ಪಂಚಮಸಾಲಿ ಸಮಾಜದ ಎರಡೂ ಸಭೆ ಮುಂದೂಡಿಕೆ; ಗೊಂದಲಕ್ಕೆ ತಾತ್ಕಾಲಿಕ ಅಂತ್ಯ

ಕೂಡಲಸಂಗಮ

ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಟ್ರಸ್ಟ್ ನೂತನ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಎಪ್ರಿಲ್ ೧೯ ರಂದು, ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯಮೃತ್ಯುಂಜಯ ಸ್ವಾಮೀಜಿ ಎಪ್ರಿಲ್ ೨೦ ರಂದು ಕೂಡಲಸಂಗಮ ಪಂಚಮಸಾಲಿ ಪೀಠದಲ್ಲಿ ಕರೆದಿದ್ದ ಪ್ರತ್ಯೇಕ ಸಭೆಗಳಿಂದ ಸಮಾಜದ ಜನರಲ್ಲಿ ಗೊಂದಲ ಉಂಟಾಗಿತ್ತು. ಶುಕ್ರವಾರ ಇಬ್ಬರೂ ಸಭೆಗಳನ್ನು ಮುಂದೂಡುವ ಮೂಲಕ ಗೊಂದಲಕ್ಕೆ ತಾತ್ಕಾಲಿಕ ಅಂತ್ಯ ಹಾಡಿರುವರು.

ಶುಕ್ರವಾರ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದಲ್ಲಿ ಬಸವಜಯಮೃತುಂಜಯ ಸ್ವಾಮೀಜಿ ಸುದ್ದಿಗಾರರೊಂದಿಗೆ ಮಾತನಾಡಿ ಪಂಚಮಸಾಲಿ ಸಮುದಾಯಕ್ಕೆ ೨ಎ ಮೀಸಲಾತಿ ಪಡೆಯುವ ಕುರಿತು ಚರ್ಚಿಸಲು, ಸಮಾಜದಲ್ಲಿಯ ಭಿನ್ನಾಭಿಪ್ರಾಯಗಳಿಗೆ ಅಂತ್ಯ ಹಾಡಲು ಎಪ್ರಿಲ್ ೨೦ ರಂದು ಪಂಚಮಸಾಲಿ ಪೀಠದಲ್ಲಿ ಕರೆಯಲಾದ ರಾಜ್ಯ ಮಟ್ಟದ ಸಭೆಯನ್ನು ಮುಂದೂಡಲಾಗಿದೆ. ಸಭೆಗೆ ಲಕ್ಷಾಂತರ ಭಕ್ತರು ಬರಲು ಸಿದ್ದತೆ ಮಾಡಿಕೊಂಡಿದ್ದರು.

ಸಮಾಜದ ಶಾಸಕರಾದ ವಿನಯ ಕುಲಕರ್ಣಿ, ಮಾಜಿ ಸಚಿವ ಎ.ಬಿ. ಪಾಟೀಲ, ಮಾಜಿ ಶಾಸಕ ಎಚ್.ಎಸ್. ಶಿವಶಂಕರ ಮಧ್ಯಸ್ಥಿಕೆ, ನಂಬಿಕೆಯಿಂದ ಸಮಾಜದ ಒಗ್ಗಟ್ಟನ್ನೂ ಮುಂದುವರಿಸಿಕೊಂಡು ಹೊಗಬೇಕು, ಭಿನ್ನಾಭಿಪ್ರಾಯ, ಗೊಂದಲ ಇರಬಾರದು ಎಂಬ ಉದ್ದೇಶದಿಂದ ಮುಂಡೂಡಲಾಗಿದೆ.

ಸಮಾಜದ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ಸಿ.ಸಿ.ಪಾಟೀಲ, ಅರವಿಂದ ಬೆಲ್ಲದ, ಸಿದ್ದು ಸವದಿ, ಮುಖಂಡರಾದ ಪಿ.ಸಿ. ಸಿದ್ದನಗೌಡರ, ಸಂಗಣ್ಣ ಕರಡಿ, ಈರಣ್ಣ ಕಡಾಡಿ, ಸಮಾಜದ ಜಿಲ್ಲಾ ಘಟಕದ ಮುಖಂಡರು, ಪ್ರಮುಖರೊಂದಿಗೆ ಚರ್ಚಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಮುಂದಿನ ಸಭೆಯನ್ನು ಬೆಳಗಾವಿಯಲ್ಲಿ ಮಾಡುತ್ತೆವೆ ಎಂದರು.

ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಟ್ರಸ್ಟ್ ನೂತನ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಶುಕ್ರವಾರ ಕೂಡಲಸಂಗಮ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಮಾಜದ ಮಾಜಿ ಸಚಿವ ಎ.ಬಿ. ಪಾಟೀಲ, ಶಾಸಕರು, ಜನಪ್ರತಿನಿಧಿಗಳ ಒತ್ತಾಯದ ಮೆರೆಗೆ ಎಪ್ರಿಲ್ ೧೯ ರಂದು ಪಂಚಮಸಾಲಿ ಪೀಠದಲ್ಲಿ ಕರೆಯಲಾದ ಸಭೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ.

ನಮ್ಮ ಟ್ರಸ್ಟಿನ ಎಲ್ಲ ಧರ್ಮದರ್ಶಿಗಳು, ಗೌರವಾಧ್ಯಕ್ಷ ಪ್ರಭಣ್ಣ ಹುಣಸಿಕಟ್ಟಿ ಅವರ ನೇತೃತ್ವದಲ್ಲಿ ಕೂಡಲಸಂಗಮದಲ್ಲಿಯೇ ಸಭೆಯನ್ನು ಕರೆಯುತ್ತೆವೆ. ಅಂದು ಎಲ್ಲ ಘಟನೆಗಳನ್ನು ಗಮನಕ್ಕೆ ತರುತ್ತೇನೆ, ಎಲ್ಲರೂ ಕೂಡಿ ಸಮಾಜಕ್ಕೆ ಅನುಕೂಲವಾಗುವ ನಿರ್ಧಾರ ತೆಗೆದುಕೊಳ್ಳೊಣ್ಣ, ನಾಳೆಯ ಸಭೆಗೆ ರಾಜ್ಯದ ವಿವಿಧ ಭಾಗಗಳಿಂದ ಜನರು ಬರಲು ಸಿದ್ಧಗೊಂಡಿದ್ದರು ಹಿರಿಯರಿಗೆ ಗೌರವ ಕೊಡುವ ಸಲುವಾಗಿ ಸಭೆ ಮುಂದೂಡಿದ್ದೇವೆ.

ಶೀಘ್ರದಲ್ಲಿಯೇ ಸಭೆಯ ದಿನಾಂಕ ನಿಗದಿ ಪಡಿಸಿ ತಿಳಿಸುತ್ತೇವೆ ಎಲ್ಲರೂ ಸಭೆಗೆ ಬರಬೇಕು. ಎಲ್ಲ ಜನ ಪ್ರತಿನಿಧಿಗಳನ್ನು ಆಹ್ವಾನಿಸುತ್ತೇವೆ.

ನಾನು ಅಧಿಕಾರಕ್ಕಾಗಿ ಮೀಸಲಾತಿ ಹೋರಾಟದಲ್ಲಿ ಪಾಲ್ಗೊಳ್ಳಲಿಲ್ಲ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕೆಂಬ ಉದ್ದೇಶದಿಂದ ಫಾಲ್ಗೊಂಡೆ. ಸಮಾಜಕ್ಕೆ ೨ಎ ಮೀಸಲಾತಿ ಪಡೆದೆ ಪಡೆಯುತ್ತೇವೆ. ನೂತನ ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿದ್ದಾರೆ ಉತ್ತಮ ಕೆಲಸ ಕಾರ್ಯ ಮಾಡೋಣ ಎಂದು ಹೇಳಿದರು.

ಮುಖಂಡರಾದ ಅಮರೇಶ ನಾಗೂರ, ಮಹಾಂತೇಶ ನರಗುಂದ ಮುಂತಾದವರು ಇದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ_
https://chat.whatsapp.com/CbYKNyyLfPXA0Br4Dli0d8

Share This Article
1 Comment
  • ಲಿಂಗಾಯತ ಪ್ರಭಲ ಸಮುದಾಯದ ವಿಷಯ ಬೀದಿ ರಂಪ ಆಗುವುದು ಬೇಕಿತ್ತಾ,,ಇಷ್ಟೆಲ್ಲಕ್ಕೂ ಕಾರಣ ಯಾರು,,ಯಾರ ಸಹವಾಸ ದೋಷದಿಂದ ಈ ಮಟ್ಟಕ್ಕೆ ಬಂತು,,ಶತಮಾನಗಳ ನಂತರವೂ ಅರಿವು ಮೂಡದೇ ಹೋಗಿದ್ದು ದುರಂತ

Leave a Reply

Your email address will not be published. Required fields are marked *