ಬಸವಣ್ಣನವರ ಬಗ್ಗೆ ಕೀಳಾಗಿ ಮಾತಾಡಿದಕ್ಕೆ ಯತ್ನಾಳ್ ಉಚ್ಚಾಟನೆ: ವಿಜಯಾನಂದ ಕಾಶಪ್ಪನವರ

ಮಾತೆತ್ತಿದ್ದರೆ ಹಿಂದುತ್ವ; ತಾಕತ್ತಿದ್ರೆ ಯತ್ನಾಳ ಈ ಸಾರಿ ಪಕ್ಷೇತರರಾಗಿ ನಿಲ್ಲಲ್ಲಿ; ಜಯಮೃತ್ಯುಂಜಯ ಶ್ರೀ ಬಿಜೆಪಿ ಗುರು

ಕೂಡಲಸಂಗಮ

ಬಸವಣ್ಣನವರ ಬಗ್ಗೆ ಕೀಳಾಗಿ ಮಾತಾಡಿದಕ್ಕೆ ಬಸವನ ಗೌಡ ಯತ್ನಾಳರಿಗೆ ಈ ಗತಿ ಬಂದಿದೆ. ಅವರಿಗೆ ತಾವು ಜನಿಸಿದ ಧರ್ಮದ ಬಗ್ಗೆ ಗೌರವ ಇಲ್ಲ, ಯಾವ ಧರ್ಮದ ಬಗ್ಗೆಯೂ ಗೌರವ ಇಲ್ಲ. ಸಮುದಾಯ ಇಟ್ಟುಕೊಂಡು ಯತ್ನಾಳ ರಾಜಕಾರಣ ಮಾಡುತ್ತಿರುವುದು ಸರಿಯಲ್ಲ, ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.

ಗುರುವಾರ ಕೂಡಲಸಂಗಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಅವರ ಬಗ್ಗೆ ಸರಿಯಾದ ನಿರ್ಣಯವನ್ನು ಬಿಜೆಪಿ ಪಕ್ಷ ಕೈಗೊಂಡಿದೆ. ಯತ್ನಾಳ ಕಾಂಗ್ರೇಸ್ ಪಕ್ಷ ಸೆರ್ಪಡೆ ಆಗುತ್ತೆನೆ ಎಂದರೆ ನನ್ನ ವಿರೋಧ ಇದೆ. ನಮ್ಮ ಪಕ್ಷದ ಹೈಕಮಾಂಡಗೆ ನನ್ನ ಅಭಿಪ್ರಾಯ ತಿಳಿಸುವೆ ಎಂದರು.

ಮಾತೆತ್ತಿದರೆ ಹಿಂದುತ್ವ

ಮಾತೆತ್ತಿದರೆ ಹಿಂದುತ್ವ ಎನ್ನುವ ಯತ್ನಾಳಗೆ ಭಾರತ ಎಂದರೆ ಸರ್ವಜನಾಂಗದ ಶಾಂತಿಯ ತೋಟ ಎನ್ನುವುದು ಗೊತ್ತಿಲ್ಲ. ಲಿಂಗಾಯತ ಪಂಚಮಸಾಲಿ ಸಮಾಜದಲ್ಲಿ ಜನಸಿದ್ದೇನೆ ಎನ್ನುವ ಅವರಿಗೆ ಲಿಂಗಾಯತ ಧರ್ಮ ಎನ್ನುವುದು ಗೊತ್ತಿಲ್ಲವೇ ಎಂದರು. ಏನು ದೇಶದಲ್ಲಿ ಒಂದೇ ಜನಾಂಗವಿದೆಯೇ, ಯಾವಾಗಲೂ ಮುಸ್ಲಿಮರನ್ನ, ಅಲ್ಪಸಂಖ್ಯಾತರನ್ನ ಟಾರ್ಗೆಟ್ ಮಾಡಿ ಮಾತಾಡೋದು.

