ಇತಿಮಿತಿಯಲ್ಲಿ ಇರಬೇಕು, ಅತೀ ಆಗಬಾರದು: ಜಯ ಮೃತ್ಯುಂಜಯ ಸ್ವಾಮೀಜಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಎಚ್ಚರಿಕೆ
ಬೆಳಗಾವಿ
ಇಡೀ ಪಂಚಮಸಾಲಿ ಸಮುದಾಯವನ್ನು ಯತ್ನಾಳ್ ಅವರಿಗೆ ಬರೆದುಕೊಟ್ಟಿಲ್ಲ. ಮೀಸಲಾತಿ ಹೋರಾಟ ಪಕ್ಷಾತೀತವಾಗಿರಬೇಕು, ಎಂದು ಕೂಡಲಸಂಗಮ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರ ಇತ್ತೀಚಿನ ನಡೆ ನುಡಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ರವಿವಾರ ನಗರದಲ್ಲಿ ಸುದ್ದಿಘೋಷ್ಠಿಯಲ್ಲಿ ಮಾತನಾಡುತ್ತ ಯತ್ನಾಳ್ ಉಚ್ಚಾಟನೆ ಪ್ರತಿಭಟಿಸಲು ಏಪ್ರಿಲ್ 13ರಂದು ಕರೆ ನೀಡಿರುವ ಮೃತ್ಯುಂಜಯ ಶ್ರೀಗಳಿಗೆ ಪ್ರತಿಕ್ರಿಯೆ ನೀಡಿದರು.
ಪಂಚಮಸಾಲಿ ಶ್ರೀಗಳು ಪ್ರೆಸ್‌ಮೀಟ್ ಮಾಡಿರೋದನ್ನ ನಾನು ನೋಡಿರುವೆ. ಅದರಲ್ಲಿ 80ರಷ್ಟು ಪಂಚಮಸಾಲಿಗಳು ಬಿಜೆಪಿಯಲ್ಲಿ ಅಂತಾ ಹೇಳಿದ್ದಾರೆ. ಇದರಿಂದ ನನ್ನ ಮನಸ್ಸಿಗೆ ಬಹಳಷ್ಟು ನೋವಾಗಿದೆ. ಶ್ರೀಗಳು ಆ ರೀತಿ ಮಾತನಾಡಬಾರದಿತ್ತು.
ಪಂಚಮಸಾಲಿ ಹೋರಾಟದಲ್ಲಿ ನಾವೆಲ್ಲಾ ಪಕ್ಷಾತೀತವಾಗಿ ಪಾಲ್ಗೊಂಡಿದ್ದೆವು. ಕಾಂಗ್ರೆಸ್ ಪಕ್ಷದ ಶಾಸಕರೂ ಗೆಲ್ಲಲು ಲಿಂಗಾಯತ ಪಂಚಮಸಾಲಿಗರು ಕಾರಣ ಎಂದು ಅಸಮಾಧಾನ ಹೊರಹಾಕಿದರು.
ಬೆಂಬಲವಿಲ್ಲ
ನೀವು ಏಪ್ರಿಲ್ 13ರ ಪ್ರತಿಭಟನೆಗೆ ಬೆಂಬಲಿಸುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಾನು ಕಾಂಗ್ರೆಸ್ ಪಕ್ಷ, ಅವರು ಬಿಜೆಪಿಯವರು. ಹಾಗಾಗಿ, ಅವರ ಪ್ರತಿಭಟನೆಗೆ ನಾವು ಬೆಂಬಲಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಸಮಾಜ ಮತ್ತು ಪಕ್ಷ ಬೇರೆ ಬೇರೆ, ಎಂದು ಹೇಳಿದರು.
ಸರ್ಕಾರಕ್ಕೆ ಸ್ವಾಮೀಜಿ ಮತ್ತು ಮಠಮಾನ್ಯರು ಮಾರ್ಗದರ್ಶನ ಕೊಡಬೇಕು. ಎಲ್ಲಾದರೂ, ಏನಾದರೂ ತಪ್ಪಿದ್ದರೆ ಸಲಹೆ ನೀಡಬೇಕು. ಅದು ಇತಿಮಿತಿಯಲ್ಲಿ ಇರಬೇಕು. ಅದು ಅತೀ ಆಗಬಾರದು ಎಂದು ಸಚಿವರು ಅಸಮಾಧಾನ ಹೊರಹಾಕಿದರು.
ಬಿಜೆಪಿ ಗುರು
ಮತ್ತೊಬ್ಬ ಪ್ರಮುಖ ಪಂಚಮಸಾಲಿ ನಾಯಕ ವಿಜಯಾನಂದ ಕಾಶೆಪ್ಪನವರೂ ಬಿಜೆಪಿ ಮತ್ತು ಯತ್ನಾಳರಿಗೆ ಸಂಬಂಧಿಸಿದಂತೆ ಮೃತ್ಯುಂಜಯ ಶ್ರೀಗಳ ನಡೆಯನ್ನು ಪ್ರಶ್ನಿಸಿದ್ದಾರೆ.
ಇತ್ತೀಚೆಗೆ ಕೊಡಲಸಂಗಮದಲ್ಲಿ ಮಾತನಾಡುತ್ತ ಕಾಶಪ್ಪನವರ್ ಮೃತ್ಯುಂಜಯ ಶ್ರೀಗಳು ‘ಬಿಜೆಪಿ ಗುರುಗಳು’ ಎಂದು ಕರೆದಿದ್ದರು.
I think it’s better to be away from political issues