾಯಿ,” “ಹಂದಿ,” “ತಾಲಿಬಾನ್” ಎಂದು ಕರೆದರು. ಆದರೆ ನಿಜಗುಣಾನಂದ ಸ್ವಾಮೀಜಿ ಅವರನ್ನು ಮಾತ್ರ ಹೆಸರು ಹೇಳಿಯೇ ನಿಂದಿಸಿದರು.
ನಿಜಗುಣಾನಂದ ಸ್ವಾಮೀಜಿ ಅವರಿಗೆ ಸಂಬಂಧಿಸಿದ ಘಟನೆಯೊಂದನ್ನು ಕನ್ನೇರಿ ಸ್ವಾಮಿ ಕಾರ್ಯಕ್ರಮದಲ್ಲಿ ಹಂಚಿಕೊಂಡರು.

ಅವರ ಪ್ರಕಾರ ನಿಜಗುಣಾನಂದ ಸ್ವಾಮೀಜಿ ಇತ್ತೀಚೆಗೆ ಸಿದ್ದೇಶ್ವರ ಸ್ವಾಮಿಗಳು ಹಾಗೂ ಬಸವಣ್ಣ ಒಟ್ಟಿಗೆ ಇರುವ ಒಂದು ಫೋಟೋ ನೋಡಿದರಂತೆ. ಆ ಫೋಟೋ ಮಾಡಿಸಿದವರನ್ನ ‘ಸಿದ್ದೇಶ್ವರ ಸ್ವಾಮಿಗಳನ್ನ ಬಸವಣ್ಣನವರ ಎತ್ತರಕ್ಕೆ ಏರಿಸಿದ್ದೀರಾ’ ಎಂದು ಪ್ರಶ್ನಿಸಿದರಂತೆ.
ಈ ಘಟನೆ ಹೇಳುತ್ತಾ ಹೇಳುತ್ತಾ ಕನ್ನೇರಿ ಸ್ವಾಮಿಯ ಆಕ್ರೋಶ ಉಕ್ಕಿ ಹರಿಯಿತು.
“ಸಿದ್ದೇಶ್ವರ ಅಪ್ಪಾರ ಬಗ್ಗೆ ಹಗುರವಾಗಿ ಮಾತಾಡ್ತೀಯಾ ಮಗನ…ಸಿದ್ದೇಶ್ವರ ಅಪ್ಪಾರು ಎಷ್ಟು ದೊಡ್ಡೋರು ಅಂತ ಈ ಬಡ್ಡಿಮಕ್ಕಳಿಗೆ ಏನು ಗೊತ್ತು,” ಕಿಡಿ ಕಾರಿದರು.
ನಿಜಗುಣಾನಂದ ಸ್ವಾಮೀಜಿ ಅವರ ಮೇಲೆ ಹಲ್ಲೆಗೆ ಪ್ರಚೋದನೆಯಾಗಿದ್ದು ಈ ಹಂತದಲ್ಲಿ.
ಭಾಷಣ ಮುಂದುವರೆಸಿ ಕನ್ನೇರಿ ಸ್ವಾಮಿ “ಮುಂದಿನ ಶಬ್ದ ನಾನು ಮಾತಾಡಬಾರದು ನೀವು ಮಾಡಬೇಕು. ಎಲ್ಲಿ ಬರ್ತಾನೆ ಅವ ನೀವು ತಯಾರಾಗೇ ಇರಬೇಕ್…. ನೀವ್ ತಯಾರಾಗೇ ಇರಬೇಕ್…. ತಮ್ಮ ನೀನ್ ಪಾರಾಗಕ್ ಸಾಧ್ಯವಿಲ್ಲ… ಸಿಗಲಿ ಆವಾ ಅಂತ ಹೇಳೀನಿ,” ಎಂದು ತಮ್ಮ ಮುಂದೆ ಇದ್ದವರಿಗೆ ಕರೆ ನೀಡಿದರು.
ಇಷ್ಟು ಹೇಳಿ ಕೊನೆಗೆ ಒಂದು ವಾಕ್ಯ ಸೇರಿಸಿದರು.