ಅದೇ ವಿಷಯದ ಮೇಲೆ ಯತ್ನಾಳ ಗೆದ್ದಿದ್ದಾರೆ. ತಾಕತ್ತಿದ್ರೆ ಈ ಸಾರಿ ಪಕ್ಷೇತರರಾಗಿ ನಿಲ್ಲಲ್ಲಿ ಗೊತ್ತಾಗುತ್ತೆ. ಉಚ್ಚಾಟನೆಗೊಂಡ ಇವರು ರಾಜೀನಾಮೆ ಕೊಟ್ಟು ಚುನಾವಣೆಗೆ ನಿಲ್ಲಲಿ. ನಾನೇ ಅವರ ವಿರುದ್ದ ಚುನಾವಣೆಗೆ ನಿಲ್ಲುತ್ತೇನೆ, ಜನ ಬೆಂಬಲ ಯಾರಿಗೆ ಇದೆ ಎಂದು ಗೊತ್ತಾಗುವುದು. ನಡೆ, ನುಡಿ, ಬದ್ದತೆ, ಒಂದು ಪಕ್ಷ ನಿಷ್ಠೆ ಇಲ್ಲದ ಇವರಿಗೆ ಯಾರು ಗೌರವ ಕೊಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಗುರುಗಳು

ಯತ್ನಾಳ ಉಚ್ಚಾಟನೆ ಒಂದು ಪಕ್ಷದ ನಿರ್ಣಯ, ಪಂಚಮಸಾಲಿ ಸಮಾಜ, ಪೀಠದ ನಿರ್ಣಯವಲ್ಲ. ಅದನ್ನು ಗುರುಗಳಾದ ಬಸವ ಜಯಮೃತ್ಯುಂಜಯ ಸ್ವಾಮೀಜಿಗಳು ಅರ್ಥ ಮಾಡಿಕೊಳ್ಳಬೇಕು.

ಗುರುಗಳಿಗೆ ಸಲಹೆ ಕೊಡುವಷ್ಟು ದೊಡ್ಡವ ನಾನಲ್ಲ. ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷನಾಗಿ ನನ್ನ ಕರ್ತವ್ಯ ಮಾಡುತ್ತಿದ್ದೇನೆ. ಪಕ್ಷದ ನಿರ್ಣಯಕ್ಕೆ ಸಮಾಜವನ್ನು ತಳಕು ಹಾಕುವ ಕಾರ್ಯವನ್ನು ಗುರುಗಳು ಮಾಡಬಾರದು.

ಬಸವಜಯಮೃತ್ಯುಂಜಯ ಸ್ವಾಮೀಜಿಯವರು ಯತ್ನಾಳ ಉಚ್ಚಾಟನೆ ವಿಚಾರವಾಗಿ ಹೋರಾಟಕ್ಕೆ ಕರೆ ಕೊಡುವುದಕ್ಕೆ ಅವರಿಗೆ ನೈತಿಕ ಹಕ್ಕಿಲ್ಲ. ಗುರುಗಳೂ ಎಲ್ಲ ನಾಯಕರಿಗೂ ಸಮಾನವಾಗಿರಬೇಕು. ಒಂದು ಪಕ್ಷ, ವ್ಯಕ್ತಿಗೆ ಸಿಮೀತವಾಗಿ ಸಮಾಜ ಬಳಸುತ್ತಿರುವುದು ಖಂಡನೀಯ.

ಗುರುಗಳು ಹಲವಾರು ತಪ್ಪು ಹೆಜ್ಜೆ ಇಟ್ಟಿದ್ದಾರೆ. ಇದನ್ನು ಸಮಾಜ ಗಮನಿಸುತ್ತಿದೆ. ಸಮಾಜದ ಶಾಸಕರಿಗೆ ರಾಜೀನಾಮೆ ಕೊಡಿ ಎಂದು ಕರೆಕೊಟ್ಟರೆ ಯಾರು ರಾಜೀನಾಮೆ ಕೊಡುವುದಿಲ್ಲ. ಯಾವ ಗುರುಗಳನ್ನು ಆಧರಿಸಿ ರಾಜಕಾರಣ ಮಾಡುವುದಕ್ಕೆ ಆಗುವುದಿಲ್ಲ. ನಾವು ಜನರನ್ನು ಆಧರಿಸಿ ರಾಜಕಾರಣ ಮಾಡುತ್ತೆವೆ.

ದೀಪ ಆರುವಾಗ ಜೋರಾಗಿ ಉರಿದು ಆರುತ್ತೆ ಅನ್ನೋದಕ್ಕೆ ಇದೆ ಉದಾಹರಣೆ. ಗುರುಗಳು ಕೂಡಾ ಇಂತಹ ವಿಷಯದಲ್ಲಿ ಕೈಹಾಕುವುದು ಸರಿ ಅಲ್ಲ. ನಾವು ಈಗಾಗಲೇ ಗುರುಗಳನ್ನು ಬಿಜೆಪಿ ಗುರುಗಳು ಅಂತ ಬಿಟ್ಟು ಬಿಟ್ಟಿದ್ದೇವೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ_
https://chat.whatsapp.com/FfnvVrZr7jWFggbitEJjky

Share This Article
9 Comments
  • ಕಾಶಪ್ಪನವರು ಸರಿಯಾಗಿ ಪ್ರತಿಕ್ರಿಯಿಸಿದ್ದಾರೆ. ಲಿಂಗಾಯತ ಸಮಾಜ ಮತ್ತು ಲಿಂಗಾಯತರು ಯಾವ ರಾಜಕಾರಣಿಗಳ ಹಾಗೂ ಯಾವ ಮಠಾಧೀಶರ ಸ್ವತ್ತೂ ಅಲ್ಲ ಮತ್ತು ಅವರ ಗುಲಾಮರೂ ಅಲ್ಲ.

    • ಕಾಶಪ್ಪನವರು ಸರಿಯಾಗಿ ಪ್ರತಿಕ್ರಿಯಿಸಿದ್ದಾರೆ. ಲಿಂಗಾಯತ ಸಮಾಜ ಮತ್ತು ಲಿಂಗಾಯತರು ಯಾವ ರಾಜಕಾರಣಿಗಳ ಹಾಗೂ ಯಾವ ಮಠಾಧೀಶರ ಸ್ವತ್ತೂ ಅಲ್ಲ ಮತ್ತು ಅವರ ಗುಲಾಮರೂ ಅಲ್ಲ. ಲಿಂಗಾಯತ ಸಮಾಜ ಇಂದು ಎಚ್ಚೆತ್ತ ಸಮಾಜವಾಗಿದೆ. ನಮಗೆ ಬಸವಾದಿ ಶರಣರ ಧರ್ಮ ಮತ್ತು ನಮ್ಮ ಅಸ್ಮಿತೆ ಮುಖ್ಯವೇ ಹೊರತು ಇವರ್ಯಾರೂ ಅಲ್ಲ.

    • ಯಾವುದೇ ಅನುಭವಸ್ತ ರಾಜಕಾರಣಿಗಳಿಗೂ ಕಡಿಮೆಯಿಲ್ಲದಂತೆ ಹೇಳಿಕೆ ನೀಡುತ್ತಿರುವ ಈ ಸ್ವಾಮಿಗಳು ಬಸವ ಧರ್ಮ ಮಾನ್ಯತಾ ವಿರೋಧಿ ಯತ್ನಾಳರ ಪರವಾಗಿ ನಿಂತಿರುವುದು ಪಂಚಮಶಾಲಿ ಲಿಂಗಾಯತರಲ್ಲಿ ಗೊಂದಲ ಮೂಡಿಸಿ ತಪ್ಪು ದಾರಿಯಲ್ಲಿ ನಡೆಯುವಂತೆ ಮಾಡಿದೆ. ಬಸವ ಧರ್ಮ ಮಾನ್ಯತೆ ವಿರೋಧಿ ರಾಜಕಾರಣಿಗಳನ್ನು ಲಿಂಗಾಯತ ಸಮಾಜ ಸಹಿಸುವುದಿಲ್ಲ. ಅಂತೆಯೇ ಇಬ್ಬಂದಿ ನೀತಿ ಅನುಸರಿಸುವ ಸ್ವಾಮಿಗಳನ್ನೂ ಸಹ..!

