ಠಾಣೆ ಮೆಟ್ಟಲೇರಿದ ಪ್ರಕರಣ; ಬೀಗ ಹಾಕಿದ ಬಗ್ಗೆ ಮಾಹಿತಿ ಇಲ್ಲ, ಮೃತ್ಯುಂಜಯ ಶ್ರೀ
ಕೂಡಲಸಂಗಮ
ಕೂಡಲ ಸಂಗಮದಲ್ಲಿ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಟ್ರಸ್ಟಗೆ ಸೇರಿದ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಇರುವ ಪೀಠದ ಕಟ್ಟಡದ ಗೇಟಿಗೆ ಬೀಗ ಹಾಕಲಾಗಿದೆ. ಸುತ್ತಲೂ ಬಂದೋಬಸ್ತ್ ಮಾಡಲಾಗಿದೆ.
ಪೀಠದ ಕಟ್ಟಡದ ಪ್ರವೇಶ, ಹಿಂಬದಿ ದ್ವಾರ ಮತ್ತು ಮೇಲ್ಭಾಗದ ಕೊಠಡಿಗೆ ತೆರಳಲು ಇದ್ದ ದಾರಿಯಲ್ಲಿ ಗೇಟ್ ಅಳವಡಿಸಿ, ಬೀಗ ಹಾಕಲಾಗಿದೆ. ಮಠದ ದ್ವಾರಗಳಿಗೆ ಯಾರು ಬೀಗ ಹಾಕಿದ್ದಾರೆ ಎಂಬುದು ಗೊತ್ತಿಲ್ಲ. ಆದರೆ, ತಿಂಗಳಿನಿಂದ ವ್ಯವಸ್ಥಾಪಕರಾಗಿದ್ದವರು ಬೀಗ ಹಾಕಿದ್ದಾರೆ ಎನ್ನಲಾಗಿದೆ.
‘ಮಠದಲ್ಲಿ ಅಹಿತಕರ ಚಟುವಟಿಕೆಗಳು ನಡೆಯದಿರಲಿ ಎಂಬ ಉದ್ದೇಶದಿಂದ ಗೇಟ್ ಮಾಡಿಸಿ, ಬೀಗ ಹಾಕಲಾಗಿದೆ’ ಎಂದು ಟ್ರಸ್ಟ್ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಹೇಳಿದರು.
‘ಪೀಠಕ್ಕೆ ಬೀಗ ಹಾಕಿದ ಬಗ್ಗೆ ಮಾಹಿತಿ ಇಲ್ಲ. ಹಲವು ದಿನಗಳಿಂದ ಪ್ರವಾಸ ದಲ್ಲಿದ್ದು, ಪೀಠದ ಕಡೆ ಬಂದಿಲ್ಲ’ ಎಂದು ಪಂಚಮಸಾಲಿ ಪೀಠದ ಸ್ವಾಮೀಜಿ ಪ್ರತಿಕ್ರಿಯಿಸಿದರು.

ಠಾಣೆ ಮೆಟ್ಟಲೇರಿದ ಪ್ರಕರಣ
ಜಿಲ್ಲೆಯ ಕೂಡಲಸಂಗಮ ಪೀಠದ ಗೇಟ್ ಹಾಗೂ ಮಠದ ಬಾಗಿಲುಗಳ ಕೀಲಿ ಮುರಿದು ಕೆಲವರು ಅಕ್ರಮವಾಗಿ ಪ್ರವೇಶಿಸಿ ಎಂದು ಹುನಗುಂದ ಪೊಲೀಸ್ ಠಾಣೆಯಲ್ಲಿ ಚಂದ್ರಶೇಖರ ಚಿತ್ತರಗಿ ಎಂಬುವವರು ದೂರು ನೀಡಿದ್ದಾರೆ.
ಭಾನುವಾರ ರಾತ್ರಿ ಮನೆಗೆ ಬಂದಿದ್ದ ಮಲ್ಲನಗೌಡ ಪಾಟೀಲ ಹಾಗೂ ಬಾಬುಗೌಡ ಪಾಟೀಲ ಪೀಠದ ಕೀಲಿ ನೀಡುವಂತೆ ಒತ್ತಾಯಿಸಿ ಜೀವ ಬೆದರಿಕೆ ಹಾಕಿದ್ದರು.
ಜೇವರ್ಗಿ ತಾಲ್ಲೂಕಿನ ಕುಳಗೇರಿಯ ಮಲ್ಲನಗೌಡ ಪಾಟೀಲ, ಯಡ್ರಾಮಿಯ ಬಾಬುಗೌಡ ಪಾಟೀಲ, ಚಂದ್ರಶೇಖರ ದೇವಲಾಪುರ, ಸುರೇಶ ಹೊಸಪೇಟೆ, ಚೌಗಲಸಾ ಇನ್ನಿತರರು ಸೇರಿ ಪೀಠದ ಒಳಗಡೆ ಹೋಗಿ, ಮುಖ್ಯ ಗೇಟ್, ಮಠದ ಕಟ್ಟಿಗೆ ಬಾಗಿಲು ಕೀಲಿ ಮುರಿದು ಅತಿಕ್ರಮವಾಗಿ ಒಳ ಪ್ರವೇಶಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಉಚ್ಚಾಟಿತ ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ಪರ ಕೆಲಸ ಮಾಡುತ್ತಿದ್ದಾರೆಂಬ ಆರೋಪದ ಮೇಲೆ ಜಯಮೃತ್ಯುಂಜಯ ಶ್ರೀಗಳಿಗೆ ಪಂಚಮಸಾಲಿ ಟ್ರಸ್ಟಿನ ಸದಸ್ಯರು ಹಾಗೂ ಸಮುದಾಯದ ಮುಖಂಡರು ಏಪ್ರಿಲ್ ತಿಂಗಳಲ್ಲಿ ಎಚ್ಚರಿಕೆ ನೀಡಿದ್ದರು.
ಎರಡೂ ಬಣಗಳೂ ಪ್ರತ್ಯೇಕ ಸಭೆ ಕರೆದಿದ್ದರಿಂದ ಸಮುದಾಯದಲ್ಲಿ ಗೊಂದಲವುಂಟಾಗಿತ್ತು. ಆಗ ಕೆಲವು ಹಿರಿಯರು ಮಧ್ಯ ಪ್ರವೇಶಿಸಿ ಸಭೆಗಳನ್ನು ಮುಂದೂಡಿಸಲು ಯಶಸ್ವಿಯಾಗಿದ್ದರು.
ಲಿಂಗಾಯತ ಸಮಾಜ ಒಣ ಪ್ರತಿಷ್ಠೆ, ಅಹಂಕಾರ ಹಾಗು ಒಳ ಜಗಳ ದಲ್ಲೇ ಕಾಲ ಕಳೆಯುತ್ತಾರೆ. ಬಸವಣ್ಣ ನವರ ಎಲ್ಲರೂ ಸಮಾನತೆ ಇಂದ ಕೂಡಿ ಬಾಳುವ ಸಂದೇಶ ವನ್ನೇ ಗಾಳಿಗೆ ತುರಿದ್ದಾರೆ
😳
ಪಂಚಮಸಾಲಿ ಬೇರೆ ಪೀಠ ಮಾಡಿದ್ದೆ ಬಸವಣ್ಣನವರಿಗೆ ಅನ್ಯಾಯ ಮಾಡಿದಹಾಗೆ