“ಅವ ಬಂದ್ರೆ ನೀವ್ ತಯಾರಾಗೇ ಇರಬೇಕು… ಯಾಕೋ ಮಗನೆ ಹಿಂಗ್ಯಾಕ್ ಮಾತಾಡ್ತಿ ನೀ ಅಂತ ಕೇಳೋಕ್ ತಯಾರಾಗಿ ಇರಬೇಕು,” ಎಂದು ಹೇಳಿದರು.
ಇದು ಸೂಕ್ಷ್ಮವಾಗಿ ಗಮನಿಸಬೇಕಾದ ಮಾತು.
ಇಲ್ಲಿ ಕನ್ನೇರಿ ಸ್ವಾಮಿಯ ಭಾಷಣದ ಸ್ಕ್ರಿಪ್ಟ್ ಬರೀತಾ ಇರೋ ಸಂಘ ಪರಿವಾರದ ಶಿಲ್ಪಿಗಳು ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯೋ ಮೇಧಾವಿತನ ತೋರಿಸಿದ್ದಾರೆ.
ನಿಜಗುಣಾನಂದ ಸ್ವಾಮೀಜಿ ಅವರ ವಿರುದ್ಧ ಮುಗ್ದ ಯುವಕರನ್ನ ಪ್ರಚೋದಿಸಬೇಕು.
ಆದರೆ ಏನಾದರು ಕಾನೂನು ಸಮಸ್ಯೆಯಾದರೆ ನಾವು ಹೇಳಿದ್ದು ಪ್ರಶ್ನೆ ಮಾಡಲು ಹಲ್ಲೆ ಮಾಡಲು ಅಲ್ಲ ಎಂದು ಹೇಳಿ ತಪ್ಪಿಸಿಕೊಳ್ಳಲೂ ಸಾಧ್ಯವಾಗಬೇಕು. ಇದು ಅವರ ಕುತಂತ್ರ.
ಕನ್ನೇರಿ ಸ್ವಾಮಿ ನಿಜಗುಣಾನಂದ ಸ್ವಾಮೀಜಿ ಅವರ ಹುಟ್ಟಿನ ಜಾತಿಯ ಬಗ್ಗೆಯೂ ಮಾತನಾಡಿದರು. “ಯಾವ ಜಾತಿಯಲ್ಲಿ ಹುಟ್ಯಾನ ಆ ಜಾತಿಗೆ ಆಗಿಲ್ಲ, ಇನ್ನು ಲಿಂಗಾಯತರಿಗೆ ಏನ್ ಆಗ್ತಾನಾ ಇವ,” ಎಂದು ಕೇಳಿದರು.
ತಮ್ಮ ಭಾಷಣದಲ್ಲಿ ನಿಜಗುಣಾನಂದ ಸ್ವಾಮೀಜಿ ಅವರ ಮೇಲೆ ಕನ್ನೇರಿ ಸ್ವಾಮಿ ಧಾರಾಳವಾಗಿ “ಮುಠಾಳ,” “ಹಲ್ಕಟ್ ನನ್ ಮಗ” ಮುಂತಾದ ಸಂಸ್ಕೃತ ಪದಗಳನ್ನು ಬಳಸಿದರು.
ಇಂತಹ ಭಾಷೆ ಕೇಳಿಯೇ ದೂರದ ದೆಹಲಿಯಲ್ಲಿ ಕುಳಿತಿರುವ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳೂ ಕೂಡ ಕನ್ನೇರಿ ಸ್ವಾಮಿ ಖಾವಿ ಹಾಕಲೂ ಯೋಗ್ಯರಲ್ಲ, ಉತ್ತಮ ಪ್ರಜೆಯಾಗಲೂ ಯೋಗ್ಯರಲ್ಲ ಎಂದು ಖಂಡಿಸಿ ಜಿಲ್ಲೆಗಳಲ್ಲಿ ನಿಷೇದಾಜ್ಞೆ ಎತ್ತಿಹಿಡಿದಿದ್ದು.
ಕಲ್ಬುರ್ಗಿ ಹತ್ಯೆಯ ಪಾಠ

“ಕಲ್ಬುರ್ಗಿಯವರನ್ನು ಟಾರ್ಗೆಟ್ ಮಾಡಿದ ರೀತಿಯಲ್ಲಿಯೇ ನಿಜಗುಣಾನಂದ ಸ್ವಾಮೀಜಿ ಅವರನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಅನಂತಮೂರ್ತಿ ಆತ್ಮಕಥೆಯಲ್ಲಿ ಬರುವ ಪ್ರಸಂಗವೊಂದನ್ನು ಕಲ್ಬುರ್ಗಿ ತಮ್ಮ ಭಾಷಣದಲ್ಲಿ ಹೇಳಿದರು. ವೈದಿಕ ಮಾಧ್ಯಮಗಳು ಅದನ್ನು ವಾರಗಟ್ಟಲೆ ತೋರಿಸಿ ತೋರಿಸಿ ಹಿಂದುತ್ವವಾದಿಗಳನ್ನು ರೊಚ್ಚಿಗೆಬ್ಬಿಸಿದರು,” ಎಂದು ಶರಣ ತತ್ವ ಚಿಂತಕ ಟಿ ಆರ್ ಚಂದ್ರಶೇಖರ್ ಹೇಳಿದರು.
“ನಿಜಗುಣಾನಂದ ಸ್ವಾಮೀಜಿ ಅವರ ವಿಷಯದಲ್ಲೂ ಉದ್ದೇಶಪೂರ್ವಕವಾಗಿ ಇದೇ ತಂತ್ರಗಾರಿಕೆ ಬಳಸುತ್ತಿದ್ದಾರೆ. ಪೂಜ್ಯರಿಗೆ ಸರಿಯಾದ ರಕ್ಷಣೆ ಸಿಗುವಂತೆ ನೋಡಿಕೊಳ್ಳುವುದು ಬಸವ, ಪ್ರಗತಿಪರ ಸಂಘಟನೆಗಳ ಜವಾಬ್ದಾರಿ. ಬಹಿರಂಗವಾಗಿ ಹಿಂಸೆಗೆ ಪ್ರಚೋದಿಸಿ, ಸಮಾಜದ ಶಾಂತಿ ಕದಡುತ್ತಿರುವ ಕನ್ನೇರಿ ಸ್ವಾಮಿ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲು ಸರಕಾರದ ಮೇಲೆ ಒತ್ತಡ ತರಬೇಕು,” ಎಂದು ಎಚ್ಚರಿಸಿದರು.
“ಇವರಿಗೆ ನಿಜಗುಣಾನಂದ ಸ್ವಾಮೀಜಿ ಒಂದು ನೆಪ ಅಷ್ಟೇ. ತಮ್ಮನ್ನು ಯಾರೇ ಸೈದ್ಧಾಂತಿಕವಾಗಿ ವಿರೋಧಿಸಿದರೂ ಇಷ್ಟು ಕ್ರೂರವಾಗಿ ಟಾರ್ಗೆಟ್ ಮಾಡ್ತೀವಿ ಎಂದು ಬೆದರಿಸುವುದು ಇವರ ಉದ್ದೇಶ,” ಎಂದು ಹೇಳಿದರು.

This kanneri swamy says he is Siddheshwar Swami shishya, Siddheshwar appaji used to speak with so much clarity, ATLEAST TO MAINTAIN RESPECT FOR SIDDHESHWAR APPAJI THIS MAN SHOULD COME OPENLY AND DISCUSS PHILOSOPHICALLY, AS A WELL BEHAVED CITIZEN, instead of talking like a filmy villain and doing this tu tu mai mai in public, to appease some political party and some set of people.
His behaviour clearly shows he is not interested in discussing philosophical differences, he is clearly making so much noise to disturb minds of people and motivate one set of people to target another set of people.
Society get spoiled because of such people, who always do some noise for selfish agenda.
Hope Basavanna, Siddheshwar Appaji, enlighten these people asap.