    • ವಿಜಯಾನಂದ ಕಾಶಪ್ಪನವರ್ ಪಂಚಮಸಾಲಿ ಲಿಂಗಾಯತ ಸಂಘದ ಅಧ್ಯಕ್ಷರು.ಅವರು ಒಬ್ಬ ಪ್ರಜ್ಞಾವಂತ ನಾಯಕ ಆಗಿ ಬಸವನಗೌಡ ಪಾಟೀಲ್ ಯತ್ನಾಳ್ ರನ್ನು ಅಶಿಸ್ತಿನ ವರ್ತನೆಗಾಗಿ ಬಿಜೆಪಿ ಪಕ್ಷ 6 ವರ್ಷ ಉಚ್ಚಾಟನೆ ಮಾಡಿರುವ ಬಗ್ಗೆ ಸೂಕ್ತವಾಗಿ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಯತ್ನಾಳ್ ಲಿಂಗಾಯತ ಧರ್ಮದವರು ಆಗಿದ್ದರೂ ತನ್ನ
      ಹುಟ್ಟಿದ ಧರ್ಮದ ಬಗ್ಗೆ ನಿಷ್ಠೆ ತೋರದೆ ಬಸವ ತತ್ವದ ವಿರೋಧಿ ಮನು ವಾದಿಗಳ ಪರ ವಕಾಲತ್ತು ವಹಿಸುವುದು ಅವರ ಚಾಳಿ. ಇತ್ತೀಚೆಗೆ ವಿಶ್ವ ಗುರು ಬಸವಣ್ಣ ನವರ ಬಗ್ಗೆ ಸುಳ್ಳುಗಳನ್ನು ಹೇಳಿ ಅನೇಕ ಪ್ರಜ್ಞಾವಂತ ನಾಗರಿಕರು ಮತ್ತು ಲಿಂಗಾಯತ ಮಠಾಧೀಶರ ಅವಕೃಪೆಗೆ ಗುರಿಯಾದರು. ಕಾಶಪ್ಪನವರ್ ಸಹ ಬಸವಣ್ಣ ನವರ ಬಗ್ಗೆ ಯತ್ನಾಳ್ ಕೀಳಾಗಿ ಮಾತನಾಡಿದ್ದಕ್ಕಾಗಿ ಅವರಿಗೆ ಈ ಗತಿ ಬಂದಿದೆ ಎಂದು ಹೇಳಿರುವುದನ್ನು ನಾನು ಸ್ವಾಗತ ಮಾಡುತ್ತೇನೆ. ಯತ್ನಾಳ್ ಗೌಡರಿಗೆ ಮನುವಾದಿ ನಾಯಕ ಸಂತೋಷ್ B.L. ರನ್ನು ಮೆಚ್ಹಿಸುವುದಕ್ಕಾಗಿ ಅವರ ತಾಳಕ್ಕೆ ತಕ್ಕಂತೆ ಕುಣಿಯುವ ವ್ಯಕ್ತಿ. ಸಂತೋಷ್ ಮಹಾಶಯ ವಿಶ್ವಗುರು ಬಸವಣ್ಣ,ಬಸವ ಧರ್ಮ ಮತ್ತು ಲಿಂಗಾಯತ ನಾಯಕರ ಹಿತಶತ್ರು. 2018 ರ ಮಾರ್ಚ್ ತಿಂಗಳಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಲಿಂಗಾಯತ ಧರ್ಮದ ಅನುಯಾಯಿಗಳಿಗೆ ಅಲ್ಪ ಸಂಖ್ಯಾತ ಸ್ಥಾನಮಾನ ನೀಡಲು ಕ್ಯಾಬಿನೆಟ್ ನಲ್ಲಿ ತೀರ್ಮಾನ ಕೈಗೊಂಡು ಅದರ ಅಂತಿಮ ಅನುಮೋದನೆಗಾಗಿ ಕೇಂದ್ರಕ್ಕೆ ಕಳುಹಿಸಿಕೊಡಲಾಯಿತು. ಲಿಂಗಾಯತರಿಗೆ ಅಲ್ಪಸಂಖ್ಯಾತ ಸ್ಥಾನ ಮಾನ ತಪ್ಪಿಸಲು ಬಿಜೆಪಿ ಪಕ್ಷ ಕುತಂತ್ರ ಮಾಡಿ ಶಿಫಾರಸ್ಸನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದು ಕುಂಟು ನೆಪಗಳನ್ನು ಮುಂದು ಮಾಡಿ ರಾಜ್ಯಕ್ಕೆ ವಾಪಸ್ ಕಳುಹಿಸಲಾಯಿತು. ಕೂಡಲ ಸಂಗಮದ ಪಂಚಮಸಾಲಿ ಲಿಂಗಾಯತ ಪೀಠದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಲಿಂಗಾಯತ ಧರ್ಮದ ಅಲ್ಪ ಸಂಖ್ಯಾತ ಸ್ಥಾನಮಾನದ ಹೋರಾಟದ ಮುಂದಾಳು ಆಗಿದ್ದರು. ಪಂಚಮಸಾಲಿ ಗಳು ಲಿಂಗಾಯತರಲ್ಲಿ ಬಹುಸಂಖ್ಯಾತರು ಎಂದು ಅರಿತು ಮನುವಾದಿಗಳು ಪಂಚಮಸಾಲಿ ಸಮಾಜವನ್ನ ಲಿಂಗಾಯತ ಧರ್ಮದ ಹೋರಾಟದಿಂದ ಹೊರಕ್ಕೆ ತರಲು 2018 ರ ವಿಧಾನಸಭಾ ಚುನಾವಣೆಯಲ್ಲಿ ಯಡ್ಯೂರಪ್ಪ ರನ್ನು ಮುಂದೆ ಬಿಟ್ಟು ಹಿಂದುಳಿದ ವರ್ಗಗಳ 2 ಎ ಮೀಸಲಾತಿ ಕೊಡುವ ಆಸೆ ತೋರಿಸಿ ಲಿಂಗಾಯತ ಒಗ್ಗಟ್ಟನ್ನು ಒಡೆದು ಅಧಿಕಾರಕ್ಕೆ ಬಂದರು. ಪಂಚಮ ಸಾಲಿಗಳು ಅಲ್ಪ ಸಂಖ್ಯಾತ ಸ್ಥಾನಮಾನ ನೀಡುವ ಪ್ರಯತ್ನ ಮಾಡಿ ದ್ದವರನ್ನು ಮರೆತು 2 ಎ ಮೀಸಲಾತಿ ಆಸೆ ತೋರಿಸಿದವರ ಪರ ನಿಂತು ಅಧಿಕಾರಕ್ಕೆ ತಂದರು. ಯಡ್ಯೂರಪ್ಪ ತಾವು ಚುನಾವಣಾ ಪೂರ್ವದಲ್ಲಿ ಕೊಟ್ಟ ಮಾತಿನಂತೆ ನಡೆದುಕೊಳ್ಳಲಿಲ್ಲ. ಇದನ್ನೇ ನೆಪ ಮಾಡಿಕೊಂಡು ಬಸವ ಜಯಮೃತ್ಯುಂಜಯ ಸ್ವಾಮೀಜಿ ರವರನ್ನು ಬಳಸಿಕೊಂಡು ಯಡ್ಯೂರಪ್ಪ ರನ್ನು ಮುಖ್ಯ ಮಂತ್ರಿ ಸ್ಥಾನದಿಂದ ಕೆಳಗೆ ಇಳಿಸಲು ಸಂತೋಷ್ ಯತ್ನಾಳ್ ಗೌಡರಿಗೆ ಸುಪಾರಿ ಕೊಟ್ಟು ಯಶಸ್ವಿಯಾದರು. ಅನಂತರ ಅಧಿಕಾರಕ್ಕೆ ಬಂದ ಬಸವರಾಜ್ ಬೊಮ್ಮಾಯಿ ಆಡಳಿತ ಕಾಲದಲ್ಲಿ 2ಎ ಮೀಸಲಾತಿ ಹೋರಾಟ ಸಾಂಕೇತಿಕವಾಗಿ ಮುಂದುವರೆಸಿದರು. ಬೊಮ್ಮಾಯಿ ಪಂಚನಸಾಲಿಗಳಿಗೆ 2 ಎ
      ಮೀಸಲಾತಿ ಕೊಡದೆ ಅವರನ್ನು ಮೂರು ದಾರಿಯಲ್ಲಿ ಕುಳಿಸಿ 2ಡಿ ಕೊಟ್ಟು ಸ್ವಾಮೀಜಿಗೆ ದಾರಿ ತಪ್ಪಿಸಿದರು. ಸ್ವಾಮೀಜಿ 2023 ರ ಚುನಾವಣೆ ಪೂರ್ವದಲ್ಲಿ ಮೀಸಲಾತಿಗಾಗಿ ತಾವು ನಡೆಸುತ್ತಿದ್ದ ಹೋರಾಟ ಕೊನೆ ಗೊಳಿಸಿದರು. ಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯವಿಲ್ಲ ಎಂಬ ಗಾದೆಮಾತು ಪಂಚಮಸಾಲಿ ಅನ್ವಯ ಆಗುವಂತೆ ಮಾಡಿದರು. ಇದರ ಹಿಂದೆ ನಿಂತಿದ್ದವರು ಯತ್ನಾಳ್ ಗೌಡರು. ಇದೇ ಯತ್ನಾಳ್ ಗೌಡರನ್ನು ಬಿಟ್ಟು ಬಸವ ಜಯಮೃತ್ಯುಂಜಯ ಸ್ವಾಮೀಜಿ ಯ ವರನ್ನು ಬಸವ ತತ್ವದಿಂದ ವಿಮುಖ ಮಾಡಿಸಿ ಮನುವಾದಕ್ಕೆ ಒಗ್ಗಿಸಿ ಬಿಜೆಪಿ ಪಕ್ಷದ ಇಚ್ಚೆಯಂತೆ ಕಾರ್ಯ ಕ್ರಮ ಕೈಗೊಳ್ಳುವಂತೆ ಮಾಡಿದರು. ಎಲ್ಲಾ ಪಕ್ಷಗಳನ್ನೂ ಸಮಾನವಾಗಿ ನೋಡಬೇಕಾದ ಸ್ವಾಮೀಜಿ ಕಾಶಪ್ಪನವರ್ ಮಾತಿನಂತೆ ಪಕ್ಕಾ ಬಿಜೆಪಿ ಸ್ವಾಮೀಜಿ ಆದರು. ಬಿಜೆಪಿ ಆಡಳಿತ ಕಾಲದಲ್ಲಿ ಸಾಂಕೇತಿಕ ಹೋರಾಟ ಮಾಡುತ್ತಿದ್ದ ಸ್ವಾಮೀಜಿ ಕಾಂಗ್ರೆಸ್ ಆಡಳಿತ ಕಾಲದಲ್ಲಿ ಕೊಡಲಾಗದ 2ಎ ಮೀಸಲಾತಿಗಾಗಿ ವಿಧಾನ ಸೌಧಕ್ಕೆ ಬಲ ಪ್ರಯೋಗದಿಂದ ಮುತ್ತಿಗೆ ಹಾಕಲು ಯತ್ನಿಸಿ ವಿಫಲರಾದರು. ಸ್ವಾಮೀಜಿ ಯಾವುದೇ ಪಕ್ಷದ ಪರವಾಗಿ ನಿಲ್ಲದೆ ಪಕ್ಷಾತೀತವಾಗಿ ಮುಂದೆ ನಡೆದುಕೊಳ್ಳಲಿ ಎಂದು ಆಶಿಸುತ್ತೇನೆ. ಅವರಲ್ಲಿ ಮಸಕು ಆಗಿರುವ ಬಸವ ಪ್ರಜ್ಞೆ ಜಾಗೃತ ಆಗಲಿ ಎಂದು ನಾನು ಬಯಸುತ್ತೇನೆ. ಅವರಿಗೆ ಅಧಮ್ಯ ಶಕ್ತಿಯನ್ನು ಬಸವ ತತ್ವದ ಪ್ರಚಾರಕ್ಕಾಗಿ ಮೀಸಲು ಇಡಲಿ. ಬಿಜೆಪಿ ಪ್ರಭಾವದಿಂದ ಹೊರಗೆ ಬರುತ್ತಾರೆ ಎಂಬ ಆಶಾಭಾವನೆ ನನಗೆ ಇದೆ.

