ಒಗಟಾಗಿರುವ ಕೂಡಲಸಂಗಮದ ಸಾರಂಗ ಮಠ

ಸಾರಂಗ ಮಠ

ಹಿಂಸೆಯಿಂದ ಪಂಚಾಚಾರ್ಯರಲ್ಲಿ ಲೀನವಾದ ಸಾರಂಗ ಮಠಗಳು

ಶ್ರೀಶೈಲದ ಸಾರಂಗ ಮಠದ ಮೇಲೆ ನಡೆದ ದಾಳಿ

ನಾಥ ಜೋಗಿಗಳು, ಸಿದ್ದರು ವೀರಶೈವರಲ್ಲಿ ಲೀನವಾದರು

ಒಗಟಾಗಿರುವ ಕೂಡಲಸಂಗಮದ ಸಾರಂಗ ಮಠ

ಕೂಡಲಸಂಗಮ ಮೂಲತಃ ನಾಥ ಕ್ಷೇತ್ರವಾಗಿತ್ತು. ನಾಥ ಗುರು ಮತ್ಸೇಂದ್ರನಾಥರ ಶಿಷ್ಯ ಚೌರಂಗಿನಾಥರು ಶ್ರೀಶೈಲ, ಕುಂಭಕೋಣಂನಂತೆಯೇ ಕೂಡಲಸಂಗಮದಲ್ಲಿಯೂ ಸಾರಂಗ ಮಠವನ್ನು ಸ್ಥಾಪಿಸಿದರು.

ಇಂದಿಗೂ ಕೂಡಲ ಸಂಗಮದಲ್ಲಿ ಮೇಲಿನ ಮಠ, ಕೆಳಗಿನ ಮಠ ಎಂಬ ಎರಡು ಸಾರಂಗ ಮಠಗಳಿವೆ. ಆದರೆ ಅವು ಇಂದು ಪಂಚಾಚಾರ್ಯ ಪರಂಪರೆಯ ಮರುಳ ಸಿದ್ದ ಶಾಖೆಗೆ ಸೇರಿಹೋಗಿವೆ.

ನಾಥ ಮಠವಾಗಿ ಶುರುವಾದ ಕೂಡಲ ಸಂಗಮದ ಸಾರಂಗ ಮಠಗಳು ಯಾವುದೋ ಕಾಲಘಟ್ಟದಲ್ಲಿ ಪಂಚಾಚಾರ್ಯ ಪರಂಪರೆ ಸೇರಿಕೊಂಡವು. ಆದರೆ ಈ ಪಲ್ಲಟದ ಬಗ್ಗೆ ಎಲ್ಲೂ ದಾಖಲೆಗಳಿಲ್ಲ.

17ನೇ ಶತಮಾನದ ಗುರುಲಿಂಗಜಂಗಮ ಚಾರಿತ್ರ ಶ್ರೀಶೈಲ, ಕುಂಭಕೋಣಂನ ಸಾರಂಗಮಠಗಳ ಮೇಲೆ ನಡೆದ ದಾಳಿಯನ್ನು ದಾಖಲಿಸುತ್ತದೆ. ಆದರೆ ಇಲ್ಲಿನ ಸಾರಂಗ ಮಠಗಳ ಪರಿವರ್ತನೆಯ ಬಗ್ಗೆ ಮೌನವಹಿಸಿದೆ.

ಸಾರಂಗ ಮಠಗಳು ಡಾ ಫ ಗು ಹಳಕಟ್ಟಿಯವರ ಗಮನವನ್ನೂ ಸೆಳೆದಿದ್ದವು. ಇಲ್ಲಿನ ಸಾರಂಗ ಮಠಗಳಲ್ಲಿರುವ ಹಸ್ತಪ್ರತಿಗಳನ್ನು ಬಳಸಿ ಅವರು ‘ಸಾರಂಗಮಠಾದೀಶ್ವರರು ಎಂಬ ಪುಸ್ತಕ ಪ್ರಕಟಿಸಿದರು.

ಅದರಲ್ಲಿ ಹಲವಾರು ಮಠಾದೀಶ್ವರರ ಚರಿತ್ರೆಯಿದೆ. ಅಲ್ಲಲ್ಲಿ ಸ್ಥಾಪಿತವಾದ ಸಾರಂಗ ಮಠಗಳ ವಿವರಗಳಿವೆ. ಆದರೆ ಈ ಮಠಗಳು ನಾಥದಿಂದ ವೀರಶೈವಕ್ಕೆ ಹೊರಳಿದ ಬಗ್ಗೆ ಯಾವುದೇ ಮಾಹಿತಿಯಿಲ್ಲ.

(‘ಚೌರಂಗಿ ಮಠ > ಸಾರಂಗ ಮಠ’ ಲೇಖನದಿಂದ ಆಯ್ದ ಮತ್ತು ಸಂಕ್ಷಿಪ್ತಗೊಳಿಸಿರುವ ಭಾಗ – ಮಾರ್ಗ 7)

Share This Article
Leave a comment

Leave a Reply

Your email address will not be published. Required fields are marked *