    • These fools are responsible for decline of our culture. They still blind and unable to current scenario of the society. This is not 13th century. Modern problem required modern solutions.

  • ಲಿಂಗಾಯತ ಧರ್ಮ ಗುರು ಬಸವಣ್ಣವರನನಾ ಅವಮಾನಿಸಿದವರನನು ಜೀವಮಾನದಲಿ ಅವರಿಗೆ ಕ್ಷಮೆ ಇಲ್ಲಾ.

  • ನಾಲಾಯಕರೆ ಮುಂದೆ ಕಾಲ ಬಹಳ ಕಮ್ಮಿ ಇದೇ ನಮ್ಮ ಬಸನ್ ಗೌಡರಂತ್ತಾ ನಾಯಕರು ಸಿಗೋದು ೧೦೦ ವಶಕ್ಕೆ ಒಬ್ಬರು ಮಾತ್ರ ಯಚರಾಗಿ ಲಿಂಗಾಯತರು ಇನ್ನೂ ಕಾಲ ಮಿಂಚಿಲ್ಲ.

  • ಗುರುಲಿಂಗಪ್ಪ ಹೊಗತಾಪುರ ಬೀದರಜಿಲ್ಲೆ ಬೀದರ says:

    ಇಂಥ ಎಡಬಿಡಂಗಿ ರಾಜಕಾರಣಿ ಮನುಷ್ಯನಿಗೆ ತಕ್ಕ ಶಾಸ್ಥಿ ಆಗಿದೆ. ಯಾವ ಹಿಂದುತ್ವವಾದಿಗಳೂ ಈ ಯತನಾಳನ ಕೖ ಹಿಡಿಯುವುದಿಲ್ಲ. ಉಂಡ ಎಲೆಯಂತೆ ಇಂಥವರನ್ನುತಿಪ್ಪೆಗೆ ಎಸೆಯುತ್ತಾರೆ.

Leave a Reply

Your email address will not be published. Required fields are